ದೇವಾದಿದೇವ 'ಶಿವ' ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ!

By: Jaya subramanya
Subscribe to Boldsky

ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಶಿವನನ್ನು ವಿನಾಶದ ರೂಪದಲ್ಲಿ ಕಾಣಲಾಗುತ್ತದೆ. ಹೆಚ್ಚು ಶಕ್ತಿಶಾಲಿ ದೇವರಾಗಿರುವ ಈಶ್ವರನು ವಿನಾಶದ ಪ್ರತಿರೂಪಕವಾಗಿ ಪುರಾಣಗಳಲ್ಲಿ ಪ್ರತಿಬಿಂಬಿತವಾಗಿದ್ದಾರೆ. ಶಿವನು ತಮ್ಮ ಮೂರನೆಯ ಕಣ್ಣನ್ನು ತೆರೆದಲ್ಲಿ ಇಡಿಯ ವಿಶ್ವವೇ ನಾಶವಾಗಿ ಹೋಗುತ್ತದೆ ಎಂಬ ಪ್ರತೀತಿ ಕೂಡ ಇದೆ. ಸೃಷ್ಟಿಗೆ ಕಾರಣಕರ್ತ ಬ್ರಹ್ಮ ದೇವರಾಗಿದ್ದರೆ, ರಕ್ಷಕ ವಿಷ್ಣು ದೇವರಾಗಿದ್ದಾರೆ ಮತ್ತು ನಾಶ ಮಾಡುವವರು ಶಿವ ದೇವರಾಗಿದ್ದಾರೆ ಎಂಬುದು ವೇದಗಳಲ್ಲಿ ತಿಳಿಸಿರುವ ಸಾರವಾಗಿದೆ. ಶಿವನನ್ನು ಒಲಿಸಿಕೊಳ್ಳಲು ಹಿಂದೂಗಳು ಹೆಚ್ಚಿನ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ.

ಕಾರ್ತಿಕ ಮಾಸ ವಿಶೇಷ: ಶಿವನಿಗೆ ಪ್ರಿಯವಾದ ಮಂತ್ರಗಳು ನಿತ್ಯವೂ ಪಠಿಸಿ

ಕೈಲಾಸ ವಾಸಿಯಾಗಿರುವ ಪರಶಿವನು ಸರಳ ಭಕ್ತಿಗೆ ಮೆಚ್ಚಿ ಒಲಿಯುವವರು. ಬೂದಿಯನ್ನು ಮೈಗೆ ಲಗತ್ತಿಸಿಕೊಂಡು, ಹುಲಿಯ ಚರ್ಮವನ್ನು ಉಟ್ಟುಕೊಂಡು, ಕೊರಳಲ್ಲಿ ಹಾವನ್ನು ಧರಿಸಿರುವ ಸರಳ ರೂಪಿ ಶಿವನು ಕಣ್ಣಲ್ಲಿ ಕರುಣೆಯ ಕಾರುಣ್ಯವನ್ನು ಹೊಂದಿರುವವರಾಗಿದ್ದಾರೆ. ಇಂದಿನ ಲೇಖನದಲ್ಲಿ ನಾವು ಶಿವನ ಜನನದ ಕುರಿತಾಗಿ ಕೆಲವೊಂದು ಮಹತ್ವದ ಸಂಗತಿಗಳನ್ನು ಅರಿತುಕೊಳ್ಳಲಿದ್ದೇವೆ. ಬನ್ನಿ ಆ ವಿಶೇಷತೆಗಳೇನು ಎಂಬುದನ್ನು ನೋಡೋಣ...

ಶಿವನ ರೂಪದ ವರ್ಣನೆ

ಶಿವನ ರೂಪದ ವರ್ಣನೆ

ಹಿಂದೂ ಪುರಾಣದ ಪ್ರಕಾರ ಶಿವ ತ್ರಿಮೂರ್ತಿಗಳಲ್ಲಿ ಪ್ರಮುಖನಾಗಿದ್ದು ಲೋಕವಿನಾಶಕನೂ ಆಗಿದ್ದಾನೆ. ತ್ರಿಮೂರ್ತಿಗಳ ಶಕ್ತಿಯನ್ನು ಅಳೆಯುವುದಾದರೆ ಮೊದಲಿಗೆ ಶಿವ, ಬಳಿಕ ಬ್ರಹ್ಮ ಮತ್ತು ನಂತರದ ಸ್ಥಾನಗಳಲ್ಲಿ ವಿಷ್ಣು ನಿಲ್ಲುತ್ತಾರೆ. ಶಿವನಲ್ಲಿ ಲೋಕವನ್ನೇ ವಿನಾಶಗೊಳಿಸುವ ಶಕ್ತಿಯಿದ್ದರೂ ಈ ಶಕ್ತಿಯನ್ನು ಎಂದಿಗೂ ಆತ ತಪ್ಪು ಕೆಲಸಗಳಿಗೆ ಬಳಸಲಾರ. ದುಷ್ಟರ ವಿನಾಶ ಮತ್ತು ದುಷ್ಟಶಕ್ತಿಗಳನ್ನು ನಿವಾರಿಸಲು ಈ ಶಕ್ತಿಯನ್ನು ಬಳಸುವ ಶಿವ ಹಲವು ಬಾರಿ ಮಾತ್ರ ತನ್ನ ಈ ಶಕ್ತಿಯನ್ನು ಬಳಸಿದ್ದಾನೆ.

ಶಿವನ ರೂಪದ ವರ್ಣನೆ

ಶಿವನ ರೂಪದ ವರ್ಣನೆ

ಶಿವನ ರೂಪವನ್ನು ಪುರಾಣಗಳಲ್ಲಿ ವಿವಿಧ ರೂಪಗಳಲ್ಲಿ ವಿವರಿಸಲಾಗಿದ್ದರೂ ಮೂಲರೂಪದಲ್ಲಿ ಶಿವನಿಗೆ ನಾಲ್ಕು ಕೈ, ನಾಲ್ಕು ಮುಖ ಮತ್ತು ಮೂರು ಕಣ್ಣುಗಳಿರುವಂತೆ ವರ್ಣಿಸಲಾಗಿದೆ. ಈ ಮೂರನೆಯ ಕಣ್ಣು ಹಣೆಯಲ್ಲಿದ್ದು ಸದಾ ಮುಚ್ಚಿರುತ್ತದೆ. ಈ ಮೂರನೆಯ ಕಣ್ಣೇ ಲೋಕವಿನಾಶಗೊಳಿಸಲು ಶಕ್ಯವಿರುವ ಪ್ರಬಲ ಬೆಳಕಿನ ಕಿರಣಗಳನ್ನು ಸೂಸುತ್ತದೆ.ಈ ಕಿರಣಗಳಿಗೆ ಮನುಷ್ಯರ ಸೃಷ್ಟಿಯ ಸಕಲ ವಸ್ತುಗಳ ಸಹಿತ ದೇವರ ಸೃಷ್ಟಿಯ ಸಕಲವನ್ನೂ ನಾಶಗೊಳಿಸುವ ಶಕ್ತಿಯಿದೆ. ಹಿಂದೂಗಳ ಇನ್ನೊಂದು ಪವಿತ್ರ ಗ್ರಂಥವಾದ ವೇದಗಳಲ್ಲಿಯೂ ಶಿವನನ್ನು ಲೋಕವಿನಾಶಕನೆಂದೇ ಬಣ್ಣಿಸಿದ್ದು ರುದ್ರನೆಂಬ ಹೆಸರಿನಿಂದ ಉಲ್ಲೇಖಿಸಲ್ಪಟ್ಟಿದೆ. ರುದ್ರ ಎಂದರೆ ಚಂಡಮಾರುತದ ಅಧಿದೇವತೆ ಎಂಬ ಅರ್ಥ ಬರುತ್ತದೆ.

ಶಿವನ ಜನನ

ಶಿವನ ಜನನ

ಶಿವನು ಆಸಕ್ತಿಕರವಾದ ವಿಷಯಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿದ್ದಾರೆ. ಒಮ್ಮೆ ವಿಷ್ಣು ಮತ್ತು ಬ್ರಹ್ಮನಲ್ಲಿ ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದರ ಕುರಿತು ಚರ್ಚೆ ನಡೆಯುತ್ತದೆ. ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಹೊಳೆಯುವ ಕಂಬವೊಂದು ಉದ್ಭವಗೊಳ್ಳುತ್ತದೆ. ಆದರೆ ಇದರ ತುದಿ ಮತ್ತು ಆರಂಭ ಎಲ್ಲಿದೆ ಎಂಬುದೇ ತಿಳಿಯುತ್ತಿರಲಿಲ್ಲ. ಇದು ಮಣ್ಣಿನ ಆಳಕ್ಕೆ ಇಳಿಯು ಆರಂಭವಾಗುತ್ತದೆ ಮತ್ತು ಅದರ ತುದಿ ಆಕಾಶದೆತ್ತರಕ್ಕೂ ಬೆಳೆಯುತ್ತದೆ. ವಿಷ್ಣು ಮತ್ತು ಬ್ರಹ್ಮ ದೇವರು ಈ ದೃಶ್ಯವನ್ನು ನೋಡಿ ದಿಗ್ಮೂಢರಾಗುತ್ತಾರೆ. ನಂತರ ಇದು ಶಿವನ ಲೀಲಾಜಾಲವೆಂಬುದು ಅವರಿಗೆ ತಿಳಿಯುತ್ತದೆ. ಇದರ ಆರಂಭ ಮತ್ತು ಅಂತ್ಯವನ್ನು ನೋಡಲು ಬ್ರಹ್ಮ ಮತ್ತು ವಿಷ್ಣು ಮುಂದಾಗುತ್ತಾರೆ. ಬ್ರಹ್ಮನು ಹಕ್ಕಿಯ ರೂಪವನ್ನು ತಾಳಿ ಕಂಬದ ಕೊನೆಯನ್ನು ನೋಡಲು ಹೋಗುತ್ತಾರೆ. ವಿಷ್ಣುವು ಆಳವನ್ನು ನೋಡಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಇದರ ಆರಂಭ ಮತ್ತು ಅಂತ್ಯವನ್ನು ನೋಡಲು ಸಾಧ್ಯವಾಗುವುದೇ ಇಲ್ಲ.

ಶಿವನ ಜನನ

ಶಿವನ ಜನನ

ಹಿಂತಿರುಗಿ ಬಂದಾಗ ಶಿವನು ಆರಂಭ ಮತ್ತು ಅಂತ್ಯವನ್ನು ಕಾಣುವ ರೂಪದಲ್ಲಿರುತ್ತಾರೆ. ಹೀಗೆ ಪರಶಿವನ ಆರಂಭ ಮತ್ತು ಅಂತ್ಯವನ್ನು ನೋಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಅವರೇ ಮಹಾನ್ ಎಂಬ ತೀರ್ಮಾನಕ್ಕೆ ಬರುತ್ತಾರೆ. ಶಿವನ ಮಹಾನ್ ಶಕ್ತಿಯನ್ನು ಯಾರಿಗೂ ಅರಿತುಕೊಳ್ಳಲು ಸಾಧ್ಯವಿಲ್ಲ ಮತ್ತು ಅದನ್ನು ಹೋಲಿಸಲೂ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ. ಶಿವನಿಗೆ ಆನಂದಿ ಎಂಬ ಹೆಸರಿದ್ದು ಜನನ ಮರಣದ ನಂತರದ ಜೀವನ ಎಂಬ ಅರ್ಥವನ್ನು ನೀಡುತ್ತದೆ. ಶಿವನ ಹುಟ್ಟು ಮತ್ತು ಸಾವು ತರ್ಕಕ್ಕೆ ನಿಲುಕದ್ದು ಎಂಬುದು ಇದರ ಒಳಾರ್ಥವಾಗಿದೆ.

ಶಿವ ಮತ್ತು ಅವರ ಜೀವನ ಶೈಲಿ

ಶಿವ ಮತ್ತು ಅವರ ಜೀವನ ಶೈಲಿ

ಶಿವನು ಯಾವುದೇ ಸಾಮಾನ್ಯ ದೇವರಲ್ಲ. ತಮ್ಮದೇ ಆದ ರಹಸ್ಯಗಳು ಮತ್ತು ಪ್ರಾಮುಖ್ಯತೆಗಳ ಮೂಲಕ ಶಿವನು ಶ್ರೇಷ್ಠನಾಗಿದ್ದಾರೆ. ಇವರಿಗಿರುವ ಶಕ್ತಿ ಎಣಿಕೆಗೂ ನಿಲುಕದ್ದಾಗಿದೆ. ಅವರು ಧರಿಸುವ ಉಡುಪು ಕೂಡ ಸರಳವಾಗಿದ್ದು ಇದು ಶಿವನ ಶ್ರೇಷ್ಠತೆಯನ್ನು ತೋರಿಸುತ್ತದೆ. ಭಕ್ತರ ಅಳಲನ್ನು ಆಲಿಸುವ ಶಿವ ದೇವರು, ಭಕ್ತರ ಭಕ್ತಿಗೆ ಮೆಚ್ಚಿ ವರಪ್ರಸಾದವನ್ನು ನೀಡುತ್ತಾರೆ. ಹಿಮಾಲಯದಲ್ಲಿ ಎಷ್ಟೋ ವರ್ಷಗಳ ಕಾಲ ಧ್ಯಾನವನ್ನು ಶಿವನು ಮಾಡುತ್ತಾರೆ. ಅವರ ಸಿಟ್ಟಿನ ರೂಪ ತುಂಬಾ ಕಠೋರವಾಗಿರುತ್ತದೆ ಮತ್ತು ಭಕ್ತರಿಗೆ ಈ ರೂಪವೇ ಹೆದರಿಕೆಯನ್ನುಂಟು ಮಾಡುತ್ತದೆ. ಅವರು ಮಾಡುವ ತಾಂಡವ ನೃತ್ಯವು ನೀರು, ಭೂಮಿ, ಆಕಾಶ, ಬೆಂಕಿ ಮತ್ತು ಗಾಳಿಯನ್ನು ಆವರಿಸಿದೆ.

ಶಿವನ ಶಕ್ತಿ ಮತ್ತು ಪಾತ್ರಗಳು

ಶಿವನ ಶಕ್ತಿ ಮತ್ತು ಪಾತ್ರಗಳು

ಆತ ವಾಸವಾಗಿರುವುದು ಹಿಮಾಲಯದ ಶೈತ್ಯ ವಾತಾವರಣದಲ್ಲಿ, ಭೇಟಿ ನೀಡುವುವುದ್ ಸ್ಮಶಾನಗಳಿಗೆ, ಕೊರಳಲ್ಲಿ ಕಪೋಲಮಾಲೆ, ಕುತ್ತಿಗೆಯಲ್ಲಿ ನಾಗರಹಾವಿನ ಮಾಲೆ. ತಲೆಯಲ್ಲಿ ಬಂಧಿತವಾದ ಗಂಗೆ, ಶಿಖೆಯಲ್ಲಿ ಚಂದ್ರ. ಇವನ ಹಿಂಬಾಲಕರೋ, ರಕ್ತಪಿಪಾಸುಗಳಾದ ಭಯಹುಟ್ಟಿಸುವ ಭೂತಗಳು. ಶಿವನಲ್ಲಿ ಸಹಾಯ ಬೇಡಿ ಧಾವಿಸುವವರಲ್ಲಿ ಮನುಷ್ಯರಿಗಿಂತ ಇತರ ದೇವರ ಸಂಖ್ಯೆಯೇ ಹೆಚ್ಚಾಗಿದೆ.

ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ

ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ

ಸಾಮಾನ್ಯವಾಗಿ ಹಿಮಾಲಯದ ಹಿಮಾಚ್ಛಾದಿತ ಬೆಟ್ಟಗಳ ಮೇಲೆ ಸದಾ ಧ್ಯಾನಾಸಕ್ತನಾಗಿರುವ ಶಿವ ತನ್ನ ಭಕ್ತರ ಮೊರೆಯನ್ನು ಕೇಳಿ ಅವರ ಸಹಾಯಕ್ಕೆ ಧಾವಿಸುತ್ತಾನೆ. ದುಷ್ಟರ ಉಪಟಳ ತಾಳಲಾರದೇ ಶಿವನಲ್ಲಿ ಮೊರೆಯಿಡುವ ಭಕ್ತರ ರಕ್ಷಣೆಗೆ ಧಾವಿಸುವ ಶಿವ ದುಷ್ಟರ ರುಂಡವನ್ನು ಚೆಂಡಾಡುತ್ತಾನೆ. ಪ್ರಸನ್ನನಾಗಿದ್ದಾಗ ತಾಂಡವನೃತ್ಯ ಮಾಡುವ ಶಿವ ತನ್ನ ಭಕ್ತರ ಮನದಲ್ಲಿದ್ದ ದುಗುಡವನ್ನು ನಿವಾರಿಸುತ್ತಾನೆ. ತಾಂಡವನೃತ್ಯ ಸತ್ಯದ ಸಂಕೇತವೂ ಆಗಿದೆ.

ಲೋಕವುಳಿಸಲು ವಿಷಕಂಠನಾದ ಶಿವ

ಲೋಕವುಳಿಸಲು ವಿಷಕಂಠನಾದ ಶಿವ

ಪುರಾಣಗಳ ಪ್ರಕಾರ ಒಮ್ಮೆ ಸರ್ಪಗಳ ದೇವತೆಯಾದ ವಾಸುಕಿ ತನ್ನ ವಿಷದಿಂದ ಲೋಕವನ್ನು ವಿನಾಶಗೊಳಿಸಲು ಹೊರಟಿದ್ದಾಗ ದೇವತೆಗಳು ಈ ವಿಷದಿಂದ ರಕ್ಷಿಸಲು ಶಿವನ ಮೊರೆ ಹೊಕ್ಕರು. ಆಗ ಸಹಾಯಕ್ಕೆ ಧಾವಿಸಿದ ಶಿವ ಈ ವಿಷವನ್ನು ಕುಡಿದು ತನ್ನ ಗಂಟಲಿನಲ್ಲಿಟ್ಟುಕೊಂಡು ಲೋಕವನ್ನು ರಕ್ಷಿಸಿದ. ಈ ವಿಷದ ಕಾರಣ ಶಿವನ ಗಂಟಲು ನೀಲಿಬಣ್ಣದ್ದಾಗಿದೆ. ಶಿವನ ಎಲ್ಲಾ ಚಿತ್ರಗಳಲ್ಲಿ ಇದೇ ಕಾರಣಕ್ಕೆ ಗಂಟಲನ್ನು ಗಾಢನೀಲಿ ಬಣ್ಣದಲ್ಲಿಯೇ ಚಿತ್ರಿಸಲಾಗಿದೆ. ಭೂಮಿಗೆ ಶಿವ ನೀಡಿರುವ ಇನ್ನೊಂದು ಉಪಕಾರವೆಂದರೆ ಗಂಗಾನದಿಯ ಹರಿವನ್ನು ಹತೋಟಿಯಲ್ಲಿಟ್ಟುಕೊಂಡಿರುವುದು. ಮೊದಲು ಕೇವಲ ಸ್ವರ್ಗಲೋಕದಲ್ಲಿ ಮಾತ್ರ ಹರಿಯುತ್ತಿದ್ದ ಗಂಗೆಯನ್ನು ಬಾಗೀರಥನ ತಪಸ್ಸಿನ ಕಾರಣ ಭೂಮಿಗೆ ಇಳಿಸಲಾಯ್ತು. ಆದರೆ ಈ ರಭಸ ಎಷ್ಟಿತ್ತು ಎಂದರೆ ಲೋಕವನ್ನೇ ಕೊಚ್ಚಿಕೊಂಡು ಹೋಗುವಷ್ಟಿತ್ತು ಆಗ ಶಿವ ಈ ಹರಿವನ್ನು ತನ್ನ ಜಟೆಯಲ್ಲಿ ಬಂಧಿಸಿ ಕೂದಲುಗಳ ನಡುವಿನಿಂದ ಕೇವಲ ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ನೀರು ಹಿಮಾಲಯದಿಂದ ಇಳಿದು ಹೋಗುವಂತೆ ಮಾಡಿದ.

English summary

Who Gave Birth To Lord Shiva

The Hindus follow a number of rituals in order to impress Lord Shiva. He has a unique appearance which fascinates all his devotees. He has three eyes, he is covered in ash, snakes coil all around his arms and head, and he wears the skin of elephants and tigers, moreover, he is away from all the social pretenses. Lord Shiva is also known for the proverbial anger that he has.
Subscribe Newsletter