For Quick Alerts
ALLOW NOTIFICATIONS  
For Daily Alerts

ನೀವು ಬಯಸಿದ್ದು ಸಿಗಬೇಕಾದರೆ ಶ್ರಾವಣ ಸೋಮವಾರ ವ್ರತ ಕೈಗೊಳ್ಳಬೇಕು

|

ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಶ್ರಾವಣ ಮಾಸ ಬಹಳ ಪವಿತ್ರವಾದ ಮಾಸ. ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷದ 5ನೇ ತಿಂಗಳನ್ನು ಶ್ರಾವಣ ಮಾಸ ಎಂದು ಕರೆಯುತ್ತಾರೆ. ಈ ತಿಂಗಳು ಸಾಮಾನ್ಯವಾಗಿ ಇಂಗ್ಲಿಷ್ ಕ್ಯಾಲೆಂಡರ್‌ನ ಜುಲೈ ತಿಂಗಳ ಅಂತ್ಯದ ಸಮಯದಲ್ಲಿ ಅಥವಾ ಆಗಸ್ಟ್ ತಿಂಗಳ ಆರಂಭದಲ್ಲಿ ಶುರುವಾಗುತ್ತದೆ. ಈ ತಿಂಗಳು ವರ್ಷದಲ್ಲಿಯೇ ಒಮ್ಮೆ ಬರುವ ಪವಿತ್ರ ಮಾಸ ಎಂದು ಪರಿಗಣಿಸಲಾಗುವುದು.

ಶ್ರಾವಣ ಮಾಸದಲ್ಲಿ ಪೂಜೆ, ಹಬ್ಬ ಹರಿದಿನಗಳು, ವ್ರತಗಳು ಹಾಗೂ ಶ್ರಾವಣ ಸೋಮವಾರ ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಎಂದು ಆಚರಿಸುತ್ತಾರೆ. ಅದರಲ್ಲೂ ಶ್ರಾವಣ ಸೋಮವಾರ ಎನ್ನುವುದು ಅತ್ಯಂತ ಪ್ರಸಿದ್ಧವಾದ ಆಚರಣೆ.

ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ಶ್ರಾವಣ ಮಾಸ

ಪುರಾಣಗಳ ಪ್ರಕಾರ ಅಮೃತವನ್ನು ಪಡೆದುಕೊಳ್ಳುವ ಉದ್ದೇಶದಿಂದ ಒಮ್ಮೆ ದೇವತೆಗಳೆಲ್ಲಾ ಸಮುದ್ರ ಮಂಥನ ನಡೆಸಿದರು. ಇದರಿಂದ ವಿಷದ ಉಚ್ಛಾಟನೆ ಮೊದಲಾಯಿತು. ಆಗ ಆ ವಿಷವನ್ನು ಏನು ಮಾಡುವುದು ಎನ್ನುವ ಗೊಂದಲ ಪ್ರಾರಂಭವಾಯಿತು. ಆಗ ಶಿವನು ತಾನು ಕುಡಿದು ಗಂಟಲಿನಲ್ಲಿ ಇಟ್ಟಿಕೊಳ್ಳುವುದಾಗಿ ಹೇಳಿ, ವಿಷವನ್ನು ಕುಡಿದನು. ಈ ಹಿನ್ನೆಲೆಯಲ್ಲೇ ಶಿವನ ಬಣ್ಣ ಹಾಗೂ ಗಂಟಲು ನೀಲಿ ವರ್ಣಕ್ಕೆ ತಿರುಗಿತು. ಜನರು ಅಂದಿನಿಂದ ನೀಲಕಂಠ ಎಂದು ಕರೆದರು. ಗಂಟಲಿನಲ್ಲಿ ಇರಿಸಿಕೊಂಡ ವಿಷದ ಪರಿಣಾಮವನ್ನು ತಗ್ಗಿಸಲು ತಲೆಯಮೇಲೆ ಅರ್ಧಚಂದ್ರನನ್ನು ಇರಿಸಿಕೊಂಡನು ಎಂದು ಹೇಳಲಾಗುತ್ತದೆ.


ಶ್ರಾವಣ ಮಾಸದಲ್ಲಿ ಸೇವಿಸಬಾರದ ತರಕಾರಿಗಳು

ಈ ಭಾರಿ ಅಂದರೆ 2017ರ ಶ್ರಾವಣ ಮಾಸದ ಆರಂಭವು ಜುಲೈ 24 ರಿಂದ ಆರಂಭಗೊಂಡು ಆಗಸ್ಟ್ 21ರಂದು ಮುಗಿಯುತ್ತದೆ. ಶ್ರಾವಣ ಸೋಮವಾರವು ಜುಲೈ 24ರಿಂದಲೇ ಆರಂಭವಾಗುವುದು. ಶ್ರಾವಣ ಸೋಮವಾರದಂದು ಸಾಮಾನ್ಯವಾಗಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಜೊತೆಗೆ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಯಾಕೆ ಈ ವ್ರತವನ್ನು ಕೈಗೊಳ್ಳುತ್ತಾರೆ? ಇದರ ಹಿನ್ನೆಲೆ ಏನು ಎನ್ನುವ ವಿವರಣೆ ಮುಂದಿದೆ ಓದಿ...

ಮನದ ಬಯಕೆಗಳೆಲ್ಲಾ ಈಡೇರುತ್ತವೆ

ಮನದ ಬಯಕೆಗಳೆಲ್ಲಾ ಈಡೇರುತ್ತವೆ

ಶಿವನು ದೇವಲೋಕದಲ್ಲಿಯೇ ಅತ್ಯಂತ ಶಕ್ತಿಶಾಲಿ ದೇವರು ಎಂದು ಪರಿಗಣಿಸಲಾಗಿದೆ. ವಿವಾಹವಾಗದ ಮಹಿಳೆಯರು ವಿವಾಹ ಭಾಗ್ಯ ಕೋರಿಕೊಂಡು, ಕಷ್ಟದಲ್ಲಿರುವವರು ದಾರಿದ್ರ್ಯ ನಿವಾರಣೆಗಾಗಿ ಶ್ರಾವಣ ಸೋಮವಾರದಂದು ವ್ರತವನ್ನು ಕೈಗೊಳ್ಳುತ್ತಾರೆ. ಹೀಗೆ ಆ ವಿಶೇಷ ದಿನದಂದು ಉಪವಾಸದಿಂದ ಶಿವನ ಆರಾಧನೆ ಮಾಡಿದರೆ, ನಮ್ಮ ಸುತ್ತಲಿರುವ ನಕಾರಾತ್ಮಕ ಶಕ್ತಿ ಉಚ್ಚಾಟನೆಗೊಂಡು, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತದೆ. ಮನದ ಬಯಕೆಗಳೆಲ್ಲಾ ಈಡೇರುತ್ತವೆ ಎನ್ನುವ ಪ್ರತೀತಿ ಇದೆ.

ಶ್ರಾವಣ ಮಾಸ ಶಿವನಿಗೆ ಅಚ್ಚುಮೆಚ್ಚು

ಶ್ರಾವಣ ಮಾಸ ಶಿವನಿಗೆ ಅಚ್ಚುಮೆಚ್ಚು

ಶಿವ ದೇವರಿಗೆ ಶ್ರಾವಣ ಮಾಸವು ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಪಾರ್ವತಿ ದೇವಿಯೊಂದಿಗೆ ಶಿವನು ಮತ್ತೆ ಒಂದಾಗಿರುವುದು ಈ ಮಾಸದಂದೇ ಎಂಬ ಪ್ರತೀತಿ ಇದ್ದು ಸ್ತ್ರೀಯರು ತಾವು ಬಯಸಿದವರನ್ನು ಪತಿಯಾಗಿ ಪಡೆದುಕೊಳ್ಳಲು ಈ ಮಾಸದಂದು ಶಿವನನ್ನು ಬೇಡಿಕೊಂಡರೆ ಅವರ ಮನೋಭಿಲಾಷೆ ಈಡೇರುತ್ತದೆ.

 ದಂತಕತೆಗಳ ಪ್ರಕಾರ

ದಂತಕತೆಗಳ ಪ್ರಕಾರ

ದಂತಕತೆಗಳ ಪ್ರಕಾರ ಸತಿಯು ತನ್ನನ್ನು ತಾನು ಅಗ್ನಿಯಲ್ಲಿ ಸುಟ್ಟುಕೊಂಡ ಮೇಲೆ ಪಾರ್ವತಿ ದೇವಿಯಾಗಿ ಮರು ಅವತಾರವನ್ನು ಎತ್ತಿದಳು. ಆಗ ಆಕೆಯು ಶಿವನನ್ನು ಮದುವೆಯಾಗುವ ಸಲುವಾಗಿ ಘೋರ ತಪಸ್ಸನ್ನು ಆಚರಿಸಿದಳು. ಇದರಿಂದ ಸಂತುಷ್ಟನಾದ ಶಿವನು ಪಾರ್ವತಿಯನ್ನು ಮದುವೆಯಾಗಲು ಒಪ್ಪಿದನು.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಶ್ರಾವಣ ಮಾಸದಲ್ಲಿ ಶಿವನು ತನ್ನ ಅತ್ತೆ- ಮಾವನ ಮನೆಗೆ ಭೇಟಿ ನೀಡುವ ಮಾಸ ಇದಾಗಿದೆ. ಅವರು ಅಪರಿಮಿತವಾದ ಪ್ರೀತಿ ಮತ್ತು ವಾತ್ಸಲ್ಯದಿಂದ ಶಿವನನ್ನು ಬರಮಾಡಿಕೊಳ್ಳಲು ಕಾಯುತ್ತಿರುತ್ತಾರಂತೆ. ಈ ಕಾರಣಕ್ಕಾಗಿಯೂ ಸಹ ಶಿವನಿಗೆ ಶ್ರಾವಣ ಮಾಸವೆಂದರೆ ಅತ್ಯಂತ ಪ್ರೀತಿ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಯಾವಾಗ ಶಿವನು ಕೈಲಾಸದಿಂದ ತನ್ನ ಅತ್ತೆ-ಮಾವನನ್ನು ನೋಡಲು ಇಳಿದು ಬರುತ್ತಾನೋ, ಆಗ ಆತನಿಗೆ ಅತ್ಯಂತ ಆದರದ ಸ್ವಾಗತವನ್ನು ನೀಡಲಾಗುತ್ತದೆಯಂತೆ. ಆತ ಭುವಿಗೆ ಇಳಿದು ಬರುವ ಸಂದರ್ಭವನ್ನು ಜಲಾಭಿಷೇಕದ ಮೂಲಕ ಆರಾಧಿಸಲಾಗುತ್ತದೆ. ಆದ್ದರಿಂದಲೇ ಶಿವಾಲಯಗಳಲ್ಲಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು ಇತ್ಯಾದಿಗಳಿಂದ ಅಭಿಷೇಕವನ್ನು ಮಾಡುತ್ತಾರೆ.

ಕ್ಷೀರಸಾಗರ ಮಂಥನ

ಕ್ಷೀರಸಾಗರ ಮಂಥನ

ಕ್ಷೀರಸಾಗರ ಮಂಥನದ ಸಮಯದಲ್ಲಿ ಉದ್ಭವಿಸಿದ ಭಯಾನಕ ಹಾಲಾಹಲದಿಂದ ಎಲ್ಲಾ ಜೀವಿಗಳಿಗು ಅಪಾಯವೊದಗುವ ಸಂದರ್ಭ ಬಂದಾಗ ಶಿವನು ಮಧ್ಯ ಪ್ರವೇಶಿಸಿ ಅದನ್ನು ಸೇವಿಸಿದನು. ಇದನ್ನು ಸೇವಿಸಿದ ನಂತರ ಶಿವನು ಮೂರ್ಛೆ ತಪ್ಪಿದನು. ಆಗ ದೇವತೆಗಳ ಸಲಹೆಯಂತೆ ಬ್ರಹ್ಮದೇವನು ಶಿವನಿಗೆ ಜಲಾಭಿಷೇಕವನ್ನು ಮಾಡಿ, ಹಲವಾರು ಗಿಡಮೂಲಿಕೆಗಳಿಂದ ಶಿವನಿಗೆ ಚಿಕಿತ್ಸೆ ನೀಡಿದನು. ಆಗ ಶಿವನು ಪ್ರಜ್ಞೆಗೆಮರಳಿದನು. ಇದರಿಂದಾಗಿಯೇ ಲಿಂಗದ ಮೇಲೆ ಜಲಾಭಿಷೇಕವನ್ನು ಮಾಡುವ ಪದ್ಧತಿ ಅನುಷ್ಟಾನಕ್ಕೆ ಬಂದಿತು.

English summary

Significance of Shravan Mondays And Interesting Facts

The Shravan Maas is considered by Hindus as the holiest time of the year with may people choosing this period to be a ripe occasion for festivals and other celebrations. Before we get started, let us understand the mythology behind this auspicious phenomenon.
X
Desktop Bottom Promotion