For Quick Alerts
ALLOW NOTIFICATIONS  
For Daily Alerts

ಜ್ಞಾನದ ಹಿರಿಮೆಯನ್ನು ತೋರಿಸಿದ ಬುದ್ಧನ ಜೀವನ ಚರಿತ್ರೆ

By Manu
|

ರಾಜನಾಗಿದ್ದರೂ ಎಲ್ಲಾ ಐಷಾರಾಮಿ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕತೆಯತ್ತ ವಾಲಿದ ಬುದ್ಧ ವಿಶ್ವದಲ್ಲಿ ಶಾಂತಿಯ ಭೋದನೆ ಮಾಡಿದವರಲ್ಲಿ ಮೊದಲನೆ ಆಧ್ಯಾತ್ಮಿಕ ಗುರು ಎನ್ನಬಹುದಾಗಿದೆ. ಬುದ್ಧ ಅಹಿಂಸೆ ಮತ್ತು ಶಾಂತಿಯೇ ಜೀವನವೆಂದು ಹೇಳಿದ್ದಾನೆ.

ಹಿಂಸೆ ಮಾಡಬಾರದು, ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿರುವ ಗೌತಮ ಬುದ್ಧ ಹುಟ್ಟಿದ್ದು ನೇಪಾಳದಲ್ಲಿ ಮತ್ತು ಆತ ಅನುಸರಿಸಿಕೊಂಡು ಬಂದ ಬೌತಧರ್ಮವು ಇಂದು ವಿಶ್ವದೆಲ್ಲೆಡೆ ಪಸರಿಸಿದೆ. ಬುದ್ಧ ಭೋದಿಸಿರುವ ತತ್ವಗಳನ್ನು ಇಂದು ಕೂಡ ಜನರು ಪಾಲಿಸಿಕೊಂಡು ಹೋಗುತ್ತಾ ಇದ್ದಾರೆ. ಶಾಂತ ಮೂರ್ತಿ ಬುದ್ಧನ ಕುರಿತ ಇಂಟರೆಸ್ಟಿಂಗ್ ಕಹಾನಿ

ಬುದ್ಧನ ತತ್ವಗಳನ್ನು ಪಾಲಿಸಿಕೊಂಡು ಹೋದರೆ ಮುಂದೆ ವಿಶ್ವದಲ್ಲಿ ಶಾಂತಿ ನೆಲೆಸಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಲೇಖನದಲ್ಲಿ ಬುದ್ಧ ಹೇಳಿರುವಂತಹ ಕೆಲವೊಂದು ತತ್ವಗಳ ಬಗ್ಗೆ ತಿಳಿದುಕೊಳ್ಳುವ.......

ಪ್ರೀತಿ ಶಮನಕಾರಿ

ಪ್ರೀತಿ ಶಮನಕಾರಿ

ಬುದ್ಧ ಭೋದಿಸಿದಂತಹ ತತ್ವಗಳು ಪ್ರೀತಿಯ ಸುತ್ತಲು ತಿರುಗುತ್ತಾ ಇರುತ್ತದೆ ಮತ್ತು ಹೃದಯವನ್ನು ತೆರೆಯುತ್ತದೆ. ನಿಮ್ಮ ಹೃದಯದಲ್ಲಿ ಪ್ರೀತಿ ತುಂಬಿದ್ದಾಗ ನಕಾರಾತ್ಮಕ ವಿಷಯಗಳಿಗೆ ಅಲ್ಲಿ ಯಾವುದೇ ಜಾಗವಿರುವುದಿಲ್ಲ.

ವಾಸ್ತವದಲ್ಲಿ ಬದುಕಿ

ವಾಸ್ತವದಲ್ಲಿ ಬದುಕಿ

ಭವಿಷ್ಯದ ಬಗ್ಗೆ ಕನಸು ಕಾಣುವ ಬದಲು ಮತ್ತು ಹಿಂದಿನ ದಿನಗಳನ್ನು ನೆನಪಿಸುತ್ತಾ ಇರುವ ಬದಲು ಯಾವಾಗಲೂ ವರ್ತಮಾನದಲ್ಲಿ ಬದುಕಲು ಕಲಿಯಿರಿ ಎಂದು ಬುದ್ಧ ಯಾವಾಗಲೂ ಪ್ರೇರೇಪಿಸುತ್ತಿದ್ದ. ಈ ಪಾಠದಿಂದ ಉದ್ಯೋಗ ಜಗತ್ತಿನಲ್ಲಿ ನಮ್ಮ ಗುರಿಯನ್ನು ಮುಟ್ಟಬಹುದು.

ಒಳಗಡೆ ನೋಡಿ

ಒಳಗಡೆ ನೋಡಿ

ನಿಮ್ಮ ಒಳಗಡೆಯೇ ನಿಜವಾದ ಖಜಾನೆಯಿದೆ. ಹೊರಗಡೆ ಅಲ್ಲ ಎಂದು ಬುದ್ಧ ಯಾವಾಗಲೂ ಭೋದಿಸುತ್ತಿದ್ದ. ಐಷಾರಾಮವನ್ನು ಖರೀದಿಸಲು ಬಯಸುವವನಿಗೆ ಶಾಂತಿ ಸಿಗುವುದಿಲ್ಲ. ತನ್ನೊಳಗೆ ನೋಡುವವನಿಗೆ ಮಾತ್ರ ಶಾಂತಿ ಸಿಗುವುದು ಎನ್ನುವುದು ಬುದ್ಧನ ತತ್ವ.

ಆಸೆಗಳನ್ನು ತ್ಯಜಿಸಿ

ಆಸೆಗಳನ್ನು ತ್ಯಜಿಸಿ

ಎಲ್ಲಾ ಆಸೆಗಳನ್ನು ತ್ಯಜಿಸುವುದರಿಂದ ಬೇಗನೆ ಜ್ಞಾನೋದಯವನ್ನು ಪಡೆಯಬಹುದಾಗಿದೆ. ಜ್ಞಾನೋದಯವನ್ನು ಪಡೆಯಬೇಕೆನ್ನುವ ಆಸೆ ಕೂಡ ಒಂದು ವೃತ್ತದಲ್ಲಿ ನೀವು ಬಂಧಿಯಾಗಿರುವಂತೆ ಮಾಡುತ್ತದೆ ಎನ್ನುತ್ತಾನೆ ಬುದ್ಧ

ಬುದ್ಧಿಯನ್ನು ಶಿಸ್ತಿನಿಂದ ಇಡಿ

ಬುದ್ಧಿಯನ್ನು ಶಿಸ್ತಿನಿಂದ ಇಡಿ

ಬುದ್ಧಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲದೆ ಇದ್ದಾಗ ಅದು ನಮ್ಮನ್ನು ನಿಯಂತ್ರಿಸಲು ಶುರು ಮಾಡುತ್ತದೆ. ಇದರಿಂದಾಗಿ ನಾವು ಸುಳಿಯಲ್ಲಿ ಸಿಲುಕುತ್ತೇವೆ. ಬುದ್ದಿಗೆ ಸರಿಯಾಗಿ ತರಬೇತಿ ನೀಡಿದಾಗ ಅದು ತುಂಬಾ ಶಕ್ತಿಶಾಲಿ ಅಸ್ತ್ರ. ಆದರೆ ಅದಕ್ಕೆ ಶಿಸ್ತನ್ನು ಕಲಿಸದೆ ಇದ್ದರೆ ನಾವು ಸುಳಿಯಲ್ಲಿ ಸಿಲುಕುತ್ತೇವೆ. ಇದು ತುಂಬಾ ಅಪಾಯಕಾರಿ.

ಸಹಾನೂಭೂತಿ

ಸಹಾನೂಭೂತಿ

ಭೂಮಿ ಮೇಲಿರುವ ಜೀವವಿರುವ ಮತ್ತು ಜೀವವಿಲ್ಲದೆ ಇರುವ ಪ್ರತಿಯೊಂದು ವಸ್ತು ಕೂಡ ಒಂದಕ್ಕೊಂದು ಸಂಬಂಧಿಸಿದೆ. ಪರಸ್ಪರ ಅವಲಂಬನೆ ಮತ್ತು ಸಹಜೀವನವೂ ನಮಗೆ ಪ್ರಕೃತಿದತ್ತವಾಗಿ ಬಂದಿದೆ. ಇತರರ ನೆರವು ಇಲ್ಲದೆ ನಮಗೆ ಬದುಕಲು ಸಾಧ್ಯವೇ ಇಲ್ಲ.

ಸಹಾನೂಭೂತಿ

ಸಹಾನೂಭೂತಿ

ಇಂತಹ ಜಗತ್ತಿನಲ್ಲಿ ಸ್ವಾರ್ಥಕ್ಕೆ ಯಾವುದೇ ಬೆಲೆಯಿಲ್ಲ. ಇತರರ ಬಗ್ಗೆ ಇರುವ ನಿಜವಾದ ಸಹಾನುಭೂತಿ ಮಾತ್ರ ಶಮನಕಾರಿಯಾಗುತ್ತದೆ. ಪ್ರೀತಿಯ ಬಗ್ಗೆ ಬುದ್ಧನ ಭೋದನೆಯು ಸಹಾನುಭೂತಿಯ ಸುತ್ತಲು ತಿರುಗುತ್ತಾ ಇರುತ್ತದೆ. ಮನುಷ್ಯನಲ್ಲಿರುವ ಈ ಗುಣ ಮಾತ್ರ ವಿಶ್ವವನ್ನು ದೊಡ್ಡ ಅಪಾಯದಿಂದ ಕಾಪಾಡುತ್ತದೆ ಎಂದು ಬುದ್ಧ ಹೇಳಿದ್ದಾನೆ.

English summary

The Buddha's Teaching of Selflessness

Siddhartha or Guatama Buddha was one of the world's greatest spiritual figure. He originated from Nepal.He started Buddhism which spread to many parts of the world and inspired many. Yes, Buddha was indeed an enlightened soul who preached compassion to humanity. In this post, let us look at some lessons that we can learn form this great teacher.
X
Desktop Bottom Promotion