For Quick Alerts
ALLOW NOTIFICATIONS  
For Daily Alerts

  ರಾಶಿಫಲದ ಪ್ರಕಾರ ದೇವರನ್ನು ಪೂಜಿಸಿ, ಸಂತೃಪ್ತಿ ಪಡೆಯಿರಿ

  By Super
  |

  ಹಿಂದೂಧರ್ಮದ ಅತಿ ಪುರಾತನ ಪುರಾಣಗಳಲ್ಲೊಂದಾದ ಅಗ್ನಿ ಪುರಾಣದಲ್ಲಿ ಒಂದೆಡೆ ಹೀಗೆ ಬರೆಯಲಾಗಿದೆ: "ಜ್ಯೋತಿಶಾಸ್ತ್ರ ಅಥವಾ ಜ್ಯೋತಿಷ್ಯ ಎಂಬುದು ಒಂದು ನಂಬಿಕೆ ಮಾತ್ರವಲ್ಲ, ಇದೊಂದು ಸುಸ್ಪಷ್ಟವಾದ ವಿಜ್ಞಾನವಾಗಿದೆ" ಜ್ಯೋತಿಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿಯ ಹುಟ್ಟಿದ ದಿನಾಂಕ, ರಾಶಿಗಳನ್ನು ಪರಿಗಣಿಸಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬಹುದು.   ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

  ಭಾರತದಲ್ಲಿ ಹಿಂದೂ ಧರ್ಮವು ಅತಿ ಪುರಾತನವಾಗಿದ್ದು ಜ್ಯೋತಿಶಾಸ್ತ್ರವನ್ನು ಬಲವಾಗಿ ಪ್ರತಿಪಾದಿಸುವ ಮತ್ತು ಪ್ರಮುಖ ಕೆಲಸಗಳನ್ನು ಜ್ಯೋತಿಶಾಸ್ತ್ರದ ಪ್ರಕಾರವೇ ಪರಿಗಣಿಸಿ ಪ್ರಾರಂಭಿಸುವ ಮತ್ತು ಕೊನೆಗೊಳಿಸುವ ವಿಧಿಯನ್ನು ಅನುಸರಿಸುತ್ತದೆ. ಹಿಂದೂ ಧರ್ಮದಲ್ಲಿ ಪ್ರಮುಖವಾಗಿ ಮೂರು ಪಂಥಗಳಿವೆ. ವಿಷ್ಣುವನ್ನು ಆರಾಧಿಸುವ ವೈಷ್ಣವರು, ಶಿವನನ್ನು ಆರಾಧಿಸುವ ಶೈವರು ಮತ್ತು ಶಕ್ತಿಯನ್ನು ಆರಾಧಿಸುವ ಶಾಕ್ತರು. ಹಿಂದೂ ಪುರಾಣಗಳ ಪ್ರಕಾರ ಒಟ್ಟು ಮೂವತ್ತಮೂರು ಕೋಟಿ ದೇವರಿದ್ದಾರೆ. ಇವರೆಲ್ಲರೂ ವಿಷ್ಣು, ಶಿವ ಮತ್ತು ಶಕ್ತಿಯ ಅವರಾತಗಳೇ ಆಗಿದ್ದಾರೆ.             ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

  ಹಿಂದೂ ಧರ್ಮದಲ್ಲಿ ಹಲವಾರು ಒಳಪಂಗಡಗಳಿದ್ದು ಆಯಾ ಪಂಗಡವೂ ವಿವಿಧ ದೇವರನ್ನು ಪೂಜಿಸುತ್ತಾರೆ. ಆದರೆ ಒಂದೇ ದೇವರನ್ನು ಮಾತ್ರ ಪೂಜಿಸಬೇಕು ಎಂಬ ಕಡ್ಡಾಯವೇನೂ ಇಲ್ಲ. ಮನೆತನದ ದೇವರನ್ನು ಮನೆದೇವರೆಂದೂ, ತಮಗೆ ಇಷ್ಟವಾದ ದೇವರನ್ನು ಇಷ್ಟದೇವರೆಂದೂ ಕರೆಯುವುದು ವಾಡಿಕೆ. ಅಗ್ನಿಪುರಾಣದ ಪ್ರಕಾರ ನಿಮ್ಮ ರಾಶಿಚಕ್ರದ ಪ್ರಕಾರ ಯಾವ ದೇವರು ಆ ರಾಶಿಯಲ್ಲಿ ಪ್ರಾಬಲ್ಯವನ್ನು ಪಡೆದಿರುತ್ತಾನೋ ಆ ದೇವರನ್ನು ಪೂಜಿಸುವುದರಿಂದ ಹೆಚ್ಚಿನ ಫಲ ದೊರಕುತ್ತದೆ.

  ರಾಶಿಫಲವನ್ನು ಕಂಡುಕೊಳ್ಳಲು ಹಿಂದೂ ಪುರಾಣದಲ್ಲಿ ಹುಟ್ಟಿದ ಸಮಯ ಮತ್ತು ದಿನಾಂಕವನ್ನು ಪರಿಗಣಿಸಲಾಗುತ್ತದೆ. ಈ ಎರಡು ವಿಷಯಗಳು ಸರಿಯಾಗಿ ಗೊತ್ತಾದರೆ ರಾಶಿಫಲದ ಪ್ರಕಾರ ಯಾವ ದೇವರು ಪ್ರಾಬಲ್ಯ ಹೊಂದಿರುತ್ತಾನೆ ಎಂದು ಗೊತ್ತಾಗುತ್ತದೆ. ಒಂದು ವೇಳೆ ನಿಮ್ಮ ರಾಶಿಫಲ ನಿಮಗೆ ಗೊತ್ತಿದ್ದು ಯಾವ ದೇವರನ್ನು ಪೂಜಿಸಬೇಕು ಎಂದು ಗೊತ್ತಿಲ್ಲದೇ ಇದ್ದರೆ ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ:

  ಮೇಷ ರಾಶಿಯವರಿಗೆ

  ಮೇಷ ರಾಶಿಯವರಿಗೆ

  ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

  ಮಿಥುನ ರಾಶಿಯವರಿಗೆ

  ಮಿಥುನ ರಾಶಿಯವರಿಗೆ

  ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

  ಸಿಂಹರಾಶಿಯವರಿಗೆ

  ಸಿಂಹರಾಶಿಯವರಿಗೆ

  ಈ ರಾಶಿಯಲ್ಲಿ ಸೂರ್ಯ ಅಧಿಪತ್ಯ ವಹಿಸಿರುತ್ತಾನೆ. ಅಂತೆಯೇ ಶಿವನೇ ಲೋಕಾಧಿಪತಿಯಾಗಿದ್ದು ಶಿವನನ್ನು ಆರಾಧಿಸುವುದು ಸುಲಭ ಮತ್ತು ಶಿವ ಸುಲಭವಾಗಿ ಒಲಿಯುವವನಾಗಿದ್ದಾನೆ.

  ಸಿಂಹರಾಶಿಯವರಿಗೆ

  ಸಿಂಹರಾಶಿಯವರಿಗೆ

  ಆದ್ದರಿಂದ ಈ ರಾಶಿಯವರು ಪವಿತ್ರ ಮಂತ್ರವನ್ನು ಸದಾ ಪಠಿಸುತ್ತಾ ಶಿವನನ್ನು ಆರಾಧಿಸುವ ಮೂಲಕ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

  ತುಲಾರಾಶಿಯವರಿಗೆ

  ತುಲಾರಾಶಿಯವರಿಗೆ

  ಈ ರಾಶಿಯನ್ನು ಶುಕ್ರ ಆಳುತ್ತಾನೆ. ಮತ್ತು ಶುಕ್ರನ ಅಧಿಪತ್ಯ ವಹಿಸಿರುವ ದೇವತೆ ಎಂದರೆ ಲಕ್ಷ್ಮಿ. ಆದ್ದರಿಂದ ಈ ರಾಶಿಯವರು ಲಕ್ಷ್ಮಿಯನ್ನು ಆರಾಧಿಸಿದರೆ ಜೀವನದಲ್ಲಿ ಸಮೃದ್ಧಿ ಮತ್ತು ಧನವನ್ನು ಪಡೆಯಬಹುದು.

  ವೃಷಭ ರಾಶಿಯವರಿಗೆ

  ವೃಷಭ ರಾಶಿಯವರಿಗೆ

  ಈ ರಾಶಿಯಲ್ಲಿಯೂ ಶುಕ್ರನೇ ಆಳುತ್ತಾನೆ. ಆದ್ದರಿಂದ ಈ ರಾಶಿಯವರೂ ಶುಕ್ರನ ಅಧಿಪತಿಯಾಗಿರುವ ಲಕ್ಷ್ಮಿಯನ್ನೇ ಪೂಜಿಸುವ ಮೂಲಕ ಧನಾತ್ಮಕ ಶಕ್ತಿ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯಬಹುದು.

  ವೃಶ್ಚಿಕ ರಾಶಿಯವರಿಗೆ

  ವೃಶ್ಚಿಕ ರಾಶಿಯವರಿಗೆ

  ಈ ರಾಶಿಯಲ್ಲಿ ಮಂಗಳನೇ ಅಧಿಪತ್ಯ ವಹಿಸಿರುತ್ತಾನೆ. ಆದ್ದರಿಂದ ಮಂಗಳನ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

  ಕಟಕ ರಾಶಿಯವರಿಗೆ

  ಕಟಕ ರಾಶಿಯವರಿಗೆ

  ಕರ್ಕಾಟಕ ಅಥವಾ ಕಟಕ ರಾಶಿಯಲ್ಲಿ ಚಂದ್ರ ಅಧಿಪತ್ಯ ವಹಿಸಿರುತ್ತಾನೆ. ಚಂದ್ರನ ಅಧಿಪತಿಯಾದ ದೇವತೆ ಎಂದರೆ ಗೌರಿ. ಗೌರಿ ಎಂದರೆ ಶಾಂತಿ, ಸಹಾನುಭೂತಿ, ಕರುಣೆಯ ಸಾಕಾರರೂಪವಾಗಿದ್ದು ಗೌರಿಯನ್ನು ಪೂಜಿಸುವ ಮೂಲಕ ಈ ಗುಣಗಳನ್ನೂ ಪಡೆಯಬಹುದು.

  ಕುಂಭರಾಶಿಯವರಿಗೆ

  ಕುಂಭರಾಶಿಯವರಿಗೆ

  ಕುಂಭರಾಶಿಯಲ್ಲಿ ಮಂಗಳ ಅಧಿಪತ್ಯ ವಹಿಸಿರುತ್ತಾನೆ. ಶಿವನೇ ಮಂಗಳನ ಅಧಿಪತಿಯೂ ಆಗಿರುವ ಕಾರಣ ಈ ರಾಶಿಯವರು ಶಿವನನ್ನು ತುಂಬುಹೃದಯದಿಂದ ಪ್ರಾರ್ಥಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

  ಕನ್ಯಾರಾಶಿಯವರಿಗೆ

  ಕನ್ಯಾರಾಶಿಯವರಿಗೆ

  ಕನ್ಯಾರಾಶಿಯಲ್ಲಿ ಬುಧಗ್ರಹ ಪ್ರಾಬಲ್ಯ ಹೊಂದಿದೆ. ಬುಧನ ಅಧಿಪತಿಯಾದ ಶ್ರೀಮನ್ನಾರಾಯಣ ವಿಷ್ಣುವಿನ ಅವತಾರವಾಗಿದ್ದು ಈ ರಾಶಿಯವರು ಶ್ರೀಮನ್ನಾರಾಯಣನನ್ನೇ ಪೂಜಿಸುವ ಮೂಲಕ ಜೀವನದಲ್ಲಿ ಸಮೃದ್ಧಿ ಮತ್ತು ಕ್ಷಿಪ್ರವಾದ ಆದಾಯವನ್ನು ಪಡೆಯಬಹುದು.

  ಧನು ರಾಶಿಯವರಿಗೆ

  ಧನು ರಾಶಿಯವರಿಗೆ

  ಈ ರಾಶಿಯಲ್ಲಿ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ಎಂದರೆ "ಶ್ರೀ ದಕ್ಷಿಣಾಮೂರ್ತಿ" ದಕ್ಷಿಣಾಮೂರ್ತಿಯೂ ಶಿವನ ಅವತಾರಗಳಲ್ಲೊಂದಾಗಿದ್ದು ಈತನು ಬುದ್ಧಿಮತ್ತೆ ಮತ್ತು ಜ್ಞಾನದ ಆಗರವಾಗಿದ್ದಾನೆ. ಆದ್ದರಿಂದ ಧನುರಾಶಿಯವರು ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಅಪಾರ ಜ್ಞಾನ ಮತ್ತು ತಿಳಿವಳಿಕೆ ಪಡೆದು ಜೀವನದಲ್ಲಿ ಬಹಳಷ್ಟನ್ನು ಸಾಧಿಸಬಹುದು.

  ಮೀನ ರಾಶಿಯವರಿಗೆ

  ಮೀನ ರಾಶಿಯವರಿಗೆ

  ಈ ರಾಶಿಯಲ್ಲಿಯೂ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಉತ್ತಮ ಫಲವನ್ನು ಪಡೆಯಬಹುದು.

  ಮಕರ ರಾಶಿಯವರಿಗೆ

  ಮಕರ ರಾಶಿಯವರಿಗೆ

  ಈ ರಾಶಿಯಲ್ಲಿ ಮಂಗಳ ಪ್ರಾಬಲ್ಯ ಹೊಂದಿರುತ್ತಾನೆ. ಮಂಗಳಗ್ರಹದ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಮಕರ ರಾಶಿಯವರು ಜೀವನದಲ್ಲಿ ಸಮೃದ್ಧಿ, ನೆಮ್ಮದಿಗಳನ್ನು ಪಡೆಯಬಹುದು.

    

  English summary

  Which God Should You Worship As Per Your Sun Sign

  As per the Hindu scriptures, by knowing your birth date and sun sign, you can easily achieve whatever you fairly deserve in your life by worshipping that particular deity who rules your sun sign. However, if you don't know which Gods are to be worshipped according to your sun sign, just go through the following points that will give you a clear perception about the same:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more