Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜನ್ಮಾಷ್ಟಮಿ ವಿಶೇಷ: ರಾಧಾ-ಕೃಷ್ಣರ ನಡುವಿನ ನಿಷ್ಕಲ್ಮಶ ಪ್ರೇಮ ಕಥೆ
ಇಂದಿಗೂ ಕೂಡ ರಾಧೆ ಮತ್ತು ಕೃಷ್ಣನ ಪ್ರೇಮವು ಅಮರವಾಗಿದೆ. ಯಾವುದೇ ಪ್ರೇಮಕಥೆಯಾದರೂ ಅದರು ರಾಧೆ ಹಾಗೂ ಕೃಷ್ಣನಂತಿರಬೇಕು ಎಂದು ಪ್ರತಿಯೊಬ್ಬರು ಬಯಸುವರು. ರಾಧೆ ಮತ್ತು ಕೃಷ್ಣನ ಪ್ರೇಮವು ಪರಮಾತ್ಮ ಮತ್ತು ಜೀವಾತ್ಮದ ಅಪೂರ್ವ ಸಮಾಗಮವಾಗಿದೆ. ಭಗವದ್ಗೀತೆಯಲ್ಲಿ ರಾಧೆ ಮತ್ತು ಕೃಷ್ಣನ ಪ್ರೇಮದ ಬಗ್ಗೆ ವಿವರವಿದೆ. ಈ ಪ್ರೇಮಕಥೆಯು ಸಾವಿರಾರು ವರ್ಷಗಳಿಂದಲೂ ಹಾಗೆ ಬೆಳೆದು ಬರುತ್ತಾ ಇದೆ.
ರಾಧೆ ಮತ್ತು ಕೃಷ್ಣನ ಪ್ರೇಮಕಥೆಯನ್ನು ಕೇಳಿದ ಹೆಚ್ಚಿನವರಲ್ಲಿ ಮೂಡುವಂತಹ ಪ್ರಶ್ನೆಯೆಂದರೆ ರಾಧೆಯನ್ನು ಕೃಷ್ಣ ಯಾಕೆ ಮದುವೆಯಾಗಲಿಲ್ಲ. ವೃಂದಾವನವನ್ನು ಬಿಟ್ಟುಹೋದ ಕೃಷ್ಣ, ರುಕ್ಮಿಣಿಯನ್ನು ಮದುವೆಯಾಗಿರುವುದು ಯಾಕೆ ಎನ್ನುವ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಇದರ ಬಗ್ಗೆ ತಿಳಿಯಲು ಒಂದು ರೀತಿಯ ಅಧ್ಯಯನವನ್ನೇ ಮಾಡಲಾಗಿದೆ. ಈ ಅಧ್ಯಯನದಿಂದ ಹಲವಾರು ರೀತಿಯ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿದೆ....

ರಾಧೆ ಕೃಷ್ಣನ ಬಾಲ್ಯದ ಸ್ನೇಹಿತೆ
ರಾಧೆಯು ಕೃತಿಧಾ ಮತ್ತು ವೃಸಭನುವಿನ ಮಗಳಾಗಿದ್ದಳು. ಕೃಷ್ಣನು ನಂದಾ ಮತ್ತು ಯೋಶೋಧೆಯ ಮಗ. ಕೆಲವು ಪುರಾಣಗಳ ಪ್ರಕಾರ ರಾಧೆಯು, ಕೃಷ್ಣನ ಸೋದರ ಸಂಬಂಧಿ ಎಂದರೆ ಇನ್ನು ಕೆಲವು ಪುರಾಣಗಳು ಕೃಷ್ಣನ ಚಿಕ್ಕಮ್ಮ ರಾಧೆ ಎನ್ನುತ್ತವೆ. ಯಶೋಧೆಯು ರಾಧೆಯನ್ನು ಹೆಚ್ಚು ಪ್ರೀತಿಸುತ್ತಾ ಇದ್ದಳು ಮತ್ತು ಆಕೆಯನ್ನು ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೃಷ್ಣ ಗೋಪಾಲಕನಾಗಿದ್ದರೆ, ರಾಧೆಯು ಹಳ್ಳಿ ಹುಡುಗಿಯಂತಿದ್ದಳು. ಆದರೆ ವಯಸ್ಸಿನಲ್ಲಿ ಕೃಷ್ಣನಿಗಿಂತ ರಾಧೆಯು ಹತ್ತು ವರ್ಷ ದೊಡ್ಡವಳು. ಬಾಲ್ಯದಲ್ಲಿ ಜತೆಯಾಗಿ ಆಟವಾಡುತ್ತಿದ್ದ ಅವರಿಬ್ಬರು ಪರಸ್ಪರರನ್ನು ಬಿಟ್ಟಿರುತ್ತಲೇ ಇರಲಿಲ್ಲ. ಅವರಿಬ್ಬರು ದೈಹಿಕತೆಗಿಂತ ಆಧಾತ್ಮಿಕವಾಗಿ ತುಂಬಾ ಹತ್ತಿರವಾಗಿದ್ದರು. ಅವರು ಬೆಳೆಯುತ್ತಾ ಇದ್ದಂತೆ ಅವರಿಬ್ಬರ ಪ್ರೀತಿಯು ಹೆಚ್ಚಾಗುತ್ತಾ ಹೋಯಿತು. ಕೃಷ್ಣ ಮತ್ತು ರಾಧೆ ಬಾಲ್ಯದಿಂದಲೇ ತುಂಬಾ ಪ್ರೀತಿಸುತ್ತಾ ಇದ್ದರೂ ಅವರಿಬ್ಬರ ಮಧ್ಯೆ ದೈಹಿಕ ಆಕರ್ಷಣೆ ಮಾತ್ರ ಇರಲಿಲ್ಲ ಎಂದು ಹೇಳಲಾಗಿದೆ.

ವೃಂದಾವನ ಬಿಟ್ಟ ಕೃಷ್ಣ
ಬಾಲ್ಯದ ಬಳಿಕ ತನ್ನ ನಿಜವಾದ ತಂದೆತಾಯಿ ಯಶೋಧೆ ಮತ್ತು ನಂದಾ ಅವರಲ್ಲ ಎನ್ನುವುದು ಕೃಷ್ಣನಿಗೆ ತಿಳಿದುಬರುತ್ತದೆ. ದೇವಕಿ ಮತ್ತು ರಾಜ ವಾಸುದೇವ ತನ್ನ ನಿಜವಾದ ತಂದೆತಾಯಿ ಎಂದು ಕೃಷ್ಣನಿಗೆ ತಿಳಿಯುತ್ತದೆ. ತನ್ನ ಸೋದರ ಮಾವ ಕಂಸನ ದುಷ್ಕೃತ್ಯಗಳಿಂದಾಗಿ ತನ್ನ ತಂದೆತಾಯಿ ಜೈಲಿನಲ್ಲಿದ್ದಾರೆ ಎಂದು ತಿಳಿದ ಕೃಷ್ಣ ಕಂಸನನ್ನು ಸಂಹಾರ ಮಾಡಿ ತನ್ನ ತಂದೆತಾಯಿ ಹಾಗೂ ರಾಜ್ಯವನ್ನು ಕಂಸನ ದುಷ್ಕೃತ್ಯದಿಂದ ರಕ್ಷಿಸುತ್ತಾನೆ. ಕಂಸನ ಸಂಹಾರಕ್ಕಾಗಿಯೇ ತಾನು ಹುಟ್ಟಿದ್ದೇನೆಂದು ತಿಳಿದ ಕೃಷ್ಣ ವೃಂದಾವನ ಬಿಟ್ಟು ಹೋಗುತ್ತಾನೆ.

ಕೃಷ್ಣ ಮತ್ತು ರಾಧೆ ಯಾಕೆ ಮದುವೆಯಾಗಲಿಲ್ಲ?
ವೃಂದಾವನ ಬಿಟ್ಟು ಕಂಸನನ್ನು ವಧೆ ಮಾಡಿದ ಕೃಷ್ಣ ದ್ವಾರಕೆಯಲ್ಲಿ ರಾಜನಾದ. ಅಲ್ಲಿ ಆತ ರಾಜ ವಿಸ್ಮಕನ ಪುತ್ರಿ ರುಕ್ಮಿಣಿಯನ್ನು ಮದುವೆಯಾದ. ರಾಜನಾದ ಬಳಿಕ ಯಾವತ್ತೂ ಕೃಷ್ಣನನ್ನು ಭೇಟಿಯಾಗುವುದಿಲ್ಲವೆಂದು ರಾಧೆ ಹೇಳಿದ್ದಳು. ಗೋಪಾಲಕ ಹಾಗೂ ಸರಳವಾಗಿದ್ದ ಕೃಷ್ಣನನ್ನು ಮಾತ್ರ ತಾನು ಪ್ರೀತಿಸಿದ್ದು, ರಾಜನಾದ ಬಳಿಕ ಕೃಷ್ಣನಿಗೆ ತಾನು ಸರಿಯಾದ ಜೋಡಿಯೂ ಅಲ್ಲ ಎಂದು ರಾಧೆ ಹೇಳುತ್ತಾಳೆ. ಇದರಿಂದಾಗಿಯೇ ಅವರು ಮದುವೆಯಾಗಲಿಲ್ಲ. ಆದರೆ ಅವರ ನಿಷ್ಕಲ್ಮಶ ಪ್ರೀತಿ ಮಾತ್ರ ಇಂದಿಗೂ ಪೂಜ್ಯನೀಯವಾಗಿದೆ ಎಂದು ಇತಿಹಾಸವು ಹೇಳುತ್ತದೆ.

ಪ್ರೀತಿ ಎನ್ನುವುದು ನಿಸ್ವಾರ್ಥ ಮತ್ತು ಸುಂದರ ಭಾವನೆ
ಕೃಷ್ಣ ಕೂಡ ಮದುವೆಯಲ್ಲಿ ನಂಬಿಕೆಯನ್ನು ಇಟ್ಟಿರಲಿಲ್ಲ. ಯಾಕೆಂದರೆ ಮದುವೆಯಾದರೆ ಬಂಧನದಲ್ಲಿದ್ದು, ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎನ್ನುವುದು ಕೃಷ್ಣನ ಯೋಚನೆ. ಪ್ರೀತಿ ಎನ್ನುವುದು ನಿಸ್ವಾರ್ಥ ಮತ್ತು ಸುಂದರ ಭಾವನೆ. ಅದೇ ಮದುವೆ ಒಂದು ಒಪ್ಪಂದ. ನಿಜವಾದ ಪ್ರೀತಿಯು ಯಾವುದೇ ಅಡೆತಡೆಗಳು ಇಲ್ಲದೆ ಇಬ್ಬರ ಮಧ್ಯೆ ಮೂಡುವುದು. ಇದರ ಮಧ್ಯೆ ಬರುವ ಎಲ್ಲವನ್ನು ಅದು ಬೇರ್ಪಡಿಸುತ್ತದೆ.

ರಾಧೆ ಮತ್ತು ಕೃಷ್ಣನ ಪ್ರೀತಿಯು ಪರಿಶುದ್ಧ ಹಾಗೂ ಸುಂದರವಾಗಿತ್ತು
ಹೌದು, ರಾಧೆ ಮತ್ತು ಕೃಷ್ಣನ ಪ್ರೀತಿಯು ಪರಿಶುದ್ಧ ಹಾಗೂ ಸುಂದರವಾಗಿತ್ತು. ಅವರ ಪ್ರೀತಿಯು ಯಾವುದೇ ಬಾಹ್ಯ ಆಕರ್ಷಣೆಯನ್ನು ಹೊಂದಿರಲಿಲ್ಲ. ಅವರು ಪ್ರೇಮಿಗಳಾಗಿ ಒಂದು ಉನ್ನತ ಮಟ್ಟವನ್ನು ದಾಟಿದ್ದರು. ಆದರೆ ಯಾವತ್ತೂ ಮದುವೆಯಾಗಲಿಲ್ಲ.



Click it and Unblock the Notifications
