For Quick Alerts
ALLOW NOTIFICATIONS  
For Daily Alerts

ಓರ್ವ ಯುವತಿ ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು

By Prasad
|
Two monks and one young lady
ಇಬ್ಬರು ಸನ್ಯಾಸಿಗಳು ಒಂದು ದಿನ ಹಾಗೇ ಸಂಚರಿಸುತ್ತಾ ಒಂದು ನದಿಯ ಬಳಿ ಬಂದರು. ಅಲ್ಲಿ ಒಬ್ಬ ಯುವತಿಯನ್ನು ಭೇಟಿ ಮಾಡಿದರು. ಆಕೆ ಚಿಂತಿತಳಾದಂತೆ ಇಬ್ಬರೂ ಸನ್ಯಾಸಿಗಳಿಗೆ ಕಂಡುಬಂದಳು. ಏನೆಂದು ವಿಚಾರಿಸಲಾಗಿ, ಆ ಮಹಿಳೆಯು ತನ್ನನ್ನು ನದಿ ದಾಟಿಸುವಂತೆ ಆ ಯತಿಗಳಲ್ಲಿ ನಮ್ರವಾಗಿ ಬೇಡಿಕೊಂಡಳು.

ಒಬ್ಬ ಸನ್ಯಾಸಿ ಆಕೆಯನ್ನು ನದಿ ದಾಟಿಸಲು ಹಿಂಜರಿದರು. ತನ್ನಿಂದ ಅದು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು. ಆದರೆ ಇನ್ನೊಬ್ಬ ಸನ್ಯಾಸಿ, ನಕ್ಕು ಹಿಂದೆ ಮುಂದೆ ನೋಡದೆ, ಇನ್ನೊಬ್ಬ ಸನ್ಯಾಸಿ ಚಕಿತರಾಗುವಂತೆ ಹಠಾತ್ತನೆ ಅವಳನ್ನು ತಮ್ಮ ಬುಜದ ಮೇಲೆ ಹೊತ್ತುಕೊಂಡು ನದಿಯಲ್ಲಿ ಸಾಗಿ ನದಿಯ ಆ ಕಡೆಯ ದಡದ ಮೇಲೆ ಇಳಿಸಿದರು. ಆ ಯುವತಿ ಅವರನ್ನು ವಂದಿಸಿ ಅಲ್ಲಿಂದ ಹೊರಟು ಹೊದಳು.

ಈ ಘಟನೆ ಯುವತಿಯನ್ನು ನದಿ ದಾಟಿಸಲು ಹಿಂಜರಿದ ಸನ್ಯಾಸಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿತು. ಈ ಸನ್ಯಾಸಿ ಏಕೆ ಹೀಗೆ ಮಾಡಿದರು ಎಂದು ಚಿಂತಿಸುತ್ತ ಸಾಗುತ್ತಿದ್ದರು. ಆದರೆ, ಯುವತಿಯನ್ನು ನದಿ ದಾಟಿಸಿದ ಸನ್ಯಾಸಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮೌನವಾಗಿ ಮಂದಸ್ಮಿತರಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದರು.

ಹಾಗೇ ಸನ್ಯಾಸಿಗಳು ತಮ್ಮ ದಾರಿಯಲ್ಲಿ ಮುಂದುವರೆಯುತ್ತಿರಲು, ಇನ್ನೊಬ್ಬ ಮೌನವನ್ನು ತಾಳದೆ "ಸಹೋದರ, ನಮ್ಮ ಧಾರ್ಮಿಕ ತರಬೇತಿಯಲ್ಲಿ ಹೇಳಿರುವಂತೆ ನಾವುಗಳು ಹೆಂಗಸರ ಜೊತೆಗಿನ ಯಾವುದೇ ತರಹದ ಸಂಪರ್ಕದಿಂದ ದೂರ ಇರಬೇಕು. ಆದರೆ ನೀನು ಅವಳನ್ನು ನಿನ್ನ ಬುಜದ ಮೇಲೆ ಹೊತ್ತು ಸಾಗಿದೆಯಲ್ಲ!" ಎಂದು ಕೇಳಿದನು.

"ಸಹೋದರ", ಎನ್ನುತ್ತಾ ಎರಡನೇ ಸನ್ಯಾಸಿ ಉತ್ತರಿಸಿದರು, "ನಾನು ಅವಳನ್ನು ಆ ಕಡೆಯ ದಡದ ಮೇಲೆ ಇಳಿಸಿಬಿಟ್ಟೆ, ಆದರೆ ನೀನು ಇನ್ನೂ ಅವಳನ್ನು ಹೊತ್ತುಕೊಂಡೇ ಸಾಗುತ್ತಿರುವೆಯಲ್ಲ?" ಈ ಉತ್ತರದಿಂದ ಯುವತಿಗೆ ನದಿ ದಾಟಿಸಲು ಸಹಾಯ ಮಾಡದ ಇನ್ನೊಬ್ಬ ಸನ್ಯಾಸಿಗೆ ತನ್ನ ತಪ್ಪು ಏನೆಂದು ಅರಿವಾಯಿತು.

(ಈ ಕತೆಯ ಕೆಲವು ಪ್ರತಿಗಳಲ್ಲಿ ಯತಿಗಳು ಮಹಿಳೆಯನ್ನು ಕೆಸರು ಗುಂಡಿಯನ್ನು ದಾಟಿಸಿದ್ದಾಗಿ ಬಣ್ಣಿಸಲಾಗಿದೆ).

English summary

Two monks and one young lady | ಓರ್ವ ಯುವತಿ ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು

A young lady on the bank of a river asks one of the two Buddhist monks to help her cross the river. One hesitates, another carries her on his shoulder and helps her cross the river. One who hesitated asks the other, why did he carry her when touching women is prohibited.
Story first published: Friday, June 8, 2012, 13:37 [IST]
X
Desktop Bottom Promotion