For Quick Alerts
ALLOW NOTIFICATIONS  
For Daily Alerts

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯಾರು? ಈ ವೀರಯೋಧನ ಬಗ್ಗೆ ನಿಮಗೆಷ್ಟು ಗೊತ್ತು?

|

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ (Vikram Batra) ಕುರಿತು ಬಾಲಿವುಡ್​ನಲ್ಲಿ ಶೇರ್​ಷಾ (shershaah) ಎಂಬ ಸಿನಿಮಾವೊಂದು ಇಂದು (ಆಗಸ್ಟ್ 12) ಅಮೆಜಾನ್ ಓಟಿಟಿ ಪ್ಲಾಟ್ ಫಾರಂ ಮೂಲಕ ಬಿಡುಗಡೆಯಾಗಿದೆ. ಯುದ್ಧದ ವೇಳೆ ಪ್ರಾಣಬಿಟ್ಟ ವಿಕ್ರಮ್ ಬಾತ್ರಾ ತ್ಯಾಗವು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದು, ದೇಶದ ಮೂಲೆಮೂಲೆಯ ಜನರು ಇದನ್ನು ಕೇಳಬೇಕು ಎಂಬುದು ಅವರ ಕುಟುಂಬದ ಆಸೆಯಾಗಿದೆ. ನಾಡಿನ ಹೆಮ್ಮೆಯ ವೀರನ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Inspiration Story About Captain Vikram batra

ವಿಕ್ರಮ್ ಬಾತ್ರಾರ ಸಣ್ಣ ಪರಿಚಯ ಮಾಡಿಕೊಡುವ ಪ್ರಯತ್ನ ಈ ಕೆಳಗಿದೆ:

1. ಕ್ಯಾಪ್ಟನ್ ವಿಕ್ರಮ್ ಬಾತ್ರಾ (ಪಿವಿಸಿ) ಸೆಪ್ಟೆಂಬರ್ 9, 1974 ರಂದು ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಗಿರ್ಧಾರಿ ಲಾಲ್ ಬಾತ್ರಾ ಮತ್ತು ಕಮಲ್ ಕಾಂತ ಬಾತ್ರಾ ದಂಪತಿಗೆ ಜನಿಸಿದರು. ಅವಳಿ ಮಕ್ಕಳಾಗಿ ಜನಿಸಿದ ಇವರಿಗೆ ವಿಶಾಲ್ ಬಾತ್ರಾ ಎನ್ನುವ ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದರು.

2. ವಿಕ್ರಮ್ ಬಾತ್ರಾ ಅವರು ಚಿಕ್ಕ ವಯಸ್ಸಿನಿಂದಲೂ ಆಳವಾದ ದೇಶಭಕ್ತ ಹೊಂದಿದ್ದು, ಸೇನೆಗೆ ಸೇರುವ ಆಸಕ್ತಿ ಹೊಂದಿದ್ದರು. ಈ ಚಿತ್ರದಲ್ಲಿ, ನಾವು ವಿಕ್ರಮ್ ಬಾತ್ರಾ ಹಾಗೂ ಅವರ ಅವಳಿ ಸಹೋದರರಾದ ವಿಶಾಲ್ ಬಾತ್ರಾ ಅವರನ್ನು ಕಾಣಬಹುದು.

3. ವಿಕ್ರಮ್ ಬಾತ್ರಾ ಅವರು 1997 ರಲ್ಲಿ ಭಾರತೀಯ ಸೇನೆಗೆ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ನ 13 ನೇ ಬೆಟಾಲಿಯನ್ ನ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ನಂತರ ಅವರನ್ನು ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು.

4. ಅವಳಿ ಸಹೋದರರಾದ ವಿಶಾಲ್ ಬಾತ್ರಾ, ಯುದ್ಧ ಸ್ಥಳದಿಂದ ವಿಕ್ರಂ ಬರೆದ ಪತ್ರಗಳನ್ನು ಇನ್ನೂ ಜೋಪಾನವಾಗಿ ಸಂಗ್ರಹಿಸಿಟ್ಟಿದ್ದಾರೆ. ಅದರಲ್ಲಿ ವಿಕ್ರಂ ತನ್ನ ಕೈಯಾರೆ, "ನನ್ನ ಅಕ್ಷರದ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಾನು 17,200 ಅಡಿ ಎತ್ತರದಲ್ಲಿದ್ದೇನೆ. ಇಲ್ಲಿ ತುಂಬಾ ಚಳಿ ಇದೆ" ಎಂದು ಪತ್ರದಲ್ಲಿ ಬರೆದಿದ್ದಾರೆ.

5. 1999 ರ ಜುಲೈ 7 ರಂದು ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರ "ಎ ದಿಲ್ ಮಾಂಗೆ ಮೋರ್" ಎಂಬ ಗೆಲುವಿನ ಘೋಷದೊಂದಿಗೆ ಕಾರ್ಗಿಲ್ ನ ಪಾಯಿಂಟ್ 5140 ನ್ನು ಗೆದ್ದಿದ್ದರು, ನಂತರ 4875 ಪಾಯಿಂಟ್ ನ್ನು ಗೆದ್ದು ಬಲಿದಾನಗೈದಿದ್ದರು. ಕೊನೆಯದಾಗಿ ಬಾತ್ರ ಅವರು ಗೆದ್ದಿದ್ದ 4875 ಪಾಯಿಂಟ್ ಗೆ ಬಾತ್ರಾ ಹಿಲ್ ಟಾಪ್ ಎಂದು ನಾಮಕರಣ ಮಾಡಲಾಗಿದೆ. ಎಲ್ಒಸಿಯಾದ್ಯಂತ ಇರುವ ಮೌಂಟೇನ್ ಟಾಪ್ ಇದಾಗಿದೆ.

6. ಭಾರತವು ಕಾರ್ಗಿಲ್ ಯುದ್ಧವನ್ನು ಗೆಲ್ಲಲು ಕಾರಣವಾದ ಧೈರ್ಯ, ಮಹಾನ್ ಶೌರ್ಯ ಮತ್ತು ನಾಯಕತ್ವದ ಪ್ರದರ್ಶನಕ್ಕಾಗಿ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ 'ಪರಮ ವೀರ ಚಕ್ರ' ಮರಣೋತ್ತರವಾಗಿ 1999 ರಲ್ಲಿ ನೀಡಿ ಗೌರವಿಸಲಾಗಿದೆ.

ಶೇರ್‌ಶಾ ಕ್ಯಾಪ್ಟನ್ ವಿಕ್ರಮ್ ಬಾತ್ರಾ (ಪಿವಿಸಿ) ಅವರ ಜೀವನಾಧರಿತ ಸಿನಿಮಾವಾಗಿದ್ದು, ವಿಷ್ಣು ವರಧನ್ ನಿರ್ದೇಶಿಸಿದ್ದಾರೆ. ಶಿವ ಪಂಡಿತ್, ರಾಜ್ ಅರ್ಜುನ್, ಪ್ರಣಯ್ ಪಚೌರಿ, ಹಿಮಾಂಶು ಅಶೋಕ್ ಮಲ್ಹೋತ್ರಾ, ನಿಕಿತಿನ್ ಧೀರ್, ಅನಿಲ್ ಚರಣಜೀತ್, ಸಾಹಿಲ್ ಜೊತೆಗೆ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ವೈದ್, ಶತಾಫ್ ಫಿಗರ್ ಮತ್ತು ಪವನ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಕಾಶ್ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಿಸಿದ ಶೇರ್‌ಶಾ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರದರ್ಶನ ಕಾಣುತ್ತಿದೆ.

English summary

Inspiration Story About Captain Vikram batra

Here we talking about Inspiration story about captain Vikram batra, read on
X
Desktop Bottom Promotion