For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದ ವಿಧಿವಿಧಾನಗಳು-ವಿಜ್ಞಾನ ಲೋಕಕ್ಕೇ ಸವಾಲು!

By Manu
|

ಸಹಸ್ರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಿಂದೂಧರ್ಮದ ಹಲವು ಆಚರಣೆಗಳನ್ನು ಭಕ್ತರು ಆಚರಿಸಲು ಧಾರ್ಮಿಕ ಕಟ್ಟಳೆಯೇ ಕಾರಣವಾಗಿದ್ದರೂ ಹೆಚ್ಚಿನವರಿಗೆ ಇದರ ವೈಜ್ಞಾನಿಕ ಮಹತ್ವ ತಿಳಿದಿಲ್ಲ. ಸಾಮಾನ್ಯವಾಗಿ ಭಾರತೀಯರಾದ ನಾವು ನಮ್ಮ ಹಿರಿಯರು ನಡೆಸಿಕೊಂಡು ಬಂದ ವಿಧಿಗಳನ್ನು ಹಾಗೇ ಅನುಸರಿಸಿಕೊಂಡು ಮುಂದುವರೆಯುತ್ತೇವೆ. ಇದರ ಮಹತ್ವವನ್ನು ತಿಳಿದುಕೊಳ್ಳಲು ಯತ್ನಿಸುವುದಿಲ್ಲ. ಬಿಸಿರಕ್ತದ ಕೆಲವರು ಈ ವಿಧಿಗಳ ಯತಾರ್ಥತೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವುದುಂಟು. ಜಗತ್ತನ್ನೇ ತನ್ನತ್ತ ಸೆಳೆಯುವ ಹಿಂದೂ ಧರ್ಮದ ಸ೦ಪ್ರದಾಯ

ಇಂದಿನ ವಿಜ್ಞಾನ ಯುಗದಲ್ಲಿ ಪುರಾಣದ ಈ ವಿಧಿಗಳ ಬಗ್ಗೆ ಯಾವುದೇ ಒಲವನ್ನು ಇವರು ತೋರುವುದಿಲ್ಲ. ಇದನ್ನು ಆಚರಿಸುತ್ತಿರುವವರೂ ಸಹಾ ಇದರ ಮಹತ್ವವನ್ನು ಅರಿಯದೇ ಒಂದು ಗೊಡ್ಡು ಸಂಪ್ರದಾಯದಂತೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೆ ಈ ವಿಧಿಗಳು ಕೇವಲ ಮೂಢನಂಬಿಕೆಯೇ?

ಈ ಪ್ರಶ್ನೆಯನ್ನು ವಿಜ್ಞಾನಿಗಳಿಗೆ ಕೇಳಿದರೆ ವೈಜ್ಞಾನಿಕವಾಗಿ ಮಹತ್ವ ಪಡೆದಿರುವ ವಿಧಿಗಳ ಬಗ್ಗೆ ತಿಳಿಸುತ್ತಾರೆಯೇ ಹೊರತು ತಮ್ಮ ಸ್ವಾರ್ಥಸಾಧನೆಗಾಗಿ ಕೆಲವರು ಇಲ್ಲದ ವಿಧಿಗಳನ್ನು ಹುಟ್ಟಿಸಿದ್ದುದನ್ನಲ್ಲ. ಇಂದಿನ ಲೇಖನದಲ್ಲಿ ಹಿಂದೂ ಧರ್ಮೀಯರು ಅನುಸರಿಸಿಕೊಂಡು ಬರುತ್ತಿರುವ ವಿಧಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

ಗ್ರಹಣದ ಬಗ್ಗೆ ಭಯ

ಗ್ರಹಣದ ಬಗ್ಗೆ ಭಯ

ಗ್ರಹಣದ ಸಮಯದಲ್ಲಿ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಯಾರಿಗೂ ಮನೆಯಿಂದ ಹೊರಹೋಗುವ ಅವಕಾಶವಿಲ್ಲ. ಅಷ್ಟೇ ಅಲ್ಲ, ಬರಿಗಣ್ಣಿನಿಂದನೋಡಲೂ ಅವಕಾಶವಿಲ್ಲ. ಅದರಲ್ಲೂ ಗರ್ಭಿಣಿಯರು

ಮನೆಯೊಳಗೇ, ಸೂರ್ಯನ ಬೆಳಕೂ ಬೀಳದಂತಹ ಸ್ಥಳದಲ್ಲಿರಬೇಕು. ಏಕೆಂದರೆ ಗ್ರಹಣದ ಬಿಸಿಲು ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು. ಈ ಸಮಯದಲ್ಲಿ ಅಡುಗೆ ಮಾಡುವುದು, ಆಹಾರ ಸೇವಿಸುವುದೂ ನಿಷಿದ್ಧ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗ್ರಹಣದ ಬಗ್ಗೆ ಭಯ

ಗ್ರಹಣದ ಬಗ್ಗೆ ಭಯ

ಕೆಲವು ಕಡೆಗಳಲ್ಲಿ ಪ್ರತಿ ಆಹಾರದ ಪಾತ್ರೆಯ ಮೇಲೆ ತುಳಸಿ ಎಲೆಗಳನ್ನು ಇಡಲಾಗುತ್ತದೆ. ಇಂದು ವಿಜ್ಞಾನ ಗ್ರಹಣದ ಸಮಯದಲ್ಲಿ ಎದುರಾಗುವ ಸೂರ್ಯನ ಇತರ ಸಮಯದಲ್ಲಿ ಇರದಿದ್ದ ಅಗೋಚರ ಕಿರಣಗಳನ್ನು ಬೀಳುವಂತೆ ಮಾಡಿ ಆರೋಗ್ಯ, ಆಹಾರವನ್ನು ಹಾಳುಮಾಡಬಹುದು ಎಂದು ಸಾಬೀತು ಪಡಿಸಿದೆ.

ಉತ್ತರದ ಕಡೆ ತಲೆ ಹಾಕಿ ಮಲಗಬೇಡಿ

ಉತ್ತರದ ಕಡೆ ತಲೆ ಹಾಕಿ ಮಲಗಬೇಡಿ

ಹಿಂದೂ ಧರ್ಮದ ಪ್ರಕಾರ ಉತ್ತರ ಎಂದರೆ ಭೂತದ ಕಡೆಯಾಗಿದ್ದು ಈ ಕಡೆಗೆ ತಲೆ ಹಾಕಿ ಮಲಗಬಾರದು. ವಾಸ್ತವವಾಗಿ ನಮ್ಮ ದೇಹದಲ್ಲಿಯೂ ಆಯಸ್ಕಾಂತೀಯ ಅಂಶವಿದ್ದು ಭೂಮಿಯ ಆಯಸ್ಕಾಂತೀಯ ಶಕ್ತಿಯೊಂದಿಗೆ ಮಿಲನಗೊಳ್ಳಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉತ್ತರದ ಕಡೆ ತಲೆ ಹಾಕಿ ಮಲಗಬೇಡಿ

ಉತ್ತರದ ಕಡೆ ತಲೆ ಹಾಕಿ ಮಲಗಬೇಡಿ

ದೇಹದ ಆಯಸ್ಕಾಂತದ ಪ್ರಕಾರ ತಲೆಯಲ್ಲಿ ಉತ್ತರಭಾಗವಿದೆ. ಈಗ ಉತ್ತರ ಮತ್ತು ಉತ್ತರ ಆಯಸ್ಕಾಂತೀಯ ಶಕ್ತಿಗಳು ಎದುರಾದರೆ ಪರಸ್ಪರ ವಿರರ್ಷಿತಗೊಳ್ಳುತ್ತವೆ. ಇದು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಅಪಶಕುನವೇ?

ರಾತ್ರಿ ಹೊತ್ತು ಅರಳಿ ಮರದ ಕೆಳಗೆ ಮಲಗಬಾರದು

ರಾತ್ರಿ ಹೊತ್ತು ಅರಳಿ ಮರದ ಕೆಳಗೆ ಮಲಗಬಾರದು

ರಾತ್ರಿ ಹೊತ್ತು ಅವಳಿ ಮರದ ಕೆಳಗೆ ಮಲಗಿದರೆ ಭೂತಗಳು ಆವರಿಸುತ್ತವೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಆದರೆ ವಾಸ್ತವವಾಗಿ ಅರಳಿ ಮರ ಬಿಡಿ, ಯಾವುದೇ ಮರದ ಕೆಳಗೆ ಮಲಗಿದರೂ ರಾತ್ರಿಹೊತ್ತು ಸಸ್ಯಗಳು ದ್ಯುತಿಸಂಶ್ಲೇಷಣೆಯ ವಿರುದ್ಧ ಕ್ರಿಯೆ ಅಂದರೆ ಆಮ್ಲಜನಕವನ್ನು ಪಡೆದು ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಾತ್ರಿ ಹೊತ್ತು ಅರಳಿ ಮರದ ಕೆಳಗೆ ಮಲಗಬಾರದು

ರಾತ್ರಿ ಹೊತ್ತು ಅರಳಿ ಮರದ ಕೆಳಗೆ ಮಲಗಬಾರದು

ಇದು ನಮಗೆ ವಿಷಾನಿಲವಾಗಿದ್ದು ರಾತ್ರಿ ಮರದ ಕೆಳಗೆ ಮಲಗಿದವರ ಉಸಿರಿನ ಮೂಲಕ ಮೆದುಳಿಗೆ ತಲುಪಿದಾಗ ಮೆದುಳಿನಲ್ಲಿ ಚಿತ್ರವಿಚಿತ್ರ ಅನುಭವಗಳಾಗುತ್ತದೆ.

ಲಿಂಬೆ ಮತ್ತು ಹಸಿಮೆಣಸಿನ ಹಾರ

ಲಿಂಬೆ ಮತ್ತು ಹಸಿಮೆಣಸಿನ ಹಾರ

ಹೊಸ ವಾಹನ, ಮನೆ, ಆಸ್ತಿಗಳಿಗೆ ಲಿಂಬೆಹಣ್ಣು ಮತ್ತು ಮೆಣಸಿನ ಹಾರವನ್ನು ಪೋಣಿಸಿ ಹಾಕಲಾಗುತ್ತದೆ. ಇದರಿಂದ ಕೆಟ್ಟ ದೃಷ್ಟಿಯನ್ನು ತಡೆದಂತಾಗುತ್ತದೆ ಎಂದು ಹಿಂದೂ ಧರ್ಮ ತಿಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆ ಮತ್ತು ಹಸಿಮೆಣಸಿನ ಹಾರ

ಲಿಂಬೆ ಮತ್ತು ಹಸಿಮೆಣಸಿನ ಹಾರ

ವಾಸ್ತವವಾಗಿ ಲಿಂಬೆ ಮತ್ತು ಮೆಣಸು ಎರಡರಲ್ಲಿಯೂ ಅತ್ಯುತ್ತಮ ಔಷಧೀಯ ಗುಣಗಳಿದ್ದು ಇವುಗಳನ್ನು ಹೆಚ್ಚು ಹೆಚ್ಚಾಗಿ ಬಳಸಲು ಪ್ರೇರಣೆ ನೀಡಲೆಂದೇ ನಮ್ಮ ಹಿರಿಯರು ಈ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಿರಬಹುದು. ಲಿಂಬೆಹಣ್ಣಿನ ಅಲೌಕಿಕ ಶಕ್ತಿ: ಮಾಟಮಂತ್ರದ ರಹಸ್ಯ ಬಯಲು!

ಪ್ರಯಾಣಕ್ಕೂ ಮುನ್ನ ಮೊಸರು ಮತ್ತು ಸಕ್ಕರೆ ಸೇವಿಸುವುದು

ಪ್ರಯಾಣಕ್ಕೂ ಮುನ್ನ ಮೊಸರು ಮತ್ತು ಸಕ್ಕರೆ ಸೇವಿಸುವುದು

ಸಾಮಾನ್ಯವಾಗಿ ಮನೆಯ ಹೊಸ್ತಿಲನ್ನುತುಳಿದು ಹೊರಗೆ ಹೋಗುವ ಮುನ್ನ ವ್ಯಕ್ತಿಗೆ ಕೊಂಚ ಮೊಸರು ಮತ್ತು ಜೇನು ಅಥವಾ ಸಕ್ಕರೆ ತಿನ್ನಿಸುವುದು ವಾಡಿಕೆ. ಇದರಿಂದ ಹೋಗಲಿರುವ ಕೆಲಸ ಶುಭವಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರಯಾಣಕ್ಕೂ ಮುನ್ನ ಮೊಸರು ಮತ್ತು ಸಕ್ಕರೆ ಸೇವಿಸುವುದು

ಪ್ರಯಾಣಕ್ಕೂ ಮುನ್ನ ಮೊಸರು ಮತ್ತು ಸಕ್ಕರೆ ಸೇವಿಸುವುದು

ವಾಸ್ತವವಾಗಿ ಮೊಸರಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನುಗಳು ಮತ್ತು ಕೊಂಚ ಸಕ್ಕರೆ ಇದ್ದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಇದರಿಂದ ಮುಂದಿನ ಪ್ರಯಾಣಕ್ಕೆ ಅಗತ್ಯವಾದ ಶಕ್ತಿ ಲಭ್ಯವಾಗುತ್ತದೆ. ಅಲ್ಲದೇ ಇದರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಶವಸಂಸ್ಕಾರದ ಬಳಿಕ ಜಳಕ

ಶವಸಂಸ್ಕಾರದ ಬಳಿಕ ಜಳಕ

ಸ್ಮಶಾನಕ್ಕೆ ಹೋಗಿ ಬಂದ ಬಳಿಕ ಅಲ್ಲಿನ ಆತ್ಮಗಳು ಅಲ್ಲಿದ್ದವರನ್ನು ಆವರಿಸಿಕೊಳ್ಳುತ್ತವೆ ಎಂದು ಹಿಂದೂಗಳು ನಂಬುತ್ತಾರೆ. ವಾಸ್ತವವಾಗಿ ಸ್ಮಶಾನದಲ್ಲಿ ಮೃತಶರೀರಗಳು ಕೊಳೆಯುವ ಅಥವಾ ಸುಟ್ಟ ಬಳಿಕ ಉಳಿಯುವ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಅತಿ ಹೆಚ್ಚಾಗಿ ಬೆಳೆದುಬಿಡುತ್ತವೆ. ಇದು ಸ್ಮಶಾನಕ್ಕೆ ಆಗಮಿಸಿದರವನ್ನು ಸುಲಭವಾಗಿ ಆವರಿಸುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶವಸಂಸ್ಕಾರದ ಬಳಿಕ ಜಳಕ

ಶವಸಂಸ್ಕಾರದ ಬಳಿಕ ಜಳಕ

ಆದ್ದರಿಂದ ಸ್ಮಶಾನದಿಂದ ಹಿಂದಿರುಗಿದ ವ್ಯಕ್ತಿಗಳು ಯಾರನ್ನೂ ಭೇಟಿಯಾಗುವ ಮುನ್ನ ಅಥವಾ ಮುಟ್ಟುವ ಮುನ್ನ ಸ್ನಾನ ಮಾಡುವುದು ನೈರ್ಮಲ್ಯದ ದೃಷ್ಟಿಯಿಂದಲೂ ಅಗತ್ಯವಾದ ಕ್ರಮವಾಗಿದೆ. ಅಂತ್ಯ ಸಂಸ್ಕಾರದಲ್ಲಿ ಮಹಿಳೆಯರಿಗೆ ಮಾತ್ರ ನಿರ್ಬಂಧ ಸರಿಯೇ?

English summary

Amazing Scientific Reasons Behind Hindu Practices

Call it superstition, call it practice, call it another way to create fear in people's mind, certain Hindu practices are followed meticulously till date since time immemorial. Most of us tend to question the necessity of these practices and wonder how is it relevant in the modern world. Most of us tend to dismiss some of these traditions as superstitions which exist as part of the old world order. But are all Hindu traditions, superstitions? You will be surprised to know the answer.Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more