ಅಕ್ಷಯ ತೃತೀಯ: ಸುಖ, ನೆಮ್ಮದಿ, ಸಮೃದ್ಧಿಗಾಗಿ ಮಹಾಲಕ್ಷ್ಮೀ ಸ್ತೋತ್ರ

By: Deepak
Subscribe to Boldsky

ಲಕ್ಷ್ಮೀ ಯಾರಿಗೆ ತಾನೇ ಬೇಡ. ಪ್ರತಿಯೊಬ್ಬರಿಗೂ ಲಕ್ಷ್ಮೀ ಬೇಕು ಅದಕ್ಕಾಗಿ ಎಂಟು ಬಗೆಯ ಲಕ್ಷ್ಮೀಯ ಅವತಾರಗಳನ್ನು ನಾವು ಪೂಜಿಸುತ್ತೇವೆ. ಅಷ್ಟೈಶ್ವರ್ಯಗಳನ್ನು ನಾವು ಪಡೆಯಬೇಕೆಂದರೆ ಲಕ್ಷ್ಮೀಯರ ಕೃಪೆ ಇರಬೇಕು. ಆದಿ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ಧೈರ್ಯಲಕ್ಷ್ಮೀ, ಗಜ ಲಕ್ಷ್ಮೀ, ಸಂತಾನ ಲಕ್ಷ್ಮೀ, ವಿಜಯ ಲಕ್ಷ್ಮೀ, ವಿದ್ಯಾ ಲಕ್ಷ್ಮೀ ಮತ್ತು ಧನಲಕ್ಷ್ಮಿಯರ ಕೃಪೆ ನಮ್ಮ ಮೇಲೆ ಇದ್ದರೆ ಸಾಕು ಜೀವನದಲ್ಲಿ ನಮಗೆ ಕೊರಗು ಎನ್ನುವುದೇ ಇರುವುದಿಲ್ಲ.

ಮಹಾಲಕ್ಷ್ಮೀಯನ್ನು ಯಾರು ಪೂಜಿಸುತ್ತಾರೋ ಅವರಿಗೆ ಎಲ್ಲಾ ಬಗೆಯ ಸಂಪತ್ತು ಮತ್ತು ಸಿದ್ಧಿಯನ್ನು ದೇವಿ ಪ್ರಸಾದಿಸುತ್ತಾಳೆ ಎಂಬ ನಂಬಿಕೆ ಆಸ್ತಿಕರಲ್ಲಿ ಇದೆ. ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು? ಅದಕ್ಕಾಗಿಯೇ ನಾವು ಈ ಲೇಖನವನ್ನು ನೀಡಿರುವುದು. ನಾವು ನೀಡಿರುವ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ. ಇದು ಶ್ರೀಚಕ್ರ ಯಂತ್ರ ನಿಮ್ಮ ಮನೆಗೆ ತಂದರೆ ಎಷ್ಟು ಧನಾತ್ಮಕ ಶಕ್ತಿ ನೀಡುತ್ತದೆಯೋ, ಅಷ್ಟೇ ಶಕ್ತಿಯನ್ನು ನೀಡುತ್ತದೆ. ಶ್ರೀ ಚಕ್ರ ಯಂತ್ರವು ಮಹಾಲಕ್ಷ್ಮೀಯ ಆವಾಸ ಸ್ಥಾನ ಎಂದು ನಂಬಲಾಗುತ್ತದೆ. ಇದನ್ನು ನಿಮ್ಮ ದೇವರ ಕೋಣೆಯಲ್ಲಿಪ್ರತಿಷ್ಠಾಪಿಸಿದರೆ, ಅದರಿಂದ ಮಹಾಲಕ್ಷ್ಮೀಯ ಕೃಪೆಗೆ ನೀವು ಪಾತ್ರರಾಗಬಹುದು.  

Ashtalakshmi

ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಮಗೆ ಯಶಸ್ಸು ಈ ಯಂತ್ರ ನೀಡುತ್ತದೆ. ಜೊತೆಗೆ ಸಂಪತ್ತು ಸಹ ವೃದ್ಧಿಯಾಗುತ್ತದೆ. ಅದರಲ್ಲಿಯೂ ಅಕ್ಷಯ ತೃತಿಯ ದಿನವು ಶ್ರೀ ಚಕ್ರ ಪ್ರತಿಷ್ಠಾಪನೆಗೆ ಹೇಳಿ ಮಾಡಿಸಿದ ದಿನವಾಗಿರುತ್ತದೆ. ಲಕ್ಷ್ಮೀ ಸ್ತ್ರೋತ್ರವನ್ನು ಪಠಿಸಲು ಕೆಲವೊಂದು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸದಿದ್ದಲ್ಲಿ ಮನೆಗೆ ನಕಾರಾತ್ಮಕ ಶಕ್ತಿಗೆ ಆಹ್ವಾನ ನೀಡುತ್ತೀರಿ ಎಂದು ಶಾಸ್ತ್ರಗಳು ಎಚ್ಚರಿಸುತ್ತವೆ.  ಅಕ್ಷಯ ತೃತೀಯ ದಿನದ ಮಹತ್ವ ಮತ್ತು ಪ್ರಾಮುಖ್ಯತೆ ಏನು?

ಲಕ್ಷ್ಮೀ ಸ್ತ್ರೋತ್ರ ಪಠಿಸಲು ಇರುವ ನಿಯಮಗಳು

ಇಲ್ಲಿ ಇರುವ ನಿಯಮಗಳು ಅಕ್ಷಯ ತೃತೀಯಗೆ ಸಂಬಂಧಿಸಿದ್ದಾಗಿರುತ್ತದೆ. ಆದರೂ ಈ ನಿಯಮಗಳನ್ನು ಪ್ರತಿನಿತ್ಯ ಪಾಲಿಸಿ. ಈ ದಿನ ಪೂಜೆಯ ಕೊಠಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಗಂಗಾ ಜಲ ಇಲ್ಲವೇ ಗೋ ಮೂತ್ರ ಬಳಸಿದರೆ ಒಳ್ಳೆಯದು. ಲಕ್ಷ್ಮೀಯ ವಿಗ್ರವನ್ನು ಆಗ್ನೇಯ ಭಾಗದಲ್ಲಿ ಶ್ರೀ ಚಕ್ರ ಯಂತ್ರದ ಜೊತೆಗೆ ಇರಿಸಿ. ಲಕ್ಷ್ಮೀ ಸ್ತ್ರೋತ್ರ ಪಠಿಸುವಾಗ ನೀವು ಶ್ರೀ ಚಕ್ರ ಯಂತ್ರವನ್ನು ಸಹ ಆರಾಧಿಸಿ. ದೇವಿಗೆ ತುಪ್ಪದ ದೀಪ ಹಚ್ಚಿ, ಕುಂಕುಮ ಮತ್ತು ಹೂವನ್ನು ಸಮರ್ಪಿಸಿ. ಆರತಿ ಮಾಡಿ ಸಿಹಿಯನ್ನು ಹಂಚಿ. ಹಾಲಿನಿಂದ ಮಾಡಿದ ಪಾಯಸ ದೇವಿಗೆ ಪ್ರಿಯ ನೈವೇಧ್ಯವಾಗಿ ಇದನ್ನು ಇರಿಸಿ. 

Ashtalakshmi
 

ಲಕ್ಷ್ಮೀ ಸ್ತ್ರೋತ್ರ

ಸುಮನಸವಂದಿತ ಮಾಧವಿ

ಚಂದ್ರ ಸಹೋದರಿ ಹೇಮಮಯೀ

ಮುನಿಗಣ ಮಂಡಿತ ಮೋಕ್ಷ ಪ್ರದಾಯಿನಿ

ಮಂಜುಳಾ ಭಾಷಿಣಿ ವೇದನುತೆ

ಪಂಕಜವಾಸಿನಿ ದೇವಸುಪೂಜಿತ

ಸದ್ಗುಣ ವರ್ಷಿಣಿ ಸನ್ನಿಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ

ಆದಿಲಕ್ಷ್ಮೀ ಸದಾ ಪಾಲಯಮಾಂ...

ಆಯೋ ಕಲಿ ಕಲ್ಮಶ ನಾಶಿನಿ ಕಾಮಿನಿ ವೈದಿಕ ರೂಪಿಣಿ

Ashtalakshmi

ವೇದಮಯೀ

ಕ್ಷೀರ ಸಮುದ್ಭವ ಮಂಗಳ ರೂಪಿಣಿ ಮಂತ್ರ ನಿವಾಸಿನಿ ಮಂತ್ರನುತೆ

ಮಂಗಳ ಧ್ಯಾಯಿನಿ ಅಂಬುಜ ವಾಸಿನಿ ದೇವ ಗಣಾರ್ಚಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾಂ...

ಜಯವರ ವರ್ಣನಿ ವೈಷ್ಣವಿ ಭಾರ್ಗವಿ ಮಂತ್ರ ಸ್ವರೂಪಿಣಿ ಮಂತ್ರಮಯೀ

ಸುರಗಣ ಪೂಜಿತ ಶೀಘ್ರ ಫಲಪ್ರದ ಜ್ಞಾನ ವಿಕಾಸಿನಿ ಶಸ್ತ್ರನುತೆ

ಭವಭಯ ಹಾರಿಣಿ ಪಾಪ ವಿಮೋಚಿನಿ ಸಾಧು ಜನಾರ್ಚಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾಂ

English summary

mahalakshmi Stotra to Chant on Akshaya Tritiya

Rules to follow before chanting the Ashtalakshmi Stotra on Akshaya Tritiya While the rules listed here are applicable for the day of Akshaya Tritiya, they are to be followed on the other days when you chant the stotra too. You must clean the pooja place with Ganga Jal or with clean and pure water. The idol of Goddes Maha Lakshmi must be established in the north east corner along with the Sri Yantra.
Subscribe Newsletter