For Quick Alerts
ALLOW NOTIFICATIONS  
For Daily Alerts

ಋತುಸ್ರಾವದ ದೇವಿಯನ್ನು ಪೂಜಿಸುವ ಭಾರತದ ಪವಿತ್ರ ದೇವಸ್ಥಾನವಿದು...

By Jaya
|

ತಿಂಗಳ ಮುಟ್ಟಿನ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದನ್ನು ನಿಷೇಧಿಸಿರುವುದು ಸಮಾಜದಲ್ಲಿ ನಡೆದು ಬಂದಿರುವ ಒಂದು ಕ್ರಮವಾಗಿದೆ. ಆದರೆ ಅಸ್ಸಾಂನ ಗುವಾಹಟಿಯ ಪಶ್ಚಿಮದಲ್ಲಿರುವ ನೀಲಾಚಲ್ ಬೆಟ್ಟದ ಮೇಲಿರುವ ಕಾಮಾಕ್ಯ ದೇವಿಯನ್ನು ಆಕೆಯ ಯೋನಿ ರೂಪದಲ್ಲಿ ಪೂಜಿಸಲಾಗುತ್ತಿದೆ ಎಂದರೆ ನೀವು ನಂಬಲೇಬೇಕು.

ಕಾಮಾಕ್ಯ ದೇವಾಲಯದ ಬಗ್ಗೆ ನೀವು ಕೇಳರಿಯದ 15 ರಹಸ್ಯಗಳು

ಅಂತೆಯೇ ಇಲ್ಲಿ ಯಾವುದೇ ವಿಗ್ರಹವಿಲ್ಲ ಬದಲಿಗೆ ದೇವಿಯ ಯೋನಿಯನ್ನು ಪೂಜಿಸಲಾಗುತ್ತದೆ. ಅಸ್ಸಾಂನಲ್ಲಿ ವಸಂತ ಕಾಲದಲ್ಲಿ ಕಲ್ಲಿನಲ್ಲಿ ತೇವವು ಕಂಡುಬರುತ್ತದೆ. ಅಂತೆಯೇ ಇಲ್ಲಿನ ಕಲ್ಲುಗಳಲ್ಲೂ ತೇವ ಇರುತ್ತದೆ. ಈ ದೇವಸ್ಥಾನಕ್ಕೆ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ....

ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿದೆ ಕಾಮಾಕ್ಯ ದೇವಾಲಯ

ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿದೆ ಕಾಮಾಕ್ಯ ದೇವಾಲಯ

ಕಾಮಾಕ್ಯ ದೇವಾಲಯವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ. ಕಾಮಾಕ್ಯ ದೇವಾಲಯವು ಒ೦ದು ಹಿ೦ದೂ ದೇವಾಲಯವಾಗಿದ್ದು, ಈ ದೇಗುಲವು ಅತ್ಯ೦ತ ಹಳೆಯ ಶಕ್ತಿಪೀಠಗಳಲ್ಲೊ೦ದಾದ ತಾಯಿ, ದೇವಿ ಕಾಮಾಕ್ಯಳಿಗೆ ಅರ್ಪಿತವಾದ ದೇವಾಲಯವಾಗಿದೆ.

ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿದೆ ಕಾಮಾಕ್ಯ ದೇವಾಲಯ

ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿದೆ ಕಾಮಾಕ್ಯ ದೇವಾಲಯ

ಭಾರತದಲ್ಲಿರುವ 51 ಶಕ್ತಿಪೀಠಗಳಲ್ಲಿ ಈ ದೇವಸ್ಥಾನ ಕೂಡ ಒಂದು. ಶಿವನ ಪತ್ನಿ ಸತಿ ದೇವಿಯು ತಂದೆ ದಕ್ಷನು ಮಾಡಿಸುತ್ತಿದ್ದ ಯಜ್ಞದಲ್ಲಿ ಪಾಲ್ಗೊಳ್ಳಲು ಹೊರಡುತ್ತಾಳೆ. ಶಿವನು ಬೇಡವೆಂದು ಹೇಳಿದರೂ ಆಕೆ ತಂದೆಯು ಲೋಕಕಲ್ಯಾಣಾರ್ಥವಾಗಿ ಮಾಡುತ್ತಿರುವ ಯಜ್ಞದಲ್ಲಿ ತಾನು ಪಾಲ್ಗೊಳ್ಳಬೇಕು ಎಂಬ ಆಶಯದಿಂದ ಹೋಗುತ್ತಾಳೆ. ಶಿವ ದಂಪತಿಯರಿಗೆ ಬೇಕಂತಲೇ ದಕ್ಷನು ಆಹ್ವಾನವನ್ನು ನೀಡಿರುವುದಿಲ್ಲ. ಮಗಳೆಂಬ ಮಮಕಾರವನ್ನೂ ನೋಡದೆ ದಕ್ಷನು ಮಗಳನ್ನು ಪತಿಯಾದ ಶಿವನನ್ನು ಹಿಯಾಳಿಸುತ್ತಾನೆ. ಇದರಿಂದ ನೊಂದ ಸತಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗವನ್ನು ಮಾಡುತ್ತಾಳೆ.

ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿದೆ ಕಾಮಾಕ್ಯ ದೇವಾಲಯ

ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿದೆ ಕಾಮಾಕ್ಯ ದೇವಾಲಯ

ವಿಷಯವನ್ನು ಅರಿತ ಮಹಾದೇವನು ಕೋಪೋದ್ರಿಕ್ತನಾಗುತ್ತಾನೆ. ಸತಿಯ ಮೃತದೇಹವನ್ನು ತನ್ನ ಭುಜದ ಮೇಲೆ ಇರಿಸಿಕೊಂಡು ತಾಂಡ ನೃತ್ಯವನ್ನು ಆಡುತ್ತಾನೆ. ಆತನನ್ನು ಸಮಾಧಾನ ಪಡಿಸಲು ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಕತ್ತರಿಸುತ್ತಾನೆ ಇದು 108 ತುಂಡುಗಳಾಗಿ ಬೇರೆ ಬೇರೆ ಸ್ಥಳಗಳಲ್ಲಿ ಬೀಳುತ್ತದೆ. ಇದನ್ನು ಶಕ್ತಿಪೀಠವೆಂದು ಕರೆಯುತ್ತಾರೆ. ಸತಿಯ ಗರ್ಭವು ಕಾಮಾಕ್ಯ ದೇವಸ್ಥಾನದಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ.

ಫಲವತ್ತತೆ ಉತ್ಸವ

ಫಲವತ್ತತೆ ಉತ್ಸವ

ದೇವಸ್ಥಾನವು ವಾರ್ಷಿಕ ಫಲವತ್ತತೆ ಉತ್ಸವವನ್ನು ಹೊಂದಿದ್ದು ಇದನ್ನು ಅಂಬುವಾಸಿ ಪೂಜೆ ಎಂದು ಕರೆಯಲಾಗಿದೆ. ಈ ಸಮಯದಲ್ಲಿ ದೇವಿಯು ತನ್ನ ವಾರ್ಷಿಕ ಋತುಚಕ್ರ ಕ್ರಿಯೆಗೆ ಹೋಗುವುದಾಗಿ ಹೇಳಲಾಗಿದೆ. ಮೂರು ದಿನಗಳ ಕಾಲ ಈ ಸಮಯದಲ್ಲಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಂತರ ನಾಲ್ಕನೇ ದಿನ ಉತ್ಸವದಂದು ದೇವಸ್ಥಾನವನ್ನು ತೆರೆಯಲಾಗುತ್ತದೆ.

ನದಿ ಬ್ರಹ್ಮಪುತ್ರ ಕೂಡ ಕೆಂಪಾಗುತ್ತದೆಯಂತೆ!

ನದಿ ಬ್ರಹ್ಮಪುತ್ರ ಕೂಡ ಕೆಂಪಾಗುತ್ತದೆಯಂತೆ!

ಈ ಸಮಯದಲ್ಲಿ ಇಲ್ಲಿ ಹರಿಯುವ ನದಿ ಬ್ರಹ್ಮಪುತ್ರ ಕೂಡ ಕೆಂಪಾಗುತ್ತದೆಯಂತೆ. ಇದು ನಿಜವಾಗಿಯೂ ಋತುಸ್ರಾವವೇ ಅಥವಾ ಪಂಡಿತರು ನದಿಗೆ ಹಾಕುವ ಕುಂಕುಮವೇ ಎಂಬುದು ತಿಳಿದು ಬಂದಿಲ್ಲ. ಆದ್ದರಿಂದಲೇ ಈ ಸಮಯದಲ್ಲಿ ದೇವಸ್ಥಾನವನ್ನು ಮುಚ್ಚಿರುತ್ತಾರೆ.

ಈ ದೇವಳವನ್ನು ಹೆಚ್ಚು ಪವಿತ್ರ ಸ್ಥಳವೆಂದು ಕರೆಯಲಾಗುತ್ತದೆ

ಈ ದೇವಳವನ್ನು ಹೆಚ್ಚು ಪವಿತ್ರ ಸ್ಥಳವೆಂದು ಕರೆಯಲಾಗುತ್ತದೆ

ನಂತರ ಪವಿತ್ರ ನೀರನ್ನು ಭಕ್ತರಿಗೆ ವಿತರಿಸಲಾಗುತ್ತದೆ. ದೇಶದಲ್ಲಿ ಈ ದೇವಳವನ್ನು ಹೆಚ್ಚು ಪವಿತ್ರ ಸ್ಥಳವೆಂದು ಕರೆಯಲಾಗಿದೆ. ಆದರೂ ಇಂತಹ ವೈಚಿತ್ರ್ಯವಿರುವ ದೇವಸ್ಥಾನ ಅಪರೂಪದಲ್ಲಿ ಅಪರೂಪವಾಗಿದೆ.

English summary

This Temple Worships The Bleeding Goddess

Kamakhya Devi different is that it has no sculpture to worship, only Kamakhya's yoni or vagina. What is strange is that a natural spring in Assam keeps the stone moist all the time. But what it most ironic about the temple is that bleeding women are not allowed to enter the temple when they are menstruating.
Story first published: Monday, July 3, 2017, 20:39 [IST]
X
Desktop Bottom Promotion