Just In
Don't Miss
- Movies
"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು
- Sports
IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ
- News
ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ: ಬಸವರಾಜ ಬೊಮ್ಮಾಯಿ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹಾಪರಿನಿರ್ವಾಣ ದಿನ: ಅಂಬೇಡ್ಕರ್ ಕುರಿತ ಈ ಅಚ್ಚರಿಯ ವಿಷಯಗಳು ನಿಮಗೆ ಗೊತ್ತಿತ್ತೇ?
ಡಿಸೆಂಬರ್ 6 ನಮ್ಮ ಸಂವಿಧಾನಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಪುಣ್ಯ ತಿಥಿ. ಈ ದಿನವನ್ನು 'ಮಹಾಪರಿನಿರ್ವಾಣ ದಿನ'ವನ್ನಾಗಿ ಆಚರಿಸಲಾಗುವುದು.
ಡಾ ಬಿ. ಆರ್ ಅಂಬೇಡ್ಕರ್ ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿ,ಆದರ್ಶ ವ್ಯಕ್ತಿಯಾಗಿರುವುದು ಅವರ ಮಹಾನ್ ಚಿಂತನೆಯಿಂದ. ಆ ಕಾಲದಲ್ಲಿ ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಮಾನವತಾವಾದಿ. ಇವರು ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಹ್ಞರಾಗಿ, ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿರುವ ಕೊಡುಗೆ ಅಷ್ಟಿಟ್ಟಲ್ಲ. ಭಾರತದ ಎಂದೆಂದಿಗೂ ಮರೆಯದ, ಮರೆಯಲು ಸಾಧ್ಯವಾಗದ ಇತಿಹಾಸದ ಪುಟಗಳಲ್ಲಿದ್ದರೂ ಪ್ರತಿನಿತ್ಯದ ನಮ್ಮೆಲ್ಲರ ಜೀವನದಲ್ಲಿ ಬಂದು ಹೋಗುವ ವ್ಯಕ್ತಿತ್ವವೇ ಡಾ. ಬೀಮ್ ರಾವ್ ಅಂಬೇಡ್ಕರ್.
ಇದು ಈ ಸಮಾಜದಲ್ಲಿ ಅಸಮಾನತೆ ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತಿದೆ ಎಂದಾದರೆ ಅದಕ್ಕೆ ಕಾರಣ ಡಾ. ಬಿ. ಆರ್ ಅಂಬೇಡ್ಕರ್. ಭಾರತದ ಸಂವಿಧಾನದಲ್ಲಿ ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ರೀತಿಯ ಕಾನೂನು ಇದೆ. ಆರ್ಟಿಕಲ್ 14ರ ಪ್ರಕಾರ ಎಲ್ಲರೂ ಕಾನೂನಿನ ಮುಂದೆ ಸಂವಿಧಾನ. ಇಂಥ ಅದ್ಭುತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್.
ಭವ್ಯ ಭಾರತ ನಿರ್ಮಾಣಕ್ಕೆ ಮಹತ್ತರದ ಕೊಡುಗೆ ನೀಡಿದ ಈ ಮಹಾ ಚೇತನ 1891 ಏಪ್ರಿಲ್ 14ರಂದು ಮಧ್ಯಪ್ರದೇಶದ ಮೂಹೂವ್‌ನಲ್ಲಿ ಜನಿಸಿದ್ದರು. ದಲಿತ ಸಮುದಾಯದಲ್ಲಿ ಜನಿಸಿದ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ನೋವು -ಅವಮಾನಗಳನ್ನು ಸಹಿಸಬೇಕಾಗುತ್ತದೆ. ಕಲ್ಲಿಗೆ ಉಳಿಪೆಟ್ಟು ಬಿದ್ದಾಗ ಸುಂದರ ಮೂರ್ತಿಯಾಗುವಂತೆ ಸಮಾಜದಲ್ಲಿದ್ದ ಅಸ್ಪಶೃಶ್ಯತೆ, ಮೈಢ ನಂಬಿಕೆ, ಮೇಲು-ಕೀಳು ಎಂಬ ಜಾತಿ ಬೇಧ, ಕೀಳು ಜಾತಿಯವರನ್ನು ನಡೆಸಿಕೊಳ್ಳುವ ರೀತಿ ಈ ಎಲ್ಲಾ ತಾರತಮ್ಯ ನೋಡಿ, ಅನುಭವಿಸಿ ಬೆಳೆದ ಕಾರಣಕ್ಕೆ ಅವರಲ್ಲಿ ಈ ಅಸ್ಪಶೃಶ್ಯತೆಯನ್ನು ಬುಡದಿಂದಲೇ ಕಿತ್ತೊಗೆಯಲು ಹೋರಾಟ ಮಾಡಬೇಕೆಂಬ ಶಕ್ತಿ, ಛಲ ಬರುತ್ತದೆ.
ಅವರು ಮಾನವತಾವಾದಿಯಾಗಿದ್ದರು, ಮನುಷ್ಯರು ಎಂದ ಮೇಲೆ ಎಲ್ಲರೂ ಒಂದೇ, ಈ ಮೇಲೂ ಕೇಳು ಭಾವನೆ ಇರಬಾರದು ಎಂದು ಹೋರಾಟ ನಡೆಸಿದ್ದರು. ಅವರ ಹೋರಾಟದ ಫಲದಿಂದಾಗಿ ಹಿಂದೂಳಿದ ಸಮುದಾಯವನ್ನು ಮೇಲೆತ್ತಲು ಮೀಸಲಾತಿ ವ್ಯವಸ್ಥೆ ಮಾಡಲಾಯಿತು.
ಬ್ಯಾರಿಸ್ಟರ್ ಅಂಬೇಡ್ಕರ್ ಬಿಎ, ಎಂಎ, ಪಿಹೆಚ್‌ಡಿ, ಎಲ್ ಎಲ್ ಡಿ, ಎಂಎಸ್ಸಿ, ಡಿಎಸ್ಸಿ ಪದವಿ ಪಡೆದಿದ್ದಾರೆ.
ಅಂಬೇಡ್ಕರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರದ ಕೆಲ ಸಂಗತಿಗಳ ಬಗ್ಗೆ ನೋಡೋಣ:
* ಅಂಬೇಡ್ಕರ್ ಅವರ ಸರ್ ನೇಮ್ ಅಂಬಾವಾಡೇಕರ್, ಆದರೆ ಅವರಿಗೆ ಅಂಬೇಡ್ಕರ್ ಸರ್ ನೇಮ್ ಕೊಟ್ಟದ್ದು ಅವರ ಗುರು ಮಹದೇವ್ ಅಂಬೇಡ್ಕರ್.
* ವಿದೇಶದ ವಿಶ್ವ ವಿದ್ಯಾನಿಲಯದಲ್ಲಿ ಪಿಚ್‌ಹೆಚ್‌ಡಿ ಪಡೆದ ಮೊಟ್ಟ ಮೊದಲ ಭಾರತೀಯ ಡಾ. ಬಿ. ಆರ್ ಅಂಬೇಡ್ಕರ್.
* ಲಂಡನ್‌ನಲ್ಲಿರುವ ಮ್ಯೂಸಿಯಂನಲ್ಲಿ ಕಾಲ್ ಮಾರ್ಕ್ಸ್ ಜೊತೆ ನಿಲ್ಲಿಸಿರುವ ಏಕೈಕ ಪ್ರಿಮೆ ಅಂದರೆ ಅದು ಅಂಬೇಡ್ಕರ್ ಅವರದ್ದು.
* ನಮ್ಮ ತ್ರಿವರ್ಣ ರಾಷ್ಟ್ರಧ್ವಜವನ್ನು ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದಾಗ ಅದರ ನಡುವೆ ಅಶೋಕ ಚಕ್ರದ ಪರಿಕಲ್ಪನೆ ಕೊಟ್ಟವರು ಅಂಬೇಡ್ಕರ್.
*ಅಂಬೇಡ್ಕರ್ ಅವರು ಅತ್ಯಂತ ದೊಡ್ಡ ಖಾಸಗಿ ಹೊಂದಿದ್ದರು. ಆ ಗ್ರಂಥಾಲಯ ರಾಜಗಿರ್‌ನಲ್ಲಿದ್ದು 50,000ಕ್ಕೂ ಅಧಿಕ ಪುಸ್ತಕಗಳಿದ್ದೆವು. ಅವರು ಪ್ರತಿದಿನ ಪುಸ್ತಕ ಓದುತ್ತಿದ್ದರು, ಅವರಲ್ಲಿದ್ದ ಜ್ಞಾನಕ್ಕೆ ಅವರೇ ಸಾಟಿ.
* ಅಂಬೇಡ್ಕರ್ ಅವರಿಗೆ 64 ಭಾಷೆಗಳು ಗೊತ್ತಿತ್ತು.
* ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ 8 ವರ್ಷ ಕಲಿಯಬೇಕಾಗಿದ್ದ ಕೋರ್ಸ್ ಅನ್ನು 2 ವರ್ಷ 3 ತಿಂಗಳಿಗೆ ಮುಗಿಸಿದ್ದರು. ಇಲ್ಲಿಂದ ಡಾಕ್ಟರ್ ಆಲ್ ಸೈನ್ಸ್ ಡಾಕ್ಟರೇಟ್ ಗೌರವ ಪಡೆದ ಮೊತ್ತಮೊದಲ ಏಕೈಕ ಭಾರತೀಯ ಅಂಬೇಡ್ಕರ್. ಅವರೇ ಮೊದಲು ಅವರೇ ಕೊನೆ. ಅವರ ಆ ಸಾಧನೆ ಇದುವರೆಗೆ ಯಾರೂ ಮುರಿದಿಲ್ಲ!
* ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಪ್ರತಿಮೆಗಳಿರುವುದು ಡಾ. ಬಿ. ಆರ್ ಅಂಬೇಡ್ಕರ್ ಅವರದ್ದು.
* ಇವರು ಅದ್ಭುತ ಚಿತ್ರಗಾರರು ಆಗಿದ್ದರು. ಎಲ್ಲಾ ಕಡೆ ಕಣ್ಮುಚ್ಚಿ ಧ್ಯಾನಸ್ಥ ಬುದ್ಧನ ಚಿತ್ರವಿದ್ದರೆ ಇವರು ಕಣ್ತೆರೆದ ಬುದ್ಧನ ಚಿತ್ರ ಬರೆದರು.
* ಅಂಬೇಡ್ಕರ್ ಅವರು ಬರೆದ "The Problem of Rupee-Its Origin & its solution" ಪುಸ್ತಕದಲ್ಲಿ ನೋಟು ಅಮಾನ್ಯೀಕರಣದ ಕುರಿತು ಹೇಳಿದ್ದಾರೆ. ಆ ವಿಷಯಗಳು ಇಂದಿಗೂ ಪ್ರಸ್ತುತ.