For Quick Alerts
ALLOW NOTIFICATIONS  
For Daily Alerts

ಮಾರ್ಗಶಿರ ಮಾಸ 2021: ಸಂಪತ್ತು ವೃದ್ಧಿಸಲು ಪ್ರತಿ ಗುರುವಾರ ಮಾಡಬೇಕಾದುದೇನು?

|

ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವೇ, ಮಾರ್ಗಶಿರ/ ಮಾರ್ಗಶೀರ್ಷ ಮಾಸ. ಈ ಮಾರ್ಗಶಿರ ಮಾಸದ ಪ್ರತೀ ಗುರುವಾರದಂದು ಲಕ್ಷ್ಮಿ ಪೂಜೆ ಅಥವಾ ಗುರುವಾಗ ವೃತವನ್ನು ಮಾಡಲಾಗುವುದು. ಈ ದಿನ ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನೀಡಿ ಹರಿಸುತ್ತಾಳೆ ಎಂಬ ನಂಬಿಕೆಯಿದೆ.

ಕರ್ನಾಟಕದಲ್ಲಿ ಡಿಸೆಂಬರ್‌ 5ರಿಂದ ಮಾರ್ಗಶಿರ ಮಾಸ ಪ್ರಾರಂಭವಾಗಿದ್ದು, ಜನವರಿ 2ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ ಇಲ್ಲಿ ನಾವು ಈ ತಿಂಗಳಲ್ಲಿ ಬರುವ ಗುರುವಾರ ವೃತದ ದಿನಾಂಕಗಳು, ಪೂಜಾವಿಧಿ ಹಾಗೂಇತರ ವಿಚಾರಗಳನ್ನು ತಿಳಿಸಿಕೊಡಲಿದ್ದೇವೆ.

ಮಾರ್ಗಶೀರ್ಷ/ಮಾರ್ಗಶಿರ ಗುರುವಾರ ವೃತ 2021ರ ದಿನಾಂಕ, ಸಮಯ, ಪೂಜಾ ವಿಧಿಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮಾರ್ಗಶಿರ ಮಾಸ ಗುರವಾರ ವೃತ:

ಮಾರ್ಗಶಿರ ಮಾಸ ಗುರವಾರ ವೃತ:

ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳನ್ನು ಒಂದು ಅಥವಾ ಅದಕ್ಕಿಂತ ದೇವತೆಗಳಿಗೆ ಸಮರ್ಪಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವ, ಕಾರ್ತಿಕ ಮಾಸದಲ್ಲಿ ವಿಷ್ಣುವನ್ನು ಪೂಜಿಸಿದರೆ, ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸಲಾಗುತ್ತದೆ.

ಶ್ರೀ ಕೃಷ್ಣನು ಭಗವದ್ಘಿತೆಯಲ್ಲಿ ಮಾರ್ಗಶಿರ ಮಾಸವನ್ನು ತನ್ನದೇ ರೂಪವೆಂದು ವಿವರಿಸುತ್ತಾನೆ. ಏಕೆಂದರೆ ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ದ್ಯೋತಕನಾಗಿದ್ದು, ಲಕ್ಷ್ಮಿ ಇಲ್ಲದೇ ಹರಿ ಸಂಪೂರ್ಣಲಾಗನಾರನು. ಈ ದೃಷ್ಟಿಕೋನದಿಂದ, ಮಾರ್ಗಶಿರ ಮಾಸವನ್ನು ವಿಷ್ಣು ಮತ್ತು ಲಕ್ಷ್ಮಿ ಪೂಜೆಗೆ ಅನುಕೂಲಕರವೆಂದು ಪರಿಗಣಿಸಲಾಗಿದ್ದು, ಅದರಲ್ಲೂ ಗುರುವಾಗ ವಿಷ್ಣುವಿನ ದಿನವಾಗಿರುವುದರಿಂ, ಈ ತಿಂಗಳ ಗುರುವಾರ ವಿಶೇಷವಾದ ಪ್ರಾಮುಖ್ಯತೆ ಪಡೆದುಕೊಂಡಿದೆ.

ಮಾರ್ಗಶಿರ ಮಾಸ ಗುರುವಾರ ವೃತ 2021 ದಿನಾಂಕ:

ಮಾರ್ಗಶಿರ ಮಾಸ ಗುರುವಾರ ವೃತ 2021 ದಿನಾಂಕ:

ನಮ್ಮ ಕರ್ನಾಟಕದಲ್ಲಿ ಮಾರ್ಗಶಿರ ಮಾಸದ ಗುರುವಾರ ವೃತವು ಡಿಸೆಂಬರ್‌ 9, 2021ರಿಂದ ಪ್ರಾರಂಭವಾಗಿ ಡಿಸೆಂಬರ್‌ 30, 2021ಕ್ಕೆ ಮುಕ್ತಾಯಗೊಳ್ಳುತ್ತದೆ. ಅಂದರೆ, ಈ ಮಾಸದಲ್ಲಿ ನಾಲ್ಕು ಗುರುವಾರಗಳು ಪೂಜೆಗೆ ಲಭ್ಯವಾಗುತ್ತವೆ.

ಮಾರ್ಗಶಿರ ಗುರುವಾರ ವೃತದ ಪೂಜಾ ವಿಧಿ:

ಮಾರ್ಗಶಿರ ಗುರುವಾರ ವೃತದ ಪೂಜಾ ವಿಧಿ:

1) ಪೂಜೆಯನ್ನು ಮಾಡುವ ಮೊದಲು, ಆ ಸ್ಥಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ.

2) ರಂಗೋಲಿಯ ಮಧ್ಯದಲ್ಲಿ ಸ್ವಸ್ತಿಕವನ್ನು ಬಿಡಿಸಿ.

3) ಮಾವಿನೆಲೆ, ತೆಂಗಿನಕಾಯಿಯ ಕಳಸವನ್ನು ಸ್ಥಾಪಿಸಿ.

4) ಲಕ್ಷ್ಮಿಯ ಪ್ರತಿಮೆಯನ್ನು ಮುಂಭಾಗದಲ್ಲಿ ಇರಿಸಿ.

5) ಲಕ್ಷ್ಮಿ ಸ್ತೋತ್ರವನ್ನು ಪಠಿಸುವ ಮೂಲಕ ದೇವಿಯನ್ನು ಪೂಜಿಸಿ

6)ಹಾಲು, ತೆಂಗಿನಕಾಯಿ ಮತ್ತು ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಿ.

7) ಪೂಜೆ ವ್ರತ ಕಥೆಯನ್ನು ಓದಿ.

8) ಸಂಜೆ ಆ ಕಳಸ ಮತ್ತು ಲಕ್ಷ್ಮಿಗೆ ಮತ್ತೆ ಪೂಜೆಯನ್ನು ಮಾಡಿ, ಉಪವಾಸವನ್ನು ಮುರಿಯಿರಿ.

9) ಕೊನೆಯ ಗುರುವಾರದಂದು, 5 ಕನ್ಯೆಯರಿಗೆ ತಾಂಬೂಲವನ್ನು ನೀಡಬೇಕು.

ಮಾರ್ಗಶಿರ ಗುರುವಾರ ವ್ರತದ ನಿಯಮಗಳು:

ಮಾರ್ಗಶಿರ ಗುರುವಾರ ವ್ರತದ ನಿಯಮಗಳು:

1) ನಿಮಗೆ ಗುರುವಾರ ಉಪವಾಸ ಮಾಡಲು ಸಾಧ್ಯವಾಗದಿದ್ದರೆ, ಸತ್ಯನಾರಾಯಣ ಕಥೆ ಅಥವಾ ಗುರುವಾರ ವ್ರತ ಕಥೆ ಓದಿ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ.

2) ಮಾರ್ಗಶಿರ ಮಾಸದ ಗುರುವಾರದಂದು ಲಕ್ಷ್ಮಿ ಮತ್ತು ನಾರಾಯಣನ ವಿಗ್ರಹಗಳನ್ನು ಒಟ್ಟಿಗೆ ಇರಿಸಿ. ಶ್ರೀ ಹರಿ ಬೆಲ್ಲ ಮತ್ತು ಬೇಳೆ, ಮತ್ತು ಲಕ್ಷ್ಮಿ ಗೆ ಖೀರ್ ಅಥವಾ ಹಾಲಿನೊಂದಿಗೆ ತಯಾರಿಸಿದ ಯಾವುದನ್ನಾದರೂ ಅರ್ಪಿಸಿ.

3) ಈ ದಿನ ದೇವಸ್ಥಾನಕ್ಕೆ ಗೋಧಿ ಮತ್ತು ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಂಬಲಾಗಿದೆ.

4) ಗುರುವಾರದಂದು ಹಸುವಿಗೆ ಬೆಲ್ಲ, ಬೇಳೆ ಮತ್ತು ಅರಿಶಿನವನ್ನು ರೊಟ್ಟಿಯಲ್ಲಿ ನೀಡುವುದರಿಂದ ಶ್ರೀ ಹರಿಯು ಹೆಚ್ಚುವರಿ ಅನುಗ್ರಹವನ್ನು ನೀಡುತ್ತಾನೆ. ಪೂಜೆಯ ರೂಪವಾಗಿ ಗೋವಿಗೆ ತಿಲಕವನ್ನು ಹಚ್ಚಿ.

5) ನೀವು ಯಾವುದೇ ಮಂಗಳಕರ ಕೆಲಸವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರೆ, ಮಾರ್ಗಶಿರ ಮಾಸದ ಗುರುವಾರ ಮಾಡಲು ಉತ್ತಮ ದಿನವಾಗಿದೆ. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ಪುನರಾವರ್ತನೆಯಾಗುತ್ತವೆ ಎಂದು ಹೇಳಲಾಗುತ್ತದೆ.

6) ಈ ದಿನದಂದು, ದೇವಾಲಯ ಮತ್ತು ತುಳಸಿಗೆ ದೀಪಗಳನ್ನು ಕಾಣಿಕೆಯಾಗಿ ನೀಡಿ. ಇದು ಕುಟುಂಬದ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಮಾರ್ಗಶಿರ ಗುರುವಾರ ವ್ರತದಂದು ಮಾಡಬಾರದ ಕೆಲಸಗಳು:

ಮಾರ್ಗಶಿರ ಗುರುವಾರ ವ್ರತದಂದು ಮಾಡಬಾರದ ಕೆಲಸಗಳು:

1) ಗುರುವಾರದಂದು ಕೂದಲು ತೊಳೆಯಬಾರದು ಏಕೆಂದರೆ ಅದು ಸಂಪತ್ತು ಮತ್ತು ಸಮೃದ್ಧಿಯಲ್ಲಿ ಇಳಿಕೆಗೆ ಕಾರಣವಾಗುತ್ತದೆ.

2) ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ ಏಕೆಂದರೆ ಅದು ನಮ್ಮ ಮನೆಗಳಿಗೆ ನಕಾರಾತ್ಮಕತೆಯನ್ನು ತರುತ್ತದೆ.

3) ಗುರುವಾರದಂದು ಪುರುಷರು ಅಥವಾ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ, ಏಕೆಂದರೆ ಅದು ಅಡೆತಡೆಗಳಿಗೆ ದಾರಿ ಮಾಡಿಕೊಡುತ್ತದೆ.

English summary

Margashirsha guruvar vrat 2021 Date, Puja Vidhi, Vrat Katha, Rituals and Significance

Here we talking about Margashirsha guruvar vrat 2021 Date, Puja Vidhi, Vrat Katha, Rituals and Significance, read on
Story first published: Tuesday, December 7, 2021, 16:53 [IST]
X
Desktop Bottom Promotion