For Quick Alerts
ALLOW NOTIFICATIONS  
For Daily Alerts

ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ

|

ನವರಾತ್ರಿ ಹಬ್ಬವು ದುರ್ಗಾ ದೇವಿಯನ್ನು ಆರಾಧಿಸುವ ಸಲುವಾಗಿ ನಡೆಯುವ ಹಬ್ಬವಾಗಿದೆ. ಈಕೆಯು ಕಾಳಿ, ಪಾರ್ವತಿ, ಗೌರಿ, ಸತಿ, ಮಹಮಾಯ ಮತ್ತು ಮಹಿಷಾಸುರ ಮರ್ದಿನಿ ಎಂದು ವಿವಿಧ ರೂಪಗಳಲ್ಲಿ ಪೂಜಿಸಲ್ಪಡುತ್ತಾಳೆ. ದುರ್ಗಾದೇವಿಯು ಪರಮಶಿವನ ಪತ್ನಿಯಾಗಿದ್ದು, ದೇವತೆಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿ ಶಕ್ತಿ ಎಂದು ಕರೆಯಲ್ಪಡುತ್ತಾಳೆ.

ಈ ದುರ್ಗಾದೇವಿಯ ಅವತಾರವು ಅತ್ಯಂತ ಕುತೂಹಲಕಾರಿಯಾಗಿದೆ. ಇದು ನವರಾತ್ರಿಯ ಜೊತೆಗೆ ತಳುಕನ್ನು ಹಾಕಿಕೊಂಡಿದೆ. ಒಂದಾನೊಂದು ಕಾಲದಲ್ಲಿ ಮಹಿಷಾಸುರನೆಂಬ ಎಮ್ಮೆ ರೂಪದ ರಾಕ್ಷಸನು ತನ್ನ ಅಪರಿಮಿತ ಸೈನ್ಯದೊಂದಿಗೆ ದಾಳಿ ಮಾಡಿ, ದೇವತೆಗಳನ್ನು ದೇವಲೋಕದಿಂದ ಹೊರಗೆ ಅಟ್ಟಿದನಂತೆ. ನವರಾತ್ರಿಯಲ್ಲಿ ಪಾಲಿಸುವ ಕೆಲ ಪದ್ಧತಿಗಳು

ಆಗ ದೇವತೆಗಳೆಲ್ಲರು ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು ಮತ್ತು ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡರು. ಆಗ ಆ ಮೂವರು ಸೇರಿ ತಮ್ಮ ದೇಹದಲ್ಲಿದ್ದ ಶಕ್ತಿಯನ್ನೆಲ್ಲ ಸೇರಿಸಿ ಒಂದು ಹೊಸ ದೇವತೆಯನ್ನು ಸೃಷ್ಟಿಸಿದರು. ಕೊನೆಗೆ ಎಲ್ಲಾ ದೇವರ ಸ್ವಲ್ಪ ಶಕ್ತಿಯು ಸೇರಿ ದುರ್ಗಾ ದೇವಿಯು ಅವತಾರವೆತ್ತಿದಳು.

Story Of Goddess Durga's Creation

ದುರ್ಗಾ ದೇವಿಯ ಅವತಾರವು ಎಲ್ಲಾ ದೇವರ ಶಕ್ತಿಗಳ ಸಂಗಮದಿಂದ ಆಯಿತು. ಇದರ ಫಲಿತಾಂಶವಾಗಿ ಆಕೆಯು ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿ ಗುರುತಿಸಲ್ಪಟ್ಟಿದ್ದಾಳೆ. 10 ಕೈಗಳನ್ನು ಹೊಂದಿರುವ ಸುಂದರವಾದ ಹೆಂಗಸಾಗಿ ದುರ್ಗಾ ದೇವಿಯು ಜನಿಸಿದ ನಂತರ, ಎಲ್ಲಾ ದೇವರುಗಳು ಆಕೆಗೆ ಉಡುಗೊರೆಗಳನ್ನು ನೀಡಿದರು. ಈಶ್ವರನು ಆಕೆಗೆ ತನ್ನ ತ್ರಿಶೂಲವನ್ನು ನೀಡಿದನು, ವಿಷ್ಣುವು ಆಕೆಗೆ ಚಕ್ರವನ್ನು ನೀಡಿದನು ಮತ್ತು ವರುಣ ದೇವನು ಆಕೆಗೆ ಪಾಶವನ್ನು ನೀಡಿದನು, ಇಂದ್ರನು ಆಕೆಗೆ ವಜ್ರಾಯುಧವನ್ನು ನೀಡಿದನು ಹಾಗೂ ವಾಯುವು ಆಕೆಗೆ ಬಾಣಗಳನ್ನು ನೀಡಿದನು. ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು

ಆಕೆಯ ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನು ಪರ್ವತಗಳ ರಾಜನಾದ ಹಿಮವಂತನು ನೀಡಿದನು. ಈ ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದುರ್ಗಾ ದೇವಿಯು ಯುದ್ಧಕ್ಕೆ ಸಿದ್ಧಳಾದಳು. ಆಕೆಯು ರಾಕ್ಷಸರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು.

ಒಂಭತ್ತು ದಿನಗಳ ಪರ್ಯಾಂತ ನಡೆದ ಈ ಯುದ್ಧದಲ್ಲಿ ಮಹಿಷಾಸುರನು ಎಮ್ಮೆಯ ರೂಪವನ್ನು ತಾಳಿ ದೇವಿ ದುರ್ಗೆಯ ಮೇಲೆ ಆಕ್ರಮಣ ಮಾಡಿದನು. ಆದರೆ ದುರ್ಗಾ ದೇವಿಯು ಅವತಾರವೆತ್ತಿ ಬಂದಿದ್ದೇ ಮಹಿಷಾಸುರನನ್ನು ಸಂಹರಿಸಲು, ಆಕೆಯು ತನ್ನ ಸಿಂಹ ಮತ್ತು ಆಯುಧಗಳ ಸಹಾಯದಿಂದ ಅವನನ್ನು ಸಂಹರಿಸಿದಳು.

ಇದರಿಂದಾಗಿ ದೇವತೆಗಳು ಮತ್ತೆ ಸ್ವರ್ಗಕ್ಕೆ ವಾಪಸಾದರು. ಮುಂದೆ ಹಲವಾರು ಬಾರಿ ರಾಕ್ಷಸರು ಸ್ವರ್ಗಕ್ಕೆ ದಾಳಿ ಮಾಡಿದಾಗ ದೇವತೆಗಳು ದುರ್ಗಾ ದೇವಿಯ ಮೊರೆ ಹೋದರು. ಈಗಾಗಿ ಅಂದಿನಿಂದ ನವರಾತ್ರಿ ಹಬ್ಬವು ದುರ್ಗಾ ದೇವಿಯ ವಿಜಯದ ನೆನಪಿಗಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

English summary

Story Of Goddess Durga's Creation

Navratri is the festival that we celebrate in honour of Goddess Durga. She is known by many different names such as Kali, Parvati, Gowri, Sati, Mahamaya and Mahishasura Mardini. The story of Goddess Durga's creation is very interesting and the roots of celebrating Navratri lie in it.
Story first published: Friday, September 26, 2014, 10:30 [IST]
X
Desktop Bottom Promotion