For Quick Alerts
ALLOW NOTIFICATIONS  
For Daily Alerts

ಶಾಂತ ಮೂರ್ತಿ ಬುದ್ಧನ ಕುರಿತ ಇಂಟರೆಸ್ಟಿಂಗ್ ಕಹಾನಿ

By manu
|

ಶಾಂತಿಯನ್ನು ಪ್ರತಿಪಾದಿಸುವ ಬೌದ್ಧಧರ್ಮ ಸುಮಾರು ಕ್ರಿಸ್ತ ಪೂರ್ವ ಆರನೆಯ ಅಥವಾ ನಾಲ್ಕನೆಯ ಶತಮಾನದಲ್ಲಿ ಗೌತಮ ಬುದ್ಧನ ಮೂಲಕ ಪ್ರಾರಂಭವಾಯಿತು ಎಂದು ಇತಿಹಾಸ ತಿಳಿಸುತ್ತದೆ. ಈಗ ನೇಪಾಳವಾಗಿರುವ ಅಂದಿನ ಅಖಂಡ ಭಾರತದಲ್ಲಿ ಬದುಕಿದ್ದ ಸಿದ್ದಾರ್ಥ ಗೌತಮ ಅಥವಾ ಶಾಕ್ಯಮುನಿ ಬಳಿಕ ಬೌದ್ಧಧರ್ಮದ ದೀಕ್ಷೆ ನೀಡಲು ಪ್ರಾರಂಭಿಸಿದ ಬಳಿಕ ಗೌತಮ ಬುದ್ಧ ಅಥವಾ ಸರಳವಾಗಿ ಬುದ್ಧನಾದ.

ಈತ ಬದುಕಿದ್ದ ಸಮಯದ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿವೆಯಾದರೂ ಈತ ಬದುಕಿದ್ದ ಬಗ್ಗೆ ಯಾರಿಗೂ ಅನುಮಾನವಿಲ್ಲ. ಏಕೆಂದರೆ ಭಾರತದ ಹೊರತಾಗಿ ಮಲೇಶಿಯಾ, ಇಂಡೋನೇಶಿಯಾ ಮೊದಲಾದ ಹಲವು ರಾಷ್ಟ್ರಗಳಲ್ಲಿ ಈತನ ಇರುವಿಕೆಯ ಹಲವು ದಾಖಲೆಗಳು ದೊರಕಿವೆ.

ಓರ್ವ ರಾಜಕುಮಾರನಾಗಿ ಹುಟ್ಟಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಗೌತಮ ಒಮ್ಮೆ ತನ್ನ ಅರಮನೆಯ ಹೊರಗೆ ಜನಸಾಮಾನ್ಯರು ಪಡುತ್ತಿದ್ದ ಕಷ್ಟ, ಬಡತನದ ಬೇಗೆಯನ್ನು ಕಂಡ. ಬಳಿಕ ಸತ್ಯದ ಅನ್ವೇಷಣೆಯಲ್ಲಿ ಮನೆ, ಪತ್ನಿ, ಮಗುವನ್ನು ತೊರೆದು ಹೊರಪ್ರಪಂಚಕ್ಕೆ ಹೊರಟ. ಕಾಂತಕ ಎಂಬ ಕುದುರೆಯ ಮೇಲೆ ಬಂಟ ಚನ್ನನೊಂದಿಗೆ ಜೀವನದ ಹಲವು ಸತ್ಯಗಳನ್ನು ಕಣ್ಣಾರೆ ಕಂಡ. ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದ ಬಳಿಕ ತನ್ನ ಜ್ಞಾನವನ್ನು ಪ್ರಪಂಚಕ್ಕೆ ಹಂಚಿ ಬೌದ್ಧಧರ್ಮದ ಹುಟ್ಟಿಗೆ ಕಾರಣನಾದ. ಬುದ್ಧ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ತಿಳಿಸಿದ್ದ ಸಂಗತಿಗಳಲ್ಲಿ ಹಲವು ಅತ್ಯಂತ ಮಹತ್ವದ್ದೂ ಸ್ವಾರಸ್ಯಕರವಾಗಿಯೂ ಇವೆ. ಇವುಗಳಲ್ಲಿ ಪ್ರಮುಖವಾದ ಹತ್ತು ಸ್ವಾರಸ್ಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಬುದ್ಧನ ಮೂರು ಬೋಧನೆಗಳು

ಬುದ್ಧನ ಮೂರು ಬೋಧನೆಗಳು

ಬುದ್ಧ ಮೂರು ವಿಷಯಗಳನ್ನು ಕಟ್ಟುನಿಟ್ಟಾಗಿ ತ್ಯಜಿಸಲು ಬೋಧಿಸುತ್ತಾನೆ. ಅವೆಂದರೆ ಅಜ್ಞಾನಿಯಾಗಿರುವುದು, ಸಿಟ್ಟು ಮಾಡಿಕೊಳ್ಳುವುದು ಮತ್ತು ಸೇಡಿನ ಮನೋಭಾವ ಹೊಂದಿರುವುದು.

ನಾಲ್ಕು ದೃಶ್ಯಗಳು

ನಾಲ್ಕು ದೃಶ್ಯಗಳು

ಒಂದು ದಿನ ಗೌತಮ ತನ್ನ ನೆಚ್ಚಿನ ಬಂಟ ಚೆನ್ನನೊಡನೆ ತನ್ನನ್ನು ಅರಮನೆಯಿಂದ ಹೊರಗೆ ಜನಸಾಮಾನ್ಯರಿರುವಲ್ಲಿ ಕರೆದೊಯ್ಯಲು ತಿಳಿಸುತ್ತಾನೆ. ಈ ಪಯಣದಲ್ಲಿ ಗೌತಮ ಹಲವು ವಿಷಯಗಳನ್ನು ಗಮನಿಸಿದರೂ ನಾಲ್ಕು ವಿಷಯಗಳು ಅವನನ್ನು ಬಹುವಾಗಿ ಕಾಡುತ್ತವೆ. ಮುಂದೆ ಓದಿ

ನಾಲ್ಕು ದೃಶ್ಯಗಳು

ನಾಲ್ಕು ದೃಶ್ಯಗಳು

ಓರ್ವ ವೃದ್ಧ, ಓರ್ವ ರೋಗಿ, ಒಂದು ಕಳೇಬರ ಮತ್ತೊಬ್ಬ ಸನ್ಯಾಸಿ. ಇವರನ್ನು ನೋಡಿದ ಬಳಿಕವೇ ಜೀವನದಲ್ಲಿ ಸುಖದ ಹೊರತಾಗಿ ಬೇರೆಯೂ ಇದೆ ಎಂದು ಗೌತಮನಿಗೆ ಅರ್ಥವಾಗುತ್ತದೆ. ಆದ್ದರಿಂದ ಜೀವನವೆಂಬುದಿದ್ದರೆ ಅದು ಅರಮನೆಯ ನಾಲ್ಕು ಗೋಡೆಗಳ ನಡುವಲ್ಲಲ್ಲ, ಜನರೊಂದಿಗಿರುವ ಮೂಲಕ, ಅರಮನೆಯ ಹೊರಗಿದೆ ಎಂದು ತಿಳಿದುಕೊಳ್ಳುತ್ತಾನೆ.

 ಜಗತ್ತಿನಲ್ಲಿ ಎಲ್ಲವೂ ನಶ್ವರ

ಜಗತ್ತಿನಲ್ಲಿ ಎಲ್ಲವೂ ನಶ್ವರ

ಅಂದಿನ ಪಯಣದ ಬಳಿಕ ಅರಮನೆಗೆ ಹಿಂದಿರುಗಿದ ಗೌತಮನಿಗೆ ಅರಮನೆಯ ಯಾವುದೇ ಸುಖ ರುಚಿಸುವುದಿಲ್ಲ. ದ್ವಂದ್ವಕ್ಕೊಳಗಾದ ಮನದಿಂದ ನಿದ್ದೆ ಬರದೇ ಅರಮನೆಯೊಳಗೆ ರಾತ್ರಿಯಿಡೀ ಅಡ್ಡಾಡುತ್ತಾ ಕಳೆಯುತ್ತಾನೆ. ಇಂದು ಸುಂದರವಾಗಿ ಕಾಣುವ ಯಾವುದೇ ವಸ್ತು ಕಾಲ ಕಳೆದಂತೆ ನಶ್ವರವಾಗುತ್ತದೆ ಎಂದು ತಿಳಿದುಕೊಳ್ಳುತ್ತಾನೆ.

 ಜಗತ್ತಿನಲ್ಲಿ ಎಲ್ಲವೂ ನಶ್ವರ

ಜಗತ್ತಿನಲ್ಲಿ ಎಲ್ಲವೂ ನಶ್ವರ

ಇದೇ ಹೊತ್ತಿನಲ್ಲಿ ಆತನ ಪತ್ನಿಗೆ ಹೆರಿಗೆಯಾಗಿ ತಾನು ಗಂಡು ಮಗುವಿನ ತಂದೆಯಾಗಿರುವ ಸುದ್ದಿಯೂ ಆತನನ್ನು ಸಂತಸಗೊಳಿಸುವುದಿಲ್ಲ. ಬಳಿಕ ಆತ ತನ್ನ ಎಲ್ಲಾ ಸುಖಸುಪ್ಪತ್ತಿಗೆಗಳನ್ನು ತ್ಯಜಿಸಿ ಓರ್ವ ಭಿಕ್ಷುಕನ ರೂಪದಲ್ಲಿ ಅರಮನೆಯಿಂದ ಹೊರಡುತ್ತಾನೆ. ನಂತರ ಜ್ಞಾನವನ್ನು ಪಡೆಯಲು ಹಲವು ಸ್ಥಳಗಳಿಗೆ ತೆರಳುತ್ತಾನೆ.

ಸನ್ಯಾಸಿಯಾಗುವ ಬಗ್ಗೆ ಸೂಚನೆ ನೀಡಿದ್ದ ಭವಿಷ್ಯ

ಸನ್ಯಾಸಿಯಾಗುವ ಬಗ್ಗೆ ಸೂಚನೆ ನೀಡಿದ್ದ ಭವಿಷ್ಯ

ಗೌತಮ ಬುದ್ಧ ಹುಟ್ಟಿದ ಹೊತ್ತಿನ ಪಂಚಾಂಗವನ್ನು ಗಮನಿಸಿದ ಪಂಡಿತರು ಈತ ದೊಡ್ಡವನಾದ ಬಳಿಕ ಒಂದೇ ಖ್ಯಾತ ಆಡಳಿತಗಾರನಾಗುತ್ತಾನೆ ಅಥವಾ ಸನ್ಯಾಸಿಯಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಗೌತಮನ ತಂದೆ ಶುದ್ದೋಧನನಿಗೆ ಇದರಲ್ಲಿ ಮೊದಲನೆಯದೇ ಇಷ್ಟವಿತ್ತು. ಆದ್ದರಿಂದ ಸನ್ಯಾಸಿಯಾಗುವ ಯಾವುದೇ ಕಾರಣ ಆತನ ಕಣ್ಣಿಗೆ ಬೀಳಕೂಡದು ಎಂದು ಕಟ್ಟಪ್ಪಣೆ ಮಾಡಿ ಅರಮನೆಯ ನಾಲ್ಕು ಗೋಡೆಗಳ ಹೊರಗೆ ಹೋಗದಂತೆ ಪ್ರತಿಬಂಧಿಸಿದ.

ಸನ್ಯಾಸಿಯಾಗುವ ಬಗ್ಗೆ ಸೂಚನೆ ನೀಡಿದ್ದ ಭವಿಷ್ಯ

ಸನ್ಯಾಸಿಯಾಗುವ ಬಗ್ಗೆ ಸೂಚನೆ ನೀಡಿದ್ದ ಭವಿಷ್ಯ

ಅಂತೆಯೇ ಅರಮನೆಯ ಆವರಣದಲ್ಲಿಯೇ ಬೆಳೆದ ಗೌತಮನಿಗೆ ಅರಮನೆಯ ಹೊರಗೂ ಒಂದು ಜಗತ್ತು ಇದೆ ಎಂದೇ ಗೊತ್ತಿರಲಿಲ್ಲ. ಅರಮನೆಯೊಳಗೇ ಆತನಿಗೆ ಉತ್ತಮ ಆಡಳಿತಗಾರನಾಗಲು ಅಗತ್ಯವಿರುವ ಶಿಕ್ಷಣವನ್ನೂ ನೀಡಲಾಗುತ್ತಿದ್ದು ಹೊರಜಗತ್ತಿನ ಬಗ್ಗೆ ಚಕಾರವನ್ನೂ ಎತ್ತುತ್ತಿರಲಿಲ್ಲ.

ಗುರುವಿನ ಅನ್ವೇಷಣೆ

ಗುರುವಿನ ಅನ್ವೇಷಣೆ

ಅರಮನೆಯಿಂದ ಹೊರಬಿದ್ದ ಗೌತಮನಿಗೆ ಹೊರಜಗತ್ತು ಅತಿ ವಿಚಿತ್ರವಾಗಿ ಮತ್ತು ಸುಲಭವಾಗಿ ಅರ್ಥವಾಗದಂತೆ ಕಂಡಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಓರ್ವ ಗುರುವಿನ ಅಗತ್ಯವಿತ್ತು. ಜಗತ್ತಿನಲ್ಲಿರುವ ವಿವಿಧ ಧರ್ಮಗಳ ಬಗ್ಗೆ ಅರಿಯಲು ಮತ್ತು ಧ್ಯಾನವನ್ನು ಕಲಿಸಲು ಆತನಿಗೆ ಯೋಗ್ಯನಾದ ಗುರು ದೊರಕಲೇ ಇಲ್ಲ. ಆದ್ದರಿಂದ ಹಲವು ವಿಷಯಗಳನ್ನು ತಾನೇ ಗುರುವಾಗಿ ಗ್ರಹಿಸುತ್ತಾ ಹೋದ.

ಜ್ಞಾನೋದಯ

ಜ್ಞಾನೋದಯ

ರಾಜ್ಯದಿಂದ ಹೊರಬಂದು ಹಲವು ಕಡೆ ಧ್ಯಾನಕ್ಕೆ ಪ್ರಯತ್ನಿಸಿದರೂ ಫಲ ಕಾಣದೇ, ಸರಿಯಾದ ಕ್ರಮದಲ್ಲಿ ತಪಸ್ಸನ್ನಾಚರಿಸದೇ ಆರೋಗ್ಯವೂ ಕೆಟ್ಟಿತ್ತು. ಆದರೆ ದೃತಿಗೆಡದ ಗೌತಮ ಸಮಾಧಾನ ಚಿತ್ತದಿಂದ ಬೋಧಿವೃಕ್ಷದ ಕೆಳಗೆ,ಪೂರ್ವಾಭಿಮುಖವಾಗಿ, ಪದ್ಮಾಸನ ಹಾಕಿ ತಪಸ್ಸನ್ನಾಚರಿಸಲು ಪ್ರಾರಂಭಿಸಿದ. ಸುಮಾರು ಏಳು ವಾರಗಳ ಬಳಿಕ ಜ್ಞಾನ ಪ್ರಾಪ್ತಿಯಾಯಿತು. ಅತನ ಮನವನ್ನು ಕಲಕುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತ ಬಳಿಕ ಬುದ್ಧನಾದ.ತಪಸ್ಸಿನ ಅವಧಿಯಲ್ಲಿ ಮಾರ ನೆಂಬ ರಾಕ್ಷಸ ಈತನ ತಪೋಭಂಗಕ್ಕೆ ಬಂದಿದ್ದ. ಆದರೆ ಬುದ್ಧ ಭೂಮಿಯ ನೆರವು ಪಡೆದು ಮಾರನ ಪಂಥಕ್ಕೆ ಸೂಕ್ತ ಉತ್ತರ ನೀಡಿದ ಬಳಿಕ ಮಾರ ಮಾಯವಾಗುತ್ತಾನೆ ಎಂದು ಕೆಲವು ಕಡೆ ಇತಿಹಾಸಗಳಲ್ಲಿ ನಮೂದಾಗಿದೆ.

ಗುರುವಾಗಲು ಮೊದಲು ಒಪ್ಪದಿದ್ದ ಬುದ್ಧ

ಗುರುವಾಗಲು ಮೊದಲು ಒಪ್ಪದಿದ್ದ ಬುದ್ಧ

ಜ್ಞಾನೋದಯವಾದ ಬಳಿಕ ತನಗೆ ಲಭಿಸಿದ ಜ್ಞಾನವನ್ನು ಇತರರಿಗೆ ಹಂಚಲು ಬುದ್ಧ ಕೊಂಚ ಹಿಂದೇಟು ಹಾಕಿದ. ಏಕೆಂದರೆ ತನಗೆ ಪ್ರಾಪ್ತಿಯಾದ ಈ ಜ್ಞಾನ ಇತರರಿಗೆ ಬೋಧಿಸುವುದು ಅಷ್ಟು ಸುಲಭವಲ್ಲ ಎಂದು ಆತ ಅರಿತಿದ್ದ. ಆದರೆ ಶೀಘ್ರವೇ ಬುದ್ಧ ಯಾವುದೇ ಜ್ಞಾನವಾದರೂ ಅದನ್ನು ಹಂಚಿಕೊಳ್ಳದಿದ್ದರೆ ಅದರ ಸಾರ್ಥಕತೆಯೇ ನಷ್ಟವಾಗುವ ಸತ್ಯವನ್ನು ಅರಿತ. ನಂತರವೇ ಆತ ಇತರರಿಗೆ ತನ್ನ ಜ್ಞಾನವನ್ನು ಬೋಧಿಸಲು ಪ್ರಾರಂಭಿಸಿದ.

ಹಿಂಬಾಲಕರು

ಹಿಂಬಾಲಕರು

ಇದುವರೆಗೆ ಬುದ್ಧನ ಬಗ್ಗೆ ಏನನ್ನೂ ಅರಿಯದಿರುವವರು ಆತನ ಬೋಧನೆಗಳನ್ನು ಕೇಳುತ್ತಾ ಹೋದಂತೆ ಯಾವುದೇ ಮಾಯಕ್ಕೊಳಗಾದವರಂತೆ ಆತನ ಹಿಂಬಾಲಕರಾಗುತ್ತಾ ಹೋದರು.

ಹಿಂಬಾಲಕರಾಗಿ ಪರಿವರ್ತಿತರಾದ ಮನೆಯವರು

ಹಿಂಬಾಲಕರಾಗಿ ಪರಿವರ್ತಿತರಾದ ಮನೆಯವರು

ಜ್ಞಾನೋದಯದ ಬಳಿಕ ಬುದ್ಧ ತನ್ನ ಪರಿವಾರದೊಂದಿಗೆ ಒಂದುಗೂಡುತ್ತಾನೆ. ಆದರೆ ಮೊದಲಿನಂತೆ ಅರಮನೆಯಲ್ಲಿ ಅಲ್ಲ, ಬದಲಿಗೆ ಆತನ ತಂದೆ ಶುದ್ದೋಧನ, ಪತ್ನಿ ಯಶೋಧರೆ ಮತ್ತು ಆತನ ಏಳು ವರ್ಷ ವಯಸ್ಸಿನ ಮಗ ರಾಹುಲ ಸಹಾ ಬುದ್ಧನ ಅನುಯಾಯಿಗಳಾಗುತ್ತಾರೆ. ಬುದ್ಧನ ಅನುಯಾಯಿಗಳಲ್ಲಿ ಏಳು ವರ್ಷದ ರಾಹುಲ ಅತ್ಯಂತ ಕಿರಿಯನೆಂಬ ಖ್ಯಾತಿಯನ್ನೂ ಗಳಿಸುತ್ತಾನೆ.

ಎಂಭತ್ತರ ವಯಸ್ಸಿನವರೆಗೂ ನಡೆಸಿದ ಪ್ರಚಾರ

ಎಂಭತ್ತರ ವಯಸ್ಸಿನವರೆಗೂ ನಡೆಸಿದ ಪ್ರಚಾರ

ಇಪ್ಪತ್ತೊಂಭತ್ತು ವರ್ಷ ವಯಸ್ಸಿನಲ್ಲಿ ಮನೆಬಿಟ್ಟ ಬಳಿಕ ಮೂವತ್ತೈದನೇ ವಯಸ್ಸಿನಲ್ಲಿ ಆತನಿಗೆ ಜ್ಞಾನೋದಯವಾಗಿತ್ತು. ಅಂದಿನಿಂದ ಸತತವಾಗಿ ತನ್ನ ಎಂಭತ್ತನೇ ವಯಸ್ಸಿನವರೆಗೂ ಆತನ ಧರ್ಮ ಪ್ರಚಾರ ನಡೆಸುತ್ತಾ ಹೋದ. ಎಂಭತ್ತನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವ ಮುನ್ನ ತನ್ನ ಹಿಂಬಾಲಕರಿಗೆ ನಮ್ಮ ಶರೀರಗಳು ನಶ್ವರವಾಗಿದ್ದು ಜ್ಞಾನ ಮಾತ್ರ ಶಾಶ್ವತವಾಗಿದೆ, ತನ್ನ ಜ್ಞಾನವನ್ನು ಮುಂದಿನ ತಲೆಮಾರುಗಳಲ್ಲಿ ಹಂಚುತ್ತಾ ಮುಂದುವರೆಸುವಂತೆ ಹೇಳಿದ. ಆ ಪ್ರಕ್ರಿಯೆ ಇಂದಿನವರೆಗೂ ನಡೆಯುತ್ತಾ ಬೌದ್ಧಧರ್ಮ ಬೆಳೆಯುತ್ತಾ ಬಂದಿದೆ.

English summary

Interesting Facts about Buddha

There are certain debates related to some of the facts of his living but they all agreed that he lived. Buddhism got its name from its leader – Buddha. Originally born a wealthy prince, he left it all behind to pursue the path of truth when he saw the poverty and sickness beyond his palace walls. This also led him to drop his birth name,
Story first published: Thursday, August 13, 2015, 16:18 [IST]
X
Desktop Bottom Promotion