For Quick Alerts
ALLOW NOTIFICATIONS  
For Daily Alerts

ಓಂ ನಮಃ ಶಿವಾಯ ಪಠಿಸಿ ಸಮಸ್ಯೆಗಳಿಂದ ದೂರವಿರಿ

By Hemanth
|

ಹಿಂದೂ ಪುರಾಣಗಳ ಪ್ರಕಾರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಭೂಮಿಯನ್ನು ಸೃಷ್ಟಿಸಿದ್ದಾರೆ. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ವಿಷ್ಣು ಅದಕ್ಕೆ ಜೀವ ನೀಡುತ್ತಾನೆ ಮತ್ತು ಮಹೇಶ್ವರ ಎಲ್ಲವನ್ನೂ ಲಯಗೊಳಿಸುತ್ತಾನೆ ಎಂದು ನಂಬಲಾಗಿದೆ. ಈಶ್ವರ ಸೃಷ್ಟಿಯಲ್ಲಿ ಇರುವ ಕೆಟ್ಟದನ್ನು ತನ್ನ ಮೂರನೇ ಕಣ್ಣಿನಿಂದ ನಾಶಗೊಳಿಸುತ್ತಾನೆ ಎನ್ನಲಾಗುತ್ತದೆ. ಇದಕ್ಕಾಗಿಯೇ ಆತನಿಗೆ ದೇವಾದಿದೇವ ಎನ್ನಲಾಗುತ್ತದೆ. ಇದರ ಅರ್ಥ ದೇವರುಗಳಿಗೆ ದೇವರು.. ಈಶ್ವರನ ಸೃಷ್ಟಿಯ ಬಗ್ಗೆ ಯಾರಿಗೂ ಇದುವರೆಗೆ ತಿಳಿದಿಲ್ಲ. ಮತ್ತು ಆತನಿಗೆ ಕೊನೆಯೆಂಬುವುದು ಇಲ್ಲ. ಇದಕ್ಕಾಗಿಯೇ ಶಿವನಿಗೆ ಅತೀ ಹೆಚ್ಚಿನ ಭಕ್ತರಿದ್ದಾರೆ. ಶಿವನ ಶಕ್ತಿ ಸ್ವರೂಪ ಎಂಟು ಆಭರಣಗಳ ಪರಮ ರಹಸ್ಯ

ಶಿವನನ್ನು ಪೂಜಿಸುವವರು ಹೆಚ್ಚಾಗಿ ನಮಃ ಶಿವಾಯ ಎನ್ನುವ ಮಂತ್ರವನ್ನು ಪಠಿಸುತ್ತಾ ಇರುತ್ತಾರೆ. ಆದರೆ ಈ ಮಂತ್ರ ಕೇವಲ ಶಿವನ ಭಕ್ತರಿಗಾಗಿ ಮಾತ್ರವಲ್ಲ. ಇದನ್ನು ಪಠಿಸಿದರೆ ಇತರರಿಗೂ ಲಾಭವಿದೆ. ಓಂ ನಮಃ ಶಿವಾಯ ಮಂತ್ರವನ್ನು ಬದ್ಧತೆ ಮತ್ತು ಏಕಾಗ್ರತೆಯಿಂದ ಪಠಿಸಿದರೆ ಆಗ ನಮಗೆ ಮಾನಸಿಕ ಬಲ, ಶಕ್ತಿ ಮತ್ತು ಪ್ರೇರಣೆ ಸಿಗುತ್ತದೆ. ಇದರಿಂದ ನೀವು ಜೀವನದ ಗುರಿಯನ್ನು ತಲುಪಬಹುದಾಗಿದೆ.

ಇಂದಿನ ದಿನಗಳಲ್ಲಿ ಮನಸ್ಸಿಗೆ ಶಾಂತಿಯೆನ್ನುವುದು ಸಿಗುವುದೇ ಕಷ್ಟ. ಒತ್ತಡದ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಶಾಂತಿ ಕಳೆದುಹೋಗಿರುತ್ತದೆ. ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಅತಿಯಾದ ಒತ್ತಡದಿಂದ ನೀವು ಹೊರ ಬರಬೇಕಾಗುತ್ತದೆ. ಕೈಲಾಸನಾಥ ಪರಶಿವನ ಕುರಿತ ರೋಚಕ ಜನ್ಮ ವೃತ್ತಾಂತ

ಜೀವನದಲ್ಲಿ ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ ಆ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿದರೆ ಆಧ್ಯಾತ್ಮಿಕ ಶಕ್ತಿ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಇದರಿಂದ ಜೀವನದ ಸಂಕಷ್ಟದಿಂದ ಪಾರಾಗಬಹುದು. ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳಲು ಮುಂದಕ್ಕೆ ಓದಿ...

ಮನಸ್ಸಿನ ಶಾಂತಿ ಮರಳುವುದು

ಮನಸ್ಸಿನ ಶಾಂತಿ ಮರಳುವುದು

ಜೀವನ ಯಾವತ್ತೂ ಹೂವಿನ ಹಾದಿಯಾಗಿರುವುದಿಲ್ಲ. ಸಮಸ್ಯೆಗಳೆಂಬ ಮುಳ್ಳುಗಳೇ ಅತಿಯಾಗಿ ನಿಮ್ಮನ್ನು ಚುಚ್ಚುತ್ತಾ ಇದ್ದರೆ ಆಗ ಇಡೀ ವಿಶ್ವವೇ ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದೆಯೆಂದು ನಿಮಗನಿಸುತ್ತದೆ. ಇದರಿಂದ ಮಾನಸಿಕ ಶಾಂತಿ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ. ಈ ಮಂತ್ರವೇ ನಿಮ್ಮ ಮನಶಾಂತಿಯನ್ನು ಮರಳಿ ತರುತ್ತದೆ ಇದರ ಬಗ್ಗೆ ನೀವು ಯೋಚಿಸಿ.

ತುಂಬಾ ಶಕ್ತಿಯುತ ಮಂತ್ರ

ತುಂಬಾ ಶಕ್ತಿಯುತ ಮಂತ್ರ

ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವ ಕಾರಣಗಳು ನಿಮಗೆ ತಿಳಿದಿದೆಯಾ? ಇದು ತುಂಬಾ ಶಕ್ತಿಯನ್ನು ಹೊಂದಿರುವ ಮಂತ್ರ. ಇದನ್ನು ಪಠಿಸುತ್ತಲೇ ಇದ್ದರೆ ನೀವು ಯಾವುದೇ ಧಾರ್ಮಿಕ ಕಾರ್ಯ, ಯೋಗ ಅಥವಾ ಧಾನ್ಯ ಮಾಡಬೇಕೆಂದಿಲ್ಲ. ಈ ಮಂತ್ರ ಪಠಿಸಲು ಯಾವುದೇ ನಿಯಮಗಳಿಲ್ಲ. ಯಾರೂ ಈ ಮಂತ್ರವನ್ನು ಪಠಿಸಬಹುದಾಗಿದೆ.

ಐದು ಅಕ್ಷರಗಳ ಮಹತ್ವ

ಐದು ಅಕ್ಷರಗಳ ಮಹತ್ವ

ಇದರಲ್ಲಿ ಐದು ಅಕ್ಷರಗಳ ಮಹತ್ವವಿದೆ. ನ, ಮ, ಶಿ, ವಾ ಮತ್ತು ಯ. ಹಿಂದೂ ಪುರಾಣಗಳ ಪ್ರಕಾರ ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ನೀರು ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ. ಇದನ್ನು ಪಠಿಸುತ್ತಾ ಇದ್ದರೆ ದೇವರು ಎಲ್ಲಾ ಕಡೆ ಇದ್ದಾನೆಂದು ನಿಮಗನಿಸುತ್ತದೆ.

ಸ್ವರ ಥೆರಪಿ

ಸ್ವರ ಥೆರಪಿ

ಈ ಮಂತ್ರವನ್ನು ಪಠಿಸುತ್ತಾ ಇರುವುದರಿಂದ ದೈಹಿಕ ಶಕ್ತಿ ಮತ್ತು ಮನಸ್ಸಿನ ಶಾಂತಿ ಮರಳುತ್ತದೆ. ಇದು ನಿಮ್ಮ ಹೃದಯದಲ್ಲಿ ಸಂತೋಷವನ್ನು ಉಂಟುಮಾಡಿ ನಿಮಗೆ ತೊಂದರೆಯನ್ನು ಉಂಟುಮಾಡುವ ಎಲ್ಲಾ ನಕಾರಾತ್ಮಕ ಅಂಶಗಳನ್ನು ಹೊರಹಾಕುತ್ತದೆ.

ಓಂ ನಮಃ ಶಿವಾಯ ಮಂತ್ರ

ಓಂ ನಮಃ ಶಿವಾಯ ಮಂತ್ರ

ಇನ್ನು ಮುಂದೆ ದಿನದ ಆರಂಭಕ್ಕೆ ಮೊದಲು ಶಿವನನ್ನು ನೆನೆದು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಮನಶಾಂತಿ ಮರಳುತ್ತದೆ.

English summary

Why You Should Chant-Om Namah Shivaya

Lord Shiva is known as 'Devadidev’, which means he is the god of gods. There is no beginning of him, and also, there is no end to him. He is the omnipresence and omnipotent form. He is one of the pillars of the Trinity. When Lord Brahma is the creator and Lord Vishnu is the saviour, Lord Shiva is the destructor. Three of them denote the eternal truth of life that is, one who is created has to perish. 'Om Namah Shivaya’ is the chant that is uttered while the shaivites (the followers of Lord Shiva) meditate. But, this is not only for them.
X
Desktop Bottom Promotion