For Quick Alerts
ALLOW NOTIFICATIONS  
For Daily Alerts

ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ

By Arshad
|

ಭಕ್ತಿ ಎಂಬುದು ಮನದಾಳದಿಂದ ಬರಬೇಕೇ ವಿನಃ ಬಲವಂತದಿಂದಲ್ಲ. ಪ್ರತಿಯೊಬ್ಬರ ಪ್ರಾರ್ಥನೆ ಅವರವರ ಧರ್ಮಕ್ಕೆ ಅನುಗುಣವಾಗಿ ಬೇರೆಬೇರೆಯಾಗಿರುತ್ತದೆ. ಕೆಲವರು ಭಕ್ತಿಯ ಪರಾಕಾಷ್ಠೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುವುದು ಸಹಾ ಕಂಡುಬರುತ್ತದೆ.

ಪ್ರತಿ ಸೋಮವಾರದಂದು ಹಮ್ಮಿಕೊಳ್ಳಲಾಗುವ ಶಿವಪೂಜೆಯಲ್ಲಿಯೂ ಇಂತಹ ಚಿಕ್ಕಪುಟ್ಟ ತಪ್ಪುಗಳಾಗುವುದನ್ನು ಕಾಣಬಹುದು. ತನ್ನ ಭಕ್ತರ ಭಕ್ತಿಗೆ ಮೆಚ್ಚುವ ಶಿವ ಅವರ ಚಿಕ್ಕಪುಟ್ಟ ತಪ್ಪುಗಳನ್ನು ಖಂಡಿತಾ ಮನ್ನಿಸುತ್ತಾನೆ ಹಾಗೂ ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಆದರೂ ಸೋಮವಾರದ ಪೂಜೆ ಅತ್ಯಂತ ಮುಖ್ಯವಾದುದರಿಂದ ಅದರಲ್ಲಿ ಲೋಪಗಳಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿದೆ.

ಶಿವಪೂಜೆ ಮಾಡುವಾಗ ನಮಗೆ ಗೊತ್ತಿಲ್ಲದೆ ಮಾಡುವ ತಪ್ಪುಗಳಿಂದಾಗಿ ಆ ಪೂಜೆಯ ಫಲ ಸಿಗುವುದಿಲ್ಲ. ಶಿವಪೂಜೆಯಲ್ಲಿ ಭಕ್ತರು ಮಾಡುವ ಸಾಮಾನ್ಯ ತಪ್ಪುಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ. ಈ ತಪ್ಪುಗಳನ್ನು ಎಸಗದಂತೆ ಎಚ್ಚರಿಕೆ ವಹಿಸುವ ಮೂಲಕ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಲು ನೆರವಾಗುತ್ತದೆ.

ಬಿಲ್ವಪತ್ರೆಯನ್ನು ತರಲು ಮರೆಯುವುದು

ಬಿಲ್ವಪತ್ರೆಯನ್ನು ತರಲು ಮರೆಯುವುದು

ಶಿವಪೂಜೆಯಲ್ಲಿ ಬಿಲ್ವಪತ್ರೆಯ ಪಾತ್ರ ಅತಿ ಮಹತ್ತರವಾಗಿದೆ. ಇದನ್ನು ಅರ್ಪಿಸುವ ಮೂಲಕ ಭಕ್ತರ ಪಾಪವನ್ನು ತೊಳೆದು ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲು ನೆರವಾಗುತ್ತದೆ. ಆದ್ದರಿಂದ ಸೋಮವಾರದ ಶಿವಪೂಜೆಯಲ್ಲಿ ಯಾವುದೇ ಕಾರಣಕ್ಕೂ ಬಿಲ್ವಪತ್ರೆಯನ್ನು ತರಲು ಮರೆಯಬಾರದು.. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಾಸ್ತ್ರಗಳ ಪ್ರಕಾರ

ಶಾಸ್ತ್ರಗಳ ಪ್ರಕಾರ

ಶಾಸ್ತ್ರಗಳ ಪ್ರಕಾರ ಶಿವಪೂಜೆಗೂ ಬಿಲ್ವಪತ್ರೆಗೂ ನಿಕಟವಾದ ನಂಟಿದೆ. ಅಲ್ಲದೇ ಹಿಂದೂ ಪಂಚಾಂಗದ ಪ್ರಕಾರ ಶಿವಪೂಜೆ ಮತ್ತು ಗಣಪತಿಪೂಜೆಗೆ ವಿಶೇಷ ದಿನಗಳಿವೆ. ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಮರೆಯುವುದು ಅಥವಾ ಇದ್ದ ಎಲೆಗಳನ್ನು ಮುರಿಯುವುದು ಶಿವ ಮತ್ತು ಶಿವನ ಪುತ್ರನಾದ ಗಣಪತಿಯ ಪೂಜೆಗೆ ಭಂಗತರುತ್ತದೆ. ಇದು ಶಿವಪೂಜೆಯ ದೋಷಕ್ಕೂ ಕಾರಣವಾಗಬಲ್ಲುದು.

ಶಾಸ್ತ್ರಗಳ ಪ್ರಕಾರ

ಶಾಸ್ತ್ರಗಳ ಪ್ರಕಾರ

ಶಾಸ್ತ್ರಗಳ ಪ್ರಕಾರ ಈ ಕೆಳಗಿನ ದಿನಗಳು ಪವಿತ್ರವಾಗಿದ್ದು ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಮುರಿಯಲೇಬಾರದು:

*ಚತುರ್ಥಿ

*ಅಷ್ಟಮಿ

*ನವಮಿ

*ಚತುರ್ಧಶಿ

*ಅಮಾವಾಸ್ಯೆ

*ಸಂಕ್ರಾಂತಿ

*ಸೋಮವಾರ

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು

ಹಾಲು - ಇದನ್ನು ಅರ್ಪಿಸುವುದರಿಂದ ಪಾವಿತ್ರ್ಯತೆ ಮತ್ತು ಧರ್ಮಶ್ರದ್ಧೆ ಮೂಡುತ್ತದೆ

ಮೊಸರು - ಇದನ್ನು ಅರ್ಪಿಸುವುದರಿಂದ ಉತ್ತಮ ಸಂತಾನ ಮತ್ತು ಸಮೃದ್ಧಿ ದೊರಕುತ್ತದೆ.

ಜೇನು - ಇದನ್ನು ಅರ್ಪಿಸುವುದರಿಂದ ನಿಮ್ಮ ಸ್ವರ ಅತ್ಯಂತ ಮಧುರವಾಗುತ್ತದೆ

ಸಕ್ಕರೆ - ಇದನ್ನು ಅರ್ಪಿಸುವುದರಿಂದ ಸಂತೋಷ ಲಭಿಸುತ್ತದೆ ಹಾಗೂ ಕಷ್ಟ ಕಾರ್ಪಣ್ಯ ನಾಶವಾಗುತ್ತದೆ.

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು

ನೀರು -ಇದನ್ನು ಅರ್ಪಿಸುವುದರಿಂದ ಮನಃಶಾಂತಿ ದೊರಕುತ್ತದೆ.

ಶ್ರೀಗಂಧ - ಇದರ ಲೇಪನವನ್ನು ಅರ್ಪಿಸುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ಪಡೆಯಬಹುದು.

ವಿಭೂತಿ - ಇದನ್ನು ಅರ್ಪಿಸುವುದರಿಂದ ಶಿವನ ಅನುಗ್ರಹ ಪಡೆಯಬಹುದು.

English summary

Many people do this mistake in Lord Shiva’s puja

For Bhakti many worship traditions and practice different ways of worshiping. But many devotees immersed in faith are not aware of the scriptures and therefore commit small-small mistaes while worshipping. For Bhakti many worship traditions and practice different ways of worshiping. But many devotees immersed in faith are not aware of the scriptures and therefore commit small-small mistaes while worshipping.
X
Desktop Bottom Promotion