ಅಕ್ಷಯ ತೃತೀಯದಂದು ಏನು ಮಾಡಬೇಕು? ಏನು ಮಾಡಬಾರದು?

By: Jaya subramanya
Subscribe to Boldsky

ಅಕ್ಷಯ ತೃತೀಯವು ಪವಿತ್ರವಾದ ಹಬ್ಬವಾಗಿದೆ. ಈ ದಿನದಂದು ಮಾಡುವ ಎಲ್ಲಾ ಕಾರ್ಯದಲ್ಲೂ ನೀವು ಶುಭವನ್ನೇ ಕಂಡುಕೊಳ್ಳುತ್ತೀರಿ ಎಂಬ ಮಾತಿದ್ದು ಐಶ್ವರ್ಯವನ್ನು ಪಡೆದುಕೊಳ್ಳಲು ಈ ದಿನ ದೇವತೆಗಳನ್ನು ಸಂಪ್ರೀತಿ ಪಡಿಸಿದರೆ ಆಯಿತು ನಿಮ್ಮ ಕೆಲಸ ಕೈಗೂಡಿದಂತೆಯೇ. ಮಹಾಲಕ್ಷ್ಮೀ, ವಿಷ್ಣು ಮತ್ತು ಕುಬೇರನನ್ನು ಈ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ. ಅಕ್ಷಯ ತೃತೀಯ ವಿಶೇಷ: ಜಾತಕದಲ್ಲಿ ದೋಷವಿದ್ದರೆ ಈ ಮಂತ್ರಗಳನ್ನು ಪಠಿಸಿ

ಅವರ ಮಂತ್ರಗಳನ್ನು ಉಚ್ಛರಿಸಿ ಅವರನ್ನು ಸಂಪ್ರೀತಿಪಡಿಸಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಅವಕಾಶವನ್ನು ಭಕ್ತರಿಗೆ ಅಕ್ಷಯ ತೃತೀಯ ಮಾಡಿಕೊಡುತ್ತದೆ. ಅಂತೆಯೇ ಅಕ್ಷಯ ತೃತೀಯ ನಿಮಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸುತ್ತದೆ ಮತ್ತು ನಿಮ್ಮ ಮನದಲ್ಲಿರುವ ಬಯಕೆಗಳನ್ನು ಈಡೇರಿಸುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ದಿನಕ್ಕಾಗಿ ನೀವು ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ....  

ಚಿನ್ನ ಖರೀದಿ

ಚಿನ್ನ ಖರೀದಿ

ಚಿನ್ನವನ್ನು ಲಕ್ಷ್ಮೀ ಮಾತೆಯ ಪ್ರತಿರೂಪವಾಗಿ ಕಂಡುಕೊಳ್ಳಲಾಗುತ್ತದೆ. ಈ ದೇವರನ್ನು ನೆನೆಯುವುದರಿಂದ ಸಿರಿ ಸಂಪತ್ತು ನಮ್ಮಲ್ಲಿ ಶಾಶ್ವತವಾಗಿರುತ್ತದೆ ಎಂಬ ಮಾತಿದೆ. ಈ ದಿನ ಚಿನ್ನವನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಬರುವುದರಿಂದ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಕಾರು ಅಥವಾ ಇತರ ವಾಹನಗಳ ಖರೀದಿ

ಕಾರು ಅಥವಾ ಇತರ ವಾಹನಗಳ ಖರೀದಿ

ಈ ದಿನ ಕಾರು ಅಥವಾ ಇತರ ವಾಹನಗಳನ್ನು ಖರೀದಿಸುವುದು ಹೆಚ್ಚು ಪವಿತ್ರ ಮತ್ತು ವಿಶೇಷ ಎಂಬುದಾಗಿ ಪರಿಗಣಿಸಲಾಗಿದೆ. ಹಿಂದಿನ ಕಾಲದಲ್ಲಿ ಜನರು ಈ ದಿನದಂದು ಕುದುರೆ, ಎತ್ತಿನ ಗಾಡಿ, ದನಕರುಗಳನ್ನು ಖರೀದಿ ಮಾಡುತ್ತಿದ್ದರು. ಈ ದಿನ ನೀವು ವಾಹನಗಳನ್ನು ಖರೀದಿಸುವುದರಿಂದ ಇದು ನಿಮಗೆ ಸುರಕ್ಷತೆಯನ್ನು ಒದಗಿಸಲಿದೆ. ಅಂತೆಯೇ ವಾಹನ ಮಾರಾಟ ಸಂಸ್ಥೆಗಳೂ ಕೂಡ ಈ ದಿನ ವಿಶೇಷ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತದೆ.

ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವುದು

ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವುದು

ಪೂಜೆ, ಯಾಗ, ಯಜ್ಞಗಳನ್ನು ಈ ದಿನ ಒಳ್ಳೆಯದು ಶುಭ ಎಂಬ ನಂಬಿಕೆಯಿಂದ ನಡೆಸಲಾಗುತ್ತಿದೆ. ಇದರಿಂದ ನಿಮಗೆ ಶುಭವಾಗಿ ಉತ್ತಮ ಫಲಗಳು ದೊರೆಯುವುದು ಖಂಡಿತ.

ವಿವಾಹಗಳನ್ನೇರ್ಪಡಿಸುವುದು

ವಿವಾಹಗಳನ್ನೇರ್ಪಡಿಸುವುದು

ವಿವಾಹಗಳನ್ನು ಈ ದಿನ ನಡೆಸುವುದರಿಂದ ಸತಿಪತಿಯರಲ್ಲಿ ಆ ಬಾಂಧವ್ಯ ಗಟ್ಟಿಯಾಗಿರುತ್ತದೆ ಮತ್ತು ಯಾವುದೇ ಸಮಸ್ಯೆಗಳು ಅವರ ಬಂಧವನ್ನು ಮುರಿಯುವುದಿಲ್ಲ ಎಂಬುದಾಗಿ ನಂಬಲಾಗುತ್ತದೆ. ಆದ್ದರಿಂದಾಗಿಯೇ ಈ ದಿನ ಸಾವಿರಾರು ವಿವಾಹಗಳು ನಡೆಯುತ್ತಿರುತ್ತವೆ.

ಹೊಸ ಉದ್ಯಮದ ಆರಂಭ

ಹೊಸ ಉದ್ಯಮದ ಆರಂಭ

ನೀವು ಹೊಸ ಉದ್ಯಮವನ್ನು ಆರಂಭಿಸಬೇಕೆಂದಿದ್ದೀರಾ ಎಂದಾದಲ್ಲಿ ಅಕ್ಷಯ ತೃತೀಯ ಅದಕ್ಕೆ ಪೂರಕವಾದುದಾಗಿದೆ. ಯಾವುದೇ ಆರಂಭಕ್ಕೆ ಅಕ್ಷಯ ತೃತೀಯ ಶುಭವಾಗಿದೆ.

ಹೊಸ ಮನೆಯನ್ನು ಖರೀದಿಸುವುದು

ಹೊಸ ಮನೆಯನ್ನು ಖರೀದಿಸುವುದು

ನೀವು ಹೊಸ ಮನೆ ಅಥವಾ ಭೂಮಿಯನ್ನು ಖರೀದಿಸಬೇಕು ಎಂಬ ಯೋಜನೆಯನ್ನು ಮಾಡುತ್ತಿದ್ದಲ್ಲಿ ಅದಕ್ಕೆ ಅಕ್ಷಯ ತೃತೀಯ ಅತ್ಯುತ್ತಮವಾಗಿದೆ. ಈ ದಿನ ಗೃಹಪ್ರವೇಶದಂತಹ ಶುಭ ಕಾರ್ಯವನ್ನು ನಿಮಗೆ ಆಯೋಜಿಸಬಹುದಾಗಿದೆ. ಇದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

ಈ ದಿನ ಮಾಡಬಾರದ ಕಾರ್ಯಗಳು

ಈ ದಿನ ಮಾಡಬಾರದ ಕಾರ್ಯಗಳು

ಪವಿತ್ರ ದಾರಗಳನ್ನು ಕಟ್ಟಿಕೊಳ್ಳುವುದು

ಈ ದಿನ ಉಪನಯನದಂತಹ ಶುಭ ಕಾರ್ಯಗಳನ್ನು ನಡೆಸಬಾರದು. ಇದು ಅಶುಭ ಎಂಬುದಾಗಿ ಪರಿಗಣಿಸಲಾಗಿದೆ.ವ್ರತವನ್ನು ಮುಗಿಸುವುದು

ಅಕ್ಷಯ ತೃತೀಯ ಎಂದರೆ ಶುಭದ ಆರಂಭ ಎಂದಾಗಿದೆ. ಈ ದಿನ ಉದ್ಯಾಪನ ಅಥವಾ ವ್ರತವನ್ನು ಪೂರ್ಣಗೊಳಿಸುವಂತಹ ಕಾರ್ಯಕ್ರಮಗಳನ್ನು ನಡೆಸಬಾರದು. ನೀವು ಇಂತಹದ್ದೇನಾದರೂ ಈ ಮೊದಲೇ ಆಯೋಜಿಸಿದ್ದರೂ ಕೂಡ ಅಕ್ಷಯ ತೃತೀಯದಂದು ಅದು ಮುಗಿಯುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

English summary

The Dos And Don'ts On Akshaya Tritiya

Akshaya Tritiya is the most glorious and auspicious day in the luni-solar calendar that most of the Indians follow. Every year, it is celebrated in the month of Vaishakha, on the third day of the moon's growing phase. According to the western or Gregorian calendar, it falls on the 28th of April in the year 2017. You may look at all the holy and auspicious days that are observed by the Hindu community, but you will not find a day that is more auspicious than the day of Akshaya Tritiya.
Subscribe Newsletter