For Quick Alerts
ALLOW NOTIFICATIONS  
For Daily Alerts

ಆಧುನಿಕ ಜಗತ್ತಿನ ಆಧ್ಯಾತ್ಮದ ಬಗ್ಗೆ ಒಂದಿಷ್ಟು…

|

ಆಧ್ಯಾತ್ಮವೆನ್ನುವುದು ಕೇವಲ ಸನ್ಯಾಸಿ ಹಾಗೂ ಧರ್ಮಗುರುಗಳಿಗೆ ಮಾತ್ರ ಮೀಸಲಿಟ್ಟಿರುವಂತಹ ವಿಷಯವೆಂದು ಇಂದಿನ ಕಾಲದಲ್ಲಿ ಭಾವಿಸಿರುವರು. ಆಧ್ಯಾತ್ಮ ಎಂದರೆ ಏನು ಎನ್ನುವ ಪ್ರಶ್ನೆ ಕೂಡ ಬರುವುದು. ಆಧ್ಯಾತ್ಮಕ್ಕೆ ನಿಖರವಾದ ಅರ್ಥ ನೀಡಲು ಸಾಧ್ಯವಿದೆಯಾ? ಆಧ್ಯಾತ್ಮ ಎಂದರೆ ಏನು ಎನ್ನುವ ಬಗ್ಗೆ ಇಲ್ಲಿ ಒಂದು ಅರ್ಥ ನೀಡಲು ಪ್ರಯತ್ನಿಸಲಾಗಿದೆ. "ಆಧ್ಯಾತ್ಮವು ನಂಬಿಕೆ ಮತ್ತು ಆಚರಣೆಗಳಿಂದ ಕೂಡಿರುವಂತಹ ಒಂದು ಶಿಸ್ತು ಆಗಿದ್ದು, ಇದರಿಂದ ಮನುಷ್ಯನಿಗೆ ತನ್ನ ಆಂತರಿಕ ಶಾಂತಿ ಪಡೆಯಲು ಸಾಧ್ಯವಾಗುವುದು."

ಇದನ್ನು ಅರ್ಥ ಮಾಡಿಕೊಂಡ ಬಳಿಕ ಈ ಆಚರಣೆಗಳೆಲ್ಲವೂ ಎಲ್ಲಾ ಕಡೆಯೂ ಒಂದೇ ರೀತಿಯಾಗಿ ಇರುವುದಿಲ್ಲ ಎಂದು ಕೂಡ ತಿಳಿಯಬೇಕು. ಬೆಳಗ್ಗೆ ಬೇಗನೆ ಎದ್ದು ಸೂರ್ಯ ನಮಸ್ಕಾರ ಮಾಡಿ ಅಥವಾ ಧ್ಯಾನ ಮಾಡುವುದು ಒಬ್ಬ ವ್ಯಕ್ತಿಗೆ ಅದು ಆಧ್ಯಾತ್ಮವನ್ನು ಪಾಲಿಸಿದಂತೆ ಆಗಬಹುದು. ಇನ್ನೊಬ್ಬ ವ್ಯಕ್ತಿಗೆ ಅದೇ ದೇವಸ್ಥಾನಕ್ಕೆ ಹೋಗಿ, ಅಲ್ಲಿ ದೇವರೊಂದಿಗೆ ಜೀವನದ ಕೆಟ್ಟ ಹಾಗೂ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವುದು ಆಧ್ಯಾತ್ಮವು ಆಗಿರಬಹುದು.

ಮಗದೊಬ್ಬನಿಗೆ ಆಧ್ಯಾತ್ಮ ಗುರುಗಳೊಂದಿಗೆ ಮಾತನಾಡುವುದು ಮತ್ತು ಪುರಾಣಗಳಿಂದ ಪಾಠಗಳನ್ನು ಕಲಿತುಕೊಳ್ಳುವುದು ಕೂಡ ಒಂದು ರೀತಿಯ ಆಧ್ಯಾತ್ಮ ಆಗಿರಬಹುದು. ಸಮುದ್ರ, ಹಸಿರು ಅಥವಾ ಬೆಟ್ಟದ ಮೂಲಕವಾಗಿ ನಾವು ಪ್ರಕೃತಿಗೆ ಹತ್ತಿರವಾಗಿ ಇರುವುದು ಕೂಡ ಒಂದು ರೀತಿಯಲ್ಲಿ ಆಧ್ಯಾತ್ಮ ಎಂದು ಹೇಳಬಹುದು. ಇದರಿಂದ ನಾವು ತಿಳಿದುಕೊಂಡಿರುವುದು ಏನೆಂದರೆ ಆಧ್ಯಾತ್ಮ ಎನ್ನುವುದು ಒಂದು ವಸ್ತುನಿಷ್ಠ ವಿಚಾರ. ಹಾಗಾದರೆ ನಿಜವಾಗಿಯೂ ಏನು? ಆಧ್ಯಾತ್ಮಕ ನಿಜವಾದ ಉದ್ದೇಶವೇನು? ನಾವು ಸ್ವಲ್ಪ ಆಳವಾಗಿ ಹೋಗಿ, ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಮನಸ್ಸಿಗೆ ಶಾಂತಿ

ಮನಸ್ಸಿಗೆ ಶಾಂತಿ

ಪ್ರತಿಯೊಬ್ಬರಿಗೂ ಮನಸ್ಸಿನ ಶಾಂತಿ ಬೇಕು. ಅದರಲ್ಲೂ ಈ ಆಧುನಿಕ ಜಗತ್ತಿಗೆ ಇದು ಅತೀ ಅಗತ್ಯವಾಗಿರುವುದು. ಯಾಕೆಂದರೆ ಇದು ತುಂಬಾ ಮುಂದುವರಿದಿರುವ ಜಗತ್ತು ಮತ್ತು ಇನ್ನಷ್ಟು ಮುಂದುವರಿಯುತ್ತಲೇ ಇದೆ. ಹಿಂದಿನ ಕಾಲದಲ್ಲಿ ಜನರು ಪ್ರಕೃತಿಗೆ ತುಂಬಾ ಹತ್ತಿರವಾಗಿ, ಸರಳ ಜೀವನ ನಡೆಸುತ್ತಿದ್ದರು. ಆಗ ಜಗತ್ತು ಇಷ್ಟೊಂದು ಕ್ಲಿಷ್ಟವಾಗಿಯೂ ಇರಲಿಲ್ಲ. ಜಗತ್ತಿನ ಬಾಹ್ಯ ಹಾಗೂ ಆಂತರಿಕ ಸೌಕರ್ಯಗಳು ಜನರ ಮೇಲೆ ಅಷ್ಟೊಂದು ಪ್ರಭಾವ ಬೀರುತ್ತಿರಲಿಲ್ಲ. ``ಗುರು' ಹಾಗೂ ``ಗುರುಕುಲ" ದ ಕಾಲದಲ್ಲಿ ಶಾಂತಿಯು ನೆಲೆಸಿತ್ತು ಮತ್ತು ಆಧ್ಯಾತ್ಮ ಎನ್ನುವುದು ಜೀವನದ ಒಂದು ಮಾರ್ಗವಾಗಿತ್ತು. ಆಂತರಿಕ ಶಾಂತಿಯು ಆಧ್ಯಾತ್ಮದ ಅಂತಿಮ ಗುರಿಯಾಗಿತ್ತು. ಧ್ಯಾನ ಮಾಡುವ ಮೂಲಕ, ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದರಿಂದ, ಪುರಾಣಗಳ ಬಗ್ಗೆ ಇರುವ ಪ್ರವಚನಗಳನ್ನು ಕೇಳುವುದರಿಂದ ಅಥವಾ ದೇವರು ಎಂದು ಪರಿಗಣಿಸಿರುವ ಬಗ್ಗೆ ಮುಕ್ತವಾಗಿ ಮಾತನಾಡುವುದರಿಂದ ಅದು ಆಧ್ಯಾತ್ಮಿಕವಾಗಿ ನೆರವಾಗುವುದು.

ಆಧ್ಯಾತ್ಮಿಕ ಶಿಸ್ತಿನ ಮಹತ್ವ

ಆಧ್ಯಾತ್ಮಿಕ ಶಿಸ್ತಿನ ಮಹತ್ವ

ಇಂದಿನ ಕಾಲದಲ್ಲಿ ಅಂತಹ ಗುರುಗಳು ಹಾಗೂ ಆಶ್ರಮಗಳು ಇಲ್ಲದೆ ಇರುವಂತಹ ಆಧ್ಯಾತ್ಮಿಕ ಶಿಸ್ತಿನ ಮಹತ್ವವು ಕಳೆದುಹೋಗಿದೆ. ಇದರಿಂದಾಗಿ ಮನಸ್ಸಿನ ಶಾಂತಿಯು ಕಳೆದು ಹೋಗಿದೆ. ನಿಜವಾಗಿಯೂ ಆಂತರಿಕ ಶಾಂತಿ ಕಳೆದುಹೋಗಿದೆಯಾ? ಇದು ನಿಜವಾದರೆ ಆಗ ಅದನ್ನು ಮರಳಿ ಪಡೆಯುವುದು ಹೇಗೆ? ಇಂದಿನ ದಿನಗಳಲ್ಲಿ ಆಧ್ಯಾತ್ಮಿಕತೆ ಬಗ್ಗೆ ಕಲಿಯಲು ಇರುವಂತಹ ಮೂಲಗಳು ಮತ್ತು ಆಧುನಿಕ ಜಗತ್ತಿನ ಅತ್ಯಂತ ಕ್ಲಿಷ್ಟಕರ ಜೀವನದಿಂದಾಗಿ ಆಧ್ಯಾತ್ಮ ಎನ್ನುವುದಕ್ಕೆ ಯಾವುದೇ ಅರ್ಥವಿಲ್ಲ ಎನ್ನುವಂತಾಗಿದೆ. ಆಧುನಿಕ ಜಗತ್ತಿನಲ್ಲಿ ಆಧ್ಯಾತ್ಮಿಕವಾಗಿದ್ದರೆ ಏನೆಲ್ಲಾ ಲಾಭಗಳು ಸಿಗಲಿದೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಇದನ್ನು ತಿಳಿಯಿರಿ.

Most Read: ನೀವು ಆಧ್ಯಾತ್ಮಿಕ ಹಾದಿ ಏಕೆ ಅನುಸರಿಸಬೇಕು? ಇಲ್ಲಿದೆ 10 ಕಾರಣಗಳು

ಒಳ್ಳೆಯ ಮತ್ತು ಶಾಂತಿಯುತ ಸಂಬಂಧ

ಒಳ್ಳೆಯ ಮತ್ತು ಶಾಂತಿಯುತ ಸಂಬಂಧ

ಹತಾಶೆಯಿಂದ ಮಾಡುವಂತಹ ಜಗಳಗಳು ಮತ್ತು ಸಾಯುತ್ತಿರುವಂತಹ ಸಂಬಂಧಗಳಿಗೆ ಹೆಚ್ಚಿನ ಗಮನ ಬೇಕಾಗುವುದು. ಇದರ ಅರ್ಥವೇನೆಂದರೆ ನಾವು ಸಂಬಂಧಕ್ಕೆ ಸರಿಯಾದ ದಾರಿ ತೋರಿಸುತ್ತಿಲ್ಲ ಎಂದು ಅರ್ಥ. ಮನಸ್ಸಿನ ಗೊಂದಲ ಮತ್ತು ಸಂಶಯದ ಬುದ್ಧಿಯಿಂದಾಗಿ ನಾವು ವೈಯಕ್ತಿಕ ಸಂಬಂಧಕ್ಕೆ ಸರಿಯಾದ ದಿಶೆ ನೀಡಲು ಸಾಧ್ಯವಾಗುವುದಿಲ್ಲ. ಆಧ್ಯಾತ್ಮಿಕವಾದ ಧ್ಯಾನ ಮಾಡುವ ಕಾರಣದಿಂದಾಗಿ ನಾವು ಮನಸ್ಸನ್ನು ಶುದ್ಧೀಕರಿಸಬಹುದು ಮತ್ತು ಶಾಂತವಾಗಿ ಇರಬಹುದು. ಶಾಂತ ಮನಸ್ಥಿತಿ ಇದ್ದರೆ ಆಗ ಒಳ್ಳೆಯ ನಿರ್ಧಾರ ಮತ್ತು ಧನಾತ್ಮಕ ಆಲೋಚನೆಗಳು ಬರಲು ಸಾಧ್ಯವಿದೆ.

ಖಿನ್ನತೆಗೆ ಒಳ್ಳೆಯ ಪರಿಹಾರ

ಖಿನ್ನತೆಗೆ ಒಳ್ಳೆಯ ಪರಿಹಾರ

ಇದು ಕೆಲವೊಂದು ರೀತಿಯ ಗಂಭೀರ ಸಮಸ್ಯೆಗಳಾಗಿರುವಂತಹ ಖಿನ್ನತೆಯನ್ನು ನಿವಾರಣೆ ಮಾಡುವುದು. ಆಧುನಿಕ ಜಗತ್ತಿನಲ್ಲಿ ಖಿನ್ನತೆ ಎನ್ನುವುದು ಪ್ರತಿಯೊಬ್ಬರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ ಮತ್ತು ಇದಕ್ಕೆ ಆಧ್ಯಾತ್ಮವು ಸರಿಯಾದ ಪರಿಹಾರ. ಆಧ್ಯಾತ್ಮದಿಂದಾಗಿ ಜೀವನದಲ್ಲಿ ಕಳೆದುಕೊಂಡಿರುವ ಸಮತೋಲನ ಮರಳಿ ಪಡೆಯಬಹುದು.

ಪುಸ್ತಕಗಳ ಮೂಲಕ ಹೃದಯಕ್ಕೆ ಪಾಠ

ಪುಸ್ತಕಗಳ ಮೂಲಕ ಹೃದಯಕ್ಕೆ ಪಾಠ

ಪತ್ನಿಗಾಗಿ ನೀವು ಏನಾದರೂ ತುಂಬಾ ಪ್ರೀತಿಯಿಂದ ಮಾಡುತ್ತಲಿದ್ದೀರಾ? ಹಾಗಾದರೆ ಒಳ್ಳೆಯದು. ಆದರೆ ನಿಮ್ಮ ಹೃದಯವು ಅವರಿಂದ ಏನಾದರೂ ನಿರೀಕ್ಷೆಯನ್ನು ಇಟ್ಟುಕೊಂಡಿದೆಯಾ? ಹೌದು ಎಂದಾದರೆ ಆಗ ಇಲ್ಲಿ ನಿಮಗೆ ಆಧ್ಯಾತ್ಮವು ಬೇಕಾಗಿದೆ. ಜೀವನದಲ್ಲಿ ಹಲವಾರು ಸಲ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಂದ ಭಾವನಾತ್ಮಕವಾಗಿ ಏನಾದರೂ ನಿರೀಕ್ಷೆ ಮಾಡಿದ್ದರೆ ಅದು ಈಡೇರುವುದಿಲ್ಲ. ವಿಶ್ವದಾದ್ಯಂತ ಇರುವಂತಹ ಹೆಚ್ಚಿನ ಎಲ್ಲಾ ಆಧ್ಯಾತ್ಮದ ಪುಸ್ತಕಗಳಲ್ಲಿ ಹೇಳಿರುವಂತಹ ಸಾಮಾನ್ಯ ವಿಚಾರವೇನೆಂದರೆ ನಮ್ಮ ಹೃದಯವು ಜನರಿಂದ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಇತರರು ಹೇಗಿದ್ದಾರೋ ಅದರಂತೆ ಅವರನ್ನು ಸ್ವೀಕರಿಸಿ ಮತ್ತು ನಮ್ಮ ಆಯ್ಕೆಯಂತೆ ಅವರನ್ನು ಪರಿವರ್ತಿಸುವುದನ್ನು ನಿರೀಕ್ಷೆ ಮಾಡಬೇಡಿ ಎಂದು ಈ ಎಲ್ಲಾ ಪುಸ್ತಕಗಳು ನಮಗೆ ಕಲಿಸಿಕೊಡುವುದು. ನಮ್ಮ ಜೀವನದಲ್ಲಿ ದಿನನಿತ್ಯ ಆಗುಹೋಗುವಂತಹ ಕೆಲವೊಂದು ವಿಚಾರಗಳ ಬಗ್ಗೆ ನಾವು ಆಧ್ಯಾತ್ಮಿಕ ಪುಸ್ತಕಗಳಿಂದ ಕಲಿತುಕೊಳ್ಳಬಹುದು.

Most Read: ಧ್ಯಾನದಿಂದ ಜ್ಞಾನ ಪಡೆಯುವುದೇ ದಾರಿ

ಆಧ್ಯಾತ್ಮ ಮತ್ತು ವೃತ್ತಿ ಜೀವನ

ಆಧ್ಯಾತ್ಮ ಮತ್ತು ವೃತ್ತಿ ಜೀವನ

ನಿರೀಕ್ಷೆಗಳು ಕಡಿಮೆ ಮಾಡಿಕೊಂಡು, ಒಳ್ಳೆಯ ಸಂಬಂಧವಿದ್ದರೆ ಆಗ ಸಮತೋಲಿತ ವೈಯಕ್ತಿಕ ಜೀವನವಿರುವುದು. ಇದು ವೈಯಕ್ತಿಕ ಜೀವನದ ಯಶಸ್ಸಿಗೆ ದಾರಿಯಾಗಿದೆ. ನಾವು ಎಷ್ಟು ಉತ್ತಮ ಭಾವನೆ ಹೊಂದಿರುತ್ತೇವೋ, ಅಷ್ಟು ಮನಸ್ಸಿನಲ್ಲಿ ಶಾಂತಿಯು ಸಿಗುವುದು. ಶಾಂತಿಯುತ ಮನಸ್ಸು ತುಂಬಾ ಸ್ಪಷ್ಟ ಹಾಗೂ ತಾರ್ತಿಕವಾಗಿ ಆಲೋಚನೆ ಮಾಡುವುದು. ಇದರಿಂದಾಗಿ ದೂರದೃಷ್ಟಿಯು ಸುಧಾರಣೆ ಆಗುವುದು ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ಈ ಕಾರಣದಿಂದಾಗಿಯೇ ವಿಶ್ವದಾದ್ಯಂತ ಇರುವಂತಹ ಆಧ್ಯಾತ್ಮಿಕ ಗುರುಗಳು ಇಂದು ಉದ್ಯೋಗಿಗಳಿಗಾಗಿ ಆಧ್ಯಾತ್ಮಿಕ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಇದರಿಂದ ಇಂದಿನ ದಿನಗಳಲ್ಲಿ ವೃತ್ತಿ ಸ್ಥಳಗಳಲ್ಲಿ ಆಧ್ಯಾತ್ಮಿಕತೆ ಎನ್ನುವುದು ಸಾಮಾನ್ಯವಾಗಿದೆ.

ವೈದ್ಯಕೀಯ ವಿಜ್ಞಾನದಲ್ಲಿ ಆಧ್ಯಾತ್ಮ

ವೈದ್ಯಕೀಯ ವಿಜ್ಞಾನದಲ್ಲಿ ಆಧ್ಯಾತ್ಮ

ಸಂತೋಷವಾಗಿರುವಂತಹ ರೋಗಿಗಳು ಬೇರೆಲ್ಲಾ ರೋಗಿಗಳಿಗಿಂತ ಬೇಗನೆ ಚೇತರಿಸಿಕೊಳ್ಳುವರು ಎಂದು ವಿಶ್ವದಲ್ಲಿ ನಡೆಸಿರುವ ಹಲವಾರು ಸಂಶೋಧನೆಗಳು ಬಹಿರಂಪಡಿಸಿದೆ. ಆಧ್ಯಾತ್ಮವು ಮಾನಸಿಕ ಶಾಂತಿ ತರುವುದು ನಿಶ್ಚಿತ. ಇದರ ಮೂಲಕ ಬಾಹ್ಯ ಜಗತ್ತು ಮತ್ತು ಒಳಮನಸ್ಸಿನೊಂದಿಗೆ ಶಾಂತಿ ತರುವುದು ಹೇಗೆ ಎಂದು ಕಲಿಯಬಹುದು. ಇದರ ಮೂಲಕವಾಗಿ ಆಧ್ಯಾತ್ಮವು ವೈದ್ಯಕೀಯ ಲೋಕದಲ್ಲಿ ತುಂಬಾ ನೆರವಾಗುತ್ತದೆ ಎಂದು ಹೇಳಲಾಗಿದೆ.

ಇಂಜಿನಿಯರ್ ಗಳು ಚುರುಕಾಗಲಿ, ಲೆಕ್ಕ ಪರಿಶೋಧಕರು ಜಾಣರಾಗಲಿ, ವೈದ್ಯರು ತುಂಬಾ ತಾರ್ಕಿಕವಾಗಿರಲಿ, ನಿಮ್ಮ ದೃಷ್ಟಿಕೋನವು ಶುದ್ಧವಾಗಿರಲಿ. ಶಾಂತಿಯು ಮರಳಲಿ ಮತ್ತು ಆಧ್ಯಾತ್ಮವು ಜಯ ಪಡೆಯಲಿ.

English summary

How Does Spirituality Help In Modern Life?

Does being spiritual really help? Yes, it does. While the term spirituality is quite subjective and comprises differences in practices that are undertaken by spiritual people, the effects that are caused are quite similar. Peace is the bottom line, the ultimate aim of spirituality. And peace shows the way towards healthier and a happier life.
Story first published: Saturday, March 16, 2019, 17:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more