For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದ ಪ್ರಕಾರ-ವಾರದಲ್ಲಿ ನಾಲ್ಕು ದಿನ ತಲೆ ಸ್ನಾನ ಮಾಡಬಾರದಂತೆ!!

By Manu
|

ಹಿಂದೂ ಧರ್ಮವು ಸಾವಿರಾರು ವರ್ಷಗಳಷ್ಟು ಪುರಾಣವಾಗಿರುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಸಂಪ್ರದಾಯಗಳು ಕೂಡ ಇದೆ. ಕೆಲವೊಂದು ಸಂಪ್ರದಾಯಗಳನ್ನು ಇಂದಿನ ಯುವಜನರು ನಂಬುವುದಿಲ್ಲ. ಇನ್ನು ಕೆಲವನ್ನು ತಾವು ನಂಬಬೇಕೇ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿ ಸಿಲುಕಿರುತ್ತಾರೆ. ಅದರಲ್ಲೂ ಮಹಿಳೆಯರ ಬಗ್ಗೆ ಕಟ್ಟುಪಾಡುಗಳು ಹೆಚ್ಚೇ ಇದೆ ಎನ್ನಬಹುದು. ಯಾಕೆಂದರೆ ಮಹಿಳೆಯರು ವಾರದ ಎಲ್ಲಾ ದಿನವೂ ಕೂದಲು ತೊಳೆಯಬಾರದು ಎಂದು ಹಿಂದೂ ಧರ್ಮವು ಹೇಳುತ್ತದೆ.

ಹಿಂದೂ ಧರ್ಮ: ಸಾವಿನ ಬಳಿಕ ಕೇಶ ಮುಂಡನ ಮಾಡುವುದು ಯಾಕೆ?

ಇದನ್ನು ಹಿಂದೂಗಳು ಇಂದಿಗೂ ಪಾಲಿಸಿಕೊಂಡು ಬರುತ್ತಾ ಇದ್ದಾರೆ. ಮಹಿಳೆಯರು ಯಾವ ದಿನದಂದು ಕೂದಲಿಗೆ ಸ್ನಾನ ಮಾಡಬಾರದು ಮತ್ತು ಪುರುಷರು ಯಾವ ದಿನ ಕೂದಲು ಕತ್ತರಿಸಬಾರದು ಎನ್ನುವ ಬಗ್ಗೆ ಕೆಲವೊಂದು ನಂಬಿಕೆಗಳು ಇದೆ. ವಾರದಲ್ಲಿ ಯಾವ ದಿನ ಕೂದಲು ತೊಳೆಯಬಾರದು ಎನ್ನುವ ಸಂಪ್ರದಾಯದ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಲಿದೆ....

ಮಂಗಳವಾರ ಕೂದಲು ತೊಳೆಯುವುದು

ಮಂಗಳವಾರ ಕೂದಲು ತೊಳೆಯುವುದು

ಕೂದಲಿಗೆ ಸ್ನಾನ ಮಾಡುವುದು ಅಥವಾ ಕೂದಲು ಕತ್ತರಿಸುವುದು ಮಂಗಳವಾರ ನಿಷಿದ್ಧ. ಮಂಗಳ ಗ್ರಹದ ಪ್ರಭಾವವಿರುವವರು ಈ ನೀತಿಯನ್ನು ತುಂಬಾ ಶಿಸ್ತುಬದ್ಧವಾಗಿ ಪಾಲಿಸಬೇಕು. ಮಂಗಳನ ಅವಕೃಪೆಗೆ ಒಳಗಾಗದೆ ಇರಲು ಮಂಗಳವಾರ ಕೂದಲಿಗೆ ಸ್ನಾನ ಮಾಡಬಾರದು.

ಬುಧವಾರ ಕೂದಲು ತೊಳೆಯುವುದು

ಬುಧವಾರ ಕೂದಲು ತೊಳೆಯುವುದು

ಹಿಂದೂ ಧರ್ಮದ ಪ್ರಕಾರ ಒಬ್ಬ ಮಗನಿರುವ ತಾಯಂದಿರು ಬುಧವಾರ ಕೂದಲಿಗೆ ಸ್ನಾನ ಮಾಡಬಾರದು. ಸ್ನಾನ ಮಾಡಿದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪುರಾಣಗಳು ಹೇಳುತ್ತವೆ. ಗಂಡು ಮಗು ಪಡೆಯಲು ಹೊಸತಾಗಿ ಮದುವೆಯಾದ ಹೆಣ್ಣುಮಕ್ಕಳು ಬುಧವಾರ ತಲೆಗೆ ಸ್ನಾನ ಮಾಡಬೇಕು.

ಗುರುವಾರ ಕೂದಲಿಗೆ ಸ್ನಾನ ಮಾಡುವುದು

ಗುರುವಾರ ಕೂದಲಿಗೆ ಸ್ನಾನ ಮಾಡುವುದು

ಪುರಾಣಗಳ ಪ್ರಕಾರ ಗುರುವಾರದಂದು ತಲೆಗೆ ಸ್ನಾನ ಮಾಡುವುದರಿಂದ ಲಕ್ಷ್ಮೀ ದೇವಿಯು ಮನೆಯಿಂದ ಹೊರಹೋಗುತ್ತಾಳಂತೆ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಕಾಡಬಹುದು. ಗುರುವಾರದಂದು ಬಟ್ಟೆ ತೊಳೆಯುವುದು ಅಶುಭವೆಂದು ನಂಬಲಾಗಿದೆ.

ಶನಿವಾರ ಕೂದಲಿಗೆ ಸ್ನಾನ ಮಾಡುವುದು

ಶನಿವಾರ ಕೂದಲಿಗೆ ಸ್ನಾನ ಮಾಡುವುದು

ಹಿಂದೂ ಧರ್ಮದ ಪ್ರಕಾರ ಶನಿವಾರದಂದು ಕೂದಲಿಗೆ ಸ್ನಾನ ಮಾಡುವುದು ಒಳ್ಳೆಯದು ಎಂದು ನಂಬಲಾಗಿದೆ. ಇದರಿಂದ ಸಾಡೇ ಸಾತಿ ಪ್ರಭಾವವು ಕಡಿಮೆಯಾಗುವುದು. ಇನ್ನೊಂದು ಮೂಲಗಳ ಪ್ರಕಾರ ಶನಿವಾರದಂದು ಕೂದಲಿಗೆ ಸ್ನಾನ ಮಾಡುವುದರಿಂದ ಶನಿ ದೇವರು ಕುಪಿತರಾಗುವರಂತೆ.

ಏನು ನಂಬಬೇಕು ಮತ್ತು ಯಾವುದನ್ನು ಬಿಡಬೇಕು ಎಂದು ತಿಳಿಯುವುದಿಲ್ಲ. ಕೆಲವೊಂದು ಪ್ರಶ್ನೆಗಳಿಗೆ ಈಗಲೂ ಉತ್ತರ ಬೇಕಾಗಿದೆ. ನಿಮ್ಮ ಅಭಿಪ್ರಾಯ ಏನೆಂದು ಕಮೆಂಟ್ ಬಾಕ್ಸ್ ಗೆ ಹಾಕಿ ತಿಳಿಸಿ.

English summary

Myths About Washing Your Hair On A Particular Day, As Per Hinduism

With so many myths around us, we wonder if we must really believe in these or not. However, there are some people who do believe in most myths and do strictly follow them. Amidst so many myths, there is a particular belief that hair must not be washed on particular days. This is something that is followed in almost every household in India, where washing hair or going in for a haircut on certain days is considered to be inauspicious or even a bad omen! Here is a list of what people believe in about washing the hair on particular days of the week.
X
Desktop Bottom Promotion