Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ ಅಚ್ಚರಿಯ ಚಿಹ್ನೆಗಳು!
ಜೀವನ ಮತ್ತು ಮರಣ ಎನ್ನುವುದು ಅಂತ್ಯವಿಲ್ಲದ ಚಕ್ರ. ಜೀವನದ ಅಂತ್ಯವೇ ಮರಣ. ಮರಣ ಎನ್ನುವುದು ಹೀಗೆ ಇರುತ್ತದೆ ಅಥವಾ ಇಂದೇ ಬರುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ನಮಗೆ ಅರಿವಿಲ್ಲದೆ ಬರುವ ಸಾವು ಹೇಗೇ ಬಂದರೂ ಸ್ವೀಕರಿಸಲೇ ಬೇಕು. ಸಾವನ್ನು ತಡೆದು ನಿಲ್ಲಿಸುವ ಶಕ್ತಿ ಯಾರಲ್ಲೂ ಇಲ್ಲ. ವ್ಯಕ್ತಿ ಹೇಗೇ ಇದ್ದರೂ, ಏನೇ ಮಾಡಿದ್ದರೂ ಒಂದಲ್ಲಾ ಒಂದು ದಿನ ಸಾವಿಗೆ ಶರಣಾಗಲೇ ಬೇಕು. ಅದಕ್ಕಾಗಿಯೇ ಇದ್ದಷ್ಟು ದಿನ ಸಂತೋಷದಿಂದ ಇತರರಿಗೆ ನೋವುಂಟುಮಾಡದೆ ಬದುಕುವುದು ಶ್ರೇಷ್ಠ. ಸಾವು ಎನ್ನುವುದು ಖಚಿತ. ಅದರಲ್ಲಿ ಯಾವುದೇ ಸಂಶಯವಿಲ್ಲ. ವ್ಯತ್ಯಾಸ ಎಂದರೆ ಸಾವು ಒಂದೇ ಬೇಗ ಬರಬಹುದು. ಇಲ್ಲವೇ ದೀರ್ಘ ಸಮಯದ ನಂತರ ಬರಬಹುದು ಅಷ್ಟೇ.
ಗ್ರಹಿಕೆ ಎನ್ನುವುದು ಮನುಷ್ಯನಿಗೆ ಸಿಕ್ಕ ಒಂದು ವರ. ಈ ವರವು ಕೆಲವೊಮ್ಮೆ ವಿಶೇಷ ಜ್ಞಾನ ಎನಿಸಿಕೊಳ್ಳುವುದು. ನಮ್ಮಲ್ಲಿ ಧನಾತ್ಮಕ ಶಕ್ತಿಯ ಪ್ರಭೆ ಹೆಚ್ಚಿದ್ದರೆ ಸಂಭವಿಸಬಹುದಾದ ಭವಿಷ್ಯದ ಬಗ್ಗೆ ಕೆಲವು ಸೂಚನೆಗಳು ದೊರೆಯುತ್ತವೆ. ಮುಂದೆ ಹೀಗಾಗಬಹುದು ಎನ್ನುವ ಕನಸು, ಅರಿವು, ಶಕುನ ಅಥವಾ ಸೂಚನೆಯ ಮೂಲಕ ತಿಳಿದುಕೊಳ್ಳುತ್ತಾರೆ ಎನ್ನಲಾಗುವುದು. ಕೆಲವರು ಹೇಳುವ ಪ್ರಕಾರ ಬಹುತೇಕ ಸಂಗತಿಯ ಬಗ್ಗೆ ಎಲ್ಲರಿಗೂ ಮುನ್ನೆಚ್ಚರಿಕೆಯಂತೆ ಸೂಚನೆ ದೊರೆಯುವುದು. ಆದರೆ ಅದನ್ನು ಕೆಲವು ಸರಿಯಗಿ ಗ್ರಹಿಸುವುದಿಲ್ಲ ಎಂದು ಹೇಳುತ್ತಾರೆ. ನಮ್ಮ ಜೀವನದಲ್ಲಿ ಆಗುವ ಉತ್ತಮ ಸಂಗತಿ ಅಥವಾ ಕೆಟ್ಟ ಸಂಗತಿಗಳ ಬಗ್ಗೆ ಸೂಚನೆ ದೊರೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ
ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಸಾವು ಎನ್ನುವುದು ಸಾಮಾನ್ಯವಾದ ಸಂಗತಿ. ಪ್ರತಿಯೊಬ್ಬರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಆದರೆ ಆ ಸಾವು ನಮ್ಮನ್ನು ಎಷ್ಟು ಸಮೀಪಿಸಿದೆ? ಅಥವಾ ನಾವು ಸಾವಿಗೆ ಹತ್ತಿರವಾಗಿದ್ದೇವೆಯೇ? ಎನ್ನುವುದಕ್ಕೆ ಕೆಲವು ಸೂಚನೆಗಳು ದೊರೆಯುತ್ತವೆ ಎಂದು. ಹಾಗಾದರೆ ಆ ಸೂಚನೆಗಳು ಯಾವವು? ಅವು ಹೇಗೆ ಸಂಭವಿಸುತ್ತವೆ? ನಮ್ಮ ಅರಿವೆ ಎಂದು ಬರುವುದು? ಹೀಗೆ ಅನೇಕ ಸಂಗತಿಗಳ ಬಗ್ಗೆ ನೀವು ಅರಿಯಬೇಕು ಎಂದುಕೊಂಡಿದ್ದರೆ ಲೇಖನದ ಮುಂದಿನ ಭಾಗವವನ್ನು ಓದಿ.
ಭೌತಿಕ ಬದಲಾವಣೆಗಳು
ಸಾವು ನಮ್ಮನ್ನು ಸಮೀಪಿಸುತ್ತಿದೆ ಎಂದಾಗ ಭೌತಿಕವಾಗಿ ಕೆಲವು ಬದಲಾವಣೆಗಳು ಉಂಟಾಗುತ್ತವೆ. ರಕ್ತದೊತ್ತಡದಲ್ಲಿ ಮುಳುಗಿರುವುದು, ಚರ್ಮವು ಕಾಗದದಂತೆ ತೆಳುವಾಗುವುದು ಮತ್ತು ಬಹಳ ಸೂಕ್ಷ್ಮತೆಯನ್ನು ಪಡೆದುಕೊಳ್ಳುವುದು. ತ್ವಚೆಯು ನೀಲಿ ಅಥವಾ ನೇರಳೆ ಬಣ್ಣಕ್ಕೆ ಬದಲಾಗುವುದು. ಮೂತ್ರವು ಸಹ ಕಂದು ಅಥವಾ ತುಕ್ಕಿನ ಬಣ್ಣಕ್ಕೆ ಬದಲಾಗುವುದು. ಕೂದಲು ಉದುರುವುದು, ಹಲ್ಲುಗಳು ಗಾಢವಾದ ಕಲೆಯಿಂದ ಕೂಡಿರುವುದು.
Most Read: ಈ ದೇವಾಲಯಕ್ಕೆ ಹೋದರೆ ರಾತ್ರಿ ಉಳಿಯಬಾರದು, ಸಾವು ಬರುವ ಸಾಧ್ಯತೆ ಇದೆಯಂತೆ!!
ಹಸಿವು ಮತ್ತು ಬಾಯಾರಿಕೆಯ ಪ್ರಮಾಣ ಕಡಿಮೆಯಾಗುವುದು
ವ್ಯಕ್ತಿ ಸಾವಿಗೆ ಹತ್ತಿರವಾಗುತ್ತಿದ್ದಾನೆ ಎಂದರೆ ಅವನು ಊಟ ತಿಂಡಿಯಲ್ಲಿ ಉತ್ಸಾಹವನ್ನು ಹೊಂದಿರುವುದಿಲ್ಲ. ಅವರು ತಿನ್ನುವುದು ಮತ್ತು ಕುಡಿಯುವ ವಿಚಾರದಲ್ಲಿ ನಿರಾಕರಣೆ ತೋರುತ್ತಾನೆ. ತಮ್ಮ ಆರೋಗ್ಯದ ಬಗ್ಗೆಯೂ ಯಾವುದೇ ಚಿಂತೆಯನ್ನು ಮಾಡುವುದಿಲ್ಲ. ಪ್ರೀತಿ ಪಾತ್ರರು ನೆಚ್ಚಿನ ಆಹಾರ ಪದಾರ್ಥ ನೀಡಿದರೂ ನಿರಾಕರಿಸುತ್ತಾರೆ.
ಅತಿಯಾಗಿ ನಿದ್ರಿಸುತ್ತಾರೆ
ಆಹಾರವನ್ನು ತಿರಸ್ಕರಿಸುತ್ತಿದ್ದಾರೆ ಎಂದಾದರೆ ಅವರ ದೇಹದಲ್ಲಿ ಯಾವುದೇ ರೀತಿಯಲ್ಲೂ ಶಕ್ತಿ ಇರುವುದಿಲ್ಲ. ಶಕ್ತಿಯ ಮಟ್ಟ ಕುಸಿದಿರುತ್ತದೆ. ಹಾಗಾಗಿ ಎಲ್ಲಾ ಸಮಯದಲ್ಲೂ ನಿದ್ರಿಸಲು ಬಯಸುತ್ತಾರೆ. ಹೆಚ್ಚಿನ ಆಯಾಸ ಅವರನ್ನು ಆವರಿಸಿರುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯೂ ಬಹಳ ಆಯಾಸದಿಂದ ಹಾಗೂ ನಿಧಾನಗತಿಯಲ್ಲಿ ನಡೆದಿರುತ್ತದೆ.
ಉಸಿರಾಟದ ಸಮಸ್ಯೆ
ಸಾವಿನ ಪ್ರಾಥಮಿಕ ಚಿಹ್ನೆ ಎಂದರೆ ಅನಿಯಮಿತವಾದ ಉಸಿರಾಟದ ಕ್ರಿಯೆ. ವ್ಯಕ್ತಿಯು ತ್ವರಿತವಾದ ಅಥವಾ ಆಳವಿಲ್ಲದ ಉಸಿರಾಟವನ್ನು ಅನುಭವಿಸಬಹುದು. ಕೆಲವೊಮ್ಮೆ ಪ್ರತಿಯೊಂದು ಉಸಿರಾಟದ ನಡುವೆಯೂ ವಿರಾಮವನ್ನು ಅನುಭವಿಸಬಹುದು. ಈ ರೀತಿಯ ಅನಿಯಮಿತವಾದ ಉಸಿರಾಟ ಕ್ರಿಯೆಯು ಪ್ರೀತಿಪಾತ್ರರಿಗೆ ನೋವುಂಟುಮಾಡಬಹುದು.
Most Read: ನೀವರಿಯದ ಸಾವಿನ ಕರಾಳ ಲಕ್ಷಣಗಳು!
ದಿಗ್ಭ್ರಮೆ ಮತ್ತು ಅನುಚಿತ ವರ್ತನೆ
ಮರಣಕ್ಕೆ ಸಮೀಪವಾಗಿರುವ ವ್ಯಕ್ತಿಯ ಮಿದುಳು ಸಾಕಷ್ಟು ಗೊಂದಲವನ್ನು ಸೃಷ್ಟಿಸುವುದು. ಅವರಿಗೆ ಯಾವುದೇ ವಸ್ತುಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಅಥವಾ ಕಂಡುಹಿಡಿಯುವ ಸಾಮಥ್ರ್ಯ ಇರುವುದಿಲ್ಲ. ತಪ್ಪಾದ ಗ್ರಹಿಕೆ ಹಾಗೂ ಸಂಗತಿಗಳ ಬಗ್ಗೆ ದಿಗ್ಭ್ರಮೆಗೆ ಒಳಗಾಗುವನು.
ಜನರಿಂದ ದೂರ ಹೋಗುವರು
ಸಾವಿಗೆ ಸಮೀಪಿಸಿದ ವ್ಯಕ್ತಿಗಳಲ್ಲಿ ಕೆಲವು ರೋಗಲಕ್ಷಣಗಳು ಇರುತ್ತವೆ. ಅವರು ತಮ್ಮ ಜೀವನದ ಮೇಲೆ ಯಾವುದೇ ಆಸೆ ಅಥವಾ ನಿರೀಕ್ಷೆಯನ್ನು ಹೊಂದಿರುವುದಿಲ್ಲ. ಶಕ್ತಿಯನ್ನು ಕಳೆದುಕೊಂಡಿರುವ ಸ್ಥಿತಿಯನ್ನು ಅನುಭವಿಸುತ್ತಿರುತ್ತಾರೆ. ಹಾಗಾಗಿ ಅವರು ತಮ್ಮವರು ಅಥವಾ ಪ್ರೀತಿ ಪಾತ್ರರು ಎನ್ನುವ ಮೋಹದಿಂದ ದೂರವಾಗುತ್ತಾರೆ. ಜೊತೆಗೆ ಜನರಿಂದ ಆದಷ್ಟು ದೂರ ಉಳಿಯಲು ಬಯಸುತ್ತಾರೆ. ಆದಷ್ಟು ಸಮಯ ಏಕಾಂಗಿಯಾಗಿರಲು ಬಯಸುವರು.
ಆಧ್ಯಾತ್ಮಿಕ ಚಿಂತನೆಗೆ ಹೆಚ್ಚಿನ ಒಲವು ತೋರುವರು
ಸಾವಿಗೆ ಹತ್ತಿರವಾದ ವ್ಯಕ್ತಿಗಳು ಆಧ್ಯಾತ್ಮಗಳ ಬಗ್ಗೆ ದೈವ ಶಕ್ತಿಯ ಬಗ್ಗೆ ಹೆಚ್ಚಿನ ಒಲವನ್ನು ತೋರುತ್ತಾರೆ. ಕೆಲವರು ಆಧ್ಯಾತ್ಮಿಕ ವಿಚಾರ ಹಾಗೂ ಚಟುವಟಿಕೆಗಳ ಕುರಿತು ಹೆಚ್ಚಾಗಿ ಮಾತನಾಡುತ್ತಾರೆ. ಅಲ್ಲದೆ ವಿಚಿತ್ರವಾದ ಕನಸನ್ನು ಕಾಣುವುದು ಅಥವಾ ಸಂಗತಿಗಳ ಬಗ್ಗೆ ಮಾತನಾಡುವುದನ್ನು ನಾವು ಗಮನಿಸಬಹುದು. ಕೆಲವೊಮ್ಮೆ ಇವರಿಗೆ ಬೀಳುವ ಕನಸುಗಳನ್ನು ಅವರು ಹಂಚಿಕೊಂಡರೆ ಅದು ಬೆಚ್ಚಿ ಬೀಳುವಂತೆ ಮಾಡುವ ಸಂಗತಿಗಳಾಗಿರುತ್ತವೆ. ಕೆಲವೊಮ್ಮೆ ದೇವರ ಮನೆಯಲ್ಲಿ ಸಾಕಷ್ಟು ಸಮಯ ಕಳೆಯುವುದು. ಇಲ್ಲವೇ ಧಾರ್ಮಿಕ ಪುರಾಣಗಳನ್ನು ಕೇಳುವುದು, ಇತರರಿಗೆ ಹೇಳುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವರು. ಜೊತೆಗೆ ಇತರರಿಗೂ ದೇವರ ಬಗ್ಗೆ ನಂಬಿಕೆ ಮತ್ತು ಭಕ್ತಿಯನ್ನು ಹೊಂದಲು ಸಾಕಷ್ಟು ಸಲಹೆ ಸೂಚನೆಯನ್ನು ನೀಡುವರು.
Most Read: ಅರೆ ಏನಾಶ್ಚರ್ಯ! ಹೀಗೂ ಸಾವು ಸಂಭವಿಸುತ್ತದೆಯೇ?
ವಿದಾಯ ಹೇಳುವ ತಯಾರಿ
ಸಾವು ಸಮೀಪಿಸುತ್ತಿದ್ದಂತೆ ವ್ಯಕ್ತಿಗೆ ಯಾವುದೇ ವಿಷಯ ಅಥವಾ ವಸ್ತುಗಳ ಮೇಲೆ ಸಂಪೂರ್ಣವಾದ ಮೋಹವನ್ನು ಕಳೆದುಕೊಳ್ಳುವನು. ಇನ್ನೇನು ಕೆಲವೇ ದಿನಗಳಲ್ಲಿ ಸಾವು ಬರುತ್ತಿದೆ ಎನ್ನುವ ಅರಿವನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಕೆಲವು ಅಮೂಲ್ಯ ವಸ್ತುಗಳನ್ನು ದಾನಮಾಡುತ್ತಾರೆ. ಇಲ್ಲವೇ ಅವರ ಬಳಿ ಇರುವ ವಸ್ತು ಯಾರಿಗೆ ಸಲ್ಲಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿ ನೀಡುತ್ತಾರೆ. ಭೂಮಿಯ ಋಣ ತೀರಿದೆ ಎನ್ನುವ ಆಳವಾದ ಜ್ಞಾನದಿಂದ ನೆಮ್ಮದಿಯೆಡೆಗೆ ಸಾಗಲು ಸಿದ್ಧರಾಗಿರುತ್ತಾರೆ.