Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅರೆ ಏನಾಶ್ಚರ್ಯ! ಹೀಗೂ ಸಾವು ಸಂಭವಿಸುತ್ತದೆಯೇ?
ಈ ಸಾವು ಎಂಬುದೇ ಹೀಗೆ, ಕೆಲವರು ಹೋಗಿ ಆತ್ಮಹತ್ಯೆ ಮಾಡಿಕೊಂಡರು ಸಾಯುವುದಿಲ್ಲ. ಆದರೆ ಸುಮ್ಮನೆ ಎಡವಿ ಬಿದ್ದಾಗ ಸತ್ತು ಹೋಗುತ್ತಾರೆ. ಕೆಲವೊಮ್ಮೆ ತಮಾಷೆ ಮಾಡಲು ಹೋಗಿ ಸತ್ತು ಹೋಗುತ್ತಾರೆ. ಇನ್ನೂ ಕೆಲವರು ಇನ್ನೊಬ್ಬರ ವಿನೋದ ಪ್ರವೃತ್ತಿಯಿಂದ ತಮ್ಮ ಸಾವನ್ನು ಕಂಡಿರುತ್ತಾರೆ. ಕೆಲವೊಂದು ಸಾವುಗಳು ನಮಗೆ ಭಯಭೀತಿಯನ್ನುಂಟು ಮಾಡಿದರೆ, ಇನ್ನೂ ಕೆಲವು ಅರೆ ಹೀಗೂ ಸಾಯುತ್ತಾರಾ? ಎಂದು ಆಶ್ಚರ್ಯವನ್ನುಂಟು ಮಾಡುತ್ತದೆ.
ಅದು ಏನೇ ಇರಲಿ ಬನ್ನಿ ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ಸಾವನ್ನಪ್ಪಿದ ಕೆಲವರ ಕುರಿತಾಗಿ ನಾವು ಇಂದು ನಿಮಗೆ ತಿಳಿಸುತ್ತೇವೆ ಬನ್ನಿ. ಒಬ್ಬರು ಐಫೆಲ್ ಟವರ್ ಮೇಲಿನಿಂದ ಪ್ಯಾರಾಚೂಟ್‌ನಿಂದ ಬಿದ್ದು ಸತ್ತರೆ, ಇನ್ನೊಬ್ಬ ಲೈಂಗಿಕ ಸುಖವನ್ನು ಹೆಚ್ಚಿಗೆ ನೋಡಲು ಅನುಭವಿಸಲು ಹೋಗಿ ಪ್ರಾಣ ಬಿಟ್ಟನಂತೆ. ಬನ್ನಿ ಇನ್ನು ತಡ ಮಾಡದೆ ಆ ಊಹಾತೀತವಾದ ಸಾವುಗಳು ಯಾವುದು ಎಂದು ನೋಡಿಕೊಂಡು ಬರೋಣ...

ಪುಡ್ಡಿಂಗ್ ಹೆಚ್ಚು ತಿಂದು ಪ್ರಾಣ ಕಳೆದುಕೊಂಡ
ಫೆಬ್ರವರಿ 12, 1771 ರಂದು, ಕಿಂಗ್ ಅಡಾಲ್ಫ್ ಫ್ರೆಡರಿಕ್ ಎಂಬ ಸ್ವೀಡನ್ ರಾಜನು ಸೆಮ್ಲಾ ಎನ್ನುವ ಕೆನೆಭರಿತ ಪೇಸ್ಟ್ರಿಯ 14 ಬಟ್ಟಲುಗಳನ್ನು ಸೇವಿಸಲು ನಿರ್ಧರಿಸಿದನು. ಇದರಿಂದ ಅವನ ಜೀರ್ಣಾಂಗ ವ್ಯವಸ್ಥೆ ವಿಫಲಗೊಂಡು, ಅದೇ ದಿನ ಆತ ಸತ್ತನು! Image courtesy

ಉದ್ದ ಸ್ಕಾರ್ಫ್ ಧರಿಸಿದ್ದಕ್ಕೆ ಸಾವು!
ಇಸಡೊರಾ ಡಂಕನ್ ಎಂಬ ನೃತ್ಯಗಾರ್ತಿಯೊಬ್ಬಳು ತನ್ನ ಸೌಂದರ್ಯದಿಂದ ಹೆಸರುವಾಸಿಯಾಗಿದ್ದಳು. ಆಕೆಗೆ ಉದ್ದನೆಯ ಕತ್ತು ಇತ್ತು. ಅದನ್ನು ಒಂದು ಉದ್ದನೆಯ ಸ್ಕಾರ್ಫ್‌ನಿಂದ ಯಾವಾಗಲು ಮುಚ್ಚುತ್ತಿದ್ದಳು. ಒಂದು ದಿನ ಆಕೆ ಸ್ಫೋರ್ಟ್ಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆ ಉದ್ದನೆಯ ಸ್ಕಾರ್ಫ್, ಹಿಂದಿನ ಚಕ್ರಕ್ಕೆ ಸುತ್ತಿಕೊಂಡು, ಆಕೆಯ ಕತ್ತನ್ನು ಕತ್ತರಿಸಿ ಹಾಕಿ, ಆಕೆಯ ಸಾವಿಗೆ ಕಾರಣವಾಯಿತು. Image courtesy

ಸೆಗ್‌ವೇಯಿಂದ ಧುಮುಕಿದ್ದಕ್ಕೆ ಬಂದ ಸಾವು
ಚಲನಚಿತ್ರಗಳಲ್ಲಿ ನೀವು ಹೀರೋ ಈ ಚಿತ್ರದಲ್ಲಿ ಕಾಣುವ ವಾಹನ, ಅಂದರೆ ಸೆಗ್‌ವೇ ಓಡಿಸಿಕೊಂಡು ಬರುವುದನ್ನು ನೋಡಿರುತ್ತೀರಿ.ಈ ವಾಹನ ತಯಾರಿಸುವ ಕಂಪನಿಯಾದ ಸೆಗ್‌ವೇಯ ಮಾಲೀಕ ಜೇಮ್ಸ್.ಡಬ್ಲ್ಯೂ, ಹೆಸೆಲ್‌ಡೆನ್, ಒಮ್ಮೆ ಬೆಟ್ಟದ ತುದಿಯಲ್ಲಿ ಈ ವಾಹನ ಚಲಾಯಿಸುವಾಗ ಅದರಿಂದ ಆಕಸ್ಮಿಕವಾಗಿ ಅದರಿಂದ ಧುಮುಕಿದ, ಅದಕ್ಕೆ ಆತನು ಕಟ್ಟಿದ ದಂಡ, ತನ್ನ ಪ್ರಾಣ! Image courtesy

ಅತಿಯಾದ ಶಬ್ದದೊಂದಿಗೆ ಸಂಗೀತ ಕೇಳಿದ್ದಕ್ಕೆ ಮರಣ
ಇಸ್ಸಾಯ ಒಟಿಯೊನೊ ಎಂಬಾತ ಜೋರಾಗಿ ಸಂಗೀತವನ್ನು ವಾಕ್‌ಮೆನ್‌ನಲ್ಲಿ ಕೇಳುತ್ತಾ ಹೋಗುತ್ತಿದ್ದನು. ಆದರೆ ಆತನಿಗೆ ಗೊತ್ತಾಗಲಿಲ್ಲ, ಹಿಂದೆ ಒಂದು ಹೆಲಿಕಾಪ್ಟರ್ ನೆಲಕಪ್ಪಳಿಸಲು ಬರುತ್ತಿದೆ ಎಂದು. ಅಷ್ಟು ದೊಡ್ಡ ಸದ್ದಿನೊಂದಿಗೆ ಬಂದರು ಆತನಿಗೆ ಅದು ಕೇಳಲಿಲ್ಲ. ಕೊನೆಗೆ ಆತ ಮತ್ತು ಹೆಲಿಕಾಪ್ಟರ್‌ನಲ್ಲಿದ್ದವರೆಲ್ಲ ಸತ್ತರು. Image courtesy

ಐಫೆಲ್ ಟವರಿನಿಂದ ಬಿದ್ದು ಸಾವು
ಫೆಬ್ರವರಿ 4, 1912 ರಂದು ಫ್ರಾಂಜ್ ರೆಶೆಲ್ಟ್ ಎಂಬಾತ ಧರಿಸುವಂತಹ ಪ್ಯಾರಾಚೂಟ್ ಅನ್ನು ಕಂಡು ಹಿಡಿದನು. ಅದನ್ನು ಪರೀಕ್ಷಿಸಲು ಆತ ಆರಿಸಿಕೊಂಡಿದ್ದು ಐಫೆಲ್ ಟವರ್ ಅನ್ನು. ಮೊದಲು ಡಮ್ಮಿಯನ್ನು ಬಳಸಿ ಅದರ ಪರೀಕ್ಷೆ ನಡೆಸಬೇಕೆಂದು ಕೊಂಡಿದ್ದ. ಆದರೆ ಅಂತಿಮ ಘಳಿಗೆಯಲ್ಲಿ ತಾನೇ ಅದನ್ನು ಪರೀಕ್ಷಿಸಲು ಹೋದನು, ಆಮೇಲೇನಾಯಿತು! ಅವನ ಶವವು ಪರೀಕ್ಷೆಗೆ ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿ ಬಂದಿತು. Image courtesy

ವಯಾಗ್ರದಿಂದ ಸಾವು
ಇದರಂತಹ ಸಾವು ಇನ್ನೊಂದು ಬರಬಾರದು. ಸೆರ್ಗೆ ತುಗನೊವ್ ಎಂಬಾತ ಮೂವತ್ತು ಸಾವಿರ ಡಾಲರ್‌ನ ಪಂದ್ಯವೊಂದನ್ನು ಕಟ್ಟಿದ. 28 ವರ್ಷದ ಈತ ಇಬ್ಬರು ಮಹಿಳೆಯರನ್ನು ಮಲಗಲು ಬಿಡದೆ ಮಿಲನ ಮಾಡುತ್ತೇನೆ ಎಂದು ಹೇಳಿದ್ದ. ಇದಕ್ಕಾಗಿ ಒಂದು ಬಾಟಲಿ ವಯಾಗ್ರ ಸೇವಿಸಿದ್ದನು. ಕೊನೆಗೆ 12 ಗಂಟೆಯ ನಂತರ ಹೃದಯಾಘಾತದಿಂದ ಆತ ಮೃತಪಟ್ಟನು ಎಂದು ಆ ಮಹಿಳೆಯರು ಹೇಳಿದರು. Image courtesy



Click it and Unblock the Notifications