For Quick Alerts
ALLOW NOTIFICATIONS  
For Daily Alerts

ಈ ಊರಿನಲ್ಲಿ 'ನವರಾತ್ರಿ' ದಿನ ದೇವಿಗೆ ಪ್ರಾಣಿ ಬಲಿ ಕೊಡುತ್ತಾರಂತೆ!

|

ನವರಾತ್ರಿ ಸಮೀಪಿಸುತ್ತಿದೆ. ಈ ವರ್ಷ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 7ರವರೆಗೆ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾರತದಾದ್ಯಂತ ನವರಾತ್ರಿ ಸಂದರ್ಭದಲ್ಲಿ ದುರ್ಗಾದೇವಿಯ ಪೂಜೆ ಮಾಡುವುದು ಮತ್ತು ಒಂಭತ್ತು ದಿನಗಳ ಕಾಲ ವಿವಿಧ ರೀತಿಯಲ್ಲಿ ದೇವಿಯನ್ನು ಆರಾಧಿಸಲಾಗುವುದು.

Strange Navratri Rituals

ಕೆಲವೊಂದು ರಾಜ್ಯಗಳಲ್ಲಿ ನವರಾತ್ರಿಯು ತುಂಬಾ ಜನಪ್ರಿಯ. ನವರಾತ್ರಿ ಸಂದರ್ಭದಲ್ಲಿ ವಿವಿಧ ರೀತಿಯ ಆಚರಣೆಗಳು ಕೂಡ ಇದೆ. ಈ ಲೇಖನದಲ್ಲಿ ನಾವು ನಿಮಗೆ ಇದುವರೆಗೆ ತಿಳಿಯದೆ ಇರುವಂತಹ ನವರಾತ್ರಿಯ ಕೆಲವು ಆಚರಣೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಲು ನೀವು ತಯಾರಾಗಿ.

ರಾಜಸ್ಥಾನದಲ್ಲಿ ಪ್ರಾಣಿಬಲಿ!

ರಾಜಸ್ಥಾನದಲ್ಲಿ ಪ್ರಾಣಿಬಲಿ!

ಪ್ರಾಣಿಬಲಿಯು ನವರಾತ್ರಿ ವೇಳೆ ಸರಿಯೆಂದು ನಿಮಗೆ ಅನಿಸುತ್ತಿದೆಯಾ? ರಾಜಸ್ಥಾನದಲ್ಲಿ ರಜಪೂತರು ನವರಾತ್ರಿ ವೇಳೆ ತಮ್ಮ ಮನೆಯ ದೇವಿಗೆ ಕೋಣ ಅಥವಾ ಆಡನ್ನು ಬಲಿ ಕೊಡುವರು. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಇರುವಂತಹ ಕೆಲವೊಂದು ಹಿಂದೂ ದೇವಾಲಯಗಳಲ್ಲೂ ಆಡು, ಕೋಳಿ ಮತ್ತು ಕೋಣವನ್ನು ಬಲಿಕೊಡುವರು.

ಆಯುಧಗಳ ಪೂಜೆ

ಆಯುಧಗಳ ಪೂಜೆ

ಆಯುಧ ಪೂಜೆ ಮಾಡುವುದನ್ನು ಅಸ್ತ್ರ ಪೂಜೆ ಎಂದು ಕರೆಯಲಾಗುವುದು. ಇದನ್ನು ಆಯುಧ ಪೂಜೆ ಎಂದು ಕರೆಯಲಾಗುವುದು. ನವರಾತ್ರಿಯ 9ನೇ ದಿನದಂದು ದಕ್ಷಿಣ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಯುಧ ಪೂಜೆ ಮಾಡಲಾಗುತ್ತದೆ. ಸೈನಿಕರು ತಮ್ಮ ಆಯುಧಗಳನ್ನು ಪೂಜಿಸಿದರೆ, ಇತರರು ತಮ್ಮ ವೃತ್ತಿ ಸಂಬಂಧಿ ವಸ್ತುಗಳನ್ನು ಪೂಜಿಸುವರು. ಯುದ್ಧಕ್ಕೆ ಬಳಸುವ ಆಯುಧಗಳನ್ನು ಹಿಂದೆ ಪೂಜಿಸಲಾಗುತ್ತಿತ್ತು. ಆದರೆ ಇಂದು ಕಂಪ್ಯೂಟರ್ ಇತ್ಯಾದಿಗಳಿಗೂ ಪೂಜೆ ಮಾಡಲಾಗುತ್ತದೆ. ಪೂಜೆಯು ವೃತ್ತಿಯ ಕಡೆಗೆ ವ್ಯಕ್ತಿಯ ಬದ್ಧತೆ ತೋರಿಸುತ್ತದೆ ಮತ್ತು ಪ್ರತಿನಿತ್ಯದ ಕೆಲಸದಲ್ಲಿ ದೇವರು ನೆರವಾಗಲಿ ಎಂದು ಬೇಡಿಕೊಳ್ಳುವರು.

Most Read: ಜ್ಞಾಪಕಶಕ್ತಿ ಹೆಚ್ಚಲು, ತಪ್ಪದೇ ಇಂತಹ ಆಹಾರಗಳನ್ನು ದಿನನಿತ್ಯ ಸೇವಿಸಿ

ಬಾರ್ಲಿ(ಜವೆಗೋಧಿ) ಬಿತ್ತುವುದು

ಬಾರ್ಲಿ(ಜವೆಗೋಧಿ) ಬಿತ್ತುವುದು

ಬಾರ್ಲಿಯನ್ನು ಸಮೃದ್ದಿ, ಅಭಿವೃದ್ಧಿ ಸಂಕೇತವೆಂದು ಪರಿಗಣಿಸಲಾಗಿದೆ. ನವರಾತ್ರಿ ವೇಳೆ ಕೂಡ ಇದಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇದನ್ನು ಬಿತ್ತುವುದು ತುಂಬಾ ಶುಭವೆಂದು ಪರಿಣಿಸಲಾಗುತ್ತದೆ. ಇದು ಎಷ್ಟು ಗುಣಮಟ್ಟ ಹಾಗೂ ದೊಡ್ಡದಾಗಿ ಬೆಳೆಯುತ್ತದೆಯಾ ಅಷ್ಟು ಸಂಪತ್ತು ಮತ್ತು ಸಮೃದ್ಧಿ ಕುಟುಂಬಕ್ಕೆ ಸಿಗುವುದು ಎಂದು ತಿಳಿಯಬಹುದು.

9 ದಿನಗಳ ಬಣ್ಣದ ನಿಯಮ

9 ದಿನಗಳ ಬಣ್ಣದ ನಿಯಮ

ನವರಾತ್ರಿಯ 9 ದಿನಗಳಲ್ಲಿ ಒಂದೊಂದು ದಿನವೂ ಒಂದೊಂದು ಬಣ್ಣ ಬಳಸಲಾಗುವುದು. ಜನರು ಈ ಬಣ್ಣಗಳಿಗೆ ಅನುಗುಣವಾಗಿ ತಮ್ಮ ಬಟ್ಟೆ ಕೂಡ ಧರಿಸುವರು. 9 ದಿನದ ನವರಾತ್ರಿಗೆ ಬಣ್ಣಗಳು ಹೀಗಿವೆ.

  • ಮೊದಲ ದಿನ: ಕೆಂಪು
  • ಎರಡನೇ ದಿನ: ನೀಲಿ
  • ಮೂರನೇ ದಿನ: ಹಳದಿ
  • ನಾಲ್ಕನೇ ದಿನ: ಹಸಿರು
  • ಐದನೇ ದಿನ: ಕಂದು
  • ಆರನೇ ದಿನ: ಕಿತ್ತಳೆ
  • ಏಳನೇ ದಿನ: ಬಿಳಿ
  • ಎಂಟನೇ ದಿನ: ಗುಲಾಬಿ
  • ಒಂಭತ್ತನೇ ದಿನ: ಆಕಾಶ ನೀಲಿ
  • Most Read: ಭಗವಾನ್ ಶ್ರೀಕೃಷ್ಣ ಪ್ರತಿ ದಿನ ರಾತ್ರಿ ಈ ವನಕ್ಕೆ ಬರುತ್ತಾನಂತೆ!!

    ದಕ್ಷಿಣ ಭಾರತದಲ್ಲಿ ಗೊಂಬೆ(ಕೊಲು)ಗಳ ಪೂಜೆ

    ದಕ್ಷಿಣ ಭಾರತದಲ್ಲಿ ಗೊಂಬೆ(ಕೊಲು)ಗಳ ಪೂಜೆ

    ದಕ್ಷಿಣ ಭಾರತದ ಕೆಲವೊಂದು ರಾಜ್ಯಗಳಲ್ಲಿ ಗೊಂಬೆಗಳನ್ನು ನವರಾತ್ರಿ ಸಂದರ್ಭದಲ್ಲಿ ಪೂಜಿಸಲಾಗುತ್ತದೆ. ಕೊಲು ಎಂದು ಕರೆಯಲ್ಪಡುವ ಈ ಗೊಂಬೆಯು ರಾಮಾಯಣದ ಕಥೆಯಿಂದ ಪ್ರೇರಿತವಾಗಿರುವಂತದ್ದಾಗಿದೆ. ಕೊಲು ಭಾರತದಲ್ಲಿ ಮಾತ್ರವಲ್ಲದೆ ಶ್ರೀಲಂಕಾ ಮತ್ತು ಜಪಾನ್ ನಲ್ಲಿ ಕೂಡ ಇದನ್ನು ಆಚರಿಸಲಾಗುತ್ತದೆ.

    ನವರಾತ್ರಿಯ ಕೆಲವು ವಿಷಯಗಳು

    ನವರಾತ್ರಿಯ ಕೆಲವು ವಿಷಯಗಳು

    ನವರಾತ್ರಿ ವೇಳೆ ದುರ್ಗಾ ದೇವಿಯ 9 ಶಕ್ತಿಗಳನ್ನು ಪೂಜಿಸಲಾಗುತ್ತದೆ. ಪ್ರತಿಯೊಂದು ರೂಪವು ದೇವಿಯ ಶಕ್ತಿ ಹಾಗೂ ವ್ಯಕ್ತಿತ್ವವನ್ನು ಹೇಳುವುದು.

    ನವರಾತ್ರಿಯನ್ನು ವರ್ಷವಿಡಿ ಐದು ರೀತಿಯಲ್ಲಿ ಆಚರಿಸಲಾಗುತ್ತದೆ. ಮಹಾನವರಾತ್ರಿಯು ಸಪ್ಟೆಂಬರ್-ಅಕ್ಟೋಬರ್ ನಲ್ಲಿ ಆಚರಿಸಲಾಗುವುದು.

    ಭಾರತದ ಪ್ರತಿಯೊಂದು ಭಾಗದಲ್ಲಿಯೂ 9 ದಿನಗಳ ಈ ಹಬ್ಬವನ್ನು ತುಂಬಾ ವಿಭಿನ್ನವಾಗಿ ಆಚರಿಸಲಾಗುತ್ತದೆ. ಉತ್ತರ ಭಾಗದಲ್ಲಿ 9 ದಿನಗಳ ಕಾಲ ಉಪವಾಸ ಮಾಡಲಾಗುತ್ತದೆ. ಗುಜರಾತ್ ಮತ್ತು ಇತರ ಪಶ್ಚಿಮ ಭಾಗದಲ್ಲಿ ಗರ್ಭಾ ಅಥವಾ ದಾಂಡಿಯಾ ರಾಸ್ ನೃತ್ಯವು 9 ದಿನಗಳ ಕಾಲ ನಡೆಯುವುದು. ಪಶ್ವಿಮಬಂಗಾಳದಲ್ಲಿ ದುರ್ಗಾಪೂಜೆ ನಡೆಯುವುದು ಮತ್ತು ದಕ್ಷಿಣದಲ್ಲಿ ಕೊಲು ಪೂಜೆ ನಡೆಯುತ್ತದೆ.

    ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ಭಾರತದಲ್ಲಿ ಒಂದು ಹಬ್ಬವನ್ನು ವಿವಿಧ ರೀತಿಯಿಂದ ಆಚರಿಸಿಕೊಳ್ಳುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ರಾಜ್ಯಕ್ಕೆ ಅನುಗುಣವಾಗಿ ನವರಾತ್ರಿ ಆಚರಣೆ ಕೂಡ ಭಿನ್ನವಾಗಿರುವುದು. ಆಚರಣೆ ಎಷ್ಟೇ ಭಿನ್ನವಾಗಿದ್ದರೂ ಭಕ್ತಿ ಹಾಗೂ ಸಂಭ್ರಮ ಮಾತ್ರ ಏಕರೂಪದ್ದಾಗಿರುವುದು ಎನ್ನುವುದರಲ್ಲಿ ಸಂಶಯವಿಲ್ಲ.

    Most Read: ನಿಷ್ಠಾವಂತರಾದ 'ಮಿಥುನ ರಾಶಿ'ಯವರಿಗೆ ಸಂಬಂಧಗಳ ವಿಷಯದಲ್ಲಿ ಕಷ್ಟ ಬರಬಹುದು!

    ನವರಾತ್ರಿ ಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತಾರೆ!

    ನವರಾತ್ರಿ ಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತಾರೆ!

    ನವರಾತ್ರಿ ಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತಾರೆಂದು ಬಹಳಷ್ಟು ಜನರಿಗೆ ತಿಳಿದಿದೆ. ಮಾರ್ಚ್ ಮತ್ತು ಏಪ್ರಿಲ್ ನಡುವೆ ಬರುವ ನವರಾತ್ರಿ ಮುಖ್ಯವಾದ ಹಬ್ಬ. ಹೀಗೆ ಚೈತ್ರಮಾಸದಲ್ಲಿ ಆಚರಿಸುವ ನವರಾತ್ರಿ ಹಬ್ಬವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಆಚರಿಸುವ ಹಬ್ಬಕ್ಕಿಂತ ಮೊದಲಾಗಿದೆ. ಶ್ರೀರಾಮನು ರಾಕ್ಷಸ ರಾಜ ರಾವಣನೊಡನೆ ಯುದ್ಧಮಾಡಲು ಹೊರಡುವ ಮೊದಲು ಹೆಚ್ಚು ಜನಪ್ರಿಯತೆಗಳಿಸಿರುವ ದುರ್ಗಾ ಪೂಜೆಯನ್ನು ಪ್ರಾರಂಭಿಸಿದನು. ಶ್ರೀರಾಮನು ಲಂಕೆಯ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸಿದನು. ಅದಕ್ಕಾಗಿ ಅವನು ಆರು ತಿಂಗಳು ಕಾಯುವುದಕ್ಕೆ ಇಷ್ಟಪಡಲಿಲ್ಲ. ಆದ್ದರಿಂದ ಅವನು ತಪ್ಪಾದ ಮಾಸದಲ್ಲಿ ದುರ್ಗಾ ದೇವಿಯ ಪೂಜೆಯನ್ನು ಕೈಕೊಂಡನು. ಆದ್ದರಿಂದಲೇ ಅವನು ದುರ್ಗಾಪೂಜೆಯನ್ನು ಮಾಡಿದ ಮಾಸವನ್ನು 'ಅಕಾಲ್ ಬೋಧಾನ್' ಅಥವಾ ತಪ್ಪು ಮಾಸದಲ್ಲಿ ಮಾಡಿದ ಪೂಜೆ ಎಂದು ಉಲ್ಲೇಖಿಸಲಾಗಿದೆ. ಅವನು ಪೂಜೆಯನ್ನು ಆಚರಿಸಲು ದುರ್ಗಾದೇವಿಗೆ 108 ಕಮಲ ಹೂವುಗಳನ್ನು ಅರ್ಪಿಸಿ 108 ದೀಪಗಳನ್ನು ಹಚ್ಚಿದನು.

English summary

Strange Navratri Rituals We Bet You Didn’t Know About

Maha-Navratri is here, and India is getting ready to celebrate this 9-day festival dedicated to the Mother Goddess. Different customs prevail in different parts of India, some of them extremely quirky too. Here are some of the strangest Navratri customs that you might not have heard of.
X
Desktop Bottom Promotion