For Quick Alerts
ALLOW NOTIFICATIONS  
For Daily Alerts

ಸಾಲಿಗ್ರಾಮ ಪೂಜಾ ಮಹಿಮೆ ಮತ್ತು ಅದರ ಮಹತ್ವವೇನು?

By
|

ನಮ್ಮ ದೇಶವು ಹಲವಾರು ನಿಗೂಢ ಮತ್ತು ಕುತೂಹಲಕಾರಿ ಅಂಶಗಳಿಂದ, ವಿಷಯಗಳಿಂದ ಖ್ಯಾತಿಯನ್ನು ಪಡೆದುಕೊಂಡಿದೆ. ನಾವು ಬೇರೆಬೇರೆ ದೇವರುಗಳನ್ನು ನಾವು ನಂಬುತ್ತಿದ್ದು ಅದರಂತೆ ಪ್ರತ್ಯೇಕ ಆಚರಣೆಗಳನ್ನು ನಾವು ಹೊಂದಿದ್ದೇವೆ. ಈ ದೇವರುಗಳ ರೂಪವು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅನನ್ಯವಾದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ರಾಮಾಯಣ ಮತ್ತು ಮಹಾಭಾರತ ಹಾಗೂ ಪುರಾಣಗಳಲ್ಲಿ ಬಂದಿರುವ ಉಲ್ಲೇಖಗಳನ್ನು ಮಾತುಗಳನ್ನು ಜನರ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.

ಹಿಂದೂ ಧರ್ಮದಲ್ಲಿ ಕೆಲವೊಂದು ಗುರುತುಗಳು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಪ್ರತಿಯೊಂದು ದೇವರೂ ಕೂಡ ಈ ಚಿಹ್ನೆಯನ್ನು ಆಧರಿಸಿಕೊಂಡಿದ್ದಾರೆ ಮತ್ತು ಇದು ಭಕ್ತಿ ಭಾವವನ್ನು ಭಕ್ತರಲ್ಲಿ ಉಂಟುಮಾಡುತ್ತದೆ. ಶಿವನ ಚಿಹ್ನೆಯು ಹೆಸರುವಾಸಿಯಾಗಿದ್ದು ಶಿವಲಿಂಗ ಎಂಬ ಹೆಸರಿನಿಂದ ಕರೆಯಲಾಗಿದೆ. ಹೀಗೆಯೇ ವಿಷ್ಣುವಿಗೆ ಕೂಡ ಒಂದು ಚಿಹ್ನೆ ಇದ್ದು ಅದನ್ನು ಸಾಲಿಗ್ರಾಮ ಎಂದು ಕರೆಯಲಾಗುತ್ತದೆ.

ಸಾಲಿಗ್ರಾಮ ಎಂದರೇನು?

ವೈಷ್ಣವರು ಪೂಜೆ ಮಾಡುವ ಕಪ್ಪು ಬಣ್ಣದ ಕಲ್ಲಾಗಿದೆ ಸಾಲಿಗ್ರಾಮ. ವಿಷ್ಣುವು ಇದರಲ್ಲಿ ಸ್ಥಾಪನೆಯಾಗಿದ್ದಾರೆ ಎಂಬುದಾಗಿ ವೈಷ್ಣವರು ನಂಬುತ್ತಾರೆ. ನೇಪಾಳದ ಗಂಧಕಿ ನದಿಯ ತಟದಲ್ಲಿ ಇದು ದೊರೆಯುತ್ತದೆ. ಮಿಲಿಯಗಟ್ಟಲೆ ವರ್ಷಗಳ ಹಿಂದೆ ದೇವರು ಇಲ್ಲಿ ನೆಲೆಸಿದ್ದರು ಎಂಬುದಾಗಿಯೇ ನಂಬಲಾಗಿದೆ. ಪುರಾಣಗಳಲ್ಲಿ ಸಾಲಿಗ್ರಾಮದ ಕುರಿತಾಗಿ ವಿವರಣೆಯನ್ನು ನೀಡಿದ್ದು ಇದನ್ನು ಪೂಜಿಸುವುದು ಏಕೆ ಮಹತ್ವದ್ದಾಗಿದೆ ಎಂಬುದನ್ನು ತಿಳಿಸಿದ್ದಾರೆ. ಇದರಲ್ಲಿ ನಾರಾಯಣ ಚಕ್ರದಂತಹ ಗುರುತುಗಳನ್ನು ನಾವು ಕಾಣಬಹುದಾಗಿದ್ದು ಇದು ಭಯವನ್ನುಂಟು ಮಾಡುವಂತಿದೆ.

Shaligram

ಸಾಲಿಗ್ರಾಮದ ದಂತಕಥೆ

ಈ ಸಾಲಿಗ್ರಾಮದ ಕುರಿತಾಗಿ ಒಂದು ಕಥೆ ಇದ್ದು ಸ್ವತಃ ವಿಷ್ಣುವು ಇದರಲ್ಲಿ ನೆಲೆಗೊಂಡಿದ್ದಾರೆ ಎಂಬುದಾಗಿ ನಂಬಲಾಗಿದೆ. ಒಮ್ಮೆ ಶಿವ ಮತ್ತು ಅಸುರ ಶಂಕಚೂರ್ಣನ ನಡುವೆ ಯುದ್ಧ ನಡೆಯುತ್ತಿರುತ್ತದೆ. ಶಂಕಚೂರ್ಣನನ್ನು ಸೋಲಿಸಲು ಇರುವ ಒಂದು ಮಾರ್ಗವೆಂದರೆ ಆತನ ಪತ್ನಿಯ ಪವಿತ್ರತೆಯನ್ನು ಭಂಗಪಡಿಸುವುದಾಗಿದೆ. ಶಿವನನ್ನು ಸೋಲಿಸಲು, ಶಂಕಚೂರ್ಣನು ಶಿವನ ರೂಪವನ್ನು ಧರಿಸಿ ಪಾರ್ವತಿಯನ್ನು ಸಮೀಪಿಸುತ್ತಾನೆ. ಆದರೆ ಪಾರ್ವತಿಗೆ ಅಸುರನ ನಾಟಕದ ಅರಿವು ಮೊದಲೇ ಇತ್ತು. ಇದನ್ನೆಲ್ಲಾ ನೋಡುತ್ತಿದ್ದ ವಿಷ್ಣುವು ಶಂಕಚೂರ್ಣ ಪತ್ನಿ ವೃಂದನೊಂದಿಗೆ ಕೂಡ ಇದೇ ರೀತಿಯ ನಾಟಕವನ್ನು ಆಡಲು ನಿರ್ಧರಿಸುತ್ತಾರೆ.

ವಿಷ್ಣುವು ಶಂಕಚೂರ್ಣನ ರೂಪವನ್ನು ಧರಿಸಿ ಆತನ ಪತ್ನಿಯನ್ನು ಸಮೀಪಿಸುತ್ತಾರೆ. ಆಕೆಗೆ ಅರಿಯದೆಯೇ ತನ್ನ ಪತಿ ಎಂದೇ ಭಾವಿಸಿ ಆಕೆ ಸುತ್ತಾಡಲು ಹೋಗುತ್ತಾಳೆ. ಹಿಂದಿನ ಕಾಲದಲ್ಲಿ ಈ ರೀತಿ ನಡೆದುಕೊಳ್ಳುವುದು ಪಾಪವಾಗಿತ್ತು. ಆದರೆ ವಿಷಯವನ್ನು ತಿಳಿದ ವೃಂದ ತನ್ನೊಡನೆ ಮೋಸದಾಟವನ್ನು ನಡೆಸಿದಕ್ಕಾಗಿ ವಿಷ್ಣುವನ್ನು ಶಪಿಸುತ್ತಾಳೆ. ನಿಷ್ಪ್ರಯೋಜಕ ಕಲ್ಲಾಗಿ ಪರಿವರ್ತನೆಯಾಗು ಎಂದೇ ಈ ಶಾಪವಾಗಿರುತ್ತದೆ. ಆದರೆ ವೃಂದಾ ತಾನು ಶಪಿಸಿರುವುದು ಸ್ವಯಂ ದೇವರನ್ನು ಎಂದು ತಿಳಿದೊಡನೆ ವಿಷ್ಣುವಿನಲ್ಲಿ ಕ್ಷಮೆಯನ್ನು ಬೇಡಿ ಶಾಪವನ್ನು ಹಿಂತೆಗೆದುಕೊಳ್ಳುದಾಗಿ ನುಡಿಯುತ್ತಾಳೆ. ಆದರೆ ಇದು ಸಾಧ್ಯವಿಲ್ಲದ ಮಾತಾಗಿತ್ತು. ವಿಷ್ಣುವು ತನ್ನ ಭಕ್ತರಿಗೆ ತನ್ನನ್ನು ಕಪ್ಪು ಕಲ್ಲಿನ ರೂಪದಲ್ಲಿ ಪೂಜಿಸುವಂತೆ ಹೇಳುತ್ತಾರೆ.

Shaligram

ಸಾಲಿಗ್ರಾಮವನ್ನು ಪೂಜಿಸುವುದರ ಮಹತ್ವವೇನು

ಸಾಲಿಗ್ರಾಮವನ್ನು ಪೂಜಿಸುವುದರಿಂದ ವ್ಯಕ್ತಿಯು ಬಹುತೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ತಾಮ್ರದ ತಟ್ಟೆಯಲ್ಲಿ ಸಾಲಿಗ್ರಾಮವನ್ನು ಇರಿಸಿ ಹೂವಗಳಿಂದ ಹಣ್ಣುಗಳಿಂದ ಅದನ್ನು ಪೂಜಿಸಬೇಕು. ಪೂಜೆಯನ್ನು ಬೆಳಗ್ಗೆ ಇಲ್ಲವೇ ಸಂಜೆ ನಡೆಸಬೇಕು. ತುಳಸಿಯೊಂದಿಗೆ ಇದನ್ನು ಪೂಜಿಸಬೇಕು. ಮನೆಯಲ್ಲಿ ಈ ಸಾಲಿಗ್ರಾಮವನ್ನು ಇರಿಸುವುದರಿಂದ ಆರೋಗ್ಯ ಮತ್ತು ಧನ, ಸಮೃದ್ಧಿ ಉಂಟಾಗುತ್ತದೆ. ಸಾಲಿಗ್ರಾಮವನ್ನು ತೊಳೆಯಲು ಬಳಸುವ ನೀರು ಕೂಡ ಪವಿತ್ರವಾಗಿದೆ. ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಇದು ನಿವಾರಿಸುತ್ತದೆ ಮತ್ತು ಕೆಟ್ಟ ದೃಷ್ಟಿಯನ್ನು ಹೋಗಲಾಡಿಸುತ್ತದೆ. ಮೃತ ವ್ಯಕ್ತಿಯು ವೈಕುಂಠವನ್ನು ಸೇರಲಿ ಎಂದು ಸಾಲಿಗ್ರಾಮದ ನೀರನ್ನು ನೀಡಲಾಗುತ್ತದೆ.

Shaligram

ಸಾಲಿಗ್ರಾಮವನ್ನು ಮನೆಯಲ್ಲಿ ಪೂಜಿಸುವುದು ಮನೆಯಲ್ಲಿ ಸಂತೋಷವನ್ನು ತರುತ್ತದೆ. ಗಂಧದ ಕಡ್ಡಿ, ಆರತಿ, ಧ್ಯಾನ ಮತ್ತು ಪ್ರಸಾದವನ್ನು ಮಾಡಿಕೊಂಡು ಸಾಲಿಗ್ರಾಮದ ಪೂಜೆಯನ್ನು ಮಾಡಬೇಕು. "ಓಂ ನಮೇ ಭಗವತೇ ವಾಸುದೇವಾಯ" ಎಂಬ ಮಂತ್ರದೊಂದಿಗೆ ಪ್ರತೀ ದಿನ ಬೆಳಗ್ಗೆ ಗಂಗಾಜಲದಲ್ಲಿ ಶಿವಲಿಂಗವನ್ನು ತೊಳೆಯಬೇಕು. ವಿಷ್ಣುವನ್ನು ಪ್ರೀತ್ಯರ್ಥಪಡಿಸುವ ಇತರ ಮಂತ್ರವನ್ನು ಕೂಡ ನೀವು ಪಠಿಸಬಹುದು.

English summary

Importance Of Worshipping Shaligram

Most of Hinduism is based on the ancient texts of the Ramayana, Mahabharata and the Puranas. All these widely mention the Hindu trinity, Lord Brahma, Lord Vishnu and Lord Shiva as the most important gods. It is also believed that every other god is a holy incarnation of either of these three forms. In Hinduism, certain symbols hold a very important place. Almost each god is associated with a symbol each, which is considered to be very sacred. The symbol of Lord Shiva may be very famous and well known to be a Shivalinga. Did you know that Lord Vishnu too has a symbol dedicated to him? It is called the Shaligram.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more