For Quick Alerts
ALLOW NOTIFICATIONS  
For Daily Alerts

  ಮಹಾಭಾರತ ಎಂದಾಕ್ಷಣ ಇವರು ಮಾತ್ರ ಪದೇ ಪದೇ ನೆನಪಾಗುತ್ತಾರೆ!

  By Manu
  |

  ಭಾರತದಲ್ಲಿ ಶಾಸ್ತ್ರ ಪುರಾತನ ಕಾವ್ಯಗಳು ಮತ್ತು ಗ್ರಂಥಗಳು ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದುಕೊಂಡು ಬಂದಿವೆ. ಅತಿ ಪ್ರಾಚೀನ ಮತ್ತು ಪುಣ್ಯ ಗ್ರಂಥಗಳೆಂದೇ ಹೆಸರುವಾಸಿಯಾಗಿರುವ ಮಹಾಭಾರತ ಹಾಗೂ ರಾಮಾಯಣ ವಿಶ್ವದೆಲ್ಲೆಡೆ ಜನಜನಿತವಾಗಿದೆ. ಈ ಗ್ರಂಥಗಳು ನಮ್ಮ ನೈಜ ಜೀವನದ ಮೇಲೆ ಬೆಳಕು ಚೆಲ್ಲಿದ್ದು ಮೋಹ, ಮದ, ಮಾತ್ಸರ್ಯ, ಸಂಶಯಗಳಿಂದ ಜೀವನ ಹೇಗೆ ಅಸ್ತವ್ಯಸ್ತಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಯಾವುದೂ ಕೂಡ ಅತಿರೇಕಕ್ಕೆ ಹೋದರೆ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ.

  ಇದು ನಾವು ಸಹೋದರ ವಾತ್ಸಲ್ಯ, ಮಕ್ಕಳ ಮೇಲಿನ ಕುರುಡು ಮೋಹ, ಹೆಣ್ಣಿನ ಮೇಲಿನ ಕ್ರೋಧ, ಗೆಳೆಯರ ತ್ಯಾಗ ಹೀಗೆ ನಮ್ಮ ಜೀವನದಲ್ಲಿ ನಾವು ಹಾದುಹೋದ ಮತ್ತು ಹಾದುಹೋಗಬೇಕಾಗಿರುವ ಎಲ್ಲಾ ಮಜಲುಗಳನ್ನು ಸೂಕ್ಷ್ಮವಾಗಿ ಬಣ್ಣಿಸಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳೂ ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳನ್ನು ಆಧರಿಸಿಯೇ ಇದೆ. ಹುಟ್ಟುತ್ತಾ ಅಣ್ಣತಮ್ಮಂದಿರುವ ಬೆಳೆಯುತ್ತಾ ದಾಯಾದಿಗಳು ಎಂಬ ಪದಕ್ಕೆ ಮಹಾಭಾರತ ತಕ್ಕ ಉದಾಹರಣೆಯಾಗಿದೆ. ಕಡ್ಡಿಯಂತಿರುವ ಅಂಶಗಳನ್ನು ಗುಡ್ಡದಂತೆ ಮಾಡಿ ಅದು ಒಬ್ಬರು ಇನ್ನೊಬ್ಬರನ್ನು ಬಲಿತೆಗೆದುಕೊಳ್ಳುವಂತಹ ಮಟ್ಟಕ್ಕೆ ಹೋಗುತ್ತದೆ, ಇಂತಹ ಕೆಲವೊಂದು ಸ್ವಾರಸ್ಯಕರ ಸಂಗತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ... 

  ಮದುವೆಗೂ ಮುನ್ನವೇ ಮಗು ಪಡೆದ ಕುಂತಿ

  ಮದುವೆಗೂ ಮುನ್ನವೇ ಮಗು ಪಡೆದ ಕುಂತಿ

  ಮಹಾಭಾರತದ ಒಂಬತ್ತು ಸುಂದರ ಸ್ತ್ರೀಯರಲ್ಲಿ ಕುಂತಿ ಕೂಡ ಒಬ್ಬರು. ಮದುವೆಗೂ ಮುನ್ನವೇ ಮಗುವನ್ನು ಪಡೆದ ಕುಂತಿ ಭಯಗೊಂಡು ಆ ಮಗುವನ್ನು ಬುಟ್ಟಿಯ ಸಹಾಯದಿಂದ ನದಿಗೆ ಬಿಡುತ್ತಾಳೆ. ಆ ಮಗುವೇ ಕರ್ಣ. ಸೂರ್ಯ ದೇವನ ಪುತ್ರನಾಗಿ ಕರ್ಣನು ಜನಿಸುತ್ತಾನೆ. ತನಗೆ ನೀಡಿದ ವರವನ್ನು ಪರೀಕ್ಷಿಸುವುದಕ್ಕಾಗಿ ಕುಂತಿಯು ಸೂರ್ಯನನ್ನು ಕರೆಯುತ್ತಾಳೆ ಮತ್ತು ವರದ ರೀತಿಯಂತೆ ಸೂರ್ಯನು ಆಕೆಗೆ ಪುತ್ರನನ್ನು ಕರುಣಿಸುತ್ತಾರೆ. ವಿವಾಹಕ್ಕೂ ಮುನ್ನವೇ ಮಗುವನ್ನು ಪಡೆದು ತಾನು ಸಮಾಜದಲ್ಲಿ ಬಾಳುವುದು ಹೇಗೆ ಮನೆಯವರನ್ನು ಎದುರಿಸುವುದು ಹೇಗೆಂದು ಆಕೆ ಮಗುವನ್ನು ನದಿಯಲ್ಲಿ ಬಿಡುತ್ತಾಳೆ.

  ಪತಿಗಾಗಿ ಕಣ್ಣು ತ್ಯಾಗ ಮಾಡಿದ ಗಾಂಧಾರಿ

  ಪತಿಗಾಗಿ ಕಣ್ಣು ತ್ಯಾಗ ಮಾಡಿದ ಗಾಂಧಾರಿ

  ರಾಜ ಸುಬಲನ ಪುತ್ರಿ ಗಾಂಧಾರಿ. ತನ್ನ ಯುವ ಹರೆಯದಲ್ಲೇ ಈಕೆ ಶಿವನನ್ನು ಕುರಿತು ತಪಸ್ಸು ಮಾಡಿರುತ್ತಾಳೆ ಮತ್ತು 101 ಮಕ್ಕಳನ್ನು ಹೊಂದುವ ಆಶಿರ್ವಾದವನ್ನು ಆಕೆ ಶಿವನಿಂದ ಪಡೆದುಕೊಂಡಿರುತ್ತಾಳೆ. ತನ್ನ ಪತಿ ಅಂಧ ಎಂಬುದನ್ನು ಅರಿತು ಗಾಂಧಾರಿ ತನ್ನ ಕಣ್ಣಿಗೂ ಪಟ್ಟಿಯನ್ನು ಕಟ್ಟಿಕೊಂಡು ಪತಿಯಂತೆಯೇ ಜೀವನ ನಡೆಸುತ್ತಾಳೆ. ತನ್ನ ಪತಿಗಾಗಿ ತನ್ನ ಕಣ್ಣಿಗೆ ಬಟ್ಟೆಕಟ್ಟಿಕೊಂಡು ತನ್ನ ದೃಶ್ಯ ಶಕ್ತಿಯನ್ನು ತ್ಯಾಗ ಮಾಡಿದವಳು ಗಾಂಧಾರಿ.

  ಗಾಂಧಾರಿ ಶಾಪ; ಶ್ರೀಕೃಷ್ಣಾವತಾರದ ಪರಿಸಮಾಪ್ತಿ ಹೇಗೆ?

  ದುರ್ಯೋಧನದ ಜನನದ ಕೂಡಲೇ ನರಿಗಳು, ಕಾಗೆಗಳೂ ಸಹ ಊಳಿಡಲಾರ೦ಭಿಸಿತು

  ದುರ್ಯೋಧನದ ಜನನದ ಕೂಡಲೇ ನರಿಗಳು, ಕಾಗೆಗಳೂ ಸಹ ಊಳಿಡಲಾರ೦ಭಿಸಿತು

  ಹುಟ್ಟಿದ ಕೂಡಲೇ ದುರ್ಯೋದನನು ಕತ್ತೆಯ೦ತೆ ಕಿರುಚಾಡಲಾರ೦ಭಿಸುತ್ತಾನೆ. ಈತನ ಕೂಗನ್ನನುಸರಿಸಿ ಇತರ ಕತ್ತೆಗಳು, ನರಿಗಳು, ಹಾಗೂ ಕಾಗೆಗಳೂ ಸಹ ಊಳಿಡಲಾರ೦ಭಿಸಿ ಗದ್ದಲವು೦ಟಾಗುತ್ತದೆ. ಇದನ್ನು ಕ೦ಡ ವಿದುರನು, ಈ ನಿನ್ನ ಮಗನು ನಿನ್ನ ಕುಟು೦ಬದ ಸರ್ವನಾಶಕ್ಕೆ ಕಾರಣನಾಗುತ್ತಾನೆ ಎ೦ದು ದೃತರಾಷ್ಟ್ರನಿಗೆ ಹೇಳುತ್ತಾನೆ. ವಿದುರನು ಆ ಮಗುವನ್ನು ಕೊಲ್ಲುವ೦ತೆ ದೃತರಾಷ್ಟ್ರನಿಗೆ ತಿಳಿಸುತ್ತಾನೆ ಆದರೆ, ದೃತರಾಷ್ಟ್ರನು ಪುತ್ರವ್ಯಾಮೋಹದಿ೦ದ ಹಾಗೆ ಮಾಡಲು ನಿರಾಕರಿಸುತ್ತಾನೆ.

  ದಾನಶೂರ, ಗುಣ ಸಂಪನ್ನ ಕರ್ಣ

  ದಾನಶೂರ, ಗುಣ ಸಂಪನ್ನ ಕರ್ಣ

  ಗುಣಸಂಪನ್ನ ದುರ್ಯೋಧನನ್ನು ತ್ಯಜಿಸಿ ಪಾಂಡವರೊಂದಿಗೆ ಸೇರಿಕೊಳ್ಳಲು ಶ್ರೀಕೃಷ್ಣ ಕೂಡ ಕರ್ಣನಿಗೆ ಸಲಹೆ ನೀಡುತ್ತಾರೆ. ಸಕಲ ರಾಜವೈಭೋಗಗಳು ಅಂತೆಯೇ ದ್ರೌಪದಿಯನ್ನು ನೀಡುವುದಾಗಿ ಕೂಡ ಕೃಷ್ಣ ಕರ್ಣನಿಗೆ ಆಮಿಷವನ್ನೊಡ್ಡುತ್ತಾರೆ. ಆದರೆ ತನ್ನ ಮೌಲ್ಯಗಳಿಗೆ ಬದ್ಧನಾಗಿದ್ದ ಕರ್ಣ ತನ್ನ ಸ್ವಂತ ಸುಖಕ್ಕಾಗಿ ದುರ್ಯೋಧನನ್ನು ಬಿಟ್ಟು ಹೋಗುವುದಿಲ್ಲ. ಇದರಿಂದ ಕರ್ಣನ ಗುಣ ಸಾಬೀತಾಗುತ್ತದೆ. ಮಹಾಭಾರತದಲ್ಲಿ ಕರ್ಣನ ಸ್ಫೂರ್ತಿದಾಯಕ ಗುಣಗಳಲ್ಲಿ ಇದೂ ಕೂಡ ಒಂದಾಗಿದೆ.

  ಬದುಕಿಗೆ ಪ್ರೇರಕವಾಗಿರುವ ದಾನಶೂರ ಕರ್ಣನ ಆದರ್ಶ ಗುಣಗಳು

  ದ್ರೌಪದಿಯ ಕಠಿಣ ಶಪಥ

  ದ್ರೌಪದಿಯ ಕಠಿಣ ಶಪಥ

  ದ್ರೌಪದಿಯ ಕಠಿಣ ಶಪಥ ತನ್ನ ವಸ್ತ್ರಾಪರಣದ ಘಟನೆಯ ಬಳಿಕ ದ್ರೌಪದಿ ಅಳುತ್ತಾ ಕೂತಿರುತ್ತಾಳೆ ಮತ್ತು ತನ್ನ ನೆರವಿಗೆ ಯಾರು ಬರಲಿಲ್ಲವೆಂಬ ಅಸಹಾಯಕ ಭಾವನೆಯಿಂದ ಆಕೆ ಬಳಲುತ್ತಿರುತ್ತಾಳೆ. ಆಕೆ ಅಲ್ಲಿದ್ದ ಪ್ರತಿಯೊಬ್ಬ ಹಿರಿಯರಿಂದ ನೆರವನ್ನು ಕೇಳುತ್ತಾಳೆ.ಆದರೆ ಅವರೆಲ್ಲವೂ ಅವಮಾನದಿಂದ ತಲೆತಗ್ಗಿಸುತ್ತಾರೆ. ಕೌರವರು ಆಕೆಯನ್ನು ಹೀಯಾಳಿಸುತ್ತಲೇ ಇರುತ್ತಾರೆ. ಅವಮಾನದಿಂದ ಕ್ರೋಧಿತಳಾದ ದ್ರೌಪದಿ, ದುಶ್ಯಾಸನನ ರಕ್ತದಿಂದ ತನ್ನ ಕೂದಲನ್ನು ತೊಳೆಯುವ ತನಕ ನಾನು ಕೂದಲು ಬಾಚಿ ಕಟ್ಟಿಕೊಳ್ಳುವುದಿಲ್ಲ ಮತ್ತು ಎಣ್ಣೆ ಹಾಕುವುದಿಲ್ಲ ಎಂದು ಶಪಥ ಮಾಡುತ್ತಾಳೆ.

  ದ್ರೌಪದಿಯ ಶಪಥ: ಆಕೆ ಕೇಶವನ್ನು ಯಾಕೆ ಕಟ್ಟಿಕೊಳ್ಳಲಿಲ್ಲ?

  ಅಭಿಮನ್ಯುವಿನ ಎದೆಗಾರಿಕೆ

  ಅಭಿಮನ್ಯುವಿನ ಎದೆಗಾರಿಕೆ

  ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಬೇಧಿಸುವ ತಂತ್ರಗಾರಿಕೆಯ ಕೊಂಚ ಮಾತ್ರ ತಿಳಿದಿತ್ತು. ಯುದ್ಧದಲ್ಲಿ ಎದುರಿಗೆ ಬಂದವರ ಮೇಲೆ ನಿರಾಯಾಸವಾಗಿ ದಾಳಿ ಮಾಡುತ್ತಿದ್ದನು. ಹಾಗೇ ಚಕ್ರವ್ಯೂಹದ ಒಳಕ್ಕೆ ನುಗ್ಗಿದಾಗ ಅವನಿಗೆ ನಂತರ ಅನುಸರಿಸಬೇಕಾದ ವಿಧಾನವು ಹೊಳೆಯಲಿಲ್ಲ. ಆತನಿಗೆ ಚಕ್ರವ್ಯೂಹದ ಒಳಕ್ಕೆ ನುಗ್ಗುವ ತಂತ್ರವು ಮಾತ್ರ ಗೊತ್ತಿದ್ದು, ಅದರಿಂದ ಜಯಶಾಲಿಯಾಗಿ ಹೊರಬರುವ ವಿದ್ಯೆ ತಿಳಿದಿರಲಿಲ್ಲ. ಆದ್ದರಿಂದಲೇ, ಆತ ವಿವಿಧ ವಿಧಾನದಲ್ಲಿ ಮುನ್ನುಗ್ಗದೇ, ಏನೂ ತೋಚದೆ ನಿಂತಲ್ಲಿಯೇ ಎದುರಾಳಿಗಳೊಂದಿಗೆ ಹೋರಾಡುವ ಸ್ಥಿತಿ ಒದಗಿತು. ಹೀಗಿರುವಾಗ ಪಾಂಡವರ ಸೈನ್ಯವಾಗಲೀ ಅಥವಾ ಅವನ ಬುದ್ಧಿಶಕ್ತಿಯಾಗಲೀ ಸಹಾಯಕ್ಕೆ ಬರಲಿಲ್ಲ. ಕೊನೆಯದಾಗಿ ಚಕ್ರವ್ಯೂಹದಲ್ಲೇ ಏಕಾಂಗಿಯಾಗಿ ಹೋರಾಡಿ ವೀರಮರಣವನ್ನಪ್ಪಿದನು.

  ಪರಾಕ್ರಮಶಾಲಿ ವೀರ ಅಭಿಮನ್ಯುವಿನ, ಸಾಹಸಗಾಥೆ

  ಕೃಷ್ಣಾರ್ಜುನರ ನಡುವಣ ಸ್ನೇಹ

  ಕೃಷ್ಣಾರ್ಜುನರ ನಡುವಣ ಸ್ನೇಹ

  ಕೃಷ್ಣಾರ್ಜುನರ ನಡುವಣ ಸ್ನೇಹಕ್ಕೆ ಅವರು ಪರಸ್ಪರರಿಗೆ ನೀಡುತ್ತಿದ್ದ ಗೌರವ ತಳಹದಿಯಾಗಿದೆ. ಕೃಷ್ಣನು ಭಗವಂತನಾಗಿದ್ದರು ಆತನನ್ನು ಪೂಜಿಸುವುದು ಅರ್ಜುನನಿಗೆ ಎರಡನೆಯ ಆದ್ಯತೆಯಾಗಿತ್ತು. ಮಹಾಯುದ್ಧದ ಕಾಲದಲ್ಲಿ ಚಿಂತೆಗೀಡಾಗಿದ್ದ ಅರ್ಜುನನನ್ನು ಓರ್ವ ಸ್ನೇಹಿತ ಸಂತೈಸಿದಂತೆ ಕೃಷ್ಣ ನೀಡಿದ 'ಕರ್ಮಣ್ಯೇ ವಾಧಿಕಾರಸ್ತೇ...' ಎಂಬ ವಾಕ್ಯಗಳು ಲೋಕದಲ್ಲಿ ಶಾಶ್ವತವಾಗಿದೆ. ಮಹಾಯುದ್ಧದ ಕಾಲದಲ್ಲಿ ಚಿಂತೆಗೀಡಾಗಿದ್ದ ಅರ್ಜುನನನ್ನು ಓರ್ವ ಸ್ನೇಹಿತ ಸಂತೈಸಿದಂತೆ ಕೃಷ್ಣ ನೀಡಿದ 'ಕರ್ಮಣ್ಯೇ ವಾಧಿಕಾರಸ್ತೇ...' ಎಂಬ ವಾಕ್ಯಗಳು ಲೋಕದಲ್ಲಿ ಶಾಶ್ವತವಾಗಿದೆ.

  ಮಹಾಭಾರತದಲ್ಲಿ ಕೃಷ್ಣಾರ್ಜುನರ ಸ್ನೇಹ, ಪ್ರೀತಿಗೆ ಬಹುಪರಾಕ್

  English summary

  Outstanding characters of Mahabharat who have always been favourite

  In the Mahabharat, the men played dice and waged wars but it was the women, who yielded power and influence. So practically, both men and women played important roles building the story. However, there are a few characters who have made their places in people’s heart. Be it for their positive roles or negative natures and even weird styles for that matter, some of the characters in Mahabharat have become special to people. Likeable
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more