ಅಕ್ಷಯ ತೃತೀಯ ವಿಶೇಷ: ಜಾತಕದಲ್ಲಿ ದೋಷವಿದ್ದರೆ ಈ ಮಂತ್ರಗಳನ್ನು ಪಠಿಸಿ

By: Jaya subramanya
Subscribe to Boldsky

ಅಕ್ಷಯ ತೃತೀಯವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀಯನ್ನು ಕುಬೇರನನ್ನು ಆರಾಧಿಸುವುದರಿಂದ ಧನಕನಕ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕಷ್ಟ ಕಾರ್ಪಣ್ಯಗಳು ಕರಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ಈ ದಿನ ಯಾವುದಾದರೂ ಶುಭ ಕಾರ್ಯಗಳನ್ನು ಮಾಡಿದಲ್ಲಿ ಅದು ಶುಭವಾಗಿ ಪರಿಣಮಿಸುತ್ತದೆ ಮತ್ತು ದೀರ್ಘವಾಗಿ ಅದರ ಫಲ ಹಾಗೆಯೇ ಇರುತ್ತದೆ ಎಂಬುದಾಗಿ ಜನರು ನಂಬುತ್ತಾರೆ. ಅಕ್ಷಯ ತೃತೀಯದಂದು ತಪ್ಪದೇ ಪಠಿಸಿ 'ಮಹಾಲಕ್ಷ್ಮೀ' ಸ್ತೋತ್ರ

ಇಂತಹ ನಂಬಿಕೆಗಳನ್ನು ನಾವು ಹೆಚ್ಚು ಆಚರಿಸುವುದರಿಂದ ಅಕ್ಷಯ ತೃತೀಯವನ್ನು ಹೆಚ್ಚು ಪೂಜನೀಯವೆಂದು ಪರಿಗಣಿಸಲಾಗಿದೆ. ಇಂದಿನ ಲೇಖನದಲ್ಲಿ ನಿಮಗೆ ಇನ್ನಷ್ಟು ಶುಭವನ್ನು ಕಂಡುಕೊಳ್ಳಲು ಸಹಕಾರಿಯಾಗಿರುವ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿರುವ ಮಂತ್ರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಈ ದಿನದಂದು ವಿಶೇಷವಾಗಿ ಈ ಮಂತ್ರಗಳನ್ನು ಉಚ್ಛರಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ ಎಂದಾಗಿದೆ. ಈ ದಿನ ಸಾವಿರಾರು ವಿವಾಹಗಳನ್ನು ನೆರವೇರಿಸಲಾಗುತ್ತದೆ. ಅಂತೆಯೇ ವಧು ವರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಈ ದಿನ ಪ್ರಶಸ್ತ ಎಂದೆನಿಸಿದೆ. ಅಕ್ಷಯ ತೃತೀಯ ದಿನದ ಮಹತ್ವ ಮತ್ತು ಪ್ರಾಮುಖ್ಯತೆ ಏನು?

ಇನ್ನು ನಿಮ್ಮ ಜಾತಕದಲ್ಲಿರುವ ಅನಿಷ್ಟಗಳನ್ನು ದೂರಮಾಡುವುದಕ್ಕಾಗಿ ಅದಕ್ಕೆ ತಕ್ಕಂತಹ ಮಂತ್ರಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಅಲ್ಲದೆ ನಿಮ್ಮ ನಕ್ಷತ್ರ ಜನ್ಮದಿನಗಳಲ್ಲಿ ಏನಾದರೂ ದೋಷವಿದ್ದರೂ ಕೂಡ ಈ ಮಂತ್ರಗಳು ಅದನ್ನು ಹೋಗಲಾಡಿಸಲು ನೆರವನ್ನು ನೀಡಲಿವೆ. ಬನ್ನಿ ಅವುಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.....  

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

'ಆಮ್ ಏಂಗ್ ಕ್ಲಿಂಗ್ ಸಾಂಗ್'

ಇದು ಧನ ಮತ್ತು ಸಮೃದ್ಧಿಯನ್ನು ಈ ರಾಶಿಯವರಿಗೆ ತರಲಿದೆ.

ಅಂತೆಯೇ ಈ ರಾಶಿಯವರು ಧಾನ್ಯಗಳು, ಗೋಧಿ, ಕೆಂಪು ಬಣ್ಣದ ಬಟ್ಟೆಗಳು, ತಾಮ್ರ ಮತ್ತು ಕಾಕಂಬಿಗಳನ್ನು ದಾನ ಮಾಡಿದಲ್ಲಿ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

ಆಮ್ ಏಂಗ್ ಕ್ಲಿಂಗ್ ಶ್ರಿಂಗ್ ಈ ಮಂತ್ರವನ್ನು ನಿತ್ಯವೂ ಪಠಿಸುವುದು ನಿಮಗೆ ನಿಯಮಿತವಾಗಿ ಸಂತಸ ಮತ್ತು ಸಮಾಧಾನವನ್ನು ಉಂಟುಮಾಡಲಿದೆ. ಹಸು ಮತ್ತು ಕರು,ವಜ್ರಗಳು, ಕುದುರೆ ಮೊದಲಾದವುಗಳನ್ನು ದಾನ ಮಾಡಿದಲ್ಲಿ ಅಂತೆಯೇ ಹಸು ಕರು, ಕುದುರೆ ಬಿಳಿ ಬಣ್ಣದಲ್ಲಿದ್ದಲ್ಲಿ ಮತ್ತು ಅಕ್ಕಿ ಹಾಗೂ ಸುಗಂಧ ದ್ರವ್ಯಗಳನ್ನು ದಾನ ಮಾಡಬಹುದಾಗಿದೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

ಆಮ್ ಕ್ಲಿಂಗ್ ಏಂಗ್ ಸಾಂಗ್

ನಿಮ್ಮ ಜೀವನದಲ್ಲಿ ಈ ಮಂತ್ರವನ್ನು ಉಚ್ಛರಿಸುವುದರಿಂದ ಶಾಂತಿ ಸಮಾಧಾನ ಉಂಟಾಗಲಿದೆ.

ಹಸಿರು ಬಣ್ಣದಲ್ಲಿರುವ ಬಟ್ಟೆಗಳು, ಧಾನ್ಯಗಳು, ಪಚ್ಚೆ, ಚಿನ್ನ ಮತ್ತು ಸಿಂಪಿಗಳನ್ನು ದಾನ ಮಾಡುವುದು ಉತ್ತಮ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

ಆಮ್ ಏಂಗ್ ಕ್ಲಿಂಗ್ ಶ್ರಿಂಗ್ ಇದು ಧನ ಸಂಪತ್ತನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ಈ ರಾಶಿಯವರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಲ್ಲಿ ಈ ಮಂತ್ರವು ಸಮಾಧಾನವನ್ನು ತರಲಿದೆ. ತುಪ್ಪ, ಸಕ್ಕರೆ, ಹಾಲು, ಮೊಸರು, ಸುಗಂಧ ದ್ರವ್ಯಗಳು, ಬಟ್ಟೆಗಳು ಮೊದಲಾದವನ್ನು ಈ ರಾಶಿಯವರು ದಾನ ಮಾಡಬೇಕು. ಬಿಳಿ ಬಣ್ಣದಲ್ಲಿರುವ ವಸ್ತ್ರಗಳು, ಅಕ್ಕಿ, ಹರಳುಗಳು ಮತ್ತು ಬಿದಿರಿನ ಬುಟ್ಟಿಗಳನ್ನು ಈ ರಾಶಿಯವರು ದಾನ ಮಾಡಬಹುದಾಗಿದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

ಆಮ್ ಹ್ರಿಂಗ್ ಶ್ರಿಂಗ್ ಶ್ರಂಗ್ ಈ ಮಂತ್ರವನ್ನು ಪಠಿಸುವುದರಿಂದ ಸಿಂಹ ರಾಶಿಯವರಿಗೆ ಯಶಸ್ಸು ದೊರೆಯುತ್ತದೆ.

ದನ, ಕೆಂಪು ಹೂವುಗಳು, ಕೆಂಪು ಬಟ್ಟೆಗಳು, ತಾಮ್ರ, ಕಾಕಂಬಿ, ಚಿನ್ನ, ಗೋಧಿಯನ್ನು ಇವರುಗಳು ದಾನ ಮಾಡಿದಲ್ಲಿ ಸುಖ ಶಾಂತಿ ನೆಮ್ಮದಿ ಇವರದಾಗುತ್ತದೆ.

ಕನ್ಯಾರಾಶಿ

ಕನ್ಯಾರಾಶಿ

ಕನ್ಯಾ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

ಆಮ್ ಶ್ರಿಂಗ್ ಏಂಗ್ ಶ್ರಾಂಗ್

ಕನ್ಯಾರಾಶಿಯವರು ಈ ಮಂತ್ರವನ್ನು ಪಠಿಸುವುದರಿಂದ ಅವರಿಗೆ ಸಕಲ ಸಂಪತ್ತು ದೊರೆಯಲಿದೆ.

ಹಸಿರು ಬಳೆಗಳು, ಹಸಿರು ದಿರಿಸುಗಳು ಮತ್ತು ಫೆನ್ನಲ್ ಬೀಜಗಳನ್ನು ಇವರುಗಳು ದಾನ ಮಾಡಿದಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ಈ ಮಂತ್ರವನ್ನು ಪಠಿಸಬೇಕು

ಆಂಗ್ ಶ್ರಿಂಗ್ ಏಂಗ್ ಶಾಂಗ್

ಬಿಳಿ ಬಟ್ಟೆಗಳು, ಶ್ರೀಗಂಧ, ಸುಗಂಧ ದ್ರವ್ಯ ಮತ್ತು ಸಕ್ಕರೆಯನ್ನು ಈ ರಾಶಿಯವರು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಈ ವಸ್ತುಗಳನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಈ ಮಂತ್ರವನ್ನು ಉಚ್ಛರಿಸುವುದರಿಂದ ಉತ್ತಮ ಫಲವನ್ನು ಕಂಡುಕೊಳ್ಳಬಹುದಾಗಿದೆ:

ಆಮ್ ಏಂಗ್ ಕ್ಲಿಂಗ್ ಶ್ರಿಂಗ್

ಶ್ರೀಗಂಧ, ಹವಳ, ಕೇಸರಿ ಮೊದಲಾದವನ್ನು ಈ ರಾಶಿಯವರು ದಾನ ಮಾಡಬಹುದು.

ಧನು

ಧನು

ಧನು ರಾಶಿಯವರು ಈ ಮಂತ್ರವನ್ನು ಪಠಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ

ಆಮ್ ಹ್ರಿಂಗ್ ಕ್ಲಿಂಗ್ ಸಾಂಗ್

ಹಳದಿ ಬಣ್ಣದ ಧಾನ್ಯಗಳು, ಹಳದಿ ಬಣ್ಣದ ವಸ್ತ್ರಗಳು ಮತ್ತು ಪುಷ್ಪ ಪಾತ್ರೆಗಳನ್ನು ಇವರುಗಳು ದಾನ ಮಾಡಬಹುದಾಗಿದೆ.

ಮಕರ

ಮಕರ

ಮಕರ ರಾಶಿಯವರು ಈ ಮಂತ್ರವನ್ನು ಉಚ್ಛರಿಸಿ ಉತ್ತಮ ಫಲಗಳನ್ನು ಕಂಡುಕೊಳ್ಳಬಹುದಾಗಿದೆ

ಆಮ್ ಹ್ರಿಂಗ್ ಕ್ಲಿಂಗ್ ಸಾಂಗ್

ಎಳ್ಳು, ಎಣ್ಣೆ, ಕಾಳುಗಳು, ಹಸುಗಳನ್ನು ಈ ರಾಶಿಯವರು ದಾನ ಮಾಡಬಹುದಾಗಿದೆ

ಕುಂಭ ರಾಶಿ

ಕುಂಭ ರಾಶಿ

ಆಮ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಮಂತ್ರವನ್ನು ಈ ರಾಶಿಯವರು ಉಚ್ಛರಿಸಿದಲ್ಲಿ ಲಕ್ಷ್ಮೀ ಕಟಾಕ್ಷ ಇವರ ಮೇಲೆ ಉಂಟಾಗುತ್ತದೆ. ಬೆಳ್ಳಿ, ಕಬ್ಬಿಣ, ನೀಲ ಮಣಿ, ಕಪ್ಪು ಬಟ್ಟೆಗಳು, ಕಂಬಳಿಗಳು ಮತ್ತು ಛತ್ರಿಯನ್ನು ಇವರು ದಾನ ಮಾಡಿದಲ್ಲಿ ಶುಭ ಫಲಗಳನ್ನು ಕಂಡುಕೊಳ್ಳಬಹುದಾಗಿದೆ.

ಮೀನ ರಾಶಿ

ಮೀನ ರಾಶಿ

ಲಕ್ಷ್ಮೀ ದೇವಿಯು ಈ ರಾಶಿಯವರ ಮೇಲೆ ಖಂಡಿತವಾಗಿ ತಮ್ಮ ದಯೆಯನ್ನು ಬೀರುತ್ತಾರೆ

ಆಮ್ ಹ್ರಿಂಗ್ ಕ್ಲಿಂಗ್ ಸಾಂಗ್

ಚಿನ್ನ, ಕೇಸರಿ, ಅರಿಶಿನ, ಸಕ್ಕರೆ, ಬೆಳ್ಳಿ, ಉಪ್ಪು, ಜೇನು ಮತ್ತು ಕುದುರೆಗಳನ್ನು ದಾನ ಮಾಡುವುದರಿಂದ ಇವರಿಗೆ ಶುಭ ಫಲಗಳು ದೊರೆಯಲಿವೆ.

 
English summary

Mantras to Chant on Akshaya Tritiya Based on Zodiac Signs

Chanting these will help clear your path to success. Chanting these mantras on Akshaya Tritiya day is of special value. These mantras will help propel you to success and happiness. Repeat these mantras regularly and you will never suffer due to the want of money.
Subscribe Newsletter