Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಈ ದೇವಾಲಯಕ್ಕೆ ಹೋದರೆ ರಾತ್ರಿ ಉಳಿಯಬಾರದು, ಸಾವು ಬರುವ ಸಾಧ್ಯತೆ ಇದೆಯಂತೆ!!
ಎಷ್ಟೇ ಕಷ್ಟಗಳಿರಲಿ, ದುಃಖಗಳಿರಲಿ ಒಮ್ಮೆ ದೇವಸ್ಥಾನಕ್ಕೆ ಹೋಗಿ ಬಂದರೆ ಅದೇನೋ ಬಂದು ಬಗೆಯ ನಿರಾಳ ಭಾವ. ಮನಸ್ಸಿಗೆ ನೆಮ್ಮದಿ ದೊರೆಯುವುದು. ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಮನಸ್ಸಿನ ಮಾತನ್ನು ಆ ಭಗವಂತನಲ್ಲಿ ಹೇಳಿಕೊಳ್ಳಬಹುದು ಎನ್ನುವ ಸಮಾಧಾನ ಎಲ್ಲರಿಗೂ ಇರುತ್ತದೆ. ದೇವಸ್ಥಾನ ಎಂದರೆ ಸಾಮಾನ್ಯವಾಗಿ ಎಲ್ಲರೂ ಒಳ್ಳೆಯ ಆರೋಗ್ಯ, ಐಶ್ವರ್ಯ, ದೀರ್ಘಾಯುಷ್ಯ, ಸುಖ ಶಾಂತಿಗಳನ್ನು ಕರುಣಿಸು ಎಂದು ಕೇಳಿಕೊಳ್ಳಲು ಹೋಗುತ್ತಾರೆ.
ಅದೇ ದೇವಸ್ಥಾನಕ್ಕೆ ಬಂದಾಗ ಇಲ್ಲಿಯೇ ನನ್ನ ಜೀವವನ್ನು ತೆಗೆದುಕೋ ಎಂದು ಯಾರೂ ಕೇಳುವುದಿಲ್ಲ. ದೇವಸ್ಥಾನದಲ್ಲಿ ಆ ಬಗೆಯ ಘಟನೆ ನಡೆಯುವುದು ಇಲ್ಲ ಎನ್ನುವುದನ್ನು ಎಲ್ಲರೂ ಅರಿತಿರುತ್ತಾರೆ. ಆದರೆ ಇಲ್ಲೊಂದು ದೇಗುಲವಿದೆ. ಈ ದೇಗುಲದಲ್ಲಿ ಒಂದು ರಾತ್ರಿ ಉಳಿದರೆ ಸಾಕು ಬೆಳಗಾಗುವುದರೊಳಗೆ ಪ್ರಾಣ ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ವಿಚಾರವನ್ನು ಕೇಳುತ್ತಿದ್ದರೆ ನಿಮಗೊಂದು ಆಶ್ಚರ್ಯದ ಸಂಗತಿ ಎನಿಸಬಹುದು.
ನಿಜ, ಈ ರೀತಿಯ ಘಟನೆ ನಡೆಯುವುದು ಮಿಹಾರ್ ದೇವಿ ದೇಗುಲದಲ್ಲಿ. ಈ ದೇಗುಲದಲ್ಲಿ ಜನರು ಒಂದು ರಾತ್ರಿ ವಾಸವಾಗಿದ್ದರೆ, ಬೆಳಗಾಗುವುದರೊಳಗೆ ಸಾವನ್ನಪ್ಪುತ್ತಾರೆ ಎಂದು ಹೇಳಲಾಗುತ್ತದೆ. ಅದೇಕೆ? ಆ ದೇಗುಲ ಎಲ್ಲಿದೆ ? ಎನ್ನುವ ನಿಮ್ಮ ಗೊಂದಲದ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಲೇಖನದ ಮುಂದಿನ ಭಾಗವನ್ನು ಓದಿ...

ದೇವಸ್ಥಾನದ ಕುರಿತು
ಭೂಪಾಲ್‍ನಲ್ಲಿರುವ ಈ ಸತ್ನಾ ಎನ್ನುವ ಜಿಲ್ಲೆಯಲ್ಲಿದೆ. ಮಿಹಾರ್ ಎನ್ನು ಪರ್ವತದ ಮೇಲೆ ನೆಲೆಗೊಂಡಿರುವ ಈ ದೇಗುಲದಲ್ಲಿ ಶಾರದಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಮಿಹಾರ್ ಎಂದು ಕರೆಯುತ್ತಾರೆ. ಮಿಹಾರ್ ಎಂದರೆ "ಮಾ ಕಾ ಹಾರ್" ಎಂದರೆ ತಾಯಿಯ ಸರ ಎಂಬ ಅರ್ಥವನ್ನು ನೀಡುತ್ತದೆ.

ಪರ್ವತದಲ್ಲಿ ನೆಲೆನಿಂತಿದೆ
ಈ ಪ್ರಸಿದ್ಧ ದೇವಾಲಯವು "ಟ್ರೈಕೋಟ್" ಪರ್ವತದ ಮಧ್ಯದಲ್ಲಿದೆ. ಈ ದೇವಸ್ಥಾನದ ಹಿಂದೆ ಒಂದು ವಿಶೇಷ ಇತಿಹಾಸವಿದೆ ಎಂದು ತಿಳಿಯುತ್ತಿದ್ದಂತೆ, ಭಕ್ತರ ಹರಿವು ಹೆಚ್ಚಾಯಿತು ಎನ್ನಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷವು ಸಾವಿರಾರು ಭಕ್ತರು ಆಗಮಿಸುತ್ತಾರೆ ಎಂದು ಹೇಳಲಾಗುತ್ತದೆ.

ದೇವಸ್ಥಾನದ ಕುರಿತು ಇದ್ದ ನಂಬಿಕೆ
ಈ ಪವಿತ್ರ ದೇಗುಲದ ಕುರಿತು ಅನೇಕ ಪ್ರಾಚೀನ ಕಥೆಗಳು ಇವೆ ಎಂದು ಹೇಳಲಾಗುತ್ತದೆ. ಈ ದೇಗುಲದಲ್ಲಿ ರಾತ್ರಿ ವೇಳೆ ಯಾರು ವಾಸವಿರುವುದಿಲ್ಲ. ಹಾಗೊಮ್ಮೆ ಉಳಿದರೆ ಆತ ಸಾವನ್ನಪ್ಪುತ್ತಾನೆ ಎಂದು ಹೇಳಲಾಗುತ್ತದೆ. ಈ ರೀತಿಯ ಘಟನೆ ನಡೆದಿದೆ ಎಂದು ಜನರು ಹೇಳುತ್ತಾರೆ.

ಇದರ ಹಿಂದಿರುವ ಕಾರಣಗಳು
ಈ ರೀತಿಯ ಘಟನೆ ನಡೆಯಲು ಇಲ್ಲಿರುವ ಆತ್ಮಗಳೇ ಕಾರಣ ಎಂದು ಹೇಳುತ್ತಾರೆ. ಇಲ್ಲಿ ಎರಡು ಅಮರವಾದ ಆತ್ಮಗಳಿವೆ. ಅವರೇ ಅಲ್ಲಾ ಮತ್ತು ಉದಯ್ ಎನ್ನುವವರು. ಅವರು ಶಾರದಾದೇವಿಯ ಪರಮ ಭಕ್ತರಾಗಿದ್ದರು. ಪ್ರಥ್ವಿರಾಜ್ ಚೌಹಾನ್ ವಿರುದ್ಧ ಹೋರಾಡಿದ್ದರು. ಈ ಎರಡು ವ್ಯಕ್ತಿಗಳೇ ಪರ್ವತದ ಮೇಲಿರುವ ಮಿಹಾರ್ ದೇವಿಯ ದೇವಸ್ಥಾನವನ್ನು ಕಂಡು ಹಿಡಿದರು ಎಂದು ಹೇಳಲಾಗುತ್ತದೆ.

ರಾತ್ರಿವೇಳೆ ದೇವಾಲಯವನ್ನು ಮುಚ್ಚುತ್ತಾರೆ
ರಾತ್ರಿವೇಳೆ ಈ ದೇವಾಲಯವನ್ನು ಮುಚ್ಚಲಾಗುತ್ತದೆ. ಈ ಇಬ್ಬರು ಸಹೋದರರು ರಾತ್ರಿವೇಳೆ ದೇವಾಲಯಕ್ಕೆ ಬರುತ್ತಾರೆ. ಆ ಸಮಯದಲ್ಲಿ ದೇವಿಯನ್ನು ಆರಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಯಾರು ರಾತ್ರಿ ವೇಳೆ ಈ ದೇವಾಲಯದಲ್ಲಿ ಉಳಿಯುವುದಿಲ್ಲ. ಹಾಗೊಮ್ಮೆ ಉಳಿದರೆ ಅವರನ್ನು ಸಾಯಿಸುತ್ತಾರೆ ಎಂದು ಹೇಳಲಾಗುತ್ತದೆ.



Click it and Unblock the Notifications
