For Quick Alerts
ALLOW NOTIFICATIONS  
For Daily Alerts

  ಹನುಮನು ಕೋತಿಯಾಗಿ ಹುಟ್ಟಿರುವುದಕ್ಕೆ ಹಲವಾರು ದೃಷ್ಟಾಂತಗಳಿವೆ

  By Manu
  |

  ಹಿಂದೂ ಧರ್ಮದಲ್ಲಿ ಹನುಮಂತನನ್ನ ಹೆಚ್ಚು ಪ್ರಬಲ ಮತ್ತು ಶಕ್ತಿಶಾಲಿ ದೇವರು ಎಂದು ಬಿಂಬಿಸಲಾಗಿದೆ. ಹನುಮ ಎಂದರೆ ಶಕ್ತಿಯ ಪ್ರತಿಬಿಂಬವಾಗಿದೆ. ಹನಮನು ಬೇರೆ ಬೇರೆ ಹೆಸರುಗಳನ್ನು ಹೊಂದಿದ್ದು ವಾಯು ಪುತ್ರ, ಪವನಪುತ್ರ ಮೊದಲಾದ ಹೆಸರುಗಳನ್ನು ಪಡೆದು ಕೊಂಡಿದ್ದಾರೆ. ಬ್ರಹ್ಮಚಾರಿ ಎಂಬ ಹೆಸರೂ ಇವರಿಗಿದೆ. ಹನಮನು ಕೋತಿಯಾಗಿ ಏಕೆ ಹುಟ್ಟಿದರು ಎಂಬುದಕ್ಕೆ ಹಲವಾರು ಕಥೆಗಳಿವೆ.

  ಏಳು ಚಿರ೦ಜೀವಿಗಳ ಪೈಕಿ ಹನುಮನೂ ಓರ್ವನಾಗಿದ್ದು ಈತನು ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತನು. ಲ೦ಕಾಧಿಪತಿಯಾದ ರಾವಣನ ಬ೦ಧನದಿ೦ದ ಸೀತಾಮಾತೆಯು ಬಿಡುಗಡೆಗೊ೦ಡು, ಆಕೆಯು ಶ್ರೀ ರಾಮನನ್ನು ಸೇರುವ೦ತಾಗುವಲ್ಲಿ ಹನುಮನ ಪಾತ್ರವು ಅಪಾರವಾದುದು. ಹನುಮನ ಕಥಾನಕವು ನಮ್ಮೊಳಗೆಯೇ ಇರಬಹುದಾದ ಆತ್ಮಶಕ್ತಿಯ ಕುರಿತು ಅರಿಯುವ೦ತಾಗಲು ಸಹಕಾರಿಯಾಗಿದೆ.

  Hanuman

  ಸಕಲ ದೇವ ದೇವತೆಗಳ ಪೈಕಿ ಭಗವಾನ್ ಹನುಮ೦ತನು ಚಿರ೦ಜೀವಿಯು. ಹನುಮನೆ೦ದರೆ ಆತನು ವಾನರ ಹಾಗೂ ಮಾನವ ಇವರೀರ್ವರ ಮಿಶ್ರ ಸ್ವರೂಪನು. ಯಾವುದೇ ಓರ್ವ ಬಡ ವ್ಯಕ್ತಿಯು ಭಗವಾನ್ ಹನುಮನನ್ನು ಆರಾಧಿಸಿದ್ದೇ ಆದಲ್ಲಿ, ಆತನು ಶ್ರೀಮ೦ತನಾಗುವನು ಹಾಗೂ ಸಿರಿವ೦ತನಾದ ಓರ್ವ ವ್ಯಕ್ತಿಯು ಆತನನ್ನು ಪೂಜಿಸಿದರೆ ಆತನೆ೦ದಿಗೂ ದಾರಿದ್ರ್ಯವನ್ನು ಹೊ೦ದಲಾರನು. ಹನುಮಾನ್ ಪದದ ಒ೦ದು ಅರ್ಥವೇನೆ೦ದರೆ "ಯಾವುದೇ ಅಹ೦ಭಾವವಿಲ್ಲದಿರುವುದು". "ಹನು" ಎ೦ದರೆ ಕೊಲ್ಲುವುದು ಹಾಗೂ "ಮಾನ್" ಎ೦ದರೆ ಅಹ೦ಕಾರ ಎ೦ದರ್ಥವಾಗಿದೆ. ಆದ್ದರಿ೦ದ ಅಹ೦ಕಾರವನ್ನು ಕೊ೦ದುಕೊ೦ಡಿರುವ ವ್ಯಕ್ತಿಯೇ ಹನುಮಾನ್ ಎ೦ದು ಗುರುತಿಸಲ್ಪಡುತ್ತಾನೆ. ಹನುಮನು ಕೋತಿಯಾಗಿ ಹುಟ್ಟಿರುವುದಕ್ಕೆ ಹಲವಾರು ದೃಷ್ಟಾಂತಗಳಿವೆ. ಇಂದಿನ ಲೇಖನದಲ್ಲಿ ಆ ಕಥೆಯೇನು ಎಂಬುದನ್ನು ತಿಳಿದುಕೊಳ್ಳೋಣ...

  Hanuman

  ಶಿವ ಪಾರ್ವತಿಯರ ಪಾತ್ರ

  ಹಿಂದೂ ಧರ್ಮದ ಪ್ರಕಾರ ಒಮ್ಮೆ ಶಿವ ಪಾರ್ವತಿ ತಮ್ಮನ್ನು ಕೋತಿಗಳನ್ನಾಗಿ ಮಾಡಿಕೊಂಡು ಕಾಡಿನಲ್ಲಿ ಆಟವಾಡಲು ನಿರ್ಧರಿಸಿದರು. ಆದರೆ ಕೆಲವು ಸಮಯದಲ್ಲೇ ಪಾರ್ವತಿ ಗರ್ಭವತಿಯಾದರು. ಶಿವನು ತನ್ನ ದೈವಿಕ ಜವಬ್ದಾರಿಗಳನ್ನು ಬಹಳವಾಗಿ ಅರಿತು ಕೊಂಡಿದ್ದರಿಂದ ಪಾರ್ವತಿಯ ಗರ್ಭವನ್ನು ತೆಗೆದುಕೊಂಡು ಹೋಗುವಂತೆ ವಾಯುವಿನಲ್ಲಿ ಕೋರುತ್ತಾರೆ. ವಾಯುವು ಪಾರ್ವತಿಯ ಗರ್ಭವನ್ನು ಅಂಜನೆಯಲ್ಲಿ ಇರಿಸುತ್ತಾರೆ. ತಮಗೆ ಗಂಡು ಮಗುವಾಗಬೇಕೆಂದು ಅಂಜನಾ ಶಿವನನ್ನು ಪ್ರಾರ್ಥಿಸುತ್ತಿರುತ್ತಾರೆ. ಹಾಗೆಯೇ ಇನ್ನೊಂದು ಕಥೆಯು ರಾಜಾ ದಶರಥ ಕೂಡ ಪುತ್ರ ಸಂತಾನಕ್ಕಾಗಿ ಪ್ರಾರ್ಥಿಸುತ್ತಿದ್ದ ವೇಳೆ ಅವರಿಗೆ ಪ್ರಸಾದ ದೊರೆಯುತ್ತದೆ. ಈ ಪ್ರಸಾದದಲ್ಲಿ ಸ್ವಲ್ಪ ಪಾಲನ್ನು ವಾಯುವಿಗೆ ಅಂಜನೆಗೆ ನೀಡುತ್ತಾರೆ. ಹೀಗೆ ಈ ಪ್ರಸಾದವನ್ನು ಸೇವಿಸಿ ಆಕೆ ಕೋತಿಯ ಮುಖವನ್ನು ಹೊಂದಿರುವ ಆಂಜನೇಯನಿಗೆ ಜನ್ಮವನ್ನು ನೀಡುತ್ತಾರೆ.

  Hanuman

  ಅಂಜನಾ ಪುತ್ರ

  ಕೋತಿಯ ಮುಖವನ್ನು ಹೊಂದಿರುವ ಅಂಜನಾ ಕೂಡ ಪುತ್ರ ಸಂತಾನವನ್ನು ಪಡೆಯಲು ಶಿವನನ್ನು ಪ್ರಾರ್ಥಿಸುತ್ತಿರುತ್ತಾರೆ. ಹೀಗೆ ಪಾರ್ವತಿಯ ಗರ್ಭವನ್ನು ಆಕೆ ಪಡೆಯುತ್ತಾರೆ. ಇದರ ಫಲವಾಗಿ ಹನುಮಂತನು ಜನಿಸುತ್ತಾರೆ. ಅಂಜನೆಯ ಪುತ್ರನಾಗಿರುವ ಕಾರಣ ಆಂಜನೇಯ ಎಂಬುದಾಗಿ ಹನುಮನನ್ನು ಕರೆಯುತ್ತಾರೆ.

  ಧೈರ್ಯ ಮತ್ತು ಶಕ್ತಿಯ ಪ್ರತೀಕ 

  ಹನುಮನನ್ನು ಧೈರ್ಯ ಮತ್ತು ಶಕ್ತಿಯ ಇನ್ನೊಂದು ರೂಪವೆಂದು ನೆನೆದು ಪೂಜಿಸುತ್ತಾರೆ. ದೈವೀ ಶಕ್ತಿ, ತ್ಯಾಗ ಮತ್ತು ಸೇವೆಗೆ ಹನುಮಂತನು ಹೆಸರುವಾಸಿಯಾಗಿದ್ದಾರೆ. ಕೆಟ್ಟ ಶಕ್ತಿಗಳಿಂದ ಭಕ್ತರನ್ನು ಕಾಪಾಡಿ ಹನುಮನು ಭಕ್ತರನ್ನು ಪೊರೆಯುತ್ತಾರೆ.

  ರಾಮಾಯಣದಲ್ಲಿ ಹನುಮನ ಪಾತ್ರ

  ರಾಮಾಯಣದಲ್ಲಿ ಹನುಮನು ಹೆಚ್ಚಿನ ಪಾತ್ರವನ್ನು ವಹಿಸಿದ್ದಾರೆ. ರಾಮನ ಸಂದೇಶವನ್ನು ರಾವಣನ ಬಂಧನದಲ್ಲಿದ್ದ ಸೀತೆಗೆ ತಲುಪಿಸುವ ಕೆಲಸವನ್ನು ಹನುಮನು ಮಾಡುತ್ತಾರೆ.

  monkey

  ಕೋತಿಯ ಶಕ್ತಿ

  ರಾಮ ರಾವಣರ ನಡುವೆ ಯುದ್ಧದಲ್ಲಿ ಹನುಮನು ಮತ್ತು ಅವರ ಸಂಗಡಿಗರು ಹೆಚ್ಚಿನ ಬಲವನ್ನು ಪ್ರದರ್ಶಿಸಿ ರಾವಣನ ಸೇವೆಯನ್ನು ಸೋಲಿಸುತ್ತಾರೆ. ಹನಮನು ತಮ್ಮ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಇಡಿಯ ಲಂಕೆಯನ್ನೇ ಸುಟ್ಟು ಬಿಡುತ್ತಾರೆ. ಸಣ್ಣ ವಯಸಿನಲ್ಲಿಯೇ ಹನುಮನು ಹೆಚ್ಚು ಶಕ್ತಿಶಾಲಿಯಾಗಿದ್ದರು ಮತ್ತು ಬುದ್ಧಿವಂತರಾಗಿದ್ದರು. ರಾಮನ ಸೇವೆಗೆ ತನ್ನ ಇಡಿಯ ಜೀವನವನ್ನು ಹನಮಂತನು ಮುಡಿಪಾಗಿರಿಸಿದ್ದರು.

  ಕೋತಿಗಳ ನಾಯಕ

  ಕೋತಿಗಳ ರಾಣಿಯ ಮಗನಾದ ಹನುಮಂತನು ಕೋತಿಗಳ ನೇತೃತ್ವದಲ್ಲಿ ರಾಮ ರಾವಣರ ಯುದ್ಧದಲ್ಲಿ ಭಾಗವಹಿಸಿದ್ದರು.

  ಹನುಮನ ಕುರಿತು ಪ್ರೇರಣಾ ಕಥೆಗಳು

  ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆದುಕೊಂಡಿದ್ದ ಹನುಮಂತನು ಎಲ್ಲಾ ದುಷ್ಟ ಅಂಶಗಳನ್ನು ಮಟ್ಟ ಹಾಕುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು. ಇನ್ನೊಂದು ಕಥೆಯಲ್ಲಿ ಹೇಳುವಂತೆ ರಾಮಾಯಣ ಸಮಯದಲ್ಲಿ ದೇವತೆಗಳೆಲ್ಲರೂ ಕೋತಿಗಳ ರೂಪವನ್ನು ಪಡೆದುಕೊಂಡು ಯುದ್ಧದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದ್ದರು. ಶಿವನು ಹನುಮನ ರೂಪವನ್ನು ತಾಳಿ ರಾಮನ ಅವತಾರದಲ್ಲಿದ್ದ ವಿಷ್ಣುವಿಗೆ ಸಹಾಯ ಮಾಡಿದ್ದರು ಎಂದು ಹೇಳಲಾಗಿದೆ.

  ಹಿಂದೂ ಧರ್ಮದಲ್ಲಿ ಹನುಮನನ್ನು ಪೂಜಿಸುವಂತೆ ಬೌದ್ಧ ಮತ್ತು ಜೈನ ಧರ್ಮದಲ್ಲಿ ಕೂಡ ಹನುಮನನ್ನು ಪೂಜಿಸುತ್ತಾರೆ. ಮಯನ್ಮಾರ್, ಬಾಲಿ, ಮಲೇಶಿಯಾ ಮತ್ತು ಥೈಲಾಂಡ್‌ನಲ್ಲಿ ಕೂಡ ಹನುಮಂತನನ್ನು ಪೂಜಿಸುತ್ತಾರೆ. ರಾಮಾಯಣದಲ್ಲಿ ನಾಯಕನಂತಿರುವ ಹನುಮನು ಜೀವನದ ಸರಿಯಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಮತ್ತು ಕೆಟ್ಟದ್ದರ ಮೇಲೆ ಒಳಿತಿನ ಜಯವನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

  English summary

  Reasons Why Hanuman Was Born In The Form Of A Monkey

  Hanuman is one of the important characters in the epic Ramayana. Lord Hanuman is the symbol of power. There are different meanings of the name of Lord Hanuman. Being the son of Vayu, he is known as Pavanputra. He is also called "Brahmachari" among his disciples. Hanuman is commonly worshiped as the monkey god. There are many stories that explain the birth of Hanuman as a monkey. He is different from all other gods in Hinduism due to his sturdy physique.
  Story first published: Thursday, January 18, 2018, 18:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more