For Quick Alerts
ALLOW NOTIFICATIONS  
For Daily Alerts

ಝೆನ್ ಗುರುವಿನ ಅಂತಿಮ ಪ್ರಕಟಣೆ

|
Kannada Zen story
ಟ್ಯಾನಂಜನ್ ತುಂಬಾ ಪ್ರಸಿದ್ಧವಾದ ಝೆನ್ ಧರ್ಮದ ಗುರುವಾಗಿದ್ದ. ಅನೇಕ ಜನರು ಅವನ ಅನುಯಾಯಿಗಳಾಗಿದ್ದರು. ಅವರಿಗೆ ಇರುವ ಮಹಾಶಕ್ತಿ ಅಂದರೆ ಮುಂದೆ ಏನು ಆಗುತ್ತದೆ ಎಂಬ ಭವಿಷ್ಯ ಹೇಳುತ್ತಿದ್ದರು. ಅವರು ಭವಿಷ್ಯ ಯಾವಾಗಲೂ ನಿಜವಾಗುತ್ತಿತ್ತು.

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನರು ಬರುತ್ತಿದ್ದರು. ಟ್ಯಾನಂಜನ್ ಸಾಕಷ್ಟು ಜನರ ವಿಶ್ವಾಸಗಳಿಸಿದ್ದ. ತುಂಬಾ ಜನ ಅವನ ಶಿಷ್ಯರಾಗಿ ಅವರಿಂದ ಝೆನ್ ಧರ್ಮದ ಬಗ್ಗೆ ಕಲಿತುಕೊಂಡಿದ್ದರು. ತುಂಬಾ ಜನ ಶಿಷ್ಯಂದಿರು ಕಲಿಕೆಯ ನಂತರ ಝೆನ್ ಧರ್ಮದ ಬಗ್ಗೆ ಕಲಿಸಲು ದೂರ ಪ್ರದೇಶಗಳಿಗೆ ಹೋಗಿದ್ದರು.

ಟ್ಯಾನಂಜನ್ ಗೆ ವಯಸ್ಸಾಗುತ್ತಾ ಬಂತು. ಕೊನೆಗಾಲವೂ ಸಮೀಪಿಸಿತು. ಸಾಯುವ ಮುಂಚೆ ಟ್ಯಾನಂಜನ್ ತನ್ನ ಶಿಷ್ಯನನ್ನು ಕರೆದು ಸ್ವಲ್ಪ ಲೆಟರ್ ತಂದು ಕೊಡಲು ಹೇಳಿದನು. ಶಿಷ್ಯ ತಂದು ಕೊಟ್ಟ ಕಾರ್ಡುಗಳಲ್ಲಿ ಏನೋ ಬರೆದು ಅದನ್ನು ತನ್ನ ಬಳಿಯಲ್ಲಿದ್ದ ಶಿಷ್ಯರಿಗೆ ದೂರದಲ್ಲಿರುವ ತನ್ನ ಅನುಯಾಯಿಗಳಿಗೆ ಕಳುಹಿಸಲು ಹೇಳಿದನು.

ಆ ಲೆಟರ್ ನಲ್ಲಿ ಹೀಗೆ ಬರೆದಿತ್ತು:

ನಾನು ಈ ಪ್ರಪಂಚ ಬಿಟ್ಟು ಹೋಗುತ್ತಿದ್ದೇನೆ, ಇದು ನನ್ನ ಪ್ರಕಟಣೆ...
ಇಂತಿ
ಟ್ಯಾನಂಜನ್

English summary

Kannada Zen story | Inspirational short stories | ಝೆನ್ ಕಥೆ : ಟ್ಯಾನಂಜನ್ ಗುರುವಿನ ಅಂತಿಮ ಪ್ರಕಟಣೆ

Tanzan on the day that he was to die wrote sixty postal cards and asked an attendant to have them mailed. He then passed away.
X
Desktop Bottom Promotion