ತ್ರಿಮೂರ್ತಿಗಳ ಒಡೆಯ ಪರಶಿವನ ನಾನಾ ರೂಪಗಳ ಅವತಾರ

By: Jayasubramanya
Subscribe to Boldsky

ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಎಂಬ ಭಕ್ತಿಪೂರ್ವ ಹಾಡಿನಂತೆಯೇ ಶಿವನು ತನ್ನ ಭಕ್ತರನ್ನು ಕರುಣೆಯಿಂದ ಪೊರೆಯುತ್ತಾರೆ. ಭಕ್ತರ ಮೊರೆಯನ್ನು ಆಲಿಸುವ ಭೋಲೆನಾಥ ಎಂಬ ಹೆಸರೂ ಪರಶಿವನಿಗಿದೆ. ಯಾವ ಇಚ್ಛೆಯನ್ನು ಕರುಣಿಸುವ ಶಕ್ತಿಯುಳ್ಳ ಹರನು ಭಕ್ತರ ಪಾಲಿಗೆ ವರ ನೀಡುವ ವರದಾಯಕ ಅಂತೆಯೇ ಲೋಕದ ತಂದೆ ಎಂದೆನಿಸಿದ್ದಾರೆ. ಆರೋಗ್ಯದ ಗುಟ್ಟು-ಸರ್ವಂ ಶಿವ ಮಯಂ

ತ್ರಿಮೂರ್ತಿಗಳಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿಕೊಂಡಿರುವ ಶಿವನನ್ನು ಸೃಷ್ಟಿಕರ್ತ ಎಂದಾಗಿ ಬೋಧಿಸುತ್ತಾರೆ. ಬ್ರಹ್ಮನು ಸೃಷ್ಟಿಯನ್ನು ರಚಿಸುವ ಕಲಾಕಾರ ಎಂದೆನಿಸಿದ್ದರೂ ಮೂಲವಾಗಿ ಶಿವನು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಏಕೆಂದರೆ ಸಕಲ ಚರಾ ಚರ ವಸ್ತುಗಳಲ್ಲೂ ಶಿವನು ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದ್ದಾರೆ ಎಂಬ ಮಾತಿದೆ. ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ

ಪಂಚಭೂತಗಳಲ್ಲಿ ಲೀನಗೊಂಡಿರುವ ಶಿವನಿಗೆ ಬೇರೆ ಬೇರೆ ಆಕಾರ ರೂಪಗಳಿದ್ದು ಹೆಚ್ಚಾಗಿ ದೇವಸ್ಥಾನಗಳಲ್ಲಿ ಅವರನ್ನು ಪೂಜಿಸುವುದು ಲಿಂಗ ರೂಪದಲ್ಲಾಗಿದೆ. ಹಿಂದೂ ಪುರಾಣಗಳು ಹೇಳುವಂತೆ ಒಟ್ಟು 64 ರೂಪಗಳನ್ನು ಶಿವನು ಹೊಂದಿದ್ದಾರೆ ಎಂದಾಗಿದೆ. ಬಿಲ್ವಪತ್ರೆ ಎಲೆಗಳೆಂದರೆ ಶಿವನಿಗೇಕೆ ಅಷ್ಟೊಂದು ಅಚ್ಚುಮೆಚ್ಚು?

ಹಾಗಿದ್ದರೆ ಇಂದಿನ ಲೇಖನದಲ್ಲಿ ಪರಶಿವನ ಅತಿ ಪ್ರಮುಖ ರೂಪಗಳಲ್ಲಿ ಆರು ರೂಪಗಳ ಮಹತ್ವವನ್ನು ತಿಳಿಸುತ್ತಿದ್ದೇವೆ. ದೇವರ ರೂಪಗಳ ಮಹತ್ವವನ್ನು ನೀವು ಅರಿತುಕೊಂಡಂತೆ ನಿಮ್ಮಲ್ಲಿ ಭಕ್ತಿಭಾವ ಮೂಡುವುದು ಸಹಜವೇ ಆಗಿದೆ... 

ಲಿಂಗೋದ್ಭವ

ಲಿಂಗೋದ್ಭವ

ಮಾಘ ಮಾಸದ ಕೃಷ್ಣ ಚತುರ್ದಶಿ ದಿನದಂದು ಶಿವ ದೇವರ ರೂಪ ಲಿಂಗದ್ಭೋವದಲ್ಲಿ ಕಾಣಸಿಗುತ್ತದೆ. ತ್ರಿಮೂರ್ತಿಗಳ ಸಂಗಮವೆಂದು ಇದನ್ನು ಕರೆಯಲಾಗಿದೆ. ಬ್ರಹ್ಮ ಮತ್ತು ವಿಷ್ಣು ದೇವರಲ್ಲಿ ಪರಶಿವನಿಗೆ ಹೆಚ್ಚು ಶಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಬಿಂದು ಎಂದೆನಿಸಿದ್ದಾರೆ. ಬೆಳಕಿನ ಅಂತ್ಯವಿಲ್ಲದ ಕಿರಣಗಳು ಎಂಬುದಾಗಿ ಲಿಂಗೋದ್ಭವವನ್ನು ಕರೆದಿದ್ದಾರೆ.ನಾಲ್ಕು ಕೈಗಳುಳ್ಳ ದೇವರು ಮೇಲ್ಮುಖವಾಗಿ ನಿಂತಿರುವುದನ್ನು ನಮಗೆ ಕಾಣಬಹುದಾಗಿದೆ. ಎರಡು ಕೈಗಳು ಕೊಡಲಿ ಮೊದಲಾದ ಆಯುಧವನ್ನು ಹಿಡಿದುಕೊಂಡಿದ್ದರೆ ಇನ್ನೆರಡು ಕೈಗಳು ಭಕ್ತರಿಗೆ ಅಭಯವನ್ನು ನೀಡುತ್ತಿದೆ. ಈ ಚಿತ್ರವನ್ನು ಶಿವ ದೇವಸ್ಥಾನಗಳ ಪಶ್ಚಿಮ ಗೋಡೆಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು.

ನಟರಾಜ

ನಟರಾಜ

ತಮ್ಮ ನೃತ್ಯ ಭಂಗಿಯಲ್ಲಿ ನಾಟ್ಯ ರಾಜ ನಿಂತಿರುವುದನ್ನು ನಟರಾಜ ರೂಪವು ತೋರಿಸುತ್ತದೆ. ಶಿವನನ್ನು ವಿನಾಶದ ಪ್ರತಿರೂಪವಾಗಿ ಕಾಣಲಾಗುತ್ತಿದ್ದು ಜೀವನ ಮತ್ತು ಸಾವನ್ನು ಪ್ರತಿನಿಧಿಸುವ ರೂಪವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಕೂಡ ಇದೇ ಅಂಶವನ್ನು ಸಾರಲಾಗಿದೆ.ಶಿವನು ವಿನಾಶದ ಸಮಯದಲ್ಲಿ ನರ್ತಿಸುವುದನ್ನು ತಾಂಡವ ನೃತ್ಯವೆಂದು ಕರೆಯಲಾಗಿದೆ ಇದು ಜನನ ಮರಣ ಮತ್ತು ಮರುಜನ್ಮದ ಅವಿನಾಭಾವ ಸಂಬಂಧವನ್ನು ಹೊಂದಿದೆ. ಶಿವನು ತಾಂಡವ ನೃತ್ಯವನ್ನು ಆಡುವಾಗ ಮಿಂಚು ಮಿಂಚುತ್ತದೆ, ದೈತ್ಯ ಅಲೆಗಳು ಅಪ್ಪಳಿಸುತ್ತವೆ, ವಿಷಪೂರಿತ ಹಾವುಗಳು ತಮ್ಮ ವಿಷವನ್ನು ಕಕ್ಕುತ್ತವೆ ಮತ್ತು ಬೆಂಕಿಯು ತನ್ನ ಕೆನ್ನಾಲಗೆಯನ್ನು ಚಾಚಿ ಎಲ್ಲವನ್ನು ಭಸ್ಮ ಮಾಡಿಬಿಡುತ್ತದೆ. ಇನ್ನು ಪರಶಿವನು ರಚನೆಯ ನೃತ್ಯವನ್ನು ಆಡಿದರೆ ಅದನ್ನು ಆನಂದ ನೃತ್ಯವೆಂದು ಕರೆಯಲಾಗಿದೆ. ಇದು ವಿಶ್ವವನ್ನು ಶಾಂತ ಮತ್ತು ಸಮೃದ್ಧಗೊಳಿಸುತ್ತದೆ.ಕೈಲಾಸವಾಸಿ ಭಗವಾನ್ ಪರಶಿವನ ಕುರಿತಾದ ಪರಮ ರಹಸ್ಯಗಳು

ದಕ್ಷಿಣಾಮೂರ್ತಿ

ದಕ್ಷಿಣಾಮೂರ್ತಿ

ದಕ್ಷಿಣದ ದೇವರು ಎಂಬುದಾಗಿ ಇದು ಸಂಕೇತಿಸುತ್ತದೆ. ಶಿವನು ಬುದ್ಧಿವಂತಿಕೆ ಮತ್ತು ಸತ್ಯದ ಪ್ರತೀಕ ಎಂದೆನಿಸಿದ್ದಾರೆ. ಶಿವ ದೇವರಿಗೆ ಅರ್ಪಿತವಾಗಿ ಶಿವ ದೇವಸ್ಥಾನಗಳ ದಕ್ಷಿಣ ಗೋಡೆಗಳಲ್ಲಿ ಈ ಚಿತ್ರ ಕಂಡುಬರುತ್ತದೆ. ಆಲದ ಮರದ ಅಡಿಯಲ್ಲಿ ಪೀಠದ ಮೇಲೆ ಭಗವಂತ ಧ್ಯಾನಾಸಕ್ತರಾಗಿ ಕುಳಿತಿರುವ ಚಿತ್ರವಾಗಿದೆ. ಎಡಗಾಲು ಮಡಚಿರುತ್ತದೆ ಮತ್ತು ಬಲಗಾಲು ಅಸುರನನ್ನು ಮೆಟ್ಟಿ ನಿಂತಿದೆ. ಅವರ ಕೈಗಳು ತ್ರಿಶೂಲವನ್ನು ಹಿಡಿದುಕೊಂಡಿದ್ದು, ಹಾವು ಮತ್ತು ತಾಳೆಗರಿಯನ್ನು ಶಿವನು ತಮ್ಮ ಕೈಗಳಲ್ಲಿ ಹಿಡಿದುಕೊಂಡಿದ್ದಾರೆ. ಬಲ ಮುಂಗೈ ಮಂಗಳಕರವಾದ ಚಿನ್ಮುದ್ರೆಯನ್ನು ಹೊಂದಿದೆ.

ಅರ್ಧನಾರೀಶ್ವರ

ಅರ್ಧನಾರೀಶ್ವರ

ಶಿವ ಮತ್ತು ಪಾರ್ವತಿ ದೇವಿಯ ಮಿಶ್ರ ರೂಪವಾಗಿದೆ ಅರ್ಧನಾರೀಶ್ವರ. ಇದು ಜೀವನವನ್ನು ಸಂಕೇತಿಸುತ್ತದೆ. ಅರ್ಧ ಪುರುಷ ಮತ್ತು ಇನ್ನರ್ಧ ಸ್ತ್ರೀ ರೂಪದಲ್ಲಿ ಅರ್ಧನಾರೀಶ್ವರ ಕಂಡುಬಂದಿದ್ದು ಪುರುಷ ಮತ್ತು ಮಹಿಳೆ ಸಮಾನರು ಹಾಗೂ ಇವೆರಡೂ ಪವಿತ್ರ ಆತ್ಮಗಳು ಎಂದಾಗಿ ಬಿಂಬಿತವಾಗಿವೆ.'ಅರ್ಧ ನಾರೀಶ್ವರ' ಎನ್ನುವ ಪರಿಕಲ್ಪನೆ ಹಾಗೂ ಮಹತ್ವ

ಗಂಗಾಧರ

ಗಂಗಾಧರ

ಗಂಗೆಯನ್ನು ತಮ್ಮ ಜಟೆಯಲ್ಲಿ ಧರಿಸುವ ಶಿವನಿಗೆ ಗಂಗಾಧರ ಎಂಬ ಹೆಸರೂ ಇದೆ. ಒಮ್ಮೆ ಭಗೀರಥ ಮಹರ್ಷಿಯು ಗಂಗೆಯನ್ನು ಸ್ವರ್ಗದಿಂದ ಧರೆಗಿಳಿಯುವಂತೆ ಮಾಡಿದಾಗ ಆಕೆ ತಾನು ಬಂದಾಗ ಇಡಿಯ ಭೂಮಿಯೇ ಅಲ್ಲೋಲ ಕಲ್ಲೋಲವಾಗಲಿದೆ. ತನ್ನ ರಭಸವನ್ನು ತಡೆಹಿಡಿಯುವ ಸಾಮರ್ಥ್ಯವಿದ್ದಲ್ಲಿ ಮಾತ್ರವೇ ತನ್ನನ್ನು ಭೂಮಿಗೆ ಕರೆಸಿಕೊಳ್ಳುವಂತೆ ಸವಾಲೊಡ್ಡುತ್ತಾಳೆ. ಭಗೀರಥನ ಕೋರಿಕೆಯ ಮೇರೆಗೆ ಶಿವನು ತಮ್ಮ ಕೂದಲನ್ನು ಹರಡಿ ಗಂಗೆಯ ಪ್ರಬಲತೆಯನ್ನು ಹಿಡಿದಿಡುತ್ತಾರೆ ಮತ್ತು ಭೂಮಿಗೆ ಆಕೆ ಸಾವಕಾಶವಾಗಿ ಹರಿಯುವಂತೆ ಮಾಡುತ್ತಾರೆ.

ಭಿಕ್ಷಾಟನೆ

ಭಿಕ್ಷಾಟನೆ

ಭಿಕ್ಷಾಟನೆ ಎಂಬುದು ಭಿಕ್ಷೆ ಬೇಡುವುದು ಎಂದಾಗಿದೆ. ಶಿವನ ಈ ರೂಪವು ಸೊಕ್ಕು ಮತ್ತು ಅಜ್ಞಾನವನ್ನು ನಿವಾರಿಸುತ್ತದೆ. ಶಿವನನ್ನು ಸರಳ ದಿರಿಸುಗಳ ರೂಪದಲ್ಲಿ ಚಿತ್ರಿಸಲಾಗಿದ್ದು, ಹುಲಿಯ ಚರ್ಮವನ್ನು ಧರಿಸಿಕೊಂಡು, ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡು ಹಾವನ್ನು ಕೊರಳಿಗೆ ಹಾರವಾಗಿ ಧರಿಸಿ ಒಂದು ಕೈನಲ್ಲಿ ತಲೆಬುರುಡೆಯನ್ನು ಹಿಡಿದುಕೊಂಡು, ಡಮರುವನ್ನು ಬಾರಿಸುತ್ತಾ ಶಿವನು ತಮ್ಮ ರೂಪವನ್ನು ಭಕ್ತರಿಗೆ ಪ್ರದರ್ಶಿಸುತ್ತಾರೆ.

 
English summary

The Various Forms Of Lord Shiva

The Shiva Linga is the most common representation of Lord Shiva. There are a total of 64 forms of Lord Shiva mentioned in the Shiva Purana. Most of these forms are not known to the common man. Here we have listed the six most interesting forms of Lord Shiva
Please Wait while comments are loading...
Subscribe Newsletter