For Quick Alerts
ALLOW NOTIFICATIONS  
For Daily Alerts

  ಮದುವೆ ವಿಳಂಬವಾಗುತ್ತಿದೆಯೇ? ಇಲ್ಲಿದೆ ಪರಿಹಾರ ಓದಿ....

  By Hemanth
  |

  ಕಾಲ ಬದಲಾದಂತೆ ಕೆಲವೊಂದು ಸಂಪ್ರದಾಯ, ಆಚರಣೆಗಳು ಬದಲಾಗುತ್ತಾ ಹೋಗುತ್ತದೆ. ಅಂತಹ ಸಂಪ್ರದಾಯದಲ್ಲಿ ಮದುವೆ ಕೂಡ ಒಂದಾಗಿದೆ. ಹಿಂದಿನ ಕಾಲದಲ್ಲಿ 18 ದಾಟುತ್ತಿದ್ದಂತೆ ಮದುವೆಯಾಗುತ್ತಾ ಇದ್ದರು. ಆದರೆ ಈಗ ಉನ್ನತ ಶಿಕ್ಷಣ ಅದರ ಬಳಿಕ ವೃತ್ತಿ ಹೀಗೆ ಹಲವಾರು ಕಾರಣಗಳಿಂದಾಗಿ ಮದುವೆ ವಿಳಂಬವಾಗುತ್ತಿದೆ.

  ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮತ್ತು ಕೆಲವೊಂದು ಸಾಮಾಜಿಕ ಬದಲಾವಣೆಗಳು ಇದಕ್ಕೆ ಕಾರಣವೆನ್ನಬಹುದು.ಆದರೆ ಇನ್ನು ಕೆಲವರು ಮದುವೆಯಾಗಲು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಸಂಗಾತಿ ಸಿಗದೆ ಮದುವೆ ವಿಳಂಬವಾಗುತ್ತಲಿದೆ. ಇದಕ್ಕೆ ಕೆಲವೊಂದು ಆಧ್ಯಾತ್ಮಿಕ ಕಾರಣಗಳು ಇದೆ ಎನ್ನಲಾಗುತ್ತಿದೆ.  ಹಿಂದೂ ಮದುವೆ ಶಾಸ್ತ್ರದ ಹಿಂದಿರುವ ವೈಜ್ಞಾನಿಕ ಸತ್ಯಾಸತ್ಯತೆ

  ಹಿಂದೂ ಧರ್ಮವನ್ನು ನಂಬುವುದಾದರೆ ಕೆಲವರಿಗೆ ಮದುವೆ ವಿಳಂಬವಾಗಲು ಪಿತೃ ದೋಷ ಮತ್ತು ಸರ್ಪದೋಷ ಕಾರಣವಾಗಿದೆ. ಮದುವೆ ವಿಳಂಬವಾಗುತ್ತಿದೆ ಎಂದಾದರೆ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಇಲ್ಲಿ ನೀಡಿರುವಂತಹ ಕೆಲವೊಂದು ಆಧ್ಯಾತ್ಮಿಕ ಸೂತ್ರಗಳನ್ನು ಅಳವಡಿಸಿಕೊಳ್ಳುವುದು. ಅದು ಹೇಗೆ ಎಂದು ಮುಂದೆ ತಿಳಿದುಕೊಳ್ಳಿ....... 

   

  ಪಿತೃ ದೋಷ

  ಪಿತೃ ದೋಷ

  ಹಿಂದೂ ಧರ್ಮದಲ್ಲಿ ಮದುವೆ ವಿಳಂಬವಾಗಲು ಪ್ರಮುಖ ಕಾರಣವೆಂದರೆ ಪಿತೃ ದೋಷ. ಇದು ಪೂರ್ವಜರ ಶಾಪವಲ್ಲ. ಅವರು ಮಾಡಿರುವಂತಹ ಕೆಲವೊಂದು ಕೆಟ್ಟ ಕಾರ್ಯಗಳ ಫಲವನ್ನು ಮುಂದಿನ ಪೀಳಿಗೆಯು ಅನುಭವಿಸಬೇಕಾಗುತ್ತದೆ. ಪಿತೃ ದೋಷವನ್ನು ಕಡಿಮೆ ಮಾಡಲು ಒಳ್ಳೆಯ ಕರ್ಮವನ್ನು ಮಾಡಬೇಕು.

  ಪರಿಹಾರ

  ಪರಿಹಾರ

  ಹಣ, ಬಟ್ಟೆ ಹಾಗೂ ಆಹಾರವನ್ನು ಬಡವರು ಅಥವಾ ತೀವ್ರ ಅಗತ್ಯವಿರುವವರಿಗೆ ದಾನಮಾಡಿ. ಶನಿವಾರದಂದು ಅಕ್ಕಿಯ ಉಂಡೆಗಳನ್ನು ಮಾಡಿ ಅದನ್ನು ಗೋವುಗಳು, ಕಾಗೆ ಅಥವಾ ಮೀನಿಗೆ ತಿನ್ನಿಸಬೇಕು.ಪಿತ್ರದೋಷದಿಂದ ಪಾರಾಗಲು ಶಿವನಿಗೆ ಅಭಿಷೇಕ ಮಾಡಬೇಕು. ನೀವಾಗಿಯೇ ಇದನ್ನು ಮಾಡಬಹುದು ಅಥವಾ ಅರ್ಚಕರ ಮೂಲಕ ಇದನ್ನು ಮಾಡಿಸಬಹುದು.

  ಶಿವನ ಲಿಂಗ ಪೂಜೆ....

  ಶಿವನ ಲಿಂಗ ಪೂಜೆ....

  ಶಿವನ ಲಿಂಗವನ್ನು ಪೂಜಿಸಬೇಕು, ಅಭಿಷೇಕಕ್ಕಾಗಿ ಹಾಲು, ಮೊಸರು, ಸೀಯಾಳ, ಹೂಗಳು, ಜೇನುತುಪ್ಪ, ಕಬ್ಬಿಣಹಾಲು ಇತ್ಯಾದಿಗಳನ್ನು ಬಳಸಬಹುದು. ಸೋಮವಾರ ಹಾಗೂ ಶನಿವಾರದಂದು ಶಿವನಿಗೆ ಅಭಿಷೇಕ ಮಾಡಿ.

  ಶನಿದೇವರಿಗೆ ಪೂಜೆ...

  ಶನಿದೇವರಿಗೆ ಪೂಜೆ...

  ಪಿತೃ ದೋಷ ನಿವಾರಣೆ ಹಾಗೂ ಅದರ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಶನಿದೇವರನ್ನು ಪೂಜಿಸುವುದು ಅತ್ಯುತ್ತಮ ವಿಧಾನವಾಗಿದೆ. ಶನಿಯನ್ನು ಒಲೈಸಿಕೊಳ್ಳಲು ಆಂಜನೇಯನನ್ನು ಪ್ರಾರ್ಥಿಸಿ ಅಥವಾ ಓಂ ಸಂ ಶನೈಶ್ಚರಾಯ ನಮಃ ಮಂತ್ರವನ್ನು ಪಠಿಸಿ. ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

  ಸರ್ಪದೋಷ

  ಸರ್ಪದೋಷ

  ಮದುವೆ ವಿಳಂಬವಾಗಲು ಮತ್ತೊಂದು ಕಾರಣವೆಂದರೆ ಹಾವುಗಳ ದೇವ ಸರ್ಪ. ಸರ್ಪಕ್ಕೆ ಹೊಡೆದವರಿಗೆ ಅಥವಾ ಕೊಂದವರಿಗೆ ಶಾಪ ತಟ್ಟಿರುತ್ತದೆ. ಗಾಯಗೊಂಡ ಅಥವಾ ಸತ್ತ ಸರ್ಪದ ದೋಷವು ಜನರನ್ನು ಕಾಡುತ್ತಾ ಇರುತ್ತದೆ. ಸರ್ಪದೋಷವು ಜೀವನದಲ್ಲಿ ಹಲವಾರು ರೀತಿಯ ಅಡೆತಡೆಗಳನ್ನು ಉಂಟುಮಾಡುತ್ತಾ ಇರುತ್ತದೆ. ಯಾವುದೇ ಒಳ್ಳೆಯ ಕೆಲಸ ಮಾಡಲು ಹೋದರೂ ತೊಂದರೆಯಾಗುತ್ತದೆ. ವ್ಯಾಪಾರ ಮತ್ತು ಮದುವೆ ಸರ್ಪದೋಷಕ್ಕೆ ಒಳಗಾಗುತ್ತದೆ. ಸರ್ಪದ ದೋಷದ ಪ್ರಭಾವ ಎಷ್ಟಿದೆ ಎಂದರೆ ಮುಂದಿನ ಜನ್ಮದಲ್ಲಿ ಕೂಡ ಅದು ನಮ್ಮನ್ನು ಕಾಡುತ್ತದೆ ಎಂದು ನಂಬಲಾಗಿದೆ.

  ಪರಿಹಾರ

  ಪರಿಹಾರ

  *ಸುಬ್ರಮಣ್ಯ ದೇವರ(ಕಾರ್ತಿಕೇಯ ಅಥವಾ ಮುರುಗನ್)ನ್ನು ಆರಾಧಿಸಬೇಕು. ಸುಬ್ರಮಣ್ಯನನ್ನು ಸರ್ಪದೋಷ ನಿವಾರಕನೆಂದು ನಂಬಲಾಗಿದೆ.

  *ಹಾವುಗಳ ದೇವರಾಗಿರುವ ಸುಬ್ರಮಣ್ಯನನ್ನು ಪೂಜಿಸಿ ಮತ್ತು ಹಾವುಗಳಿಗೆ ಹಾಲಿಡಿ.

  *ಸುಬ್ರಮಣ್ಯನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಮಾಡಿಸಿಕೊಳ್ಳಿ ಅಥವಾ ಶಿವಲಿಂಗವನ್ನು ಸುತ್ತಿಕೊಂಡಿರುವಂತಹ ಸರ್ಪಗಳಿಗೆ ಹಾಲಿನ ಅಭಿಷೇಕವನ್ನು ಮಾಡಿಸಬಹುದು.

  ಪರಿಹಾರ

  ಪರಿಹಾರ

  ಶಿವ ಹಾಗೂ ಶನಿ ದೇವರನ್ನು ಪೂಜಿಸುವುದರಿಂದ ಸರ್ಪದೋಷ ನಿವಾರಣೆ ಮಾಡಬಹುದು. ಈ ದೋಷಗಳ ನಿವಾರಣೆ ಮಾಡಲು ಆಧ್ಯಾತ್ಮಿಕ ಪರಿಹಾರದೊಂದಿಗೆಈ ಮಂತ್ರವನ್ನು ಪಠಿಸಿ.

  ಮಂತ್ರ....

  ಮಂತ್ರ....

  ಕಾತ್ಯಾಯನಿ ಮಹಾಮಾಯೆ ಮಹಾ ಯೋಗಿನ್ಯದೀಶ್ವರೇ

  ನಂದಗೋಪಸ್ತು ದೇವಿ ಪತಿಮೆಯ ಕುರು ತೆಯ ನಮಃ

  ಈ ಮಂತ್ರವನ್ನು ನಿಮ್ಮ ಇಷ್ಟದೇವರ ಮುಂದೆ ಪ್ರತೀ ದಿನ 27ರಿಂದ 54 ಸಲ ಪಠಿಸಬೇಕು.

  English summary

  Spiritual Remedies For Delayed Marriage

  Many a times, the reason behind the delayed marriage goes back to some problems that can be spiritual too. For example, Pitra dosh or Sarpa dosh can be one of the primary reasons behind delayed marriage. So, here are few spiritual remedies to help you find your life partner at the earliest.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more