For Quick Alerts
ALLOW NOTIFICATIONS  
For Daily Alerts

ಝೆನ್ ಕಥೆ: ಯಾರಿಗಾಗಿ ಕೆಲಸ ಮಾಡುತ್ತೀರಿ?

By Super
|
 Kannada Zen story
ಒಮ್ಮೆ ಪರಮ ಝೆನ್ ಗುರು ಬೊಕುಜುವನ್ನು "ನೀವು ಜ್ಞಾನೋದಯವಾಗುವುದಕ್ಕೆ ಮುನ್ನ ಏನು ಮಾಡುತ್ತಿದ್ದಿರಿ?" ಎಂದು ಒಬ್ಬ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ.

ಅದಕ್ಕೆ ಗುರು "ನಾನು ನನ್ನ ಗುರುಗಳಿಗಾಗಿ ಸೌದೆ ಒಡೆಯುವುದು ಮತ್ತು ನೀರು ಹೊರುವುದುನ್ನು ಮಾಡುತ್ತಿದ್ದೆ" ಎಂದು ಉತ್ತರಿಸಿದರು.

ಆ ವಿದ್ಯಾರ್ಥಿಗೆ ಗುರುಗಳ ಉತ್ತರ ವಿಚಿತ್ರ ಅನ್ನಿಸಿತು. ಅದರಲ್ಲಿ ಅಂತಹ ವಿಶೇಷತೆಯೂ ಅವನಿಗೆ ಕಂಡುಬರಲಿಲ್ಲ. ಝೆನ್ ಗುರುಗಳ ಉತ್ತರಕ್ಕೆ ತೃಪ್ತನಾಗದೆ, "ಹಾಗಾದರೆ ಈಗೇನು ಮಾಡುತ್ತಿದ್ದೀರಿ?" ವಿದ್ಯಾರ್ಥಿ ಗುರುಗಳ ಮೇಲೆ ಮತ್ತೊಂದು ಪ್ರಶ್ನೆ ಎಸೆದ.

ಗುರುಗಳಿಗೆ ವಿದ್ಯಾರ್ಥಿಯ ಆಂತರ್ಯದಲ್ಲಿ ಏನು ಇದೆ ಎಂಬುದು ಅರ್ಥವಾಯಿತು. ಆದರೆ, ಯಾವುದೇ ಭಾವನೆಯನ್ನು ತೋರಗೊಡದೆ, "ಆಗ ಗುರುಗಳಿಗಾಗಿ ಮಾಡುತ್ತಿದ್ದೆ. ಈಗ ನನಗೋಸ್ಕರ ಸೌದೆ ಒಡೆಯುತ್ತೇನೆ ಮತ್ತು ನೀರು ಹೊರುತ್ತೇನೆ" ಎಂದು ಮುಗುಮ್ಮಾಗಿ ಉತ್ತರಿಸಿದರು.

ಆಗಲೂ ವಿದ್ಯಾರ್ಥಿಗೆ ಸಮಾಧಾನವಾಗಲಿಲ್ಲ. ಅಷ್ಟಕ್ಕೆ ಆತ ಗುರುಗಳನ್ನು ಬಿಡಲೂ ಇಲ್ಲ. ಮುಂದುವರೆದು, "ಅರೆ! ಇದರಲ್ಲೇನು ವ್ಯತ್ಯಾಸವಿದೆ ಗುರುಗಳೆ? ಇದನ್ನು ನೀವು ಈ ಮೊದಲೂ ಮಾಡುತಿದ್ದಿರಿ ಈಗಲೂ ಮಾಡುತ್ತಿದ್ದೀರಿ" ಎಂದಾಗ ಬೊಕುಜು ನಸುನಕ್ಕು, "ಮೊದಲು ನಾನು ಇದನ್ನು ಅಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೆ. ಆದರೆ ಈಗ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇನೆ. ಅಷ್ಟೇ ವ್ಯತ್ಯಾಸ" ಎಂದು ಉತ್ತರಿಸಿದರು! ಆಗ ವಿದ್ಯಾರ್ಥಿ ಮರುಮಾತಾಡದೆ ತೆರಳಿದ.

English summary

Kannada Zen story, Obedience In Defiance, Inspirational short stories, ಝೆನ್ ಕಥೆ : ಇತರರಿಗೆ ಮತ್ತು ನಮಗೆ ಮಾಡುವ ಕೆಲಸದಲ್ಲಿನ ವ್ಯತ್ಯಾಸ

Bokuju, a great Zen master was once asked, "What did you do before getting enlightened?"The master replied, "I was chopping wood and carrying water for my master""What do you do now?", asked the questioner.Bokuju replied, "I chop wood and carry water for myself".
X
Desktop Bottom Promotion