Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ವರಮಹಾಲಕ್ಷ್ಮಿ ಹಬ್ಬಕ್ಕೆ, ಪೂಜಾ ಕೋಣೆಯ ಸಿದ್ಧತೆ ಹೀಗಿರಲಿ
ಶ್ರಾವಣ ಮಾಸವೆಂದರೆ ಅದು ಹಬ್ಬಗಳ ಸುಗ್ಗಿಕಾಲವಾಗಿದೆ. ಎಲ್ಲಾ ಹಬ್ಬಕ್ಕೆ ಆರಂಭವನ್ನು ಒದಗಿಸುವ ನಾಗರಪಂಚಮಿ ಮುಗಿದ ಒಡನೆ ವರಮಹಾಲಕ್ಷ್ಮಿ ಬಂದೇ ಬಿಡುತ್ತದೆ. ದಕ್ಷಿಣ ಭಾಗಗಳ ಹಲವೆಡೆ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದು ಮುಖ್ಯವಾಗಿ ಸುಮಂಗಲಿಯರೇ ವ್ರತ ಪೂಜೆಗಳನ್ನು ಮಾಡುತ್ತಾರೆ.
ಈ ಬಾರಿ ಆಗಸ್ಟ್ 12 ರ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಬಂದಿದ್ದು, ಹಬ್ಬದ ಸಮಯದಲ್ಲಿ ವ್ರತವನ್ನು ಆಚರಿಸುವ ಸುಮಂಗಲಿಯರಿಗೆ ದೇವಿ ಕೇಳಿದ್ದನ್ನು ನೀಡುತ್ತಾರೆ ಎಂಬ ನಂಬಿಕೆ ಬೇರೂರಿದೆ. ಹೆಸರಿಗೆ ತಕ್ಕಂತೆ ತಾಯಿ ಕೇಳಿದ್ದನ್ನು ನೀಡುವವರಾಗಿದ್ದಾರೆ. 'ವರಮಹಾಲಕ್ಷ್ಮಿ ವ್ರತದ' ಆಚರಣೆ ಹಾಗೂ ಪೂಜಾ ವಿಧಿವಿಧಾನ
ತಮಿಳುನಾಡಿನಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ತಿಂಗಳ ಹುಣ್ಣಿಮೆಗೆ ಆಚರಿಸಿದರೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ. ಇಂದಿನ ಲೇಖನದಲ್ಲಿ ದೇವಿಯ ಪೂಜೆಯನ್ನು ಮಾಡುವಾಗ ಯಾವೆಲ್ಲಾ ಅಂಶಗಳಿಗೆ ಪ್ರಾಮುಖ್ಯತೆ ನೀಡಬೇಕು. ದೇವರ ಮಂಟಪದ ಸಿದ್ಧತೆ, ಪೂಜೆಯನ್ನು ನಡೆಸುವ ವಿಧಾನ ಮೊದಲಾದ ಬಗೆಯನ್ನು ಅರಿತುಕೊಳ್ಳೋಣ.....

ಪೂಜಾ ಮಂಟಪ
ನಾಲ್ಕು ಬದಿಗೂ ರಂಗೋಲಿಯನ್ನು ಹಾಕಿ ಪೂಜಾ ಮಂಟಪವನ್ನು ಸಿಂಗರಿಸುತ್ತಾರೆ. ಕಾವಿ ಅಂಚಿನಲ್ಲಿ ಹೃದಯ ಕಮಲ ಅಥವಾ ಐಶ್ವರ್ಯಾ ರಂಗೋಲಿಯನ್ನು ಹಾಕಬಹುದಾಗಿದೆ. ಮಾವಿನ ಎಲೆಗಳನ್ನು ಸಿಂಗರಿಸಲು ಬಳಸಿ

ತೆಂಗಿನ ಮುಖದ ಅಲಂಕಾರ
ತೆಂಗಿನ ನಾರನ್ನು ಜಾಗರೂಕತೆಯಿಂದ ಸುಲಿಯಿರಿ. ಅರಿಶಿನ ಪುಡಿಯನ್ನು ನೀರಿನಲ್ಲಿ ಕಲಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ತೆಂಗಿನ ಕಾಯಿ ಸುತ್ತಲೂ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಮತ್ತು ತೆಂಗಿನ ಕಾಯಿಗೆ ಕುಂಕುಮದಿಂದ ಎರಡು ಕಣ್ಣುಗಳನ್ನು ಬಿಡಿಸಿ. ವರಮಹಾಲಕ್ಷ್ಮಿ ಹಬ್ಬದಲ್ಲಿ ಈ ಅಲಂಕಾರವನ್ನು ಪ್ರಮುಖವಾಗಿ ಮಾಡುತ್ತಾರೆ

ಹೂಮಾಲೆ
ಹೂವಿನ ಅಲಂಕಾರವನ್ನು ನಿಮ್ಮ ಪೂಜಾ ಕೊಠಡಿಗೆ ಮಾಡಿಲ್ಲ ಎಂದಾದಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಕಳೆಗುಂದುವುದು ಖಂಡಿತ. ನಿಮ್ಮ ಪೂಜಾ ಮನೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಹೂವಿನ ಅಲಂಕಾರವನ್ನು ಮಾಡಿ

ಎಲ್ಇಡಿ ಲೈಟ್ಸ್
ಅಲಂಕಾರಕ್ಕಾಗಿ ಎಲ್ಇಡಿ ಲೈಟ್ಗಳನ್ನು ಈಗ ಸಾಮಾನ್ಯವಾಗಿ ಬಳಸುತ್ತಾರೆ. ಇದು ಸಂಪೂರ್ಣ ವಾತಾವರಣವನ್ನು ಹೆಚ್ಚು ಆಕರ್ಷಕವನ್ನಾಗಿಸುತ್ತದೆ. ಒಂದೇ ಅಥವಾ ಹಲವು ಬಣ್ಣದ ಲೈಟ್ಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ನಿಮ್ಮ ಪೂಜಾ ಮಂಟಪಕ್ಕೆ ಮಾತ್ರವಲ್ಲದೆ ಮನೆಗೂ ಈ ಲೈಟಿಂಗ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಮೂರ್ತಿ ಅಲಂಕಾರ
ವರಮಹಾಲಕ್ಷ್ಮಿ ಪೂಜೆಯಲ್ಲಿ ಮೂರ್ತಿಗೆ ಅಲಂಕಾರವನ್ನು ನೀವು ಚೆನ್ನಾಗಿ ಮಾಡಬೇಕು. ನಿಮ್ಮ ಮಂಟಪಕ್ಕೆ ಹೊಂದಿಕೊಳ್ಳುವ ಮೂರ್ತಿಯನ್ನು ಆಯ್ಕೆಮಾಡಿ. ಮೂರ್ತಿಯ ಅಲಂಕಾರಕ್ಕೆ ಸಮನಾಗಿ ಮಂಟಪದ ಅಲಂಕಾರ ಕೂಡ ಇರಲಿ.

ದೀಪಗಳ ಅಲಂಕಾರ
ಅಲಂಕಾರಿಕ ದೀಪಗಳನ್ನು ಬಳಸಿ ಹಬ್ಬವನ್ನು ಇನ್ನಷ್ಟು ಶ್ರದ್ಧಾಪೂರ್ವಕವನ್ನಾಗಿ ಮಾಡಬಹುದು. ಮಣ್ಣಿನ ದೀಪಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ, ಅಂತೆಯೇ ಬೆಳ್ಳಿ ಹಾಗೂ ಎಣ್ಣೆಯ ದೀಪಗಳನ್ನು ಪೂಜೆಗಾಗಿ ಬಳಸಿಕೊಳ್ಳಬಹುದಾಗಿದೆ. ಮರುಬಳಕೆಯನ್ನು ಮಾಡಲು ನೀವು ಬಯಸುತ್ತೀರಿ ಎಂದಾದಲ್ಲಿ ಮುಂದಿನ ವರ್ಷಕ್ಕೂ ಇದನ್ನು ಬಳಕೆ ಮಾಡಬಹುದಾಗಿದೆ. ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಇದು ಹೆಚ್ಚು ಮುಖ್ಯವಾದುದು.

ರಂಗೋಲಿ
ಪೂಜೆಯಲ್ಲಿ ರಂಗೋಲಿ ಹೆಚ್ಚು ಪ್ರಾಮುಖ್ಯವಾದುದು. ಸಾಂಪ್ರದಾಯಿಕ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸುವುದರ ಜೊತೆಗೆ, ಹೊಸ ಮತ್ತು ವಿನ್ಯಾಸದ ರಂಗೋಲಿಯನ್ನು ನೀವು ಹಾಕಬಹುದಾಗಿದೆ. ಎಣ್ಣೆಯ ದೀಪಗಳನ್ನು ಇರಿಸುವುದರ ಮೂಲಕ ರಂಗೋಲಿ ವಿನ್ಯಾಸಗಳನ್ನು ಅಲಂಕರಿಸಿ.ನಿಮ್ಮ ಹಬ್ಬವನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡಲು ಈ ಅಲಂಕಾರದ ವಿಧಾನಗಳನ್ನು ಅನುಸರಿಸಿ. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುವುದು ಖಂಡಿತ.



Click it and Unblock the Notifications