For Quick Alerts
ALLOW NOTIFICATIONS  
For Daily Alerts

ರಾಮ ರಕ್ಷಾ ಸ್ತೋತ್ರವನ್ನು ದಿನಾಲೂ ಪಠಣೆ ಮಾಡಬೇಕು ಯಾಕೆ?

|

ಶ್ರೀರಾಮನನ್ನು ನಂಬಿದವರನ್ನು ಆತ ಎಂದಿಗೂ ಕೈ ಬಿಟ್ಟಿಲ್ಲ. ದಿನ ನಿತ್ಯ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಶ್ರೀರಾಮ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದರೆ ಸಂಕಷ್ಟಗಳೆಲ್ಲಾ ದೂರವಾಗುತ್ತೆ. ಆಧುನಿಕ ಯುಗಕ್ಕೆ ಕಟ್ಟು ಬಿದ್ದ ಮಂದಿ ಇದನ್ನೆಲ್ಲಾ ಮರೆತು ಬಿಟ್ಟಿದ್ದರೂ ಕೂಡ ಕೆಲ ಮನೆಗಳಲ್ಲಿ ಇಂದಿಗೂ ಈ ಪದ್ಧತಿಗಳನ್ನು ರೂಢಿಸಿಕೊಂಡು ಬರಲಾಗುತ್ತಿದೆ.

Ram Raksha Stotra Lyrics and Benefits in kannada

ದೇವರನ್ನು ಒಲಿಸಿಕೊಳ್ಳಲು ಪೂಜೆಯಂತೆಯೇ ಮಂತ್ರ, ಸ್ತೋತ್ರಗಳು ಕೂಡ ಸಹಕಾರಿ. ಇಂತಹ ಸ್ತೋತ್ರಗಳಲ್ಲಿ ಶ್ರೀರಾಮ ರಕ್ಷಾ ಸ್ತೋತ್ರವು ಒಂದು. ಇದರಿಂದ ಶ್ರೀರಾಮನ ಕೃಪೆಗೆ ನೀವು ಪಾತ್ರರಾಗಬಹುದು. ಹಾಗಾದ್ರೆ ಶ್ರೀರಾಮ ರಕ್ಷಾ ಸ್ತೋತ್ರಗಳು ಯಾವುವು? ಅದನ್ನು ಪಠಣೆ ಮಾಡುವುದು ಹೇಗೆ ಇದರಿಂದ ಏನೆಲ್ಲಾ ಪ್ರಯೋಜನಗಳು ಪ್ರಾಪ್ತಿಯಾಗಲಿವೆ ಎಂಬುದನ್ನು ತಿಳಿದುಕೊಳ್ಳೋಣ.

ವಿನಿಯೋಗಃ

ವಿನಿಯೋಗಃ

ರಾಮ ರಕ್ಷಾ ಸ್ತೋತ್ರವನ್ನು ಓದುವ ಮೊದಲು ನಿಮ್ಮ ಕೈಯಲ್ಲಿ ಸ್ವಲ್ಪ ನೀರನ್ನು ಹಿಡಿದುಕೊಳ್ಳಬೇಕು ತದನಂತರ ರಾಮ ರಕ್ಷಾ ಸ್ತೋತ್ರದ ವಿನಿಯೋಗ ಸ್ತೋತ್ರವನ್ನು ಪಠಿಸಿಬೇಕು.

ಅಸ್ಯ ಶ್ರೀರಾಮ ರಕ್ಷಾ ಸ್ತೋತ್ರಮಂತ್ರಸ್ಯ | ಬಧಕೌಶಿಕ ಋಷಿಃ | ಶ್ರೀ ಸೀತಾರಾಮಚಂದ್ರೋ ದೇವತಾ | ಅನುಷ್ಟುಪ್ ಛಂದಃ | ಸೀತಾ ಶಕ್ತಿಃ | ಶ್ರೀಮದ್ ಹನುಮಾನ್ ಕೀಲಕಂ | ಶ್ರೀರಾಮಚಂದ್ರ ಪ್ರೀತ್ಯರ್ಥೆ ರಾಮ ರಕ್ಷಾ ಸ್ತೋತ್ರ ಜಪೇ ವಿನಿಯೋಗಃ ||

ಈ ಸ್ತೋತ್ರವನ್ನು ಪಠಿಸಿದ ನಂತರ ಕೈಯಲ್ಲಿರುವ ನೀರನ್ನು ನೆಲಕ್ಕೆ ವಿಟ್ಟು ರಾಮನ ಧ್ಯಾನದತ್ತ ಗಮನ ಹರಿಸಬೇಕು. ಮುಂದಿನದು ರಾಮ ರಕ್ಷಾ ಸ್ತೋತ್ರದ ಧ್ಯಾನ ಮಂತ್ರವಾಗಿರುತ್ತದೆ. ಇದರಲ್ಲಿ ಶ್ರೀರಾಮನನ್ನು ಮನದಲ್ಲಿ ನೆನೆಯುತ್ತ ಧ್ಯಾನವನ್ನು ಮಾಡಬೇಕು.

ಧ್ಯಾನಮಂತ್ರ:

ಧ್ಯಾನಮಂತ್ರ:

ಧ್ಯಾಯೇದಾಜಾನುಬಾಹುಂ ಧೃತಶರಧನುಷಂ ಬದ್ಧಪದ್ಮಾಸನಸ್ಥಂ

ಪೀತಂ ವಾಸೋ ವಸಾನಂ ನವಕಮಲದಳ ಸ್ಪರ್ಧೀನೇತ್ರಂ ಪ್ರಸನ್ನಂ |

ವಾಮಾಂಕರೂಢ ಸೀತಾಮುಖ ಕಮಲ ಮಿಲಲ್ಲೋಚನಂ ನೀರದಾಭಂ

ನಾನಾಲಂಕಾರ ದೀಪ್ತಂ ದಧತಮರು ಜಟಾಮಂಡಲಂ ರಾಮಚಂದ್ರಂ ||

ಸ್ತೋತ್ರ:

ಸ್ತೋತ್ರ:

ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್

ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್ |

ಧ್ಯಾತ್ವಾ ನೀಲೋತ್ಪಲ ಶ್ಯಾಮಂ ರಾಮಂ ರಾಜೀವಲೋಚನಮ್

ಜಾನಕೀ ಲಕ್ಷ್ಮಣೋಪೇತಂ ಜಟಾಮುಕುಟ ಮಂಡಿತಮ್|

ಸಾಸಿತೂಣ ಧನುರ್ಬಾಣ ಪಾಣಿಂ ನಕ್ತಂ ಚರಾಂತಕಮ್

ಸ್ವಲೀಲಯಾ ಜಗತ್ರಾತು ಮಾವಿರ್ಭೂತಮಜಂ ವಿಭುಮ್ |

ರಾಮರಕ್ಷಾಂ ಪಠೇತ್ಪ್ರಾಙ್ಞಃ ಪಾಪಘ್ನೀಂ ಸರ್ವಕಾಮದಾಮ್

ಶಿರೋ ಮೇ ರಾಘವಃ ಪಾತುಫಾಲಂ ದಶರಥಾತ್ಮಜಃ |

ಕೌಸಲ್ಯೇಯೋ ದೃಶೌಪಾತು ವಿಶ್ವಾಮಿತ್ರ ಪ್ರಿಯಃ ಶೃತೀ

ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ|

ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತ ವಂದಿತಃ

ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕಃ |

ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್

ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ |

ಸುಗ್ರೀವೇಶಃ ಕಟೀಪಾತು ಸಕ್ಥಿನೀ ಹನುಮತ್-ಪ್ರಭುಃ

ಊರೂ ರಘೂತ್ತಮಃ ಪಾತು ರಕ್ಷಕುಲ ವಿನಾಶಕೃತ್ |

ಜಾನುನೀ ಸೇತುಕೃತ್ ಪಾತು ಜಂಘೇ ದಶಮುಖಾಂತಕಃ

ಪಾದೌವಿಭೀಷಣ ಶ್ರೀದಃಪಾತು ರಾಮೋஉಖಿಲಂ ವಪುಃ |

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್

ಸಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ |

ಪಾತಾಳ ಭೂತಲ ವ್ಯೋಮ ಚಾರಿಣಶ್-ಚದ್ಮ ಚಾರಿಣಃ

ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ |

ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾಸ್ಮರನ್

ನರೋ ನಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ |

ಜಗಜ್ಜೈತ್ರೈಕ ಮಂತ್ರೇಣ ರಾಮನಾಮ್ನಾಭಿ ರಕ್ಷಿತಮ್

ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವ ಸಿದ್ಧಯಃ |

ವಜ್ರಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್

ಅವ್ಯಾಹತಾಙ್ಞಃ ಸರ್ವತ್ರ ಲಭತೇ ಜಯ ಮಂಗಳಮ್ |

ಆದಿಷ್ಟವಾನ್ ಯಥಾಸ್ವಪ್ನೇ ರಾಮ ರಕ್ಷಾ ಮಿಮಾಂ ಹರಃ

ತಥಾ ಲಿಖಿತವಾನ್ ಪ್ರಾತಃ ಪ್ರಬುದ್ಧೌ ಬುಧಕೌಶಿಕಃ |

ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಮ್

ಅಭಿರಾಮ ಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ಸನಃ ಪ್ರಭುಃ |

ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ

ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾ ಜಿನಾಂಬರೌ |

ಫಲಮೂಲಾಸಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ

ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ |

ಶರಣ್ಯೌ ಸರ್ವಸತ್ವಾನಾಂ ಶ್ರೇಷ್ಟಾ ಸರ್ವ ಧನುಷ್ಮತಾಂ

ರಕ್ಷಃಕುಲ ನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ |

ಆತ್ತ ಸಜ್ಯ ಧನುಷಾ ವಿಷುಸ್ಪೃಶಾ ವಕ್ಷಯಾಶುಗ ನಿಷಂಗ ಸಂಗಿನೌ

ರಕ್ಷಣಾಯ ಮಮ ರಾಮಲಕ್ಷಣಾವಗ್ರತಃ ಪಥಿಸದೈವ ಗಚ್ಛತಾಂ |

ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ

ಗಚ್ಛನ್ ಮನೋರಥಾನ್ನಶ್ಚ ರಾಮಃ ಪಾತು ಸ ಲಕ್ಷ್ಮಣಃ |

ರಾಮೋ ದಾಶರಥಿ ಶ್ಶೂರೋ ಲಕ್ಷ್ಮಣಾನುಚರೋ ಬಲೀ

ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ |

ವೇದಾಂತ ವೇದ್ಯೋ ಯಜ್ಞೇಶಃ ಪುರಾಣ ಪುರುಷೋತ್ತಮಃ

ಜಾನಕೀವಲ್ಲಭ ಶ್ರೀಮಾನಪ್ರಮೇಯ ಪರಾಕ್ರಮಃ |

ಇತ್ಯೇತಾನಿ ಜಪೇನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ

ಅಶ್ವಮೇಥಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನಸಂಶಯಃ |

ರಾಮಂ ದೂರ್ವಾದಳ ಶ್ಯಾಮಂ ಪದ್ಮಾಕ್ಷಂ ಪೀತಾವಾಸಸಂ

ಸ್ತುವಂತಿ ನಾಭಿರ್-ದಿವ್ಯೈರ್-ನತೇ ಸಂಸಾರಿಣೋ ನರಾಃ |

ಸ್ತೋತ್ರ

ಸ್ತೋತ್ರ

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ

ಕಾಕುತ್ಸಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ |

ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ

ವಂದೇಲೋಕಾಭಿರಾಮಂ ರಘುಕುಲ ತಿಲಕಂ ರಾಘವಂ ರಾವಣಾರಿಮ್ |

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಥಸೇ

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ |

ಶ್ರೀರಾಮ ರಾಮ ರಘುನಂದನ ರಾಮ ರಾಮ

ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ

ಶ್ರೀರಾಮ ರಾಮ ರಣಕರ್ಕಶ ರಾಮ ರಾಮ

ಶ್ರೀರಾಮ ರಾಮ ಶರಣಂ ಭವ ರಾಮ ರಾಮ |

ಶ್ರೀರಾಮ ಚಂದ್ರ ಚರಣೌ ಮನಸಾ ಸ್ಮರಾಮಿ

ಶ್ರೀರಾಮ ಚಂದ್ರ ಚರಣೌ ವಚಸಾ ಗೃಹ್ಣಾಮಿ

ಶ್ರೀರಾಮ ಚಂದ್ರ ಚರಣೌ ಶಿರಸಾ ನಮಾಮಿ

ಶ್ರೀರಾಮ ಚಂದ್ರ ಚರಣೌ ಶರಣಂ ಪ್ರಪದ್ಯೇ |

ಮಾತಾರಾಮೋ ಮತ್-ಪಿತಾ ರಾಮಚಂದ್ರಃ

ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ

ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ

ನಾನ್ಯಂ ಜಾನೇ ನೈವ ನ ಜಾನೇ |

ದಕ್ಷಿಣೇಲಕ್ಷ್ಮಣೋ ಯಸ್ಯ ವಾಮೇ ಚ ಜನಕಾತ್ಮಜಾ

ಪುರತೋಮಾರುತಿರ್-ಯಸ್ಯ ತಂ ವಂದೇ ರಘುವಂದನಮ್ |

ಲೋಕಾಭಿರಾಮಂ ರಣರಂಗಧೀರಂ

ರಾಜೀವನೇತ್ರಂ ರಘುವಂಶನಾಥಂ

ಕಾರುಣ್ಯರೂಪಂ ಕರುಣಾಕರಂ ತಂ

ಶ್ರೀರಾಮಚಂದ್ರಂ ಶರಣ್ಯಂ ಪ್ರಪದ್ಯೇ |

ಮನೋಜವಂ ಮಾರುತ ತುಲ್ಯ ವೇಗಂ

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ

ವಾತಾತ್ಮಜಂ ವಾನರಯೂಧ ಮುಖ್ಯಂ

ಶ್ರೀರಾಮದೂತಂ ಶರಣಂ ಪ್ರಪದ್ಯೇ |

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ

ಆರುಹ್ಯಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ |

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ

ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಂ |

ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಂ

ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಮ್ |

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ

ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ

ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ

ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ |

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ

ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ |

ಇತಿ ಶ್ರೀಬುಧಕೌಶಿಕಮುನಿ ವಿರಚಿತಂ ಶ್ರೀರಾಮ ರಕ್ಷಾಸ್ತೋತ್ರಂ ಸಂಪೂರ್ಣಂ |

ಶ್ರೀರಾಮ ಜಯರಾಮ ಜಯಜಯರಾಮ |

ಮಹತ್ವ:

ಮಹತ್ವ:

* ಈ ಮೇಲಿನ ಎಲ್ಲಾ ರಾಮ ಸ್ತೋತ್ರವನ್ನು, ರಾಮ ಧ್ಯಾನವನ್ನು ಪ್ರತಿನಿತ್ಯ ಮಾಡುವುದರಿಂದ ರಾಮನ ಶ್ರೀರಕ್ಷೆಯು ಸದಾಕಾಲ ನಿಮ್ಮ ಮೇಲೆ, ನಿಮ್ಮ ಕುಟುಂಬ ವರ್ಗದವರ ಮೇಲೆ ಇರುತ್ತದೆ. ಬಲು ಸರಳವಾದ ಸ್ತೋತ್ರ ಇದಾಗಿದ್ದು, ಶುದ್ಧ ಮನಸ್ಸಿನಿಂದ ಯಾರೂ ಕೂಡ ಪಠಿಸಬಹುದು.

* ನವಜಾತ ಶಿಶುಗಳು ಹಾಗೂ ಹೊಸ ತಾಯಿಗೆ ಇದು ಒಳ್ಳೆಯದು ಎಂದು ನಂಬಲಾಗಿದೆ. ಮಗುವಿನ ಕತ್ತಿಗೆ ಕಪ್ಪುದಾರವನ್ನು ಕಟ್ಟುವಾಗ ಇದನ್ನು ಪಠಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಸ್ತೋತ್ರದ ದೇಹದ ಎಲ್ಲಾ ಭಾಗಗಳ ಮೇಲೆ ಕೇಂದ್ರೀಕೃತವಾಗುವುದರಿಂದ ದೇಹವನ್ನು ರಕ್ಷಿಸಲು ರಾಮನನ್ನು ಆಹ್ವಾನಿಸಲಾಗುತ್ತದೆ ಎನ್ನಲಾಗುತ್ತದೆ. ಇದರಲ್ಲಿರುವ 35ನೇ ಶ್ಲೋಕವನ್ನು ಪಠಿಸುವುದರಿಂದ ನಿಮ್ಮಲ್ಲಿ ನಿರ್ಭೀತಿ ಭಾವನೆ ಮೂಡಿಸುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಗಾಯಕರು ತಮ್ಮ ಧ್ವನಿಯನ್ನು ಸುಧಾರಿಸಲು ಮತ್ತು ಬಲಪಡಿಸಲು ಇದನ್ನು ಪಠಿಸುತ್ತಾರೆ.

* ಈ ಸ್ತೋತ್ರವು ಮನಸ್ಸು ಮತ್ತು ದೇಹವನ್ನು ಕೇಂದ್ರೀಕರಿಸಲು ಸಹಾಯಾ ಮಾಡುತ್ತದೆ. ಮನಸ್ಸು ಮತ್ತು ದೇಹದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವುದರಿಂದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂಬ ನಂಬಿಕೆ ಹಲವರದ್ದು. ಇದರ ಜೊತೆಗೆ ಕಲಿಕೆಯ ಕೌಶಲ್ಯ ಮತ್ತು ಉಚ್ಛಾರಣೆಯನ್ನು ಸಹ ಸುಧಾರಿಸುತ್ತದೆ. ಆದ್ದರಿಂದ ಇದನ್ನು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಪಠಿಸುತ್ತಾರೆ.

* ಅಕ್ಷರ ಕಲಿಯುವ ಮಕ್ಕಳಲ್ಲಿ ನಾಲಗೆ ಸರಿಯಾಗಿ ಹೊರಳದೇ ಇದ್ದಾಗ, ಅಥವಾ ಸ್ಪಷ್ಟವಾಗಿ ಮಾತನಾಡಲು ಕಲಿಯುವಾಗ, ಇದರಿಂದ ಪದಗಳನ್ನು ಉಚ್ಛರಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ ಎಂದು ಹಲವರು ಹೇಳುತ್ತಾರೆ.

English summary

Ram Raksha Stotra Lyrics and Benefits in kannada

Here we told about Ram Raksha manthra lyrics and benefits in kannada, Read on...
X
Desktop Bottom Promotion