Just In
Don't Miss
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- News
ಕಳಪೆ ಊಟದ ವಿರುದ್ಧ ಪ್ರತಿಭಟನೆ; ಬಳ್ಳಾರಿಯಲ್ಲಿ ಎಸ್ಟಿ ಎಸ್ಸಿ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಹೊರಕ್ಕೆ, ಜೆಡಿಎಸ್ ಆಕ್ರೋಶ
- Sports
BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಆಡೋದು ಅನುಮಾನ
- Movies
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಟ್ಟಿನ ಸಮಯದಲ್ಲಿ ಮಹಿಳೆ ಪೂಜೆ ಮಾಡುವಂತಿಲ್ಲ, ಏಕೆ?: ತರ್ಕಬದ್ಧವಾಗಿ ವಿವರಿಸಿದ ಸದ್ಗುರು
ಮುಟ್ಟಾಗುವುದು ..... ಸ್ತ್ರೀ ಋತುಮತಿಯಾದ ಮೇಲೆ ಆಕೆಗೆ ಮೆನೋಪಾಸ್ ಬರುವವರಿಗೆ (50-54 ವರ್ಷದವರೆಗೆ) ಪ್ರತಿ ತಿಂಗಳು ನಡೆಯುವ ನೈಸರ್ಗಿಕವಾದ ಪ್ರಕ್ರಿಯೆ. ಮನುಕುಲ ನಾಶವಾಗಬಾರದೆಂದರೆ ಮಹಿಳೆ ಮುಟ್ಟಾಗಬೇಕು. ಮಹಿಳೆ ಗರ್ಭಿಣಿಯಾಗಬೇಕು, ತಾಯಿಯಾಗಬೇಕೆಂದರೆ ಆಕೆ ಋತುಮತಿಯಾಗಬೇಕು. ಆದರೆ ಈ ಮುಟ್ಟು ಎಂಬುವುದು ಅವಳಿಗೆ ವರವಾಗುವ ಬದಲಿಗೆ ಶಾಪವಾಗಿದೆ. ಅದಕ್ಕೆ ಕಾರಣ ಕೆಲ ಕನಿಷ್ಠ ಪದ್ಧತಿಗಳು.
ಈಗಲೂ ಕೆಲವು ಕಡೆ ಮುಟ್ಟಿನ ಸಮಯದಲ್ಲಿ ಮನೆಯೊಳಗಡೆ ಬರುವಂತಿಲ್ಲ, ಹೊರಗಡೆ ಒಂದು ಕೋಣೆಯಲ್ಲಿ ಮಲಗಬೇಕು, ಅಡುಗೆ ಮನೆಗೆ ಬರುವಂತಿಲ್ಲ, ಅವಳಿಗೆ ತಿನ್ನಲು, ಕುಡಿಯಲು ಅಲ್ಲಿ ಮನೆಯವರು ಅಲ್ಲಿ ಇಟ್ಟು ಬರುತ್ತಾರೆ. ಆ ಸಮಯದಲ್ಲಿ ಅವಳಿಗೆ ಒಂದು ಒಳ್ಳೆಯ ಬೆಡ್ ಕೂಡ ಇರಲ್ಲ, ಚಾಪೆಯಲ್ಲಿ ಮಲಗಬೇಕು, ಆ ಸಮಯದಲ್ಲಿ ಅವಳನ್ನು ನಡೆಸಿಕೊಳ್ಳುವ ರೀತಿ ತುಂಬಾನೇ ಶೋಚನೀಯ. ಮೈಲಿಗೆ ಎಂಬ ಹೆಸರಿನಲ್ಲಿ ತಾನು ಮುಟ್ಟಾಗುವುದೇ ಮಹಾಪರಾಧ ಎಂಬ ಭಾವನೆ ಹುಟ್ಟಿಸುವಂಥ ಪದ್ಧತಿಗಳಿವು.
ಇನ್ನು ಮುಟ್ಟಾದ ಮಹಿಳೆ ದೇವರ ಕೋಣೆಗೆ ಹೋಗಬಾರದು, ದೇವರ ಪೂಜೆಯಲ್ಲಿ ಬಾಗಿಯಾಗಬಾರದು, ಆಕೆ ದೇವರ ಕೋಣೆಯೊಳಗೆ ಬಂದರೆ ಅಶುದ್ಧ ಎಂದು ಹೇಳಲಾಗುವುದು.
ಹೀಗೆ ಮಹಿಳೆಯ ತಿಂಗಳ ಋತುಚಕ್ರದ ಬಗ್ಗೆ ಇರುವ ಕೆಲ ನಂಬಿಕೆಗಳು ಪ್ರಜ್ಞಾವಂತ ಸಮಾಜವನ್ನೂ ಬಿಟ್ಟಿಲ್ಲ, ಇದರ ಬಗ್ಗೆ ಎಷ್ಟೋ ಜನ ಅರಿವು ಮೂಡಿಸಲು ಪ್ರಯತ್ನಪಟ್ಟರೂ ಇನ್ನೂ ಮುಟ್ಟು ಎಂದರೆ ಅಶುದ್ಧ ಆ ಸಮಯದಲ್ಲಿ ಮಹಿಳೆ ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ, ಅಡುಗೆ ಮಾಡುವಂತಿಲ್ಲ ಎಂದೆಲ್ಲಾ ಹೇಳಲಾಗುವುದು.
ನಿಜವಾಗಲೂ ಮುಟ್ಟಿನ ದಿನಗಳಲ್ಲಿ ಮಹಿಳೆ ಅಶುದ್ಧಳೇ, ಆ ದಿನ ಏಕೆ ಅವಳು ಯಾವುದೇ ಕೆಲಸ ಮಾಡವಂತಿಲ್ಲ ಎಂಬುವುದರ ಬಗ್ಗೆ ಸದ್ಗುರು ತುಂಬಾನೇ ಚೆನ್ನಾಗಿ ವಿವರಿಸಿದ್ದಾರೆ ನೋಡಿ...

ಮುಟ್ಟಿನ ದಿನಗಳಲ್ಲಿ ಮಹಿಳೆ ಅಡುಗೆ ಮಾಡುವಂತಿಲ್ಲ, ಏಕೆ?
ಸದ್ಗುರು ಹೇಳುತ್ತಾರೆ ಹಿಂದೆಯೆಲ್ಲಾ ಕೂಡು ಕುಟುಂಬ. ಒಂದು ಮನೆಯಲ್ಲಿ 300-400 ಜನರು ಇರುತ್ತಿದ್ದರು. ಒಬ್ಬೊಬ್ಬರು ಒಂದೊಂದು ಕೆಲಸ ಮಾಡುತ್ತಿದ್ದರು. ಮನೆಯಲ್ಲಿರುವ ಮಹಿಳೆಯರು ಹೊರಗಡೆ ದುಡಿಯಲು ಹೋದ ಪುರುಷರಿಗೆ ಅಡುಗೆ ಮಾಡಿ ಬಡಿಸುವುದು, ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದರು.
ಅಷ್ಟು ಜನರಿಗೆ ಆಹಾರ ಮಾಡುವುದು ಎಂದರೆ ಸುಲಭವಾಗಿರಲಿಲ್ಲ. ಮುಟ್ಟಿನ ದಿನಗಳಲ್ಲಿ ನೋವು, ಸುಸ್ತು ಈ ಬಗೆಯ ಸಮಸ್ಯೆಗಳು ಕಂಡು ಬರುವುದು. ಈ ಸಮಯದಲ್ಲಿ ಅವಳು ಕೆಲಸ ಮಾಡಿದರೆ ಮತ್ತಷ್ಟು ದಣಿಯುತ್ತಾಳೆ ಅಲ್ಲದೆ ಆ ದಿನಗಳಲ್ಲಿ ಅವಳಿಗೆ ಕೆಲಸ ಮಾಡಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಮಹಿಳೆ ಮುಟ್ಟಿನ ದಿನ ಒಂದು ಕಡೆ ಆರಾಮವಾಗಿ ಕೂತು ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ನಿಯಮ ತಂದರು. ಆದರೆ ಅದೇ ಈಗ ಶಾಪವಾಗಿದೆ.
ಈಗ ಕೂಡು ಕುಟುಂಬವಿಲ್ಲ, ಆದರೆ ಮಹಿಳೆಗೆ ವಿಶ್ರಾಂತಿಗಂದು ಅವಳು ಆ ದಿನ ಏನೂ ಮಾಡುವಂತಿಲ್ಲ ಎಂದಿದ್ದು ಈಗ ಅವಳು ಆ ದಿನಗಳಲ್ಲಿ ಮಹಿಳೆ ಮನೆಯೊಳಗಡೆ ಬರುವಂತಿಲ್ಲ ಮೈಲಿಗೆಯಾಗುವುದು ಎಂಬ ರೂಪ ಪಡೆದಿದೆ.

ಮುಟ್ಟಿನ ದಿನಗಳಲ್ಲಿ ಪೂಜೆ ಮಾಡುವಂತಿಲ್ಲ ಏಕೆ?
ಇದನ್ನು ಕೂಡ ಸದಗುರು ಬಹಳ ತರ್ಕಬದ್ಧವಾಗಿ ವಿವರಿಸಿದ್ದಾರೆ. ಆ ಕಾಲದಲ್ಲಿ ದೇವರ ಕೋಣೆ ಎಂದರೆ ಚಿಕ್ಕ ಕೋಣೆಯಾಗಿರಲಿಲ್ಲ, ದೊಡ್ಡ ಕೋಣೆಯಾಗಿತ್ತು, ಪೂಜೆಗೆ ಮುನ್ನ ಆ ಸ್ಥಳವನ್ನು ಶುದ್ಧ ಪಡಿಸಲಾಗುವುದು. ಮುಟ್ಟಾದಾಗ ದೇವರ ಕೋಣೆಯನ್ನು ಒರೆಸಿ, ಸೆಗಣಿಯಿಂದ ಸಾರಿಸಿ, ಪೂಜಾ ಸಾಮಗ್ರಿಗಳನ್ನು ಜೋಡಿಸಲು ಕಷ್ಟವಾಗುವುದು ಎಂದು ಅವಳಿಗೆ ಪೂಜೆಯನ್ನು ಕೂಡ ಮಾಡುವಂತಿಲ್ಲ ಎಂದಿದ್ದು ಈಗ ಮುಟ್ಟಿನ ಸಮಯದಲ್ಲಿ ಮಹಿಳೆ ಮೈಲಿಗೆ ಅವಳು ಪೂಜೆ ಮಾಡುವಂತಿಲ್ಲ ಎಂಬುವುದಾಗಿದೆ.

ಮಹಿಳೆಯರಿಗೆ ಅನುಕೂಲಕ್ಕಾಗಿ ಮಾಡಿದ ಕಾನೂನುನಿಂದ ಈಗ ಅನಾನುಕೂಲ
ಹಿಂದೆ ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಮಾಡಿದ ಕಾನೂನುಗಳು ವರ್ಷಗಳು ಕಳೆಯುತ್ತಿದ್ದಂತೆ ಬೇರೆ ರೂಪವನ್ನು ತೆಗೆದುಕೊಂಡು ಮುಟ್ಟಿನಲ್ಲಿ ಮಹಿಳೆ ಮೈಲಿಗೆ ಎಂಬಂತೆ ಬಿಂಬಿತವಾಗುತ್ತಿದೆ.

ಮುಟ್ಟಾಗುವುದು ಮೈಲಿಗೆಯಲ್ಲ
ಮುಟ್ಟಾಗುವುದರಿಂದಲೇ ಮಹಿಳೆಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಇರುವುದು. ಆದ್ದರಿಂದ ಮುಟ್ಟು ಮೈಲಿಗೆಯಲ್ಲ. ಕೆಲವು ಕಡೆ ಅನಿಷ್ಠ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ, ಅವರಿಗೆ ಸದ್ಗುರು ಹೇಳಿದಂತೆ ಹೇಳಿದರೆ ಮುಟ್ಟಿನ ಕುರಿತ ತಪ್ಪು ಕಲ್ಪನೆ ದೂರಾಗುವುದು ಏನಂತೀರಿ?