Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
'ವರಮಹಾಲಕ್ಷ್ಮಿ ವ್ರತದ' ಆಚರಣೆ ಹಾಗೂ ಪೂಜಾ ವಿಧಿವಿಧಾನ
ಹಿಂದೂ ಪಂಚಾಂಗದಲ್ಲಿ ಶ್ರಾವಣ ಬಂತೆಂದರೆ ಹಬ್ಬಗಳು ಸಾಲುಗಟ್ಟಿ ಬರಲು ಆರಂಭವಾಗುತ್ತದೆ. ಇದರಿಂದಾಗಿ ಹಿಂದೂಗಳು ಶ್ರಾವಣ ಬರಲು ಕಾಯುತ್ತಾ ಇರುತ್ತಾರೆ. ಅದರಲ್ಲೂ ಎಲ್ಲಾ ಹಬ್ಬಕ್ಕೆ ಮುನ್ನುಡಿ ಬರೆಯುವ ನಾಗರಪಂಚಮಿ, ಮುಗಿದ ಕೂಡಲೇ ವರಮಹಾಲಕ್ಷ್ಮಿ ಹಬ್ಬದ ಅಬ್ಬರ ಶುರುವಾಗಿ ಬಿಡುತ್ತದೆ, ಅಷ್ಟೇ ಅಲ್ಲದೆ ಈ ಹಬ್ಬದಲ್ಲಿ ವ್ರತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರಿಂದ ಈ ವ್ರತವನ್ನು ಹೆಚ್ಚಾಗಿ ಸುಮಂಗಲಿಯರು ದಕ್ಷಿಣ ಭಾರತದೆಲ್ಲೆಡೆಯಲ್ಲಿ ಆಚರಿಸುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಇತರ ಭಾಗಗಳಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.
ಈ ವರ್ಷ ವರಮಹಾಲಕ್ಷ್ಮಿ ವ್ರತವು ಆಗಸ್ಟ್ 12, ಶುಕ್ರವಾರದಂದು ಆಚರಿಸಲಾಗುತ್ತಿದೆ. ವರಮಹಾಲಕ್ಷ್ಮಿ ವ್ರತವನ್ನು ಕೈಗೊಳ್ಳುವ ಸುಮಂಗಲಿಯರಿಗೆ ಲಕ್ಷ್ಮೀ ದೇವಿಯು ಸುಖ ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ ಎನ್ನುವ ನಂಬಿಕೆಯಿದೆ.

ವರಮಹಾಲಕ್ಷ್ಮಿ ವ್ರತವನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಿಂದ ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಎಂದರೆ ವರವನ್ನು ಕೊಡುವ ದೇವಿ.' ಎಂದರ್ಥ. ತಮಿಳುನಾಡಿನಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆದಿ ಎಂದು ಕರೆಯಲ್ಪಡುವ ತಿಂಗಳ ಹುಣ್ಣಿಮೆಗೆ ಮೊದಲು ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಇದನ್ನು ಶ್ರಾವಣ ತಿಂಗಳು ಎಂದು ಕರೆಯಲಾಗುತ್ತದೆ. ವರಮಹಾಲಕ್ಷ್ಮೀ ವ್ರತದಂದು ಲಕ್ಷ್ಮೀಯನ್ನು ಪೂಜಿಸುವುದರಿಂದ ಸಂಪತ್ತು, ಆಸ್ತಿ, ವಿದ್ಯೆ, ಪ್ರೀತಿ, ಪ್ರಸಿದ್ಧಿ, ಶಾಂತಿ, ಸುಖ ಲಭ್ಯವಾಗುತ್ತದೆ ಎನ್ನುವ ನಂಬಿಕೆಯಿದೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷ- ಭಕ್ತೆ ಚಾರುಮತಿಯ ಕಥೆ
ಮಹಿಳೆಯರಿಗೆ ಸುಖ ಹಾಗೂ ಸಮೃದ್ಧಿಯನ್ನು ನೀಡುವಂತಹ ಲಾಭಕಾರಿಯಾಗಿರುವ ವ್ರತದ ಬಗ್ಗೆ ತಿಳಿದುಕೊಳ್ಳಲು ಪಾರ್ವತಿ ದೇವಿಯು ಬಯಸುತ್ತಾಳೆ. ಈ ಸಮಯದಲ್ಲಿ ಶಿವನು ವರಮಹಾಲಕ್ಷ್ಮೀ ವ್ರತದ ಬಗ್ಗೆ ತಿಳಿಸುತ್ತಾನೆ ಎಂದು ಹಿಂದೂ ಪುರಾಣಗಳು ಹೇಳಿವೆ. ಇದನ್ನೇ ಇಂದಿನ ದಿನಗಳಲ್ಲೂ ಶ್ರದ್ಧೆಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ವರಮಹಾಲಕ್ಷ್ಮಿ ಪೂಜೆಯಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಮತ್ತು ಇದನ್ನು ಲಕ್ಷ್ಮೀ ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಲಾಗುತ್ತದೆ. ಈ ವ್ರತವನ್ನು ಆಚರಿಸಿದರೆ ಲಕ್ಷ್ಮೀ ದೇವಿಯು ವರವನ್ನು ಕೊಡುತ್ತಾಳೆ ಎನ್ನುವುದು ಮಹಿಳೆಯರ ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮಹಿಳೆಯರು ಈ ದಿನದಂದು ಮಾಡಬೇಕಾದ ಕೆಲವೊಂದು ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ. ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ, ಪೂಜಾ ವಿಧಿ ವಿಧಾನ
*ಮೊದಲನೇಯದಾಗಿ ಮಹಿಳೆಯರು ಈ ವ್ರತ ಮಾಡುವಾಗ ಲಕ್ಷ್ಮೀ ಅಷ್ಟೋತ್ತರ ಮತ್ತು ಲಕ್ಷ್ಮೀ ಸಹಸ್ರನಾಮವನ್ನು ಪಠಿಸಬೇಕು.
*ವ್ರತ ಆಚರಣೆ ವೇಳೆ ಕೆಲವು ರೀತಿಯ ಆಹಾರಗಳನ್ನು ಮಾತ್ರ ಸೇವಿಸಬಹುದಾಗಿದೆ. ವ್ರತದ ವೇಳೆ ಮಹಿಳೆಯರು ಬೇಯಿಸದೆ ಇರುವ ಹಸಿರು ಬಾಳೆಹಣ್ಣನ್ನು ತಿನ್ನಬೇಕು.
*ವ್ರತ ಆಚರಿಸುವಂತಹ ಮಹಿಳೆಯರು ರಾತ್ರಿ ಪೂಜೆ ಆಗುವ ತನಕ ಉಪವಾಸ ಮಾಡಬೇಕು. ಆದರೆ ವ್ರತ ಮಾಡುವ ವೇಳೆ ಕೆಲವೊಂದು ರಿಯಾಯಿತಿಗಳನ್ನು ನೀಡಲಾಗಿದೆ.
*ಗರ್ಭಿಣಿ ಮಹಿಳೆಯರು ಉಪವಾಸದಿಂದ ದೂರವಿರಬಹುದು. ಔಷಧಿ ತೆಗೆದುಕೊಳ್ಳುತ್ತಾ ಇದ್ದರೆ ವ್ರತದ ವೇಳೆ ಉಪವಾಸ ಆಚರಿಸಬೇಕೆಂದಿಲ್ಲ.
*ಒಂಬತ್ತು ಗಂಟುಗಳನ್ನು ಒಳಗೊಂಡ ಹಳದಿ ದಾರಕ್ಕೆ ಮಧ್ಯದಲ್ಲಿ ಒಂದು ಹೂವನ್ನು ಕಟ್ಟಿ ಅದನ್ನು ಸುಮಂಗಲಿಯರ ಬಲದ ಕೈಗೆ ಕಟ್ಟಬೇಕು. ಪತಿಗೆ ದೀರ್ಘ ಆರೋಗ್ಯ ಮತ್ತು ಆಯುಷ್ಯ ಸಿಗಲಿ ಎನ್ನುವ ದೃಷ್ಟಿಯಿಂದ ಇದನ್ನು ಕಟ್ಟಲಾಗುತ್ತದೆ.
*ವರಮಹಾಲಕ್ಷ್ಮಿ ವ್ರತವನ್ನು ಮೊದಲ ಸಲ ಆಚರಿಸುತ್ತಿದ್ದರೆ ಇದರ ಬಗ್ಗೆ ಹಿರಿಯ ಮಹಿಳೆಯರಿಂದ ತಿಳಿದುಕೊಳ್ಳುವುದು ಉತ್ತಮ. ಮದುವೆಯಾಗದೆ ಇರುವ ಹುಡುಗಿಯರು ತಮ್ಮ ತಾಯಿಯೊಂದಿಗೆ ಈ ವ್ರತವನ್ನು ಆಚರಿಸಬಹುದಾಗಿದೆ.



Click it and Unblock the Notifications

