For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2019: ಪರಿಸರ ಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸುವುದು ಹೇಗೆ?

|

ಶಿವನ ಪುತ್ರನಾದ ಗಣೇಶನು ವಿಘ್ನಗಳ ನಿವಾರಕ. ಎಲ್ಲರ ಜೀವನದಲ್ಲೂ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡಿ, ಸಂತೋಷದ ಬೆಳಕನ್ನು ನೀಡುವನು. ಹಾಗಾಗಿ ಯಾವುದೇ ಕೆಲ ಮಾಡುವ ಮೊದಲು ಗಣೇಶನನ್ನು ಪೂಜಿಸಿ, ಕೆಲಸವನ್ನು ಆರಂಭಿಸುವುದು ವಾಡಿಕೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರಿಗೆ ಸಂಬಂಧಿಸಿದಂತೆ ಹಬ್ಬ ಹಾಗೂ ವ್ರತ ಆಚರಣೆ ಇರುವುದನ್ನು ಕಾಣಬಹುದು. ಅಂತೆಯೇ ಭಗವಾನ್ ಗಣೇಶನಿಗೆ ಸಂಬಂಧಿಸಿದಂತೆಯೇ ಗಣೇಶ ಚತುರ್ಥಿ ಎಂದು ಆಚರಿಸಲಾಗುವುದು.

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಭಾದ್ರಪದ ಮಾಸ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಈ ಹಬ್ಬದಲ್ಲಿ ಬೆಳ್ಳಿ ಗಣೇಶ ಅಥವಾ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಇಟ್ಟು, ಹಬ್ಬವೆಂದು ಆಚರಿಸಲಾಗುತ್ತದೆ. ಗಣೇಶನು ತಿಂಡಿ ಪ್ರಿಯ, ಹಾಗಾಗಿ ಅವನಿಗೆ ಇಷ್ಟವಾಗುವ ಮೋದಕ, ಕಡಬು, ಚಕ್ಕಲಿ, ಕೋಡುಬಳೆ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ಮಾಡಿ, ನೈವೈದ್ಯಕ್ಕೆ ಇಡುತ್ತಾರೆ. ಗಣೇಶನ ಮೂರ್ತಿಯನ್ನು ಕೇವಲ ಮನೆಯಲ್ಲಿ ಮಾತ್ರವಲ್ಲ, ಶಾಲಾ-ಕಾಲೇಜು, ಕಚೇರಿಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲೂ ವಿಶೇಷ ಗಾತ್ರದ ಗಣೇಶನನ್ನು ಇಟ್ಟು ಪೂಜೆ ಮಾಡಲಾಗುವುದು.

ಹಿಂದಿನ ಕಾಲದಲ್ಲಿ ಗಣೇಶ ಚತುರ್ಥಿ ಎಂದರೆ ಭಕ್ತಿ-ಭಾವದಿಂದ ಕೂಡಿರುತ್ತಿತ್ತು. ಇತ್ತೀಚೆಗೆ ಜನರು ಭಕ್ತಿ-ಭಾವದ ಜೊತೆಗೆ ಆಡಂಬರದ ಪೂಜೆಯನ್ನು ಮಾಡುತ್ತಿದ್ದಾರೆ. ಬಹುದೊಡ್ಡ ಗಾತ್ರದ ಮತ್ತು ರಾಸಾಯನಿಕ ಬಣ್ಣಗಳಿಂದ ಹೊಳೆಯುವ ಗಣೇಶನನ್ನು ಕೂರಿಸುತ್ತಾರೆ. ಪಕ್ಕದ ಮನೆಯವರಿಗಿಂತ ನಮ್ಮ ಮನೆಯಲ್ಲಿ ಹೆಚ್ಚು ಶ್ರೀಮಂತಿಕೆ ತೋರಿಸಿಕೊಳ್ಳುವ ಆಸೆ ಇರುತ್ತದೆ. ಈ ನಿಟ್ಟಿನಲ್ಲಿ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಕೂರಿಸಿ, ಬೆಳಿಗ್ಗೆಯಿಂದ ಸಂಜೆ ತನಕ ಹಾಡನ್ನು ಹಚ್ಚಿಯೇ ಇಡುವುದು, ವಾಯು ಮಾಲಿನ್ಯ ಉಂಟಾಗುವಷ್ಟು ಪಟಾಕಿ ಸಿಡಿಸುವುದು, ವಿಸರ್ಜನೆಯ ಸಂದರ್ಭದಲ್ಲೂ ಗಣೇಶನನ್ನು ಎಲ್ಲೆಂದರಲ್ಲಿ ನೀರಲ್ಲಿ ಬಿಟ್ಟು ಬರುವ ಕೆಲಸ ಮಾಡುತ್ತಾರೆ.

ಈ ಎಲ್ಲಾ ತಪ್ಪುಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು. ನಮ್ಮ ಪರಿಸರದಲ್ಲಿ ನಾವೇ ಉಂಟುಮಾಡಿದ ಮಾಲಿನ್ಯಗಳು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತವೆ. ಅದಕ್ಕಾಗಿ ಆದರೂ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಸಂತೋಷದ ಹಬ್ಬದ ಆಚರಣೆ ನಮಗೆ ನೋವನ್ನು ತರಬಾರದು. ಹಾಗಾಗಿ ನಾವು ಒಂದಿಷ್ಟು ಒಳ್ಳೆಯ ಕೆಲಸ ಹಾಗೂ ಪ್ರತಿಜ್ಞೆಯ ಮೂಲಕ ಹಬ್ಬದ ಆಚರಣೆ ಮಾಡುವುದು ಸೂಕ್ತ. ಅದರಿಂದ ಆರೋಗ್ಯಕರ ಹಬ್ಬದ ಆರಣೆ ನಮ್ಮದಾಗುವುದು. ಹಾಗಾದರೆ ನಾವು ಪಾಲಿಸಬೇಕಾದ ನಿಯಮಗಳು ಯಾವವು?

ಪರಿಸರ ಸ್ನೇಹಿ ಗಣೇಶ

ಪರಿಸರ ಸ್ನೇಹಿ ಗಣೇಶ

ನಮ್ಮ ಜೀವ ನಾಡಿ ನದಿಗಳು ಇಂದು ಬಹುತೇಕವಾಗಿ ಕಲುಷಿತಗೊಂಡಿವೆ. ಅವುಗಳ ರಕ್ಷಣೆ ಹಾಗೂ ಶುದ್ಧೀಕರಿಸುವುದು ನಮ್ಮ ಹೊಣೆ. ಈ ಉದ್ದೇಶಗಳಿಗಾಗಿ ನಾವು ಮನೆಯಲ್ಲಿ ಕೂರಿಸುವ ಗಣೇಶ ರಾಸಾಯನಿಕ ಬಣ್ಣಗಳಿಂದ ಮುಕ್ತಿ ಹೊಂದಿರುವಂತೆ ನೋಡಿಕೊಳ್ಳೋಣ. ಪರಿಸರ ಸ್ನೇಹಿ ಬಣ್ಣದಿಂದ ಅಲಂಕರಿಸಿದ ಗಣೇಶನನ್ನು ಮಾತ್ರ ಕೂರಿಸಿ. ಆಗ ನೀವು ವಿಸರ್ಜನೆ ಮಾಡಿದಾಗ ನದಿಗಳಿಗೆ ಹಾಗೂ ಜಲಚರಗಳಿಗೂ ಯಾವುದೇ ಅಪಾಯ ಉಂಟಾಗದು.

ಬಳಸುವ ವಸ್ತು ಪರಿಸರ ಸ್ನೇಹಿ ಆಗಿರಲಿ

ಬಳಸುವ ವಸ್ತು ಪರಿಸರ ಸ್ನೇಹಿ ಆಗಿರಲಿ

ಅಲಂಕೃತವಾಗಿ ಸಿಂಗರಿಸಿರುವ ಗಣೇಶನನ್ನು ನೋಡಲು ಮನೆಗೆ ಸ್ನೇಹಿತರು, ಬಂಧುಗಳು ಹಾಗೂ ನೆರೆಹೊರೆಯವರು ಬರುವುದು ಸಹಜ. ಅಂತಹ ಸಂದರ್ಭದಲ್ಲಿ ಪ್ರಸಾದವನ್ನು ನೀಡಲು ಪ್ಲಾಸಿಟ್ ತಟ್ಟೆ-ಪ್ಲೇಟ್ ಗಳನ್ನು ಬಳಸಬೇಡಿ. ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದು. ಮಣ್ಣಿನಲ್ಲಿ ಕರಗದಂತಹ ರಾಸಾಯನಿಕ ವಸ್ತು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರುವುದು ಸೂಕ್ತ. ಬಾಳೆ ಎಲೆ ಅಥವಾ ಪುನಃ ಬಳಸಬಹುದಾದಂತಹ ಸ್ಟೀಲ್ ತಟ್ಟೆಯನ್ನು ಬಳಸಿ.

ರಾಸಾಯನಿಕ ಬಣ್ಣಗಳು ಬೇಡ

ರಾಸಾಯನಿಕ ಬಣ್ಣಗಳು ಬೇಡ

ಹಬ್ಬದ ದಿನ ಮನೆಯ ಮುಂದೆ ವಿಶೇಷ ರಂಗೋಲಿ ಹಾಕುವುದು ರೂಢಿ. ಅದು ಆಕರ್ಷಕವಾಗಿ ಕಾಣಲು ರಾಸಾಯನಿಕ ಬಣ್ಣಗಳನ್ನು ಬಳಸಬೇಡಿ. ಅದನ್ನು ತುಳಿದು ಮನೆಗೆ ಬರುವುದು, ಅದರ ಧೂಳು ಮನೆಯೊಳಗೆ ಸೇರಿಕೊಳ್ಳುವುದು, ಹೀಗೆ ವಿವಿಧ ರೂಪದಲ್ಲಿ ಅದು ಪುನಃ ಮನೆಯ ಒಳಗೆ ಪ್ರವೇಶ ಪಡೆಯುವುದು. ಜೊತೆಗೆ ಸೂಕ್ಷ್ಮ ರೀತಿಯಲ್ಲಿಯೇ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಆದಷ್ಟು ಪರಿಸರ ಸ್ನೇಹಿ ಹಾಗೂ ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಿ. ರಂಗೋಲಿಯನ್ನು ಅಲಂಕರಿಸಲು ಹೂವು, ಬೇಳೆ, ಕಾಳು, ಗೋರಂಟಿ ಬಣ್ಣ, ವಿವಿಧ ಬಣ್ಣದ ಮಣ್ಣುಗಳು, ಹಿಟ್ಟುಗಳ ಬಣ್ಣವನ್ನು ಬಳಸಿ. ಆಗ ರಂಗೋಲಿಯೂ ಹೆಚ್ಚು ಆಕರ್ಷಕ ಹಾಗೂ ವಿಭಿನ್ನತೆಯಿಂದ ಕೂಡಿರುತ್ತದೆ.

ಶಬ್ದ ಮಾಲಿನ್ಯವನ್ನು ನಿಯಂತ್ರಿಸಿ

ಶಬ್ದ ಮಾಲಿನ್ಯವನ್ನು ನಿಯಂತ್ರಿಸಿ

ಗಣೇಶನನ್ನು ರಸ್ತೆಗಳಲ್ಲಿ, ಮನೆಗಳಲ್ಲಿ ಇಟ್ಟಿರುವ ವೇಳೆ ಸಣ್ಣ ಧ್ವನಿಯಲ್ಲಿಯೇ ಭಜನೆಗಳನ್ನು ಹಚ್ಚಿ. ಆಗ ಮನೆಯಲ್ಲಿ ಹಾಗೂ ಮನೆಯ ಸುತ್ತಲೂ ಸಕಾರಾತ್ಮಕ ಶಕ್ತಿ ಬರುವುದು. ಪಾಪ್ ಸಾಂಗ್, ಚಲನಚಿತ್ರಗೀತೆಗಳನ್ನು ಧ್ವನಿವರ್ಧಕ ಬಳಸಿ ಹಚ್ಚುವುದರಿಂದ ಅಕ್ಕ-ಪಕ್ಕದವರಿಗೂ ತೊಂದರೆ ಉಂಟಾಗುವುದು. ಗಣೇಶನು ಆ ರೀತಿಯ ಹಾಡುಗಳನ್ನು ಇಷ್ಟಪಡನು ಎನ್ನುವುದು ನೆನಪಿರಲಿ. ಪಟಾಕಿಯನ್ನು ಸಿಡಿಸಿ ವಾಯುಮಾಲಿನ್ಯ ಮಾಡುವುದನ್ನು ತಡೆಯಿರಿ. ಪೂಜೆಯ ಸಂದರ್ಭದಲ್ಲಿ ತಾಳ, ಜಮಟೆ, ಗಂಟೆಗಳಂತಹ ನಾದವನ್ನು ಬಾರಿಸಿ. ಇದರಿಂದ ದೇವರು ಪ್ರಸನ್ನನಾಗುವನು, ಜೊತೆಗೆ ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುವುದು.

ನೈಸರ್ಗಿಕ ಹೂವು ಬಳಕೆ

ನೈಸರ್ಗಿಕ ಹೂವು ಬಳಕೆ

ಗಣೇಶನ ಅಲಂಕಾರಕ್ಕೆ ನೈಸರ್ಗಿಕವಾದ ಹೂವುಗಳನ್ನೇ ಬಳಸಿ. ನೈಸರ್ಗಿಕ ಹೂವುಗಳೇ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಪ್ಲಾಸ್ಟಿಕ್ ಹೂವುಗಳು ಹಾಗೂ ಪರಿಸರದಲ್ಲಿ ಕರಗದಂತಹ ವಸ್ತುಗಳಿಂದ ತಯಾರಿಸಿದ ಅಲಂಕಾರಿ ವಸ್ತುಗಳನ್ನು ಬಳಸಬೇಡಿ, ಅದು ಪೂಜೆಗೆ ಯಾವುದೇ ಫಲ ಸಿಗದು. ಜೊತೆಗೆ ಮಾಲಿನ್ಯಕ್ಕೆ ಎಡೆಮಾಡಿಕೊಡುವುದು. ಪೂಜೆಯ ನಂತರ ಪ್ಲಾಸ್ಟಿಕ್ ಹೂವುಗಳನ್ನು ಎಲ್ಲೆಂದರಲ್ಲಿ ಎಸೆದರೆ ಅದು ಕಸವನ್ನುಂಟುಮಾಡುವುದು. ಜೊತೆಗೆ ಪರಿಸರದಲ್ಲಿ ಕರಗದ ವಸ್ತುವಾಗಿಯೇ ಉಳಿಯುವುದು.

ವಿಸರ್ಜನೆಯೂ ಪರಿಸರ ಸ್ನೇಹಿಯಾಗಿರಲಿ

ವಿಸರ್ಜನೆಯೂ ಪರಿಸರ ಸ್ನೇಹಿಯಾಗಿರಲಿ

ಸಾರ್ವಜನಿಕವಾಗಿ ಒಂದೇ ವಿಸರ್ಜನಾ ಟ್ಯಾಂಕ್ ಅಥವಾ ಕುಂಡವನ್ನು ಬಳಸಿ. ಅದರಿಂದ ಎಲ್ಲಾ ಹೊಳೆಯನ್ನು ಕಲುಷಿತ ಮಾಡುವುದನ್ನು ತಪ್ಪಿಸಬಹುದು. ಇದರ ಒಟ್ಟಿಗೆ ವಾಹನ ದಟ್ಟಣೆ ಉಂಟಾಗುವುದನ್ನು ಸಹ ತಡೆಯಬಹುದು. ಮನೆಯಲ್ಲಿಯೇ ಒಂದು ಬಕೇಟ್ ನೀರಿನಲ್ಲಿ ಗಣೇಶನನ್ನು ವಿಸರ್ಜನೆ ಮಾಡಬಹುದು. ಇದರಿಂದ ನೂಕು ನುಗ್ಗಲು ಉಂಟಾಗುವುದನ್ನು ತಡೆಯಬಹುದು.

English summary

How To Celebrate Eco Friendly Ganesh Chaturthi

Its time for the Lord Ganesha to arrive. The most powerful and the most merciful of all God. It is only fair that we pamper him to the fullest and extend him a grand celebration. But make sure not to disappoint him with things he really wouldn’t want you to. he would really want us to observe simplicity and ensure we do not harm or hurt the environment to impress him. We’re sure he’ll love it if you be innovative and celebrate his arrival in an eco-friendly way.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more