Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮಕರ ಸಂಕ್ರಾಂತಿಯಂದು ತಪ್ಪದೇ ಈ ಮಂತ್ರಗಳನ್ನು ಪಠಿಸಿ - ಎಲ್ಲವೂ ಒಳ್ಳೆಯದಾಗುತ್ತದೆ
ಮಕರ ಸಂಕ್ರಾಂತಿಯು ಇನ್ನು ಕೆಲವೇ ದಿನಗಳಲ್ಲಿ ಬರಲಿದ್ದು, ಸೂರ್ಯನು ಪಥ ಬದಲಿಸುವಂತಹ ಮಹತ್ವದ ಕಾಲ ಘಟ್ಟವು ಇದಾಗಿದೆ. ಪ್ರತೀ ವರ್ಷವು ಮಕರ ಸಂಕ್ರಾಂತಿಯು ಹೆಚ್ಚಾಗಿ ಜನವರಿ 14ರಂದು ಬರುವುದು. ಆದರೆ ಈ ವರ್ಷ 2019ರಲ್ಲಿ ಜನವರಿ 15ರಂದು ಬಂದಿದೆ. ಜನವರಿ 14ರಂದು ಸಂಜೆ 7.50ಕ್ಕೆ ಸೂರ್ಯ ಪಥ ಬದಲಾಯಿಸುವ ಕಾರಣದಿಂದಾಗಿ ಜ.15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಎರಡು ದಿನ ಕೂಡ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಇದರೊಂದಿಗೆ ನಮ್ಮ ಜೀವನದಲ್ಲೂ ಕೆಲವೊಂದು ಬದಲಾವಣೆಗಳು ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಮಕರ ಸಂಕ್ರಾಂತಿಯನ್ನು ದೇವರನ್ನು ಒಲಿಸಿಕೊಳ್ಳಲು ಕೆಲವೊಂದು ಮಂತ್ರಗಳನ್ನು ಪಠಿಸಬೇಕು. ಇದರಿಂದ ನಮ್ಮ ಜೀವನದಲ್ಲಿ ಅದೃಷ್ಟವು ಒಲಿದು ಬರುವುದು ಎಂದು ಹೇಳಲಾಗುತ್ತದೆ. ಕೆಲವೊಂದು ಧಾನ್ಯಗಳು, ಅಕ್ಕಿ ಹಾಗೂ ಇತರ ಮನೆ ಬಳಕೆಗೆ ಬೇಕಾಗುವಂತಹ ಸಾಮಗ್ರಿಗಳನ್ನು ದಾನವಾಗಿ ನೀಡುವುದರೊಂದಿಗೆ ದೇವರ ಮಂತ್ರವನ್ನು ಕೂಡ ಪಠಿಸಬೇಕು. ಈ ಪ್ರಭಾವಶಾಲಿ ಮಂತ್ರಗಳು ಯಾವುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮಕರ ಸಂಕ್ರಾಂತಿಯ ಶುಭದಿನದಂದು ನೀವು ಯಾವ ಮಂತ್ರವನ್ನು ಪಠಿಸಬೇಕು ಎಂದು ಹೇಳಲಿದ್ದೇವೆ. ಇದನ್ನು ನೀವು ಅನುಸರಿಸಿಕೊಂಡು ಹೋಗಿ ಅದೃಷ್ಟ ಒಲಿಸಿಕೊಳ್ಳಿ.

ಗಾಯತ್ರಿ ಮಂತ್ರ
``ಓಂ ಭುರ್ ಭುವಾ ಸ್ವಾಹಾ, ತಾತ್ ಸವಿತೂರ್ ವರೇಯಂ, ಭಾರ್ಗೊ ದೇವಸ್ಯ ಧೀಮಾಹಿ, ಧಿಯೊ ಯೋ ನಹಾ ಪ್ರಚೋದಯಾತ್.''
ಈ ಮಂತ್ರದ ಅರ್ಥ: ಸರ್ವಶಕ್ತನಾಗಿರುವಂತಹ ಭಗವಂತನು ನಾವು ನೀತಿವಂತ ಮಾರ್ಗದಲ್ಲಿ ನಡೆಯುವಂತೆ ಬುದ್ಧಿಯನ್ನು ಕರುಣಿಸಲಿ. ಹಿಂದೂ ಧರ್ಮದಲ್ಲಿ ಇದು ತುಂಬಾ ಅಗ್ರಮಾನ್ಯ ಮಂತ್ರವಾಗಿದೆ. ಇದು ಬೆಳಕು ಹಾಗೂ ಜೀವ ನೀಡುವಂತಹ ಸೂರ್ಯ ದೇವರಿಗೆ ಸಲ್ಲಿಸುವಂತಹ ಪ್ರಾರ್ಥನೆಯಾಗಿದೆ.

ಸೂರ್ಯ ಮೂಲ ಮಂತ್ರ
``ಓಂ ಹ್ರಮ್ ಹ್ರಮ್ ಹ್ರಮ್ ಸಃ ಸುರ್ಯಾಯ ನಮಃ''

ಸೂರ್ಯ ಅವಾಹನ ಮಂತ್ರ
``ಓಂ ಸಹಸ್ರಾ ಶಿರಶ ಪುರುಷ ಪುರುಷ ಸಹಸ್ರಕ್ಷ್ ಶಹಸ್ತ ಪಾಕ್ ಸ ಭೂಮಿ ಗ್ವಾಮ್ ಸಬೈತ್ ಸ್ತಪುತ್ವಾ ಅಯತಿಶ್ತ್ ದರ್ಶಂ ಗುಲಾಮ್.''

ಆರಾಧ್ಯ ಸಮರ್ಪಣೆಗೆ ಸೂರ್ಯ ಮಂತ್ರ
``ಓಂ ಸೂರ್ಯ ದೇವಂ ನಮಸ್ತೆ ಸ್ತು ಗ್ರಿಹಾನಮ್ ಕರೂನ್ ಕರಮ್ ಅಗ್ರ್ಯಂ ಚಾ ಫಾಲಂ ಸಂಯಕ್ತ ಗಂಧ ಮಾಲಯಾಕ್ಷತಿ ಯುತಂ''

ಸೂರ್ಯ ಗಾಯತ್ರಿ ಮಂತ್ರ
ಭಾಸ್ಕರಾಯೇ ವಿದ್ಮಯೇ ದಿವಕರಾಯೇ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್...ಓಂ ಓಂ ಓಂ.....''
ಈ ಮಂತ್ರವು ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿಯನ್ನು ತಂದುಕೊಡುವುದು ಎಂದು ಹೇಳಲಾಗಿದೆ. ಈ ಮಂತ್ರಗಳನ್ನು ನೀವು ಮಕರ ಸಂಕ್ರಾಂತಿಯ ಶುಭ ದಿನದಂದು ಹಲವಾರು ಸಲ ಪಠಿಸಿದರೆ ನಿಮಗೆ ಅದೃಷ್ಟವು ಸಿಗುವುದು.



Click it and Unblock the Notifications