Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಹುಣ್ಣಿಮೆ ಅಮಾವಾಸ್ಯೆ ಎನ್ನುವುದು ಚಂದ್ರನಿಗೆ ಗಣೇಶ ಕೊಟ್ಟ ಶಾಪ!
ನಮ್ಮ ಹಿಂದೂ ದೇವತೆಗಳ ಪುರಾಣದಲ್ಲಿ ಅನೇಕ ಚಿಕ್ಕ ಪುಟ್ಟ ಕಥೆಗಳಿವೆ. ಅದರಲ್ಲೂ ಭಗವಾನ್ ಗಣಪತಿ, ಶ್ರೀಕೃಷ್ಣ, ಹನುಮಂತ ಸೇರಿದಂತೆ ಅನೇಕ ದೇವತೆಗಳ ಬಾಲ್ಯ ಜೀವನದ ಕಥೆಗಳು ಸುಂದರವಾಗಿವೆ. ಪ್ರತಿಯೊಂದು ಸಹ ತನ್ನದೇ ಆದ ವಿಶೇಷತೆ ಹಾಗೂ ಅರ್ಥವನ್ನು ನೀಡುತ್ತವೆ.
ಕೆಲವೊಂದು ನಮ್ಮ ಹಬ್ಬ-ಹರಿದಿನಗಳ ಕಾರಣಗಳನ್ನು ಬಿಚ್ಚಿಡುತ್ತವೆ. ಅಂತಹ ಕಥೆಗಳಲ್ಲಿ ಪ್ರಥಮ ಪೂಜಿತ ಗಣೇಶನ ಕಥೆಗಳು ಒಂದು. ಗಣೇಶನ ವಿಗ್ರಹ ಅಥವಾ ಫೋಟೋಗಳಲ್ಲಿ ದಂತವೊಂದು ಅರ್ಧ ಮುರಿದಂತೆ ಇರುತ್ತದೆ. ಅಥವಾ ತನ್ನ ದಂತದ ಚೂರನ್ನು ಕೈಯಲ್ಲಿ ಹಿಡಿದುಕೊಂಡಿರುವಂತೆ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸುಂದರ ಕಥೆ ಇಲ್ಲಿದೆ...

ಕಥೆ-1
ಒಮ್ಮೆ ಗಣೇಶನು ಚೌತಿ ಹಬ್ಬದಂದು ಭಕ್ತರೆಲ್ಲರೂ ನೀಡಿರುವ ಸಿಹಿ ತಿಂಡಿಗಳನ್ನು ತಿಂದು, ತನ್ನ ವಾಹನವಾದ ಕ್ರೌಂಚಾ ಎಂಬ ಇಲಿಯ ಮೇಲೆ ಕುಳಿತು ಪ್ರಯಾಣಿಸುತ್ತಿದ್ದನು. ಹೀಗೆ ಸಾಗುತ್ತಿದ್ದಾಗ, ದಾರಿಯಲ್ಲೊಂದು ಹಾವು ಎದುರಾಯಿತು. ಇದನ್ನು ಕಂಡ ಇಲಿ ಭಯದಿಂದ ಹೆಜ್ಜೆಯನ್ನು ಹಿಂದೆ ಇಟ್ಟಿತು. ಇಲಿಯ ಭಯದಿಂದಾಗಿ ಗಣೇಶನು ಎಡವಿ ಬಿದ್ದನು. ಆಗ ಗಣೇಶನ ಹೊಟ್ಟೆ ಒಡೆದು, ತಿಂಡಿಗಳೆಲ್ಲಾ ಹೊರ ಬಿದ್ದವು. ಗಣೇಶ ಬೇಸರದಿಂದ ತಿಂಡಿಯನ್ನು ಪುನಃ ತುಂಬಿಕೊಂಡು, ಹಾವನ್ನು ಹೊಟ್ಟೆಗೆ ಬಿಗಿದುಕೊಂಡನು.

ಕಥೆ-2
ಇದನ್ನು ಗಮನಿಸುತ್ತಿದ್ದ ಚಂದ್ರನು ಗಣಪತಿಯ ಸ್ಥಿತಿಗೆ ಅಪಹಾಸ್ಯ ಮಾಡುತ್ತಾ ನಗಲಾರಂಭಿಸಿದನು. ಬೇಸರ ಹಾಗೂ ಕೋಪಗೊಂಡ ಗಣೇಶ ತನ್ನ ದಂತದ ತುದಿಯನ್ನು ಮುರಿದು, ಶಕ್ತಿಯಿಂದ ಚಂದ್ರನೆಡೆಗೆ ಎಸೆದನು.

ಕಥೆ-3
ಹೀಗೆ ಚಂದ್ರನಿಗೆ ತನ್ನ ಹಲ್ಲನ್ನು ಮುರಿದು ಹೊಡೆದ ಕಥೆಯು ಒಂದು ದಂತಕಥೆಯಲ್ಲಿ ಒಂದಾಯಿತು. ಚಂದ್ರನ ಸೌಂದರ್ಯ ಹಾಗೂ ಅಹಂಕಾರವನ್ನು ಖಂಡಿಸಿ, ಆಕಾಶದಲ್ಲಿ ಒಮ್ಮೆ ಸಂಪೂರ್ಣವಾಗಿ ಕಣ್ಮರೆಯಾಗಬೇಕು ಎಂದು ಶಾಪ ನೀಡಿದನು.

ಕಥೆ-4
ಗಣೇಶನ ಕೋಪಕ್ಕೆ ಗುರಿಯಾದ ಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಜೊತೆಗೆ ಗಣೇಶನಲ್ಲಿ ಕ್ಷಮೆ ಯಾಚಿಸಿ ಶಾಪದಿಂದ ಮುಕ್ತಿ ಹೊಂದಲು ಕೇಳಿಕೊಂಡನು. ಆಗ ಗಣೇಶ ಒಮ್ಮೆ ಶಾಪ ನೀಡಿದ ಮೇಲೆ ಪುನಃ ಹಿಂದೆ ಪಡೆಯಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದನು. ತಿಂಗಳಲ್ಲಿ ಒಮ್ಮೆ ಮಾತ್ರ ಪೂರ್ಣ ಚಂದ್ರನಾಗಿ ಸುಂದರವಾಗಿ ಕಾಣಬಹುದು. ನಂತರ ಪುನಃ ಮರೆಯಾಗುತ್ತಾ ಹೋಗಬೇಕು ಎಂದು ಹೇಳಿದನು.

ಕಥೆ-5
ಹಾಗಾಗಿಯೇ ನಾವು ಚಂದ್ರನನ್ನು ತಿಂಗಳಲ್ಲಿ ಪೂರ್ಣಿಮೆ/ಹುಣ್ಣಿಮೆಯ ದಿನ ಪೂರ್ಣವಾಗಿ ನೋಡಲು ಸಾಧ್ಯ. ಉಳಿದ ದಿನಗಳಲ್ಲಿ ಕ್ಷೀಣಿಸುತ್ತಾ ಹೋಗುತ್ತಾನೆ. ಅಮವಾಸ್ಯೆಯ ದಿನ ಸಂಪೂರ್ಣವಾಗಿ ಮಾಯವಾಗುತ್ತಾನೆ.



Click it and Unblock the Notifications