For Quick Alerts
ALLOW NOTIFICATIONS  
For Daily Alerts

ಈ 10 ಚೈನೀಸ್ ಫುಡ್ಸ್ ನಿಜವಾದ ಚೈನೀಸ್ ಫುಡ್ಸ್ ಅಲ್ಲ!

By Super
|

ದೇಶದಿಂದ-ದೇಶಕ್ಕೆ ಆಹಾರ ಪದ್ಧತಿ ಭಿನ್ನವಾಗಿರುತ್ತದೆ. ನಾವು ತಿನ್ನುವಂತಹ ಸೋರೆಕಾಯಿ, ಹಾಗಲಕಾಯಿ, ತೊಂಡೆ ಕಾಯಿ ಇವುಗಳನ್ನೆಲ್ಲಾ ವಿದೇಶದಲ್ಲಿ ಮಾಡುವುದಿಲ್ಲ. ಅವರ ಆಹಾರ ತಿನ್ನಲು ನಮಗೂ ಇಷ್ಟವಾಗುವುದಿಲ್ಲ. ಆ ಸಾಸ್ ಹಾಕಿ ತಿನ್ನುವ ಬದಲು ನಮ್ಮ ರೊಟ್ಟಿ , ಮುದ್ದೆಯೇ ನಮಗೆ ರುಚಿಯಾಗಿರುತ್ತದೆ.

ಆದರೆ ಚೈನೀಸ್ ಅಡುಗೆಗಳು ಮಾತ್ರ ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿವೆ. ನಾವು ಭಾರತೀಯರು ಚೈನೀಸ್ ಅಡುಗೆಯನ್ನು ಇಷ್ಟಪಡುತ್ತೇವೆ. ಭಾರತದ ಯಾವ ಮೂಲೆಗೆ ಹೋದರೂ ಚೈನೀಸ್ ಹೋಟೆಲ್ ಗಳಿರುತ್ತವೆ.

ನಾವು ತಿನ್ನುವ ತುಂಬಾ ಚೈನೀಸ್ ಫುಡ್ಸ್ ನಿಜವಾದ ಚೈನೀಸ್ ಅಡುಗೆಯ ರುಚಿಯಲ್ಲಿ ಇರುವುದಿಲ್ಲ ಅನ್ನುವುದು ಗೊತ್ತೇ? ಹೌದು ಚೈನೀಸ್ ರೆಸ್ಟೋರೆಂಟ್ ಗಳಲ್ಲಿ ದೊರೆಯುವ ಹೆಚ್ಚಿನ ಅಡುಗೆಗಳು ಮೂಲ ಚೈನೀಸ್ ರುಚಿಯಲ್ಲಿರುವುದಿಲ್ಲ. ಚೈನೀಸ್ ಅಡುಗೆಯನ್ನು ಭಾರತೀಯ ಅಡುಗೆಯ ರುಚಿಯಂತೆ ತಯಾರಿಸಲಾಗಿರುತ್ತದೆ. ನಮಗೆ ಹೊಂದುವ ರುಚಿಯಲ್ಲಿ ತಯಾರಿಸಿರುವ ಚೈನೀಸ್ ಅಡುಗೆಗಳು ಯಾವುದೆಂದು ನೋಡೋಣ ಬನ್ನಿ:

ನೂಡಲ್ಸ್

ನೂಡಲ್ಸ್

ಭಾರತದಲ್ಲಿ ಚೌವ್ ಮೈನ್(ನೂಡಲ್ಸ್) ಅನ್ನು ಫ್ರೈ ಮಾಡಿ ಕೊಡುತ್ತಾರೆ. ಆದರೆ ಚೈನಾದವರು ನೂಡಲ್ಸ್ ಅನ್ನು ತರಕಾರಿ ಹಾಕಿ ಬೇಯಿಸಿ ಅದಕ್ಕೆ ಕದಡಿದ ಮೊಟ್ಟೆ ಹಾಕಿ, ಸೋಯಾ ಸಾಸ್ ಹಾಕಿ ತಯಾರಿಸಲಾಗುವುದು.

ಮಂಚೂರಿಯನ್

ಮಂಚೂರಿಯನ್

ಮಂಚೂರಿಯನ್ ಗೂ ಚೈನೀಸ್ ಆಹಾರಗಳಿಗೂ ಯಾವುದೇ ಸಂಬಂಧವಿಲ್ಲ. ಈ ಅಡುಗೆಯನ್ನು ನೆಲ್ಸನ್ ವ್ಯಾಗ್ ಎಂಬುವವನು ಕಂಡು ಹಿಡಿದನು. ಚೈನೀಸ್ ಮೂಲದ ಭಾರತದಲ್ಲಿ ಹುಟ್ಟಿದ ಈತ ಮೊದಲು ಚಿಕನ್ ಮಂಚೂರಿಯನ್ ಅನ್ನು ಗರಂ ಮಸಾಲ ಬದಲು ಸೋಯಾ ಸಾಸ್ ಹಾಕಿ ತಯಾರಿಸಿದನು. ನಂತರ ಇತರ ಮಂಚುರಿಯನ್ ಗಳನ್ನು ಮಾಡಲಾಯಿತು. ಈ ಮಂಚೂರಿಯನ್ ಅಡುಗೆಗಳನ್ನು ಭಾರತದಲ್ಲಿ ಚೈನೀಸ್ ಅಡುಗೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಮ್ಯಾಂಚೌವ್ ಸೂಪ್

ಮ್ಯಾಂಚೌವ್ ಸೂಪ್

ಇದು ಕಂದು ಬಣ್ಣದ ಖಾರವಾಗಿರುವ ರುಚಿಕರವಾದ ಸೂಪ್ ಆಗಿದೆ. ಇದನ್ನು ತರಕಾರಿ ಮತ್ತು ಮಾಂಸ ಹಾಕಿ ಬೇಯಿಸಿ ಅದಕ್ಕೆ ಫ್ರೈ ಮಾಡಿದ ನೂಡಲ್ಸ್ ಹಾಕಿ ತಯಾರಿಸಲಾಗುತ್ತದೆ. ಇದನ್ನು ಚೈನೀಸ್ ಸೂಪ್ ಎಂದು ಹೇಳುತ್ತೇವೆ. ಆದರೆ ನಿಜವಾದ ಚೈನೀಸ್ ಸೂಪ್ ಗೂ, ಈ ಸೂಪ್ ಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಮ್ಯಾಂಚೌವ್ ಸೂಪ್ ಭಾರತೀಯರ ಬಾಯಿ ರುಚಿಗೆ ತಕ್ಕಂತೆ ಮಾಡಿರುವ ಸೂಪ್.

ಸ್ಪ್ರಿಂಗ್ ರೋಲ್ಸ್

ಸ್ಪ್ರಿಂಗ್ ರೋಲ್ಸ್

ಸ್ಪ್ರಿಂಗ್ ರೋಲ್ಸ್ ಅನ್ನು ಚೈನಾದಲ್ಲಿ ಬೇರೆ ರೀತಿಯಲ್ಲಿ, ನಮ್ಮ ಸ್ಪ್ರಿಂಗ್ ರೋಲ್ಸ್ ಗಿಂತ ವಿಭಿನ್ನವಾದ ರುಚಿಯಲ್ಲಿ ತಯಾರಿಸಲಾಗಿರುತ್ತದೆ. ಆದರೆ ಭಾರತೀಯ ಚೈನೀಸ್ ರೆಸ್ಟೋರೆಂಟ್ ನಲ್ಲಿ ದೊರೆಯುವ ಸ್ಪ್ರಿಂಗ್ ರೋಲ್ಸ್ ಗೆ ನಾವು ಬಳಸುವಂತಹ ಮಸಾಲೆ ಸಾಮಾಗ್ರಿಗಳನ್ನು ಬಳಸಿ ತಯಾರಿಸಲಾಗುವುದು.

ಡಂಪ್ಲಿಂಗ್ ಅಥವಾ ಮೊಮೊಸ್

ಡಂಪ್ಲಿಂಗ್ ಅಥವಾ ಮೊಮೊಸ್

ಬೇಯಿಸಿದ ಮೊಮೊಸ್ ಚೈನೀಸ್ ಅಡುಗೆ. ಆದರೆ ಇದನ್ನು ಡೀಪ್ ಫ್ರೈ ಮಾಡಿದರೆ ಮಾತ್ರ ನಮ್ಮ ಶೈಲಿಯ ಅಡುಗೆಯಾಗುತ್ತದೆ.

ಚಿಕನ್ ಲಾಲಿ ಪಪ್

ಚಿಕನ್ ಲಾಲಿ ಪಪ್

ಚೈನೀಸ್ ಅಡುಗೆಯ ಪ್ರಕಾರ ಚಿಕನ್ ವಿಂಗ್ಸ್ ನಿಂದ ಚಿಕ್ಕ ಮೂಳೆಗಳನ್ನು ತೆಗೆದು ಅದನ್ನು ಡೀಪ್ ಫ್ರೈ ಮಾಡಿ ತಿನ್ನುವುದು. ಆದರೆ ಭಾರತೀಯರು ಅದಕ್ಕೆ ನಮಗೆ ಬೇಕಾದಂತೆ ಮಸಾಲೆ ಹಾಕಿ ಅದನ್ನು ತಯಾರಿಸಿ ಸಾಸ್ ಹಾಕಿ ತಿನ್ನುತ್ತೇವೆ. ಮೂಲ ಚೈನೀಸ್ಚಿಕನ್ ಡ್ರಮ್ ಸ್ಟಿಕ್ ಗೂ , ಭಾರತದಲ್ಲಿ ದೊರೆಯುವ ಚಿಕನ್ ಡ್ರಮ್ ಸ್ಟಿಕ್ ಗೂ ಸಾಕಷ್ಟು ವ್ಯತ್ಯಾಸವಿರುತ್ತದೆ.

 ಅಮೇರಿಕನ್ ಚಾಪ್ ಸೂಯ್

ಅಮೇರಿಕನ್ ಚಾಪ್ ಸೂಯ್

ಈ ಅಡುಗೆಯನ್ನು ಚೀನಾದವರು ಅಮೇರಿಕದ ಅಡುಗೆ ಶೈಲಿಯಿಂದ ಅಡಾಪ್ಟ್ ಮಾಡಿಕೊಂಡರು. ಈ ಅಡುಗೆಯಲ್ಲಿ ನೂಡಲ್ಸ್, ತರಕಾರಿ ಮಾಂಸ, ಹುಳಿ, ಖಾರ, ಸಿಹಿ ಹಾಕಿ ಬೇಯಿಸಿ ಅದಕ್ಕೆ ಎಗ್ ಪೋಚ್ ಹಾಕಿ ತಯಾರಿಸುತ್ತಾರೆ.

ಷೆಹಜ್ ವಾನ್(szechwan)

ಷೆಹಜ್ ವಾನ್(szechwan)

ಹುಳಿ , ಖಾರ ಮಿಶ್ರಿತ ಈ ಸೂಪ್ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ನಾವು ಅನ್ನ, ನೂಡಲ್ಸ್, ಮಾಂಸ, ತರಕಾರಿ ಹಾಕಿ ತಯಾರಿಸುತ್ತೇವೆ.

 ಚಿಲ್ಲಿ ಚಿಕನ್ /ಪ್ರಾನ್/ತರಕಾರಿಗಳು

ಚಿಲ್ಲಿ ಚಿಕನ್ /ಪ್ರಾನ್/ತರಕಾರಿಗಳು

ಚೀನಾದಲ್ಲಿ ಚಿಲ್ಲಿ ಚಿಕನ್, ಪ್ರಾನ್, ತರಕಾರಿ ಮಾಡುವಾಗ ಸೋಯಾ ಸಾಸ್ ಹಾಕಿ ಮಾಡುತ್ತಾರೆ. ಭಾರತದಲ್ಲಿ ಅದಕ್ಕೆ ಖಾರ ಕೂಡ ಹಾಕಿ ತಯಾರಿಸಲಾಗುವುದು.

ಫ್ರೈಡ್ ರೈಸ್

ಫ್ರೈಡ್ ರೈಸ್

ಚೈನಾದಲ್ಲಿ ಫ್ರೈಡ್ ರೈಸ್ ಅನ್ನು ಮಾಂಸ ಅಥವಾ ಮೀನಿನ ಜೊತೆ ಹಾಕಿ ಬೇಯಿಸಿ ತಯಾರಿಸುತ್ತಾರೆ. ಆದರೆ ನಾವು ಅನ್ನವನ್ನು ಸ್ವಲ್ಪ ಫ್ರೈ ಮಾಡಿ, ವೆಜ್ ಮತ್ತು ನಾನ್ ವೆಜ್ ಫ್ರೈಡ್ ರೈಸ್ ತಯಾರಿಸುತ್ತೇವೆ.

English summary

10 Chinese Foods That Indians Have Adopted! | ಭಾರತೀಯರ ರುಚಿಗೆ ತಕ್ಕಂತೆ ತಯಾರಿಸುವ 10 ಚೈನೀಸ್ ಆಹಾರಗಳು

Actually, most Indians think that if you add soy sauce and ajino-motto (Chinese grass) to any food, it becomes Chinese. That is why we even have a Chinese bhel puri! Most often, original Chinese foods are not deep fried. They are either steamed or just blanched in oil. Indians have a fetish for oily and crisp pakoras. So, we have converted their blanched manchurians into a deep fried dish!
X
Desktop Bottom Promotion