For Quick Alerts
ALLOW NOTIFICATIONS  
For Daily Alerts

  ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ

  By Jaya subramanya
  |

  ನವರಾತ್ರಿ ಹಬ್ಬವು ಕೆಲವೇ ದಿನಗಳ ಅಂತರದಲ್ಲಿದೆ. ಹಬ್ಬದ ತಯಾರಿಯಲ್ಲಿ ಜನರು ಹೆಚ್ಚು ನಿರತರಾಗಿದ್ದು ಈ ಹಬ್ಬವು ತನ್ನದೇ ವಿಶೇಷತೆಗಳಿಂದಲೇ ಜನರಲ್ಲಿ ಭಕ್ತಿ ಭಾವವನ್ನು ಹೆಚ್ಚಿಸುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬವು ದೇವಿಯ ಒಂಬತ್ತು ಅವತಾರಗಳ ಅಲಂಕಾರ ಮತ್ತು ಪೂಜೆಯಾಗಿದೆ. ಹತ್ತನೇ ದಿನವೇ ವಿಜಯ ದಶಮಿ ಅಥವಾ ದಸರಾ ಹಬ್ಬವಾಗಿದೆ. ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ 

  ಇಂದಿನ ಲೇಖನದಲ್ಲಿ ನವರಾತ್ರಿಗಳಂದು ದೇವಿಗೆ ಅಲಂಕಾರ ಮಾಡುವ ಒಂಬತ್ತು ವಿಧದ ಬಣ್ಣಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡಲಿದ್ದು ಈ ಬಣ್ಣಗಳ ಹಿಂದಿರುವ ವಿಶೇಷತೆಯನ್ನು ನೀವು ಅರಿಯಲಿದ್ದೀರಿ. ನವರಾತ್ರಿಯನ್ನು ಹೆಚ್ಚು ಸ್ಮರಣೆಯಲ್ಲಿರಿಸಿಕೊಳ್ಳಲು ಸಹಾಯಕವಾಗಿರುವ ಈ ಬಣ್ಣಗಳ ಮಹತ್ವವವನ್ನು ಇಲ್ಲಿ ಅರಿತುಕೊಳ್ಳಿ....

  ನವರಾತ್ರಿ ದಿನ 1

  ನವರಾತ್ರಿ ದಿನ 1

  ಅಕ್ಟೋಬರ್ 1 ರಂದು ಶನಿವಾರ ನವರಾತ್ರಿಯ ಪ್ರಥಮ ದಿನ ಆರಂಭವಾಗುತ್ತದೆ. ಈ ದಿನ ಬೂದಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಶೈಲಪುತ್ರಿ ದೇವಿಯನ್ನು ಈ ದಿನದಂದು ಪೂಜಿಸಲಾಗುತ್ತದೆ.

  ನವರಾತ್ರಿ ದಿನ 2

  ನವರಾತ್ರಿ ದಿನ 2

  ಅಕ್ಟೋಬರ್ 2 ರಂದು ಆದಿತ್ಯವಾರ, ನವರಾತ್ರಿ ದಿನದ ಬಣ್ಣ ಕಿತ್ತಳೆಯಾಗಿದೆ. ಕಿತ್ತಳೆ ಬಣ್ಣದ ದಿರಿಸನ್ನು ನೀವು ಈ ದಿನ ತೊಟ್ಟುಕೊಳ್ಳಬಹುದಾಗಿದೆ. ಬ್ರಹ್ಮಚಾರಿಣಿಯನ್ನು ಈ ದಿನ ಪೂಜಿಸಲಾಗುತ್ತದೆ.

  ನವರಾತ್ರಿ ದಿನ 3

  ನವರಾತ್ರಿ ದಿನ 3

  ಅಕ್ಟೋಬರ್ 3 ರಂದು ಸೋಮವಾರ ಮೂರನೇ ದಿನ ಬರುತ್ತದೆ. ಈ ದಿನ ಬಿಳಿ ಬಣ್ಣಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ಚಂದ್ರಘಂಟಾ ರೂಪದಲ್ಲಿ ಈ ದಿನ ದೇವಿಯನ್ನು ಪೂಜಿಸುತ್ತಾರೆ. ಬಿಳಿ ಬಣ್ಣದ ದಿರಿಸನ್ನು ಈ ದಿನ ಭಕ್ತರು ಧರಿಸುತ್ತಾರೆ.

  ನವರಾತ್ರಿ ದಿನ 4

  ನವರಾತ್ರಿ ದಿನ 4

  ಅಕ್ಟೋಬರ್ 4 ರಂದು ಮಂಗಳವಾರ ಕೆಂಪು ಬಣ್ಣದ ದಿರಿಸನ್ನು ವಸ್ತ್ರಾಭರಣಗಳನ್ನು ನೀವು ತೊಟ್ಟುಕೊಳ್ಳಬಹುದಾಗಿದೆ. ದುರ್ಗಾ ಮಾತೆ, ಕೂಷ್ಮಾಂಡಾ ರೂಪದಲ್ಲಿ ದೇವಿಯನ್ನು ಈ ದಿನ ಪೂಜಿಸುತ್ತಾರೆ.

  ನವರಾತ್ರಿ ದಿನ 5

  ನವರಾತ್ರಿ ದಿನ 5

  ಈ ದಿನ ನೀಲಿ ಬಣ್ಣಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ಸ್ಕಂದ ಮಾತಾ ರೂಪದಲ್ಲಿ ದೇವಿಗೆ ಈ ದಿನ ಪೂಜೆಯನ್ನು ನಡೆಸಲಾಗುತ್ತದೆ. ಅಕ್ಟೋಬರ್ 5 ರ ಬುಧವಾರ ನೀಲಿ ಬಣ್ಣದ ವಸ್ತ್ರವನ್ನು ಧರಿಸಿ ದೇವಿಯ ಪೂಜೆಯನ್ನು ನೀವು ಮಾಡಬಹುದು.

  ನವರಾತ್ರಿ ದಿನ 6

  ನವರಾತ್ರಿ ದಿನ 6

  ಅಕ್ಟೋಬರ್ 6 ರ ಗುರುವಾರ ಹಳದಿ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತಾರೆ. ನವರಾತ್ರಿಯ ಆರನೇ ದಿನ ಇದಾಗಿದೆ. ಈ ಆರನೇ ದಿನ ಕಾತ್ಯಾಯಿನಿ ರೂಪದಲ್ಲಿ ದೇವಿಯನ್ನು ಪೂಜಿಸುತ್ತಾರೆ.

  ನವರಾತ್ರಿ ದಿನ 7

  ನವರಾತ್ರಿ ದಿನ 7

  ನವರಾತ್ರಿಯ ಏಳನೇ ದಿನ, ಸಪ್ತಮಿ ಎಂಬುದಾಗಿ ಈ ದಿನವನ್ನು ಕರೆಯಲಾಗಿದ್ದು, ಹಸಿರು ಬಣ್ಣದ ದಿರಿಸನ್ನು ಭಕ್ತರು ಈ ದಿನ ತೊಡುತ್ತಾರೆ. ಅಕ್ಟೋಬರ್ 7 (ಶುಕ್ರವಾರ) ದೇವಿಯನ್ನು ಕಾಳರಾತ್ರಿ ಅವತಾರದಲ್ಲಿ ಪೂಜಿಸುತ್ತಾರೆ.

  ನವರಾತ್ರಿ ದಿನ 8

  ನವರಾತ್ರಿ ದಿನ 8

  ಅಕ್ಟೋಬರ್ 8 (ಶನಿವಾರ) ನವಿಲು ಬಣ್ಣದ ದಿರಿಸನ್ನು ಧರಿಸಬಹುದಾಗಿದೆ. ಅಷ್ಟಮಿ ಎಂಬುದಾಗಿ ಈ ದಿನವನ್ನು ಕರೆಯುತ್ತಾರೆ. ಮಹಾ ಗೌರಿ ರೂಪದಲ್ಲಿ ಈ ದಿನ ದೇವಿಯನ್ನು ಪೂಜಿಸುತ್ತಾರೆ.

  ನವರಾತ್ರಿ ದಿನ 9

  ನವರಾತ್ರಿ ದಿನ 9

  ನವರಾತ್ರಿಯ ಒಂಬತ್ತನೇ ದಿನ ನೇರಳೆ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತಾರೆ. ಆದಿತ್ಯವಾರ ಈ ದಿನ ಬರುತ್ತಿದ್ದು, ಸಿದ್ಧಿದಾತ್ರಿ ರೂಪದಲ್ಲಿ ದೇವಿಯನ್ನು ಪೂಜಿಸುತ್ತಾರೆ.

   

  English summary

  Navratri Special: Nine Colours For Each Day Of Navratri

  The Navratri festival lasts for nine days, especially dedicated for worshipping the nine forms of Devi. The tenth day is celebrated as Vijayadashami or "Dussehra". Apart from the arrangements of pooja, you have to take care of something else to make yourself ready. It is a custom to wear different colours on each of these nine days. There are specific designated colours to be worn for each day.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more