For Quick Alerts
ALLOW NOTIFICATIONS  
For Daily Alerts

ರಾವಣನಲ್ಲಿ ಎಲ್ಲರೂ ಮೆಚ್ಚುಕೊಂಡಿದ್ದ 8 ಗುಣಗಳಿವು

|

ರಾಮಾಯಣದ ಖಳನಾಯಕ ಯಾರು ಅಂದ್ರೆ ಎಲ್ಲರೂ ಉತ್ತರಿಸುವುದು ರಾವಣನ ಹೆಸರನ್ನೇ! ರಾವಣ ರಾಕ್ಷಸ. ಸೀತೆಯನ್ನು ಮೋಸದಿಂದ ಹೊತ್ತಯ್ದ. ರಾಮನ ವನವಾಸದ ಕಷ್ಟಗಳಿಗೆ ರಾವಣನೇ ಕಾರಣ ಇತ್ಯಾದಿ ಚಿತ್ರಣಗಳು ಬರುವುದು ಸಹಜವೇ. ಆದರೆ ರಾವಣನ ರಾಕ್ಷಸೀ ಪ್ರವೃತ್ತಿಯನ್ನು ಹೊರತು ಪಡಿಸಿ ಕೆಲವು ವಿಭಿನ್ನವೆನಿಸುವ ಮತ್ತು ವಿಶೇಷವೆನಿಸುವ ಗುಣಗಳು ಆತನಲ್ಲಿದ್ದವು. ರಾವಣನಿಂದ ಎಲ್ಲರೂ ಕಲಿಯುವಂತ ಕೆಲವು ಉತ್ತಮ ಗುಣಗಳನ್ನೂ ಕೂಡ ಆತ ಹೊಂದಿದ್ದ ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ಹೌದು, ರಾವಣನ ಕೆಲವು ಗುಣಗಳು ಆತನ ಬಗ್ಗೆ ನಿಮಗಿರುವ ಕಲ್ಪನೆಯನ್ನೇ ಬದಲಿಸಬಹುದು. ಅಂತಹ ಕೆಲವು ಗುಣಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಒಬ್ಬ ಮಹಾನ್ ಭಕ್ತ

ಒಬ್ಬ ಮಹಾನ್ ಭಕ್ತ

ರಾವಣ ಕೇವಲ ರಾಕ್ಷಸ ಮಾತ್ರವಲ್ಲ. ಆತ ಒಬ್ಬ ಮಹಾನ್ ಪಂಡಿತ. ಆತನ ಪಾಂಡಿತ್ಯದ ಮುಂದೆ ದೊಡ್ಡ ದೊಡ್ಡ ದೇವತೆಗಳು ಕೂಡ ತಲೆಬಾಗಿದ್ದಾರೆ. ರಾವಣ ಮಹಾನ್ ಶಿವಭಕ್ತ. ಆತನ 10 ತಲೆಗಳನ್ನು ಕೂಡ ಶಿವನಿಗೆ ಮನಸ್ಪೂರ್ತಿಯಾಗಿ ರಾವಣ ಅರ್ಪಿಸಿದ್ದಾನೆ. ಆತನ ಜ್ಞಾನ ಮತ್ತು ತ್ಯಾಗದ ಕಾರಣದಿಂದಾಗಿ ಶಿವ ಕೂಡ ರಾವಣನಿಗೆ ವರ ನೀಡಿದ. ರಾವಣ ಶಿವನ ಬಳಿ ಅಮರತ್ವವನ್ನು ಕೇಳಿದ ಕಥೆ ನಿಮಗೆಲ್ಲಾ ತಿಳಿದೇ ಇದೆ. ಆದರೆ ಶಿವ ಅಮರತ್ವ ನೀಡಲು ನಿರಾಕರಿಸಿದ. ನಂತರ ಪಟ್ಟು ಬಿಡದ ರಾವಣ ಆತ್ಮಲಿಂಗವನ್ನು ಶಿವನ ಬಳಿ ಪಡೆಯುವಲ್ಲಿ ರಾವಣ ಯಶಸ್ವಿಯಾಗುತ್ತಾನೆ.

ಒಬ್ಬ ಮಹಾನ್ ವಿದ್ವಾಂಸ

ಒಬ್ಬ ಮಹಾನ್ ವಿದ್ವಾಂಸ

ರಾವಣನಿಗೆ 10 ತಲೆ ಇದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ 10 ತಲೆಗಳು ಆರು ಶಾಸ್ತ್ರಗಳು ಮತ್ತು ನಾಲ್ಕು ವೇದಗಳ ಬಗ್ಗೆ ರಾವಣನಿಗಿದ್ದ ಜ್ಞಾನವನ್ನು ಪ್ರತಿನಿಧಿಸುತ್ತವೆ. ರಾವಣ ಕೆಲವು ಪುಸ್ತಕಗಳನ್ನು ಕೂಡ ಬರೆದಿದ್ದಾನೆ. ಆತನ ಜ್ಞಾನ ಎಷ್ಟಿತ್ತು ಎಂದರೆ ಹಿಂದೂ ಖಗೋಳಶಾಸ್ತ್ರದ ಪುಸ್ತಕವಾಗಿರುವ "ರಾವಣ ಸಂಹಿತೆ"ಯನ್ನು ಬರೆದಿದ್ದಾನೆ. ಸಿದ್ಧ ವೈದ್ಯಕೀಯ ಮತ್ತು ಚಿಕಿತ್ಸೆಯ ಕುರಿತಾದ ಅರ್ಕಾ ಪ್ರಕಾಶಂನ್ನು ಕೂಡ ರಾವಣ ಬರೆದಿದ್ದಾನೆ. ರಾವಣನಿಗೆ ಸಿದ್ಧ ಮತ್ತು ರಾಜಕೀಯ ವಿಜ್ಞಾನದ ಬಗ್ಗೆ ಸಂಪೂರ್ಣ ಜ್ಞಾನವಿತ್ತು.

ಅದ್ಭುತ ಹೋರಾಟಗಾರ

ಅದ್ಭುತ ಹೋರಾಟಗಾರ

ರಾವಣ ಅನೇಕರೊಂದಿಗೆ ಹೋರಾಟ ಮಾಡಿದ್ದಾನೆ ಮತ್ತು ಪ್ರತಿಬಾರಿಯೂ ರಾವಣ ಜಯಶಾಲಿಯಾಗಿದ್ದಾನೆ. ಯಮ, ಕುಬೇರ ಮತ್ತು ದೇವತೆಗಳ ವಿರುದ್ಧ ಮತ್ತು ಅಸುರ, ದೈತ್ಯರ ವಿರುದ್ಧ ಯುದ್ಧ ಮಾಡಿ ಜಯಗಳಿಸಿದ ಕೀರ್ತಿ ರಾವಣನದ್ದು. ಇನ್ನುಳಿದಂತೆ ರಾವಣನನ್ನು ತ್ರಿಲೋಕವನ್ನು ಗೆದ್ದವನೆಂದು ಕರೆಯಲಾಗುತ್ತದೆ. ಅದೇ ಕಾರಣಕ್ಕೆ ತ್ರಿಲೋಕದ ರಾಜ (ಪಾತಾಳ, ಸ್ವರ್ಗ ಮತ್ತು ಭೂಲೋಕ ಮೂರನ್ನು ಗೆದ್ದವ) ಎನ್ನಲಾಗುತ್ತದೆ. ಆತ ಒಬ್ಬ ಮಹಾನ್ ಹೋರಾಟಗಾರ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.

ಒಬ್ಬ ಮಹಾನ್ ರಾಜ (ಲಂಕೇಶ ಅಥವಾ ಲಂಕಾಪತಿ)

ಒಬ್ಬ ಮಹಾನ್ ರಾಜ (ಲಂಕೇಶ ಅಥವಾ ಲಂಕಾಪತಿ)

ರಾವಣನು ಮನುಷ್ಯರನ್ನು ಹೊರತು ಪಡಿಸಿ ಬ್ರಹ್ಮನ ಸೃಷ್ಟಿಗೆ ಅಜೇಯನಾಗುವ ವರದಿಂದ ಆಶೀವರ್ದಿಸಲ್ಪಟ್ಟವನು. ಬ್ರಹ್ಮನಿಂದ ಹಲವು ಆಶೀರ್ವಾದವನ್ನು ಪಡೆದ ರಾವಣ ಹಲವು ಶಸ್ತ್ರಾಸ್ತ್ರಗಳನ್ನು ಮತ್ತು ಆಕಾರ ಬದಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದ. ಕುಬೇರನನ್ನು ಸೋಲಿಸಿ ರಾವಣ ಲಂಕಾಧಿಪತಿಯಾದ ಮತ್ತು ಶುಕ್ರಾಚಾರ್ಯರನ್ನು ತನ್ನ ಗುರುಗಳಾಗಿ ಸ್ವೀಕರಿಸಿದ. ಅಷ್ಟೇ ಅಲ್ಲ ಅವರಿಂದ ಅರ್ಥಶಾಸ್ತ್ರದ ಅಧ್ಯಯನ ಮಾಡಿದ. ಲಂಕೇಶ, ಲಂಕಾಪತಿ ಎಂದು ಕರೆಯಲ್ಪಡುವ ರಾವಣ ಒಬ್ಬ ಮಹಾನ್ ರಾಜನೂ ಹೌದು. ತನ್ನ ರಾಜ್ಯವನ್ನು ವಿಸ್ತರಿಸುವುದರಲ್ಲಿ ಆತನಿಗೆ ವಿಶೇಷ ಆಸಕ್ತಿ ಇತ್ತು.

ಒಬ್ಬ ಸೃಜನಶೀಲ ವ್ಯಕ್ತಿ

ಒಬ್ಬ ಸೃಜನಶೀಲ ವ್ಯಕ್ತಿ

ನಮಗೆಲ್ಲರಿಗೂ ತಿಳಿದಿರುವಂತೆ ರಾವಣ ಒಬ್ಬ ರಾಕ್ಷಸ ಆದರೆ ಆತ ಒಬ್ಬ ಮಹಾನ್ ಪಂಡಿತ ಕೂಡ ಹೌದು. ಅಷ್ಟೇ ಅಲ್ಲ ರಾವಣ ಒಬ್ಬ ಸೃಜನಶೀಲ ವ್ಯಕ್ತಿ. ರಾವಣ ಶಿವತಾಂಡವ ಸ್ತೋತ್ರವನ್ನು ಬರೆದಿದ್ದಾನೆ. ಈ ಸ್ತೋತ್ರವು ಶಿವನ ಶಕ್ತಿ ಮತ್ತು ಸೌಂದರ್ಯದ ವರ್ಣನೆಯನ್ನು ಮಾಡುತ್ತೆ. ಇನ್ನು ರಾವಣ ವೀಣೆ ನುಡಿಸುವುದರಲ್ಲಿ ನುರಿತನಾಗಿದ್ದನಂತೆ (ಕಾರ್ಡೋಫೋನ್ ಸಾಧನವಾಗಿರುವ ಇದನ್ನು ವೇ-ನಾ ಎಂದು ಕೂಡ ಉಚ್ಛರಿಸಲಾಗುತ್ತದೆ).

ಕೋಪ

ಕೋಪ

ರಾವಣನ ಮುಂದೆ ಆತನ ತಂಗಿ ಶೂರ್ಪನಖಿ ತನ್ನ ಗಾಯದ ಮೂಗನ್ನು ಹೊತ್ತು ಬಂದಾಗ ತಂಗಿಗಾದ ಅವಮಾನದ ವಿರುದ್ಧ ರಾವಣ ಉಗ್ರಕೋಪಕ್ಕೆ ಒಳಗಾಗಿದ್ದ. ರಾವಣ ಒಬ್ಬ ರಾಕ್ಷಸನೇ ಆಗಿದ್ದ ಎಂಬುದೇನೋ ನಿಜ. ಆದರೆ ತಂಗಿಯ ಮೇಲಿನ ವ್ಯಾಮೋಹವೆಷ್ಟಿತ್ತು ಎಂದರೆ ಆತನ ಕೋಪ ಸೀತೆಯ ಅಪಹರಣಕ್ಕೆ ಕಾರಣವಾಯ್ತು ಮತ್ತು ತಂಗಿಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ರಾವಣ ಮುಂದಾಗಿದ್ದ ಜೊತೆಗೆ ಅಪಹರಣದ ನಂತರ ಸೀತೆಯ ಗೌರವ ರಕ್ಷಣೆಗೂ ಕೂಡ ರಾವಣ ಮುಂದಾಗಿದ್ದ.

ಯುದ್ಧದ ಅಂತ್ಯದಲ್ಲಿ

ಯುದ್ಧದ ಅಂತ್ಯದಲ್ಲಿ

ಶತ್ರುತ್ವದ ಹೊರತಾಗಿಯೂ ಕೂಡ ರಾಮನ ದೃಷ್ಟಿಯಲ್ಲಿ ರಾವಣನ ಬಗ್ಗೆ ವಿಶೇಷ ಚಿತ್ರಣವಿತ್ತು. ರಾವಣನಿಗೆ ವಿಶೇಷ ಜ್ಞಾನವಿರುವ ಬಗ್ಗೆ ಖುದ್ಧು ರಾಮನಿಗೂ ತಿಳಿದಿತ್ತು. ಅದೇ ಕಾರಣಕ್ಕೆ ರಾವಣ ಸಾಯುವ ಸಂದರ್ಬದಲ್ಲಿ ರಾಮ ತನ್ನ ತಮ್ಮ ಲಕ್ಷ್ಮಣನ ಬಳಿ ರಾವಣನ ಬಳಿ ತೆರಳಿ ಜ್ಞಾನ ಸಂಪಾದನೆ ಮಾಡಿಕೊಂಡು ಬಾ ಎಂದು ಹೇಳಿದ್ದನಂತೆ. ಲಕ್ಷ್ಮಣನ ಮನವಿಗೆ ಸ್ಪಂದಿಸಿದ ರಾವಣ "ಹೆಂಡತಿಗೆ ಕೆಲವು ಗುಟ್ಟುಗಳನ್ನು ಹೇಳಬಾರದು ಮತ್ತು ತಮ್ಮನ ಬಳಿ ಗುಟ್ಟು ಮಾಡಬಾರದು" ಎಂದು ಲಕ್ಷ್ಮಣನನ್ನು ತಮ್ಮನ ಸ್ಥಾನದಲ್ಲಿಟ್ಟು ಗೌರವಿಸಿದ್ದ ಎಂದು ಹೇಳಲಾಗುತ್ತದೆ.

ಅಂತಿಮ ತೀರ್ಮಾನ

ಅಂತಿಮ ತೀರ್ಮಾನ

ಒಬ್ಬ ಶಕ್ತಿವಂತ ರಾಜ, ಅತ್ಯಂತ ಅದ್ಭುತವಾದ ಪಂಡಿತ ಮತ್ತು ಹೋರಾಟಗಾರನೇ ಆಗಿದ್ದರೂ ಕೂಡ ರಾವಣ ರಾಮನ ಮುಂದೆ ಮಂಡಿಯೂರಲೇಬೇಕಾಯಿತು. ರಾವಣನ ಸೋಲಿಗೆ ಆತನ ಸ್ವಂತ ತಮ್ಮ ವಿಭೀಷಣ ಕೂಡ ಕಾರಣವಾಗಿದ್ದ. ರಾವಣ ರಾಮನ ಜೊತೆಗಿನ ಯುದ್ಧದಲ್ಲಿ ಸೋತಾಗ "ರಾಮ ನೀನು ಗೆದ್ದಿದ್ದಕ್ಕೆ ಕಾರಣ ನಿನಗೆ ನಿನ್ನ ತಮ್ಮನ ಬೆಂಬಲವಿತ್ತು ಮತ್ತು ನಾನು ಸೋತಿದ್ದಕ್ಕೆ ಕಾರಣ ನನ್ನ ತಮ್ಮ ನನ್ನ ಜೊತೆಗೆ ಇರಲಿಲ್ಲ" ಎಂದು ನುಡಿದಿದ್ದನಂತೆ. ರಾವಣನ ಸಾವು ರಾಮನಿಂದಲೇ ಆಗಬೇಕು ಎಂಬುದು ವಿಧಿಲಿಖಿತವಷ್ಟೇ!

English summary

You Will Know These Facts About Ravana

Here we are discussing about uknown facts abour ravana. Ravana is the name of a villain of Ramayan.But there are some facts related to Ravana which is completely different image of him from the demons and villains. Read more.
X