ಬೆಳ್ಳಿ ಕಾಲುಂಗುರದಲ್ಲಿದೆ ಮಹಿಳೆಯರ ಆರೋಗ್ಯದ ರಹಸ್ಯ!

By: manu
Subscribe to Boldsky

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ ಎಂಬ ಸುಮಧುರವಾದ ಹಾಡನ್ನು ನೀವು ಕೇಳಿರುತ್ತೀರಿ. ಈ ಹಾಡಿನಲ್ಲಿ ಕಾಲುಂಗುರದ ಮಹತ್ವವನ್ನು ಸುಂದರವಾಗಿ ಬಿತ್ತರಿಸಲಾಗಿದೆ..... ವಿವಾಹಿತ ಸ್ತ್ರೀಯರು ಬೆಳ್ಳಿಯ ಕಾಲುಂಗುರವನ್ನೇ ಧರಿಸಬೇಕು ಇದು ಹಿಂದೂ ಸಂಪ್ರದಾಯದ ಒಂದು ಅಂಗವಾಗಿದ್ದು ಮಹಿಳೆಯರು ತಮ್ಮ ಎರಡನೆಯ ಕಾಲ್ಬೆರಳಿಗೆ ಈ ಆಭರಣವನ್ನು ಧರಿಸುತ್ತಾರೆ. ಹಿಂದೂ ಧರ್ಮದ ವಿಧಿವಿಧಾನಗಳು-ವಿಜ್ಞಾನ ಲೋಕಕ್ಕೇ ಸವಾಲು!

ಹೆಚ್ಚಿನ ಮಹಿಳೆಯರು ಬೆಳ್ಳಿಯ ಕಾಲುಂಗುರವನ್ನು ತಮ್ಮ ವೈವಾಹಿಕ ಜೀವನದ ಸಂಕೇತವಾಗಿ ತೊಡುತ್ತಾರೆ. ಮುತ್ತೈದೆಯ ಐದು ಮುತ್ತುಗಳಲ್ಲಿ ಈ ಕಾಲುಂಗುರವೂ ಒಂದಾಗಿದ್ದು, ತಮ್ಮ ಸೌಭಾಗ್ಯವೆಂದೇ ಪರಿಗಣಿಸಿ ಸ್ತ್ರೀಯರು ಇದಕ್ಕೆ ಪೂಜೆಯನ್ನು ಮಾಡುತ್ತಾರೆ. ಈಗಿನ ಫ್ಯಾಷನ್ ಯುಗದಲ್ಲಿ ಈ ಕಾಲುಂಗುರಗಳೂ ಆಧುನೀಕತೆಯ ಗಾಳಿಗೆ ಒಳಗಾಗಿ ಮಾರ್ಪಾಡುಗಳನ್ನು ಪಡೆದುಕೊಂಡಿದೆ. ಹೆಚ್ಚಿನ ಮಹಿಳೆಯರು ಚಿನ್ನದ ಕಾಲುಂಗುರವನ್ನೂ ತೊಡುತ್ತಿದ್ದಾರೆ.

ಆದರೆ ಬೆಳ್ಳಿಗೆ ಮಹತ್ವ ಜಾಸ್ತಿ ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಇಂದಿನ ಲೇಖನದಲ್ಲಿ ಕಾಲುಂಗುರದ ಹಿಂದಿರುವ ಮಹತ್ವವನ್ನು ನಾವು ನಿಮಗೆ ತಿಳಿಸಿಕೊಡಲಿದ್ದು ಬೆಳ್ಳಿ ಕಾಲುಂಗರವನ್ನು ಮಹಿಳೆಯರು ಏಕೆ ತೊಟ್ಟುಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳೋಣ....   

ಶೃಂಗಾರ ಪರಿಣಾಮಗಳು

ಶೃಂಗಾರ ಪರಿಣಾಮಗಳು

ತಮ್ಮ ಪಾದದ ಎರಡನೆಯ ಬೆರಳಿಗೆ ವಿವಾಹಿತ ಸ್ತ್ರೀಯರು ಕಾಲುಂಗುರವನ್ನು ತೊಡುತ್ತಾರೆ. ಬೆಳ್ಳಿಯು ವ್ಯಕ್ತಿಯನ್ನು ಉದ್ದೀಪನಗೊಳಿಸುತ್ತದೆ ಮತ್ತು ಮಹಿಳೆಯರಲ್ಲಿ ಲೈಂಗಿಕ ಕಾಮನೆಗಳನ್ನು ಉಂಟುಮಾಡುತ್ತದೆ ಎಂಬುದು ಸಂಪ್ರದಾಯ ಬದ್ಧವಾದ ನಂಬಿಕೆಯಾಗಿದೆ.

ಸ್ತ್ರೀ ಸಂಬಂಧಿ ಸಮಸ್ಯೆಗಳ ನಿವಾರಣೆ

ಸ್ತ್ರೀ ಸಂಬಂಧಿ ಸಮಸ್ಯೆಗಳ ನಿವಾರಣೆ

ಆಯುರ್ವೇದದ ಪ್ರಕಾರ, ಎರಡನೆಯ ಕಾಲ್ಬೆರಳಿನ ನರವು ಗರ್ಭಕೋಶಕ್ಕೆ ಸಂಪರ್ಕವನ್ನು ಪಡೆದುಕೊಂಡಿದೆ. ಮಹಿಳೆಯರು ಈ ಬೆರಳಿಗೆ ಕಾಲುಂಗುರವನ್ನು ತೊಡುವುದರಿಂದ ಅವರ ಬೆರಳು ಮತ್ತು ಗರ್ಭಕೋಶ ಉತ್ತಮ ಸ್ಥಿತಿಯಲ್ಲಿರುತ್ತದೆ. ಇದೇ ರೀತಿಯಾಗಿ ಯಾವುದೇ ಗರ್ಭಕೋಶ ಸಂಬಂಧಿ, ಸ್ತ್ರೀ ಸಂಬಂಧಿ ಸಮಸ್ಯೆಗಳೂ ನಿವಾರಣೆಯಾಗುತ್ತದೆ.

ಋತುಚಕ್ರವನ್ನು ಸುಧಾರಿಸುತ್ತದೆ

ಋತುಚಕ್ರವನ್ನು ಸುಧಾರಿಸುತ್ತದೆ

ಎರಡನೆಯ ಕಾಲ್ಬೆರಳು ಮತ್ತು ಗರ್ಭಕೋಶಕ್ಕೆ ಸಂಪರ್ಕವಿರುವುದರಿಂದ ವಿವಾಹಿತ ಮಹಿಳೆಯರು ಈ ಬೆರಳಿಗೆ ಕಾಲುಂಗುರ ತೊಡುವುದರಿಂದ ಅವರ ಋತುಚಕ್ರವು ಯಾವುದೇ ತೊಡಕಿಲ್ಲದೆ ಸರಾಗವಾಗಲಿದೆ.

ಧನಾತ್ಮಕ ಶಕ್ತಿ

ಧನಾತ್ಮಕ ಶಕ್ತಿ

ಬೆಳ್ಳಿಯು ಒಂದು ಸಮರ್ಥ ವಸ್ತುವಾಗಿದೆ. ಬೆಳ್ಳಿಯನ್ನು ಧರಿಸುವುದರಿಂದ ನಿಮಗೆ ವಿಶ್ವದ ಧನಾತ್ಮಕ ಶಕ್ತಿಯನ್ನು ನೀವು ಪಡೆದುಕೊಳ್ಳಲಿರುವಿರಿ.

ಧನಾತ್ಮಕ ಶಕ್ತಿ

ಧನಾತ್ಮಕ ಶಕ್ತಿ

ಬೆಳ್ಳಿಯ ಕಾಲುಂಗುರವನ್ನು ಧರಿಸುವುದು ನಿಮಗೆ ಧನಾತ್ಮಕ ಶಕ್ತಿಯನ್ನು ಮೇಲ್ಮುಖವಾಗಿ ಹರಿಸಲಿದ್ದು ನಿಮ್ಮ ದೇಹದಿಂದ ಋಣಾತ್ಮಕ ಅಂಶಗಳನ್ನು ಬೆರಳಿನ ಮೂಲಕ ಭೂಮಿಗೆ ಕಳುಹಿಸಲಿದೆ. ನಿಮ್ಮ ದೇಹದಲ್ಲಿ ಬೆಳ್ಳಿಯ ಆಭರಣವನ್ನು ಧರಿಸುವುದು ಉತ್ತಮ ಎಂಬುದಾಗಿ ಆಯುರ್ವೇದ ತಿಳಿಸುತ್ತದೆ.

ನಿಮ್ಮ ಹೃದಯವನ್ನು ಶಕ್ತಿಶಾಲಿಯನ್ನಾಗಿಸುತ್ತದೆ

ನಿಮ್ಮ ಹೃದಯವನ್ನು ಶಕ್ತಿಶಾಲಿಯನ್ನಾಗಿಸುತ್ತದೆ

ಗರ್ಭಕೋಶದ ಮೂಲಕ ಎರಡನೆಯ ಬೆರಳಿನ ನರವು ನಿಮ್ಮ ಹೃದಯಕ್ಕೆ ಸಂಪರ್ಕವನ್ನು ಪಡೆದುಕೊಂಡಿದೆ. ನಿಮ್ಮ ಹೃದಯಕ್ಕೆ ಧನಾತ್ಮಕ ಅಂಶವನ್ನು ಕಳುಹಿಸಿ ಋಣಾತ್ಮಕ ಅಂಶವನ್ನು ಹೊರಹಾಕಲು ವಿವಾಹಿತ ಸ್ತ್ರೀಯರು ಎರಡನೆಯ ಬೆರಳಿಗೆ ಕಾಲುಂಗುರವನ್ನು ಧರಿಸುವುದು ಉತ್ತಮವಾಗಿದೆ.

 
English summary

Reasons Why Women Should Wear Silver Toe Ring

You will be surprised to know that wearing silver ring is not only common among the Hindus, but also among the Muslim married women. It is true that today wearing toe rings has become a fashion statement; however, there are certain traditional beliefs behind it. Have a look.
Subscribe Newsletter