Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯಾವ್ಯಾವ ಸ್ಥಳಗಳಲ್ಲಿ ಮನೆ ನಿರ್ಮಿಸಬಾರದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದರೆ ಅದರಿಂದ ಜೀವನದಲ್ಲಿ ಲೌಕಿಕ ಸುಖ, ಸಮೃದ್ಧಿ, ವ್ಯಾಪಾರದಲ್ಲಿ ಅಭಿವೃದ್ಧಿ, ವೃತ್ತಿಯಲ್ಲಿ ಶ್ರೇಯೋಭಿವೃದ್ಧಿ ಸಿಗುವುದು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ವಾಸ್ತು ಪ್ರಕಾರವೇ ಮನೆ ಕಟ್ಟಲು ಮುಂದಾಗುತ್ತಿದ್ದಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿಯು ಸಿಗುವುದು.

ಮನೆಯಲ್ಲಿ ಧನಾತ್ಮಕ ಶಕ್ತಿಯಿದ್ದರೆ ಆಗ ಜೀವನವು ಸುಗಮವಾಗಿ ಸಾಗಲು ನೆರವಾಗುವುದು. ವಾಸ್ತು ಪ್ರಕಾರ ಮನೆ ಕಟ್ಟಿದರೆ ಅದರಿಂದ ದೇವದೇವತೆಗಳು ಕೂಡ ನೆಲೆಸುವರು ಎಂದು ಹೇಳಲಾಗುತ್ತದೆ. ಅದಾಗ್ಯೂ, ಕೆಲವೊಂದು ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಲೇಬಾರದು ಎಂದಿರುತ್ತದೆ. ಇಂತಹ ಸ್ಥಳಗಳಲ್ಲಿ ನಾವು ಮನೆ ನಿರ್ಮಾಣ ಮಾಡಿದರೂ ಅಲ್ಲಿ ವಾಸ್ತು ಫಲಿಸುವುದಿಲ್ಲ. ಮನೆ ನಿರ್ಮಾಣ ಮಾಡಲು ಯೋಗ್ಯವಲ್ಲದೆ ಇರುವಂತಹ ಪ್ರದೇಶಗಳು ಯಾವುದು ಎಂದು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳುವ.

ಎರಡು ರಸ್ತೆಗಳು ಛೇಧಿಸುವಲ್ಲಿ ಮನೆ ನಿರ್ಮಿಸಬಾರದು
ಹಿಂದೂ ಧರ್ಮದಲ್ಲಿರುವಂತಹ ಭವಿಷ್ಯ ಪುರಾಣದ ಪ್ರಕಾರ, ರಸ್ತೆಗಳೆರಡು ಛೇದಿಸುವಂತಹ ಜಾಗದಲ್ಲಿ ಮನೆ ನಿರ್ಮಾಣ ಮಾಡಬಾರದು. ಎರಡು ರಸ್ತೆಗಳು ಛೇದಿಸುವುದು ಮನೆಯಲ್ಲಿನ ಜನರಿಗೆ ಒಳ್ಳೆಯದಲ್ಲವೆಂದು ಪರಿಗಣಿಸಲಾಗಿದೆ. ಇದು ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಇದರಿಂದ ಸಂಗಾತಿಗಳ ಮಧ್ಯೆ ಪದೇ ಪದೇ ಜಗಳವಾಗಬಹುದು.

ವಧಾಗೃಹದ ಸಮೀಪ
ವಧಾಗೃಹದಿಂದ ಸಮೀಪ ಮನೆ ನಿರ್ಮಾಣ ಮಾಡಬಾರದು. ಯಾಕೆಂದರೆ ಇಲ್ಲಿಂದ ಬರುವಂತಹ ಶಕ್ತಿಯನ್ನು ನಕಾರಾತ್ಮಕವೆಂದು ಪರಿಗಣಿಸಲಾಗಿದೆ ಮತ್ತು ಇದು ಮನೆಯಲ್ಲಿ ವಾಸಿಸುವ ಜನರಿಗೆ ಅಶುಭವಾಗಿರುವುದು. ಇದರಿಂದ ಬಡತನ ಮತ್ತು ಮನೆಯ ಸಂತೋಷ ದೂರವಾಗುವುದು.

ಆಸ್ಪತ್ರೆಗೆ ಹತ್ತಿರವಾಗಿ..
ಆಸ್ಪತ್ರೆಗೆ ಹತ್ತಿರವಾಗಿರುವಂತಹ ಮನೆಯನ್ನು ಯಾವತ್ತೂ ಖರೀದಿಸಬೇಡಿ. ಈ ವಾತಾವರಣವು ಅಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇಲ್ಲಿರುವ ಕೀಟಾಣುಗಳು ಹಬ್ಬುವುದು ಎನ್ನುವ ಕಾರಣಕ್ಕೆ ಮಾತ್ರವಲ್ಲದೆ, ಪದೇ ಪದೇ ಸಂಭವಿಸುವ ಸಾವು ಹಾಗೂ ಇಲ್ಲಿನ ರೋಗಿಗಳ ಅನಾರೋಗ್ಯವು ನಿಮ್ಮ ಮನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.

ಅನಾಥ ಮನೆ ಸಮೀಪ
ಹಲವಾರು ವರ್ಷಗಳಿಂದಲೂ ಅನಾಥವಾಗಿರುವಂತಹ ಮನೆ ಅಥವಾ ಕಟ್ಟಡದಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದು ಎಂದು ಹೇಳಲಾಗುತ್ತದೆ. ಅರ್ಧ ಕುಸಿದಿರುವ, ಅರ್ಧ ಕಟ್ಟಿ ಬಿಡಲಾಗಿರುವ ಅಥವಾ ಅನಾಥವಾಗಿರುವಂತಹ ಕಟ್ಟಡ ಅಥವಾ ಮನೆ ಸಮೀಪ ನೀವು ಮನೆ ನಿರ್ಮಿಸಿದರೆ ಆಗ ವಾಸ್ತು ದೋಷ ಕಾಡುವುದು. ಇಂತಹ ಸ್ಥಳಗಳಲ್ಲಿ ಕೆಲವೊಂದು ಸಲ ಅಸಾಮಾನ್ಯ ಸಂಗತಿಗಳು ಘಟಿಸುವುದು.

ಮದ್ಯದಂಗಡಿ ಬಳಿ
ವಾಸ್ತು ಶಾಸ್ತ್ರದ ಪ್ರಕಾರ ಮದ್ಯದಂಗಡಿ ಸಮೀಪದಲ್ಲಿ ಮನೆ ನಿರ್ಮಾಣ ಮಾಡಬಾರದು. ಹಿಂದೂ ಧರ್ಮದ ಪ್ರಕಾರ ದುಷ್ಟಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳು ಮದ್ಯ, ಮಾಂಸಾಹಾರಿ ಆಹಾರ ಇತ್ಯಾದಿಗಳತ್ತ ಬೇಗನೆ ಆಕರ್ಷಿತವಾಗುವುದು. ಇದರಿಂದ ನೀವು ಮದ್ಯದಂಗಡಿ ಸಮೀಪ ಮನೆ ನಿರ್ಮಿಸಬೇಡಿ.

ಸ್ಮಶಾನದ ಹತ್ತಿರ
ಸ್ನಶಾನದ ಸಮೀಪ ಮನೆ ನಿರ್ಮಾಣ ಮಾಡಬಾರದು ಎನ್ನುವ ಮಾತು ಹಿಂದಿನಿಂದಲೂ ಕೇಳಿಬರುತ್ತಿದೆ. ಶಾಸ್ತ್ರದ ಪ್ರಕಾರ ಸ್ಮಶಾನದ ಸಮೀಪದ ಮನೆ ನಿರ್ಮಾಣ ಮಾಡುವುದರಿಂದ ಅಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಮನೆಗೆ ಬರುವುದು. ಇದಕ್ಕೆ ಹೊರತಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಕೆಲವೊಂದು ಮನೆಗಳು ಕೂಡ ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.



Click it and Unblock the Notifications
