Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹಿಂದೂ ಸಂಸ್ಕೃತಿಯ ಪ್ರತೀಕ -ಹಣೆಯ ಮೇಲಿನ ಸಿಂಧೂರ
ಹಿಂದಿನ ಕಾಲದ ಭಾರತೀಯ ಮಹಿಳೆಯರ ಹಣೆಯನ್ನು ನೋಡಿದರೆ ದೊಡ್ಡದಾದ ಕುಂಕುಮದ ಬೊಟ್ಟು ಕಾಣಸಿಗುವುದು. ಇಂದಿನ ಯುವತಿಯರು ಇದನ್ನು ನೋಡಿ ನಗಬಹುದು. ಆದರೆ ಖಂಡಿತವಾಗಿಯೂ ಮಹಿಳೆಯರು ಭಾರತೀಯ ಸಂಸ್ಕೃತಿ ಪ್ರತೀಕವಾಗಿ ಹಣೆಗೆ ದೊಡ್ಡ ಕುಂಕುಮದ ಬೊಟ್ಟನ್ನಿಡುತ್ತಾರೆ. ಇದು ಇಂದಿನ ಪೀಳಿಗೆಯ ಮಹಿಳೆಯರಲ್ಲಿ ಕಣ್ಮರೆಯಾಗುತ್ತಿದೆ. ಇಂತಹ ಕುಂಕುಮದ ಬೊಟ್ಟನ್ನು ಹಿಂದಿನಿಂದಲೂ ಭಾರತೀಯ ಮಹಿಳೆಯರು ಹಣೆಗೆ ಇಡುತ್ತಲಿದ್ದರು.
ಅದರಲ್ಲೂ ವಿವಾಹಿತ ಮಹಿಳೆಯರು ಇದನ್ನು ಕಡ್ಡಾಯವಾಗಿ ಇಡಲೇಬೇಕಿತ್ತು. ಸಿಂಧೂರ ಅಥವಾ ಕುಂಕುಮದ ಬೊಟ್ಟು ಇಡುವುದು ಕೇವಲ ಭಾರತೀಯ ಸಂಸ್ಕೃತಿ ಮಾತ್ರವಲ್ಲ, ಇದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳು ಕೂಡ ಇದೆ. ಭಾರತದಲ್ಲಿ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಕುಂಕುಮ ಇಡುವಂತಹ ಸಂಸ್ಕೃತಿಯ ಬದಲಾಗುತ್ತಿರುತ್ತದೆ. ಆದರೆ ಪೌರಾಣಿಕವಾಗಿ ಇದಕ್ಕೆ ಕೆಲವು ಕಾರಣಗಳು ಇವೆ. ಭಾರತದಲ್ಲಿ ವಿವಾಹಿತ ಮಹಿಳೆಯರಿಗೆ ಭೂಷಣ ಮಾತ್ರವಲ್ಲದೆ ವೈಜ್ಞಾನಿಕವಾಗಿ ಕೆಲವು ಕಾರಣಗಳನ್ನು ಈ ಲೇಖನ ಮೂಲಕ ತಿಳಿದುಕೊಳ್ಳುವ....

ಫಲವತ್ತತೆಯ ಪ್ರತ
ಭಾರತದಲ್ಲಿ ಸಮಾಜದ ಏಕತೆ ಬರುವುದು ಕುಟುಂಬದಿಂದ. ಅದರಲ್ಲೂ ಕುಟುಂಬದಲ್ಲಿ ಮಹಿಳೆಯ ಫಲವತ್ತತೆಯು ತುಂಬಾ ಮುಖ್ಯವಾಗಿರುವುದು. ಫಲವತ್ತತೆಯ ಸಂಕೇತವು ಋತುಚಕ್ರದ ರಕ್ತದ ಬಣ್ಣದ್ದಾಗಿದೆ. ರಕ್ತದ ಬಣ್ಣವು ಕೆಂಪು. ಇದರಿಂದಾಗಿ ಫಲವತ್ತತೆಯ ಬಣ್ಣ ಕೂಡ ಕೆಂಪು. ಮಹಿಳೆಗೆ ತನ್ನೊಳಗೆ ಮತ್ತೊಂದು ಜೀವವನ್ನು ಹೊಂದುವ ಶಕ್ತಿಯಿದೆ. ಜೀವ ನೀಡುವಂತಹ ತನ್ನ ಪಾತ್ರಕ್ಕೆ ಮಹಿಳೆಯು ಧನ್ಯವಾದ ಅರ್ಪಿಸಲು ಸಿಂಧೂರವಿಡಲಾಗುತ್ತದೆ. ಆಕೆಗೆ ತನ್ನ ಜವಾಬ್ದಾರಿಗಳ ಬಗ್ಗೆ ಕೂಡ ಅರಿವಿರುವುದು.

ಆಜ್ಞ ಚಕ್ರ ರಕ್ಷಿಸುವುದು
ದೇಹದಲ್ಲಿ ಏಳು ಕಡೆಗಳಲ್ಲಿ ಚಕ್ರ ಅಥವಾ ಕೇಂದ್ರವಿದೆಯೆಂದು ನಮ್ಮ ಯೋಗ ಚಿಕಿತ್ಸೆಯು ಹೇಳುತ್ತದೆ. ಈ ಚಕ್ರಗಳು ಶಕ್ತಿಯ ಕೇಂದ್ರಗಳೆಂದು ಪರಿಗಣಿಸಲಾಗಿದೆ ಮತ್ತು ಇದೇ ಕೇಂದ್ರದಲ್ಲಿ ಅಂತಃಸ್ರಾವಕ ಗ್ರಂಥಿಯು ನೆಲೆನಿಂತಿದೆ. ಈ ಚಕ್ರಗಳು ಮೂಲಾಧಾರ ಚಕ್ರ(ಮೂಲ ಚಕ್ರ), ಸ್ವಾಧಿತಾನ್(ತ್ರಿಕಾಸ್ತಿ), ಮನಿಪುರ(ಸೌರ ಪ್ಲೆಕ್ಸಸ್), ಅನಾಹತ್(ಹೃದಯ), ವಿಶುದ್ಧ(ಗಂಟಲು), ಅಜ್ಞಾ(ಹಣೆ) ಮತ್ತು ಸಹಸ್ರರಾ(ಕಿರೀಟ). ಅಜ್ಞಾ ಚಕ್ರವು ತುಂಬಾ ಮಹತ್ವದ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಮುಖವು ತೆರೆದಿರುವ ಕಾರಣದಿಂದ ಸುಲಭವಾಗಿ ಶಕ್ತಿಯು ಹಾಳಾಗುವುದು. ಇದನ್ನು ರಕ್ಷಿಸುವ ಸಲುವಾಗಿ ಸಿಂಧೂರ ಹಚ್ಚಲಾಗುತ್ತದೆ. ಇದು ಮಹಿಳೆಯರು ಹಾಗೂ ಪುರುಷರಿಗೆ ಅನ್ವಯವಾಗುವುದು.

ಆಯುರ್ವೇದ ಪ್ರಕಾರ ಮಹತ್ವ
ಹಲವಾರು ಶತಮಾನಗಳಿಂದಲೂ ಆಯುರ್ವೇದವನ್ನು ಭಾರತದಲ್ಲಿ ಒಂದು ಚಿಕಿತ್ಸೆ ಮತ್ತು ಆರೋಗ್ಯ ಕ್ರಮವಾಗಿ ಅಳವಡಿಸಿಕೊಂಡು ಬರಲಾಗುತ್ತಾ ಇದೆ. ಆಯುರ್ವೇದದ ಪ್ರಕಾರ ಅರಶಿನ, ಲಿಂಬೆ ಮತ್ತು ಪಾದರಸದ ಮಿಶ್ರಣವು ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವುದು ಮತ್ತು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುವುದು. ಈ ಮಿಶ್ರಣವನ್ನೇ ಕುಂಕುಮವೆಂದು ಕರೆಯಲಾಗುತ್ತದೆ. ಇದನ್ನು ಹಣೆಗೆ ಹಚ್ಚಲಾಗುತ್ತದೆ. ಭಾರತೀಯರು, ಅದರಲ್ಲೂ ಉತ್ತರ ಭಾರತ ಮತ್ತು ಬಿಹಾರದ ಮಹಿಳೆಯರು ಕೂದಲು ಇಬ್ಭಾಗವಾಗುವ ಹಣೆಯ ಭಾಗಕ್ಕೆ ದೊಡ್ಡ ಸಿಂಧೂರವನ್ನಿಡುವರು. ಇದನ್ನೇ ಸಹಸ್ರರಾ ಅಥವಾ ಕಿರೀಟ ಚಕ್ರವೆನ್ನುವರು.

ಇದು ಭಾರತೀಯ ಸಂಸ್ಕೃತಿಯ ಪ್ರತೀಕ
ಭಾರತೀಯರು ಒಂದಲ್ಲಾ ಒಂದು ರೀತಿಯಲ್ಲಿ ಹಣೆಗೆ ಸಿಂಧೂರವನ್ನು ಇಟ್ಟುಕೊಳ್ಳುವಂತಹ ಸಂಪ್ರದಾಯವನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ವಿವಾಹಿತ ಮಹಿಳೆಯರು ದಿನನಿತ್ಯ ಹಣೆಗೆ ಸಿಂಧೂರವನ್ನಿಡುವರು. ಸಿಂಧೂರವನ್ನಿಡದ ಮಹಿಳೆಯರು ಅಪೂರ್ಣವಾಗುವರು. ವಿವಾಹಿತ ಮಹಿಳೆಯರು ಇನ್ನೊಬ್ಬ ಮಹಿಳೆಗೆ ಸಿಂಧೂರವನ್ನು ನೀಡುವುದು ತುಂಬಾ ಶುಭ ಹಾಗೂ ಅವರಿಗೆ ತೋರಿಸುವ ಗೌರವವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ ಪ್ರತಿಯೊಂದು ಹಬ್ಬದ ವೇಳೆ ವಿವಾಹಿತ ಮಹಿಳೆಯರು ಬೇರೊಂದು ಮನೆಗೆ ಭೇಟಿ ನೀಡುವಾಗ ಅವರಿಗೆ ಕುಂಕುಮ ಹಾಗೂ ಅರಶಿನ ನೀಡಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ವಿಜಯದಶಮಿ ವೇಳೆ ಸಿಂಧೂರ ಖೇಲಾ ಎನ್ನುವ ಆಚರಣೆಯಿದೆ. ಈ ವೇಳೆ ಮಹಿಳೆಯರು ದುರ್ಗಾ ದೇವಿಗೆ ಸಿಂಧೂರ ಹಚ್ಚಲಾಗುತ್ತದೆ ಮತ್ತು ಬಳಿಕ ಇದನ್ನು ಪ್ರತಿಯೊಬ್ಬ ಮಹಿಳೆಗೂ ನೀಡಲಾಗುತ್ತದೆ. ಮಹಿಳೆಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆದಿಶಕ್ತಿ ಎಂದು ಇದರ ಅರ್ಥವಾಗಿದೆ.

ದೇವತೆಗಳಿಗೆ ಅರ್ಪಣೆ
ವಧುವನ್ನು ಪ್ರತಿನಿಧಿಸುವಂತಹ ದುರ್ಗೆ, ತಾಯಿ ಹಾಗೂ ಪತ್ನಿಯೆಂದು ಕರೆಯಲ್ಪಡುವ ಮತ್ತೊಂದು ಆದಿಶಕ್ತಿ ಗೌರಿ, ಧನ ಹಾಗೂ ಸಮೃದ್ಧಿ ನೀಡುವ ಮಾತೆ ಲಕ್ಷ್ಮೀ ದೇವಿಯನ್ನು ಪೂಜಿಸುವ ವೇಳೆ ಕುಂಕುಮವನ್ನು ಅರ್ಪಿಸಲಾಗುತ್ತದೆ. ಇದನ್ನೇ ದೇವಿಯ ಪ್ರಸಾಧವಾಗಿ ನೀಡಲಾಗುತ್ತದೆ. ದೇವಿಗೆ ಅರ್ಪಣೆ ಮಾಡಿದ ಬಳಿಕ ಇತರ ಮಹಿಳೆಯರಿಗೆ ಇದನ್ನು ನೀಡಲಾಗುವುದು. ದುರ್ಗೆ, ಲಕ್ಷ್ಮೀ ಮತ್ತು ವಿಷ್ಣುವನ್ನು ಪೂಜಿಸುವ ದೇವಾಲಯಗಳಲ್ಲಿ ಸಿಂಧೂರ ಅರ್ಪಿಸಲಾಗುತ್ತದೆ ಮತ್ತು ಭಕ್ತರಿಗೆ ನೀಡಲಾಗುತ್ತದೆ.



Click it and Unblock the Notifications