For Quick Alerts
ALLOW NOTIFICATIONS  
For Daily Alerts

ಮಹಾನ್ ಶಕ್ತಿಸ್ವರೂಪ ಮಹಾಮೃತ್ಯುಂಜಯ ಮಂತ್ರದ ಮಹತ್ವ

By Super
|

ಮಹಾಮೃತ್ಯುಂಜಯ ಮಂತ್ರ, ಇದೊಂದು ಭಾರತದ ಅತಿ ಪುರಾತನ ಮತ್ತು ಹಿಂದೂ ಪುರಾಣ ಮತ್ತು ಧರ್ಮದಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಈ ಮಂತ್ರ ಶಿವನಿಗೆ ಸಲ್ಲುವಂತಹದ್ದಾಗಿದ್ದು ಹಿಂದಿ ಭಾಷೆಯ ಮೂರು ಪದಗಳ ಜೋಡಣೆಯಿಂದ ಈ ಹೆಸರು ಪಡೆದಿದೆ. ಮಹಾ ಎಂದರೆ ಅತಿದೊಡ್ಡ, ಮೃತ್ಯು ಅಥವಾ ಮೃತ್ಯುಂ ಅಂದರೆ ಸಾವು ಮತ್ತು ಜಯ ಅಂದರೆ ಗೆಲುವು ಅಥವಾ ಯಶಸ್ಸು, ಈ ಮೂರೂ ಪದಗಳು ಸೇರಿ ಸಾವಿನ ಮೇಲೆ ಸಾಧಿಸಿದ ಮಹಾವಿಜಯ ಎಂಬ ಅರ್ಥವನ್ನು ಈ ಪದ ನೀಡುತ್ತದೆ. ಇದಕ್ಕೆ 'ರುದ್ರ ಮಂತ್ರ' ಮತ್ತು 'ತ್ರಯಂಬಕಂ ಮಂತ್ರ' ಎಂಬ ಇತರ ಹೆಸರುಗಳೂ ಇವೆ.

ಮಹಾಮೃತ್ಯುಂಜಯ ಮಂತ್ರವನ್ನು ಋಷಿ ಮಾರ್ಕಾಂಡೇಯರು ಸೃಷ್ಟಿಸಿದ್ದರು ಎಂದು ಹೇಳಲಾಗುತ್ತದೆ. ಇದಕ್ಕೆ ಪುರಾಣದಲ್ಲಿ ಕೆಲವು ಪುರಾವೆಗಳನ್ನು ನೋಡಬಹುದು. ಒಮ್ಮೆ ಚಂದ್ರ ದಕ್ಷರಾಜನ ಶಾಪಕ್ಕೊಳಗಾಗಿ ನಿಧಾನವಾಗಿ ಸಾವಿಗೆ ಒಳಗಾಗುವ ತೊಂದರೆಗೆ ಸಿಕ್ಕಿಕೊಂಡಿದ್ದ. ಈ ತೊಂದರೆಯಿಂದ ಪಾರಾಗಲು ಋಷಿ ಮಾರ್ಕಾಂಡೇಯರು ಮಹಾಮೃತ್ಯುಂಜಯ ಮಂತ್ರವನ್ನು ದಕ್ಷರಾಜನ ಮಗಳಾದ ಸತಿಗೆ ನೀಡಿ ಚಂದ್ರನನ್ನು ತೊಂದರೆಯಿಂದ ರಕ್ಷಿಸುವಂತೆ ಮಾಡುತ್ತಾರೆ.

ಇನ್ನೊಂದು ಪುರಾಣದ ಪ್ರಕಾರ ಇದೊಂದು ಬೀಜಮಂತ್ರವಾಗಿದ್ದು ಪ್ರಥಮವಾಗಿ ಶಿವನೇ ತನ್ನ ಭಕ್ತನಾದ ಮುನಿ ಶುಕ್ರಾಚಾರ್ಯರಿಗೆ ನೀಡಿದ್ದ. ಶುಕ್ರಾಚಾರ್ಯರು ಇದನ್ನು ಋಷಿ ಧದೀಚಿಗೆ ಕಲಿಸಿದರು. ಧದೀಚಿ ಇದನ್ನು ಕ್ಷುವರಾಜನಿಗೆ ಕಲಿಸಿದ. ಕ್ಷುವರಾಜ ಇದನ್ನು ಶಿವಪುರಾಣದಲ್ಲಿ ಬರೆದು ಲೋಕಾರ್ಪಣೆಗೊಳಿಸಿದ ಎಂದು ನಂಬಲಾಗಿದೆ. ಮಹಾಮೃತ್ಯುಂಜಯ ಮಂತ್ರವನ್ನು ಭಾರತೀಯ ಶಾಸ್ತ್ರದಲ್ಲಿ ಅದ್ಭುತವಾದ ಸಿದ್ಧಿಯುಳ್ಳ ಮಂತ್ರವೆಂದು ಪರಿಗಣಿಸಲಾಗಿದೆ ಹಾಗೂ ಶಿವ ದೇವರಿಗೆ ಸೇರಿದ ಮಂತ್ರವಾಗಿದೆ. ಇದನ್ನು "ರುದ್ರ ಮಂತ್ರ" ಅಥವಾ "ತ್ರ್ಯಯಂಬಕಮ್ ಮಂತ್ರ" ಎಂದೂ ಕರೆಯಲಾಗುತ್ತದೆ. ಇದರರ್ಥ ಮರಣದ ವಿರುದ್ಧ ಪಡೆದ ಗೆಲುವು ಎಂದಾಗಿದೆ.ಬನ್ನಿ ಈ ಮಹಾಮೃತ್ಯುಂಜಯ ಮಂತ್ರ ಕುರಿತು ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ತಿಳಿದುಕೊಳ್ಳೋಣ...

ಈ ಮಂತ್ರದ ಅರ್ಥವೇನು?

ಈ ಮಂತ್ರದ ಅರ್ಥವೇನು?

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |

ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್

ಈ ಮಂತ್ರದ ಅರ್ಥವೇನು?

ಈ ಮಂತ್ರದ ಅರ್ಥವೇನು?

ನಾವು ನಮ್ಮ ಎರಡು ಕಣ್ಣುಗಳ ಹಿಂದಿರುವ ಮೂರನೆಯ ಕಣ್ಣಿನ ಮೇಲೆ ಹೆಚ್ಚಿನ ಗಮನವಿರಿಸುವ ಮೂಲಕ ನಿನ್ನನ್ನು ಅರಿಯಲು ಹೆಚ್ಚಿನ ಶಕ್ತಿ ಪಡೆಯುತ್ತೇವೆ ಮತ್ತು ಇದರಿಂದ ನಾವು ಹೆಚ್ಚು ಸಂತುಷ್ಟರಾಗುತ್ತೇವೆ, ತೃಪ್ತಿಪಡುತ್ತೇವೆ ಮತ್ತು ಜೀವನದಲ್ಲಿ ಶಾಂತಿಯನ್ನು ಪಡೆಯುತ್ತೇವೆ. ನಮಗೆ ಜೀವನ ನಶ್ವರ ಎಂಬ ಸತ್ಯ ಅರಿತಿದೆ ಆದರೆ ಮೃತ್ಯುವನ್ನು ಎದುರಿಸಲು ಶಿವನೇ, ನಿನ್ನ ಶಕ್ತಿಯಿಂದ ಮಾತ್ರ ಸಾಧ್ಯವಿದ್ದು ಇದರಿಂದ ಕೊಂಚ ಹೆಚ್ಚು ಆಯಸ್ಸನ್ನು ಕರುಣಿಸು.

ಈ ಮಂತ್ರದ ಮಹತ್ವವೇನು?

ಈ ಮಂತ್ರದ ಮಹತ್ವವೇನು?

ಈ ಮಂತ್ರವನ್ನು ಸುಮ್ಮನೆ ಗುಣುಗುಣಿಸುವುದರಿಂದ ಏನೂ ಪ್ರಯೋಜನವಿಲ್ಲ. ಬದಲಿಗೆ ಭಕ್ತಿಯಿಂದ ದೇವರನ್ನು ಧ್ಯಾನಿಸಿ ಮಂತ್ರವನ್ನು ಜಪಿಸುವ ಮೂಲಕ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕವಾಗಿ ಹೆಚ್ಚು ಸಬಲರಾಗುತ್ತೇವೆ. ವಿಶೇಷವಾಗಿ ಇದೊಂದು ಮೋಕ್ಷಮಂತ್ರವಾಗಿದ್ದು ಹೆಚ್ಚಿನ ಆರೋಗ್ಯ ಮತ್ತು ದೀರ್ಘಾಯಸ್ಸು ನೀಡುತ್ತದೆ. ಕೆಲವು ಪುರಾಣಗಳ ಪ್ರಕಾರ ಮಹಾಮೃತ್ಯುಂಜಯ ಮಂತ್ರವನ್ನು ಹಲವು ಋಷಿಮುನಿಗಳ ಸಹಿತ ಪ್ರಜಾಪತಿ ದಕ್ಷನ ಶಾಪದಿಂದ ತೊಂದರೆಗೊಳಗಾಗಿದ್ದ ಚಂದ್ರನನ್ನು ಮೋಕ್ಷಗೊಳಿಸಲು ದಕ್ಷರಾಜಯ ಮಗಳಾದ ಸತಿಯೂ ಪಠಿಸಿದ್ದಳು.

ಈ ಮಂತ್ರದ ಮಹತ್ವವೇನು?

ಈ ಮಂತ್ರದ ಮಹತ್ವವೇನು?

ಈ ಮಂತ್ರದ ಪಠಣದಿಂದ ಚಂದ್ರ ನಿಧಾನವಾಗಿ ಸಾಯುತ್ತಿದ್ದ ಶಾಪ ಕೊನೆಗೊಂಡಿತ್ತು. ಬಳಿಕ ಶಿವನು ಚಂದ್ರನನ್ನು ತನ್ನ ಶಿಖೆಯ ಮೇಲಿಸಿಕೊಂಡಿದ್ದ. ಆದ್ದರಿಂದ ಮೃತ್ಯುವನ್ನು ದೂರಮಾಡಲು ಶಿವನಲ್ಲಿ ನಿವೇದಿಸಿಕೊಳ್ಳುವ ಮನವಿಯಾಗಿದೆ. ಈ ಮಂತ್ರದ ಮೂಲಕ ಚಂದ್ರನನ್ನು ಮ್ರುತ್ಯುವಿನಿಂದ ಪಾರು ಮಾಡಿದಂತೆಯೇ ನಮ್ಮನ್ನೂ ಪಾರು ಮಾಡು ಎಂಬುದು ಇದರ ತಾತ್ಪರ್ಯವಾಗಿದೆ.

ಈ ಮಂತ್ರದ ಮಹತ್ವವೇನು?

ಈ ಮಂತ್ರದ ಮಹತ್ವವೇನು?

ಅಷ್ಟೇ ಅಲ್ಲ, ಸ್ನಾನ ಮಾಡಿ ಮೈಗೆ ವಿಭೂತಿ ಹಚ್ಚಿಕೊಳ್ಳುವ ಸಮಯದಲ್ಲಿಯೂ ಈ ಮಂತ್ರವನ್ನು ಪಠಿಸಿ ಬಳಿಕ ನಡೆಸುವ ಜಪ ಮತ್ತು ಹೋಮಗಳ ಮುಖ್ಯ ಉದ್ದೇಶವೂ ಪರಿಪೂರ್ಣವಾಗುತ್ತದೆ. ಶುದ್ಧೀಕರಣ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಗಾಯತ್ರಿ ಮಂತ್ರ ಅತ್ಯುತ್ತಮವಾದರೆ ನವಯೌವನ ಮತ್ತು ಜೀವನದ ಪೋಷಣೆಗೆ ಮಹಾಮೃತ್ಯುಂಜಯ ಮಂತ್ರ ಅತ್ಯುತ್ತಮವಾಗಿದೆ.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಯಾವುದೇ ಮಂತ್ರದಂತೆ ಈ ಮಂತ್ರವನ್ನೂ ಅತಿ ಪ್ರಾಮಾಣಿಕತೆಯಿಂದ, ಭಕ್ತಿಯಿಂದ ಮತ್ತು ಪೂರ್ಣ ಶ್ರದ್ಧೆಯಿಂದ ದೇವರನ್ನೇ ಧ್ಯಾನಿಸಿ ಪಠಿಸಿದಾಗ ಮಾತ್ರ ಇದು ಶಿವನಿಗೆ ಕೇಳುತ್ತದೆ. ಇದನ್ನು ಪಠಿಸಲು ಅತ್ಯುತ್ತಮವಾದ ಸಮಯವೆಂದರೆ ಮುಂಜಾನೆಯ ಬ್ರಹ್ಮಮುಹೂರ್ತ ಅಂದರೆ ಸರಿಯಾಗಿ ನಾಲ್ಕು ಗಂಟೆಗೆ. ದಿನದ ಇತರ ಸಮಯಗಳಲ್ಲಿಯೂ ಇದನ್ನು ಪಠಿಸುವುದು ಉತ್ತಮ.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಪ್ರತಿದಿನ ನಿಮ್ಮ ಉದ್ಯೋಗಗಳಿಗೆ ಅಥವಾ ವೃತ್ತಿನಿಮಿತ್ತ ಮನೆಯಿಂದ ಹೊರಡುವ ಮುನ್ನ, ಯಾವುದಾದರೂ ಶುಭಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ, ರಾತ್ರಿ ಮಲಗುವ ಮುನ್ನ, ಯಾವುದೇ ಔಷಧಿ ಸೇವಿಸುವ ಮುನ್ನ ಈ ಮಂತ್ರವನ್ನು ಕನಿಷ್ಟ ಒಂಭತ್ತು ಬಾರಿ ಪಠಿಸಬೇಕು. ನಿಮ್ಮ ವಾಹನವನ್ನು ಚಲಾಯಿಸಲು ತೊಡಗುವ ಮುನ್ನ ಅಥವಾ ಪ್ರಯಾಣದ ವಾಹನ ಚಾಲನೆಗೂ ಮುನ್ನ ಈ ಮಂತ್ರವನ್ನು ಮೂರು ಬಾರಿ ಪಠಿಸಬೇಕು.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ದಿನದ ಇತರ ಯಾವುದೇ ಬಿಡುವಿನ ವೇಳೆಯಲ್ಲಿ ನೂರಾಎಂಟು ಬಾರಿ ಪ್ರತಿದಿನ ಪಠಿಸುವ ಮೂಲಕ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಸ್ನಾನದ ಬಳಿಕ ದೇಹಕ್ಕೆ ಹಚ್ಚಿಕೊಳ್ಳುವ ವಿಭೂತಿ, ಭಸ್ಮ, ಪವಿತ್ರ ಬೂದಿ, ಚಂದನ ಅಥವಾ ಕುಂಕುಮವನ್ನು ಹಚ್ಚಿಕೊಳ್ಳುವಾಗಲೂ ಈ ಮಂತ್ರವನ್ನು ಪಠಿಸಬೇಕು.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಇನ್ನೊಂದು ವಿಧಾನವೆಂದರೆ ಒಂದು ಲೋಟದಲ್ಲಿ ತಣ್ಣೀರು ತುಂಬಿ ಪೂರ್ವಾಭಿಮುಖವಾಗಿ, ಸಾಧ್ಯವಾದರೆ ಪದ್ಮಾಸನದಲ್ಲಿ ಅಥವಾ ಚಕ್ಕಲಮಕ್ಕಲ ಬೆನ್ನು ನೆಟ್ಟಗಿರುವಂತೆ ಕುಳಿತು ಬಲಹಸ್ತದಿಂದ ಲೋಟವನ್ನು ಮುಚ್ಚಿ ಈ ಮಂತ್ರವನ್ನು 1008 ಬಾರಿ ಪಠಿಸಿ ಈ ನೀರನ್ನು ಮನೆಯ ಒಳಗೆಲ್ಲಾ ಪ್ರೋಕ್ಷಳಿಸಿ, ಚಿಕ್ಕ ಚಮಚ ಅಥವಾ ಪ್ರಸಾದದ ಮಿಳ್ಳೆಯನ್ನು ಉಪಯೋಗಿಸಿ ಇತರ ಭಕ್ತರಿಗೂ ವಿತರಿಸಿ. ಇದರಿಂದ ಶಿವನ ಅಪಾರ ಶಕ್ತಿಯ ಒಂದು ಅಂಶ ಈ ನೀರಿಗೆ ಲಭ್ಯವಾಗಿ ಮನೆಯನ್ನು ಬೆಳಗುತ್ತದೆ ಹಾಗೂ ಭಕ್ತರಿಗೂ ಒಳ್ಳೆಯದಾಗುತ್ತದೆ.

ಹಾಲಿನ ಪ್ರಸಾದ

ಹಾಲಿನ ಪ್ರಸಾದ

ಶಿವ ದೇವರಿಗೆ ಹಾಲಿನ ಪ್ರಸಾದಗಳೆಂದರೆ ತುಂಬಾ ಪ್ರಿಯವಾದುದು. ಹಾಗಾಗಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದ ನಂತರ ಹಾಲಿನಿಂದ ಮಾಡಿದ ಪಾಯಸ, ಅಥವಾ ಇತರೆ ಹಾಲ ಉತ್ಪನ್ನಗಳನ್ನು ಶಿವ ದೇವರಿಗೆ ಅರ್ಪಿಸಿ.

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಅಪಾರ ಸಂಪತ್ತು ಮತ್ತು ಸುಖವನ್ನು ಹೊಂದುವ ಅವಕಾಶವಿದ್ದರೂ ಶಿವ ಆಯ್ದುಕೊಂಡಿದ್ದು ಹಿಮಾಲಯದ ಶೀತಲ ಪ್ರದೇಶ ಮತ್ತು ಸ್ಮಶಾನದ ವಾಸ್ತವ್ಯ. ಅಂದರೆ ಸರಳತೆ ಮತ್ತು ದುಃಖದಲ್ಲಿರುವವರಿಗೆ ಶಿವ ಸದಾ ಸಹಾಯ ಮಾಡುತ್ತಾನೆ ಎಂದು ಅರ್ಥೈಸಿಕೊಳ್ಳಬಹುದು. ಅಂತೆಯೇ ನಮ್ಮ ಸುತ್ತ ಮುತ್ತಲಿರುವ ಜನರ ಸುಖಕ್ಕೆ ಹೋಗದಿದ್ದರೂ ದುಃಖದ ಸಮಯದಲ್ಲಿ ಭಾಗಿಯಾಗುವ ಮೂಲಕ ಶಿವನ ಕೃಪೆಗೆ ಪಾತ್ರರಾಗಬಹುದು. ನಿಮ್ಮ ಸುತ್ತಮುತ್ತಲ ಜನರಲ್ಲಿ ಯಾರಾದರೂ ಕಾಯಿಲೆ ಬಿದ್ದಿದ್ದರೆ, ಅಪಘಾತಕ್ಕೊಳಗಾಗಿ ಮನೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರೆ ಇಂತಹ ಜನರನ್ನು ಭೇಟಿಯಾಗಿ ಅವರ ಪಕ್ಕ ಕುಳಿತು ಈ ಮಂತ್ರವನ್ನು ಮೌನವಾಗಿ ಪಠಿಸಿ.

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಒಂದು ವೇಳೆ ರೋಗಿ ಮರಣಶಯ್ಯೆಯಲ್ಲಿರುವ ಸಂದರ್ಭವಿದ್ದರೆ ಈ ಮಂತ್ರವನ್ನು ಜೋರಾಗಿ ಕೇಳುವಂತೆ ಪಠಿಸುವುದು ಅಥವಾ ಧ್ವನಿಮುದ್ರಣವನ್ನು ಕೇಳಿಸುವುದು ಒಳಿತು. ಇದರಿಂದ ಮರಣದ ಬಾಧೆಯಿಂದ ರೋಗಿ ಮುಕ್ತನಾಗುತ್ತಾನೆ. ಮಹಾಮೃತ್ಯುಂಜಯ ಮಂತ್ರದ ಪಠಣದಿಂದ ಪರಿಸರದಲ್ಲಿ ಒಂದು ರೀತಿಯ ಕಂಪನ ಉಂಟಾಗಿ ರೋಗಿಯ ಆತ್ಮವನ್ನು ಕೊಂಡೊಯ್ಯಲು ಆಗಮಿಸಿರುವ ದುಷ್ಟಶಕ್ತಿಗಳನ್ನು ಮತ್ತು ಋಣಾತ್ಮಕ ಶಕ್ತಿಗಳನ್ನು ದೂರಾಗಿಸಬಹುದು. ಇದರಿಂದ ರೋಗಿ ಚೇತರಿಸಿಕೊಳ್ಳಲೂ ಸಾಧ್ಯವಾಗುತ್ತದೆ.

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಇದೇ ಮಹಾಮೃತ್ಯುಂಜಯ ಮಂತ್ರದ ಮಹಾಶಕ್ತಿಯಾಗಿದೆ. ಅಷ್ಟೇ ಅಲ್ಲ, ನಿಯಮಿತವಾಗಿ ಮಂತ್ರವನ್ನು ಪಠಿಸುತ್ತಾ ಬರುವ ಮೂಲಕ ಅಕಾಲಿಕ ಮೃತ್ಯು, ಅಪಘಾತ, ಕ್ಷಾಮ, ಯಾವುದೇ ರೀತಿಯ ದೌರ್ಭಾಗ್ಯ, ನೈಸರ್ಗಿಕ ಅಥವಾ ಆರ್ಥಿಕ ವಿಪತ್ತು, ವಿವರಿಸಲಾಗದ ಸಂಕಟ ಅಥವಾ ಪರಿಸ್ಥಿತಿಗಳಿಂದ ರಕ್ಷಣೆ ಪಡೆಯಬಹುದು.

ಈ ಮಂತ್ರವನ್ನು ಬಳಸಲು ಎರಡು ವಿಧಾನಗಳಿವೆ

ಈ ಮಂತ್ರವನ್ನು ಬಳಸಲು ಎರಡು ವಿಧಾನಗಳಿವೆ

ಮಂತ್ರಗಳನ್ನು ಅಥವಾ ಮಾಲಾವನ್ನು ವ್ಯಕ್ತಿ ಪಠಿಸಬಹುದು. 108 ತುಂಬಾ ಪ್ರಮುಖವಾದುದ್ದು ಏಕೆಂದರೆ ಇದು ಗಣಿತದ ಲೆಕ್ಕಾಚಾರವನ್ನು ಹೊಂದಿದೆ. 12 ಹಾಗೂ ಒಂಭತ್ತರ ಗುಣಾಕಾರವಾಗಿದೆ 108. ಇಲ್ಲಿ 12 ರಾಶಿ ಚಕ್ರವನ್ನು ಸುಚಿಸುತ್ತದೆ ಮತ್ತು 9 ನವಗ್ರಹಗಳನ್ನು. ಒಬ್ಬ ವ್ಯಕ್ತಿ ಈ ಮಂತ್ರವನ್ನು 108 ಬಾರಿ ಪಠಿಸಿದಾಗ ಆತನ ಎಲ್ಲಾ ನವಗ್ರಹಗಳು ಮತ್ತು ರಾಶಿ ಚಕ್ರಗಳು ಆತನ ಜೀವನದಲ್ಲಿ ಮಾಡುವ ಏರು ಪೇರುಗಳನ್ನು ಹೊರತುಪಡಿಸಿ ಸರಿಯಾದ ದಾರಿಗೆ ಬರುತ್ತವೆ ಮತ್ತು ಶಾಂತವಾಗಿ ಇರುತ್ತದೆ ಏಕೆಂದರೆ ಮಾನವನ ಜೀವನವು ಅವುಗಳ ಬದಲಾದ ಸ್ವಭಾವವನ್ನು ಪುನಃ ಸ್ಥಾಪಿಸಿರುತ್ತದೆ.

ಈ ಮಂತ್ರವನ್ನು ಬಳಸಲು ಎರಡು ವಿಧಾನಗಳಿವೆ

ಈ ಮಂತ್ರವನ್ನು ಬಳಸಲು ಎರಡು ವಿಧಾನಗಳಿವೆ

ಅಸ್ವಾಭಾವಿಕ ಮರಣ ಅಥವಾ ಗಂಭೀರ ಸಾವನ್ನು ಕುರಿತು ಒಬ್ಬ ವ್ಯಕ್ತಿ ಹೆದರಿದಾಗ ಅರ್ಚಕರ ಮೂಲಕ ಮಾಡಿದ ಪೂಜೆಯನ್ನು ಆತ ಪಡೆಯಬೇಕು ಮತ್ತು ಶಿವನ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಮಾಡಿದ ನಂತರ ಹಾಗೂ ಸಾವಿರದ ಒಂದು ಮಂತ್ರವನ್ನು ಪಠಿಸಿದಾಗ ಪೂಜೆಯನ್ನು ತಯಾರು ಮಾಡಿದ ವ್ಯಕ್ತಿಗೆ ಇದರ ಫಲ ದೊರೆಯುತ್ತದೆ. ಮೇಲೆ ತಿಳಿಸಿದ ಎರಡೂ ವಿಧಾನಗಳ ಹೊರತಾಗಿ ಆತನಿಗೆ ಸಮಯದ ಕೊರತೆ ಉಂಟಾದಲ್ಲಿ ಮತ್ತು ಆತನಿಗೆ ಮಂತ್ರದ ಫಲ ದೊರೆಯಬೇಕೆಂದಲ್ಲಿ ನಿತ್ಯವೂ ಆತ ಶಿವ ದೇವರ ದೇವಸ್ಥಾನಕ್ಕೆ ಹೋಗಬೇಕು ಮತ್ತು ಶಿವ ಲಿಂಗದ ಮೇಲೆ ನೀರನ್ನು ಸುರಿದು ಮತ್ತು ಕೇವಲ ಐದು ನಿಮಿಷಗಳ ಕಾಲ ಮಂತ್ರವನ್ನು ಪಠಿಸಬೇಕು. ಶಿವ ಲಿಂಗದ ಮೇಲೆ ಬಿಲ್ವ ಪತ್ರೆಯನ್ನು ಹಾಕಿ ನೀರನ್ನು ಸುರಿದರೆ ಕೂಡ ಅತ್ಯುತ್ತಮವಾಗಿರುತ್ತದೆ. ಸೋಮವಾರದಿಂದ ಪ್ರಾರಂಭವಾಗುವ 15 ದಿನಗಳ ಒಳಗೆ ಮಾನಸಿಕ ಹಾಗೂ ದೈಹಿಕ ತೊಂದರೆಗಳಿಂದ ವ್ಯಕ್ತಿಗೆ ಪರಿಹಾರ ದೊರಕುತ್ತದೆ ಎಂಬುದು ನಿಜವಾಗಿದೆ.

English summary

Mahamrityunjaya Mantra: Significance and benefits

Mahamrityunjaya Mantra is one among the oldest and most important Mantra's in Indian mythology and spirituality. This mantra belongs to Lord Shiva. It is a combination of three Hindi language words i.e. ‘Maha’, which means great, ‘Mrityun’ means death and ‘Jaya’ means victory, which turns into conquer or victory over death.It is also known as ‘Rudra Mantra’ or ‘Trayambakam Mantra’.
X
Desktop Bottom Promotion