For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಹೊಸ ವರ್ಷಕ್ಕೆ ಮನೆ ಈ ರೀತಿ ಇಟ್ಟರೆ ಲಕ್ಷ್ಮಿ ನೆಲೆಸುವಳು

|

ಹೊಸ ವರ್ಷ ಬರಲು ಕೆಲವೇ ದಿನಗಳು ಬಾಕಿ ಉಳಿದಿವೆ. ಕೊರೊನಾದ ನಡುವೆಯೂ ಎಲ್ಲರೂ 2021 ಕ್ಕೆ ಕುತೂಹಲದಿಂದ ಕಾಯುತ್ತಿದ್ದಾರೆ. ಜನರು ಈಗಾಗಲೇ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಲು ತಯಾರಿ ಆರಂಭಿಸಿದ್ದಾರೆ. ಅದಕ್ಕಾಗಿ ಜನರು ತಮ್ಮ ಮನೆಗಳನ್ನು ಅಲಂಕರಿಸಲು ಪ್ರಾರಂಭಿಸಿದ್ದಾರೆ.

New Year Vastu Tips: According To Vastu Shastra Things To Do To Get Money And Wealth

ನೀವೂ ಸಹ ಹೊಸ ವರ್ಷವನ್ನು ಸ್ವಾಗತಿಸಲು ಮನೆಯನ್ನು ಅಲಂಕರಿಸಲು ಯೋಜಿಸುತ್ತಿದ್ದರೆ, ವಾಸ್ತು ಶಾಸ್ತ್ರದ ಬಗ್ಗೆಯೂ ಸಹ ವಿಶೇಷ ಕಾಳಜಿ ವಹಿಸಿ. ಇದನ್ನು ಮಾಡುವುದರಿಂದ, ಹೊಸ ವರ್ಷದ ಆರಂಭವು ಉತ್ತಮವಾದುದು ಮಾತ್ರವಲ್ಲ, ಆರ್ಥಿಕವಾಗಿ ಸಹ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸುಖ-ಶಾಂತಿ ತುಂಬಿರಲು ವಾಸ್ತುವು ಸಹ ನೆರವಾಗುತ್ತದೆ. ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಸ್ವಾಗತಿಸಬೇಕೆಂದರೆ ಇತರ ಅಂಶಗಳ ಜೊತೆ ವಾಸ್ತು ಶಾಸ್ತ್ರವು ಅತ್ಯಗತ್ಯವಾಗಿದೆ. ಎಲ್ಲಾ ಅಂಶಗಳ ಸಮ್ಮಿಲನವೇ ಸಂತೋಷದ ಜೀವನ ಎಂದರೆ ತಪ್ಪಾಗಲಾರದು. ಅದಕ್ಕಾಗಿ ಹೊಸ ವರ್ಷದ ಸ್ವಾಗತದಲ್ಲಿ ಮನೆಯನ್ನು ಹೇಗೆ ಅಲಂಕರಿಸಬೇಕೆಂದು ಈ ಕೆಳಗೆ ನೋಡೋಣ.

1. ಈ ಬಣ್ಣಗಳನ್ನು ಆರಿಸಿ :

1. ಈ ಬಣ್ಣಗಳನ್ನು ಆರಿಸಿ :

ಮೊದಲನೆಯದಾಗಿ, ಹೊಸ ವರ್ಷವನ್ನು ಸ್ವಾಗತಿಸಲು ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ. ಮನೆಯ ಸ್ವಚ್ಛಗೊಳಿಸುವ ಸಮಯದಲ್ಲಿ, ಮೂಲೆಗಳು ಮತ್ತು ಅಂಚುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನೀವು ತುಂಬಾ ಸಮಯದವರೆಗೆ ಮ ಬಣ್ಣವನ್ನು ಮಾಡದಿದ್ದರೆ, ಹೊಸ ವರ್ಷಕ್ಕೆ ಗೋಡೆಗಳನ್ನು ಸಹ ಚಿತ್ರಿಸಿ ಅಥವಾ ಪೇಯಿಂಟ್ ಮಾಡಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ಬ್ರೈಟ್ ಅಥವಾ ಕಡು ಬಣ್ಣವನ್ನು ಹಚ್ಚಿದರೆ, ಮನೆಯ ವಾತಾವರಣದಲ್ಲಿ ಸಕಾರಾತ್ಮಕ ಅಂಶ ತುಂಬಿರುತ್ತದೆ.

2. ಮನೆಯ ಮೈನ್ ಗೇಟನ್ನು ಈ ರೀತಿ ಅಲಂಕರಿಸಿ:

2. ಮನೆಯ ಮೈನ್ ಗೇಟನ್ನು ಈ ರೀತಿ ಅಲಂಕರಿಸಿ:

ಹೊಸ ವರ್ಷವನ್ನು ಸ್ವಾಗತಿಸಲು ಮೈಂಗೇಟ್ ಅನ್ನು ಚೆನ್ನಾಗಿ ಅಲಂಕರಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮೈನ್ಗೇಟ್ ಮುಂದೆ ಹಳ್ಳ ಅಥವಾ ಕೊಳೆಯನ್ನು ಹೊಂದಿರುವುದು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಎಂತಹ ಪರಿಸ್ಥಿತಿಯಲ್ಲೂ, ಮನೆಯ ಬಾಗಿಲಲ್ಲಿ ಎಂದಿಗೂ ಡಸ್ಟ್ ಬಿನ್ ಇಡಬಾರದು. ಜೊತೆಗೆ ಕಸವನ್ನು ಹಾಕಬಾರದು.

3. ನಿಂತ ಗಡಿಯಾರ:

3. ನಿಂತ ಗಡಿಯಾರ:

ನಿಮ್ಮ ಮನೆಯಲ್ಲಿ ನಿಂತ ಅಥವಾ ಹಾಳಾದ ಗಡಿಯಾರ ಇದ್ದರೆ, ಅದನ್ನು ತಕ್ಷಣ ಸರಿಪಡಿಸಬೇಕು. ಮನೆಯಲ್ಲಿ ನಿಂತ ಗಡಿಯಾರ ಇಡುವುದು ಅಶುಭವೆಂದು ಹೇಳಲಾಗುತ್ತದೆ. ಇದರೊಂದಿಗೆ, ಮುರಿದ ಎಲೆಕ್ಟ್ರಾನಿಕ್ ಸರಕುಗಳನ್ನು ಸಹ ಹೊಸ ವರ್ಷದ ಮೊದಲು ಮನೆಯಿಂದ ತೆಗೆಯಬೇಕು.

4. ಸಸ್ಯಗಳು:

4. ಸಸ್ಯಗಳು:

ಮನೆ ಅಲಂಕಾರಕ್ಕಾಗಿ ಸಸ್ಯಗಳನ್ನು ಸಹ ಸೇರಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯನ್ನು ಸಸಿಗಳಿಂದ ಅಥವಾ ಗಿಡಗಳಿಂದ ಅಲಂಕಾರ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಆದರೆ ಗಲ್ಲರ್ ಸಸ್ಯವನ್ನು ಮನೆಯ ಅಂಗಳದಲ್ಲಿ ನೆಡಬಾರದು ಎಂಬುದನ್ನು ನೆನಪಿನಲ್ಲಿಡಿ.

5. ಮುರಿದ ಪಾತ್ರೆಗಳನ್ನು ತೆಗೆಯಿರಿ:

5. ಮುರಿದ ಪಾತ್ರೆಗಳನ್ನು ತೆಗೆಯಿರಿ:

ಹೊಸ ವರ್ಷವನ್ನು ಪ್ರಾರಂಭಿಸುವ ಮೊದಲು, ಮುರಿದ ಪಾತ್ರೆಗಳನ್ನು ಅಡುಗೆಮನೆಯಿಂದ ಹೊರಹಾಕಬೇಕು. ಮುರಿದ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಡುವುದು ಮನೆಗೆ ಒಳಿತಲ್ಲ ಎಂದು ಹೇಳಲಾಗುತ್ತದೆ.

English summary

New Year Vastu Tips: According To Vastu Shastra Things To Do To Get Money And Wealth

Follow these New Year Vastu Tips there will nevwe be a shortage of money and wealth in your life, have a look.
Story first published: Saturday, December 26, 2020, 17:15 [IST]
X
Desktop Bottom Promotion