ಐಶ್ವರ್ಯದ ಅಧಿಪತಿ ಕುಬೇರನನ್ನು ಒಲಿಸಿಕೊಳ್ಳುವ ಪರಿ ಹೇಗೆ?

By: Jaya subramanya
Subscribe to Boldsky

ಹಿಂದೂ ಧರ್ಮವು ಪ್ರಸಿದ್ಧವಾದ ಐತಿಹಾಸಿಕ ಅಂಶಗಳಿಂದ ಜನಮಾನಸದಲ್ಲಿ ಹೆಸರನ್ನು ಸ್ಥಾನವನ್ನು ಗಳಿಸಿಕೊಂಡಿದ್ದು, ಶಾಸ್ತ್ರಗಳು ಹೇಳುವ ಪ್ರತಿಯೊಂದು ಅಂಶವೂ ಪೂರಕವಾದ ಮಾಹಿತಿಯನ್ನು ಒಳಗೊಂಡಿದೆ. ಯಾವುದೇ ಒಂದು ಘಟನೆಯನ್ನು ಹಿಂದೂ ಧರ್ಮಗ್ರಂಥಗಳು ವಿವರಿಸುವ ವ್ಯಾಖ್ಯಾನಿಸುವ ಶೈಲಿ ನಮ್ಮನ್ನು ಓದಿಸಿಕೊಂಡು ಹೋಗಿ ಬಿಡುತ್ತದೆ. ಎಂದೋ ಇತಿಹಾಸಲ್ಲಿ ನಡೆದ ಅಂಶವು ಇಂದು ನಿನ್ನೆ ನಡೆದಂತೆ ನಮ್ಮ ಕಣ್ಣೆದುರಿಗೆ ಕಟ್ಟಿಕೊಡುತ್ತದೆ.  ಧನ ಮದದ ಪ್ರತಿರೂಪ ಕುಬೇರನ ಸೊಕ್ಕಡಗಿಸಿದ ಬಾಲ ಗಣೇಶನ ಕಥಾನಕ

ಇಂದಿನ ಲೇಖನದಲ್ಲಿ ಹಣದ ದೇವತೆಯಾಗಿರುವ ಕುಬೇರನ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ದೇವತೆಗಳ ತಿಜೋರಿ ಭಂಡಾರವೇ ಕುಬೇರನ ಬಳಿಯಲ್ಲಿರುತ್ತದೆ ಎಂಬುದಾಗಿ ಹಿಂದೂ ಗ್ರಂಥಗಳಲ್ಲಿ ನಾವು ಕಾಣಬಹುದಾಗಿದ್ದು ಲಕ್ಷ್ಮೀ ಅದೃಷ್ಟ ದೇವತೆ ಎಂದೆನಿಸಿದ್ದು ಧನ ಕನಕಕ್ಕೆ ಪ್ರಮುಖ ಅಧಿಪತಿ ಕುಬೇರ ಎಂಬ ಮಾತಿದೆ.

ಶಿವ ಮತ್ತು ಕುಬೇರ

ಶಿವ ಮತ್ತು ಕುಬೇರ

ಶಿವಗಣಗಳೊಂದಿಗೆ ಯಕ್ಷರು ಉತ್ತಮ ಬಾಂಧವ್ಯವವನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಯಕ್ಷ ಅಧಿಪತಿ ಕುಬೇರನು ಶಿವನಿಗೆ ಹೆಚ್ಚು ಆಪ್ತನಾಗಿದ್ದಾನೆ. ಶಿವಗಣಗಳು ಯಕ್ಷ ದೇವತೆಗಳ ಬಾಹ್ಯ ಸೌಂದರ್ಯಕ್ಕೆ ಗಮನ ಕೊಡದೇ ಅವರನ್ನು ಗೌರವಿಸುವುದು ಇದಕ್ಕೆ ಕಾರಣವಾಗಿದೆ. ಶಿವನನ್ನು ಆರಾಧಿಸಿದರೆ ಕುಬೇರನು ಸುಲಭವಾಗಿ ಒಲಿದು ಬಿಡುತ್ತಾನೆ ಎಂಬ ಮಾತಿದೆ.

ಕುಬೇರ ಮತ್ತು ಲಕ್ಷ್ಮೀ ದೇವತೆ

ಕುಬೇರ ಮತ್ತು ಲಕ್ಷ್ಮೀ ದೇವತೆ

ಅದೃಷ್ಟ ದೇವತೆ ಮತ್ತು ಧನ ದೇವತೆ ಎಂದಿಗೂ ಪರಸ್ಪರ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ವರುಣನನ್ನು ನಿರ್ಮಿಸಿರುವುದು ಕುಬೇರನು ಎಂಬ ಕಥೆ ಇದ್ದು, ಸಮುದ್ರದಿಂದ ಲಕ್ಷ್ಮೀ ಜನ್ಮತಾಳಿರುತ್ತಾರೆ. ಆದ್ದರಿಂದ ಲಕ್ಷ್ಮೀ ದೇವತೆಯ ಪಿತ ಕುಬೇರನಾಗಿದ್ದಾನೆ. ಅಂತೆಯೇ ನಿಧಿ ಮತ್ತು ರಿಧಿ ಕುಬೇರನ ಪತ್ನಿಯರು ಎಂದೂ ಆಗಿದೆ. ಲಕ್ಷ್ಮೀಯ ಅಂಶವೆಂದಾಗಿ ಇವರನ್ನು ಕರೆಯಲಾಗಿದೆ. ಈ ಎರಡೂ ದೇವತೆಗಳನ್ನು ನೀವು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ ಉಂಟಾಗುವುದು ಸಹಜವಾಗಿದೆ.

ಕುಬೇರ ಮತ್ತು ವೆಂಕಟೇಶ

ಕುಬೇರ ಮತ್ತು ವೆಂಕಟೇಶ

ಕುಬೇರನು ಹೆಚ್ಚು ಶ್ರೀಮಂತನಾಗಿದ್ದರಿಂದ ತಿರುಪತಿಯ ಅಧಿಪತಿ ವೆಂಕಟರಮಣನು ಆತನಿಂದ ಹಣವನ್ನು ಪಡೆದುಕೊಂಡಿದ್ದರು ಎಂದಾಗಿ ಕಥೆಯಿದೆ. ಕುಬೇರನಿಂದ ಪಡೆದ ಸಾಲವನ್ನು ತನ್ನ ಭಕ್ತರ ಕಾಣಿಕೆಗಳಿಂದ ತೀರಿಸುವುದಾಗಿ ವೆಂಕಟರಮಣನು ಕುಬೇರನಿಗೆ ಆಶ್ವಾಸನೆಯನ್ನಿತ್ತಿದ್ದರು. ಆದ್ದರಿಂದ ನೀವು ವೆಂಕಟೇಶ್ವರನಿಗೆ ಅರ್ಪಿಸುವುದು ನೇರ ಕುಬೇರನಿಗೆ ತಲುಪುತ್ತದೆ. ಅಂತೆಯೇ ವೆಂಕಟೇಶನನ್ನು ಪೂಜಿಸುವುದು ನಿಮಗೆ ಧನಕನಕವನ್ನು ನೀಡಲಿದೆ.

ಕುಬೇರನಿಗೆ ನಡೆಸುವ ಪೂಜೆ ಮತ್ತು ಜಾತ್ರೆಗಳು

ಕುಬೇರನಿಗೆ ನಡೆಸುವ ಪೂಜೆ ಮತ್ತು ಜಾತ್ರೆಗಳು

ಧನ್‌ತೇರಾಸ್ - ಧನ್‌ತ್ರಯೋದಶಿ ಅಥವಾ ಧನ್‌ತೇರಾಸ್ ಹಬ್ಬವನ್ನು ಕುಬೇರನಿಗೆ ಅರ್ಪಿಸಲಾಗಿದೆ. ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸುವ ವಿಶೇಷ ದಿನ ಇದಾಗಿದೆ. ಚಿನ್ನವನ್ನು ಖರೀದಿಸಲು ಇದು ಉತ್ತಮ ದಿನವಾಗಿದೆ. ಶರದ್ ಪೂರ್ಣಿಮ - ಕುಬೇರನ ಜನ್ಮದಿನವನ್ನು ಈ ದಿನ ಸಂಕೇತಿಸುತ್ತದೆ. ಈ ದಿನ ಕುಬೇರನನ್ನು ಪೂಜಿಸುವುದರಿಂದ ಸಂಪತ್ತನ್ನು ಪಡೆದುಕೊಳ್ಳಬಹುದಾಗಿದೆ. ತ್ರಯೋದಶಿ ಮತ್ತು ಪೂರ್ಣಿಮ ದಿನಗಳಂದು ಕೂಡ ಕುಬೇರನನ್ನು ಪೂಜಿಸಿ ಅವರ ಕೃಪಾಕಟಾಕ್ಷಕ್ಕೆ ಒಳಗಾಗಬಹುದಾಗಿದೆ.

ಕುಬೇರನ ದೇವಸ್ಥಾನಗಳು

ಕುಬೇರನ ದೇವಸ್ಥಾನಗಳು

ಕುಬೇರನಿಗೆ ಅರ್ಪಿಸಿರುವ ದೇವಸ್ಥಾನಗಳು ಅತಿ ಕಡಿಮೆ. ಅದರಲ್ಲಿ ಎರಡು ದೇವಸ್ಥಾನಗಳು ಅತಿ ವಿಶೇಷವಾದವುಗಳಾಗಿವೆ.

ಕುಬೇರ ಭಂಡಾರಿ ದೇವಸ್ಥಾನ

ಕುಬೇರ ಭಂಡಾರಿ ದೇವಸ್ಥಾನ

ಗುಜರಾತ್‌ನಲ್ಲಿ ನರ್ಮದಾ ನದಿಯ ದಂಡೆಯಲ್ಲಿ ಈ ದೇವಸ್ಥಾನವಿದೆ. ಕುಬೇರನು ತಪ್ಪಸ್ಸನ್ನು ಆಚರಿಸಿದ ಸ್ಥಳ ಇದಾಗಿದೆ ಎಂದಾಗಿ ಹೇಳಲಾಗುತ್ತಿದೆ. ಇದು 2500 ವರ್ಷಗಳಷ್ಟು ಹಳೆಯದಾಗಿದ್ದು ಶಿವ ದೇವರು ಇದನ್ನು ನಿರ್ಮಿಸಿದರು ಎಂಬುದಾಗಿ ಹೇಳಲಾಗಿದೆ.

ಧೋಪೇಶ್ವರ ಮಹಾದೇವ ದೇವಸ್ಥಾನ

ಧೋಪೇಶ್ವರ ಮಹಾದೇವ ದೇವಸ್ಥಾನ

ಶಿವ ಮತ್ತು ಕುಬೇರರ ನಡುವಿನ ಅನ್ಯೋನ್ಯತೆಯನ್ನು ಈ ದೇವಸ್ಥಾನ ಸಂಕೇತಿಸುತ್ತದೆ. ಇಲ್ಲಿರುವ ವಿಗ್ರಹಗಳು ಬಾಂಧವ್ಯವನ್ನು ಪ್ರತಿಪಾದಿಸುತ್ತಿದ್ದು ಇಂತಹ ಅದ್ಭುತ ನೋಟವನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ.

ಕುಬೇರನಿಗಾಗಿ ಮಂತ್ರಗಳು

ಕುಬೇರನಿಗಾಗಿ ಮಂತ್ರಗಳು

ಕುಬೇರನ ಆಶೀರ್ವಾದವನ್ನು ಪಡೆಯಲು ಕೆಲವೊಂದು ಮಂತ್ರಗಳಿವೆ.

ರಾತ್ರಿ ಮತ್ತು ಸಂಜೆ ಈ ಮಂತ್ರಗಳನ್ನು ಪಠಿಸುವುದರಿಂದ ಶುಭವನ್ನು ಪಡೆದುಕೊಳ್ಳಬಹುದಾಗಿದೆ. ಅಕ್ಷಯ ತೃತೀಯ, ಗ್ರಹಣಗಳು, ದೀಪಾವಳಿ, ಧನ್‌ತೇರಾಸ್ ದಿನಗಳಂದು ಈ ಮಂತ್ರಗಳನ್ನು ಪಠಿಸುವುದರಿಂದ ಶುಭವನ್ನು ಕಂಡುಕೊಳ್ಳಬಹುದಾಗಿದೆ.

ಕುಬೇರ ಧನ ಪ್ರಾಪ್ತಿ ಮಂತ್ರ

ಕುಬೇರ ಧನ ಪ್ರಾಪ್ತಿ ಮಂತ್ರ

ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ

ಕುಬೇರ ಅಷ್ಟ-ಲಕ್ಷ್ಮೀ ಮಂತ್ರ

ಕುಬೇರ ಅಷ್ಟ-ಲಕ್ಷ್ಮೀ ಮಂತ್ರ

ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮೀ

ಮಮ ಗೃಹೆ ಧನಂ ಪುರಾಯ ಪುರಾಯ ನಮಃ

ಕುಬೇರ ಮಂತ್ರ

ಕುಬೇರ ಮಂತ್ರ

ಓಂ ಯಕ್ಷಾಯ ಕುಬೇರಾಯ ವೈಶಾರಾವಣ್ಯ ಧನಧಾನ್ಯಧಿಪತಯೇ

ಧನಧಾನ್ಯಸಮ್ರಿದ್ಧಿಹಿಂ ಮೆ ದೇಹಿ ದಪಾಯ ಸ್ವಾಹ

 
English summary

Stories About Lord Kubera: The Hindu God Of Money

Kubera is the King of Yakshas. Yakshas are unattractive and have gnome-like features. They are often depicted as stout creatures with pot-bellies.
Subscribe Newsletter