For Quick Alerts
ALLOW NOTIFICATIONS  
For Daily Alerts

ಧ್ಯಾನದಿಂದ ಜ್ಞಾನ ಪಡೆಯುವುದೇ ದಾರಿ

|

ಧ್ಯಾನವು ಜ್ಞಾನವನ್ನು ನೀಡುವುದು, ಅದೇ ಧ್ಯಾನದ ಕೊರತೆಯಿಂದ ಅಜ್ಞಾನ ಉಂಟಾಗುವುದು. ಯಾವುದು ನಿಮ್ಮನ್ನು ಮುನ್ನಡೆಸುವುದು ಮತ್ತು ಯಾವುದು ಹಿಂದೆ ಹಿಡಿದಿಟ್ಟುಕೊಳ್ಳುವುದು ಎಂದು ತಿಳಿದುಕೊಳ್ಳಿ. ಜ್ವಾನದ ಮಾರ್ಗವನ್ನು ಆಯ್ಕೆ ಮಾಡಿ-ಗೌತಮ ಬುದ್ಧ. ಭಗವಾನ್ ಬುದ್ಧ ಲೌಕಿಕ ಬದುಕನ್ನು ಬಿಟ್ಟು ನಿಜವಾದ ಜ್ಞಾನ ಸಂಪಾದನೆಯ ಮಾರ್ಗವನ್ನು ಹಿಡಿದರು. ರಾಜನಾಗಿದ್ದ ಅವರು ತನ್ನ ಐಷಾರಾಮಿ ಜೀವನವನ್ನು ತ್ಯಾಗ ಮಾಡಿ, ಸನ್ಯಾಸಿ ಆಗಿ ಪರಿವರ್ತನೆ ಆಗಿರುವುದು ತುಂಬಾ ಪ್ರೇರಣೆ ನೀಡುವುದು. ಭಗವಾನ್ ಬುದ್ಧ ರಸ್ತೆಗಳಲ್ಲಿ ಹಾಗೂ ಅರಣ್ಯಗಳಲ್ಲಿ ಹಲವಾರು ವರ್ಷಗಳ ಸುತ್ತಾಡಿದ ಬಳಿಕ ಅವರಿಗೆ ತನ್ನ ಜೀವನದ ನಿಜವಾದ ಉದ್ದೇಶ ಏನು ಎಂದು ತಿಳಿದುಬಂತು. ಈಡೇರದೆ ಇರುವಂತಹ ತೃಪ್ತಿ, ಸಾವಿರಾರು ಪ್ರಶ್ನೆಗಳು ಮತ್ತು ಮನುಷ್ಯನ ಜೀವನದ ನಿಜವಾದ ಗುರಿ ಯಾವುದು ಎಂದು ತಿಳಿಯಲು ಅವರು ಬಯಸಿದರು.

ಸ್ವಜಾಗೃತಿಗಾಗಿ ಅವರು ಧ್ಯಾನದ ಮೊರೆ ಹೋಗಿರುವುದು ತುಂಬಾ ನೆರವಿಗೆ ಬಂತು. ಧ್ಯಾನದ ಬಗ್ಗೆ ಅವರು ತುಂಬಾ ತಿಳಿದುಕೊಂಡಿದ್ದರು. ಆದರೆ ಅವರು ಇದನ್ನು ಪ್ರಯೋಗ ಮಾಡಿದ ಬಳಿಕವಷ್ಟೇ ಇದರಲ್ಲಿ ನಂಬಿಕೆಯನ್ನಿಟ್ಟರು. ಬಿಹಾರದ ಬೋಧಗಯಾದಲ್ಲಿ ಇರುವಂತಹ ಬೋಧಿ ವೃಕ್ಷದ ಕೆಳಗಡೆ ಕುಳಿತುಕೊಂಡು ಅವರು ಹಲವು ವರ್ಷಗಳ ಕಾಲ ಧ್ಯಾನದಲ್ಲಿ ನಿರತರಾದರು ಮತ್ತು ಅಂತಿಮವಾಗಿ ಅವರಿಗೆ ಇಲ್ಲಿ ಜ್ಞಾನೋದಯವಾಯಿತು. ಶ್ರೀರಾಮ ಮತ್ತು ಕೃಷ್ಣ ದೇವರ ಗುರುಗಳು ಪೌರಾಣಿಕ ವ್ಯಕ್ತಿಗಳಾಗಿದ್ದರು. ಸ್ವಾಮಿ ವಿವೇಕಾನಂದ, ಭಗವಾನ್ ಬುದ್ಧ, ಭಗವಾನ್ ಮಹಾವೀರ ಮುಂತಾದ ಸನ್ಯಾಸಿಗಳು ಸಾಮಾನ್ಯ ಜನರಿಂದ ಸನ್ಯಾಸತ್ವ ಪಡೆದವರು. ಅದಾಗ್ಯೂ, ಇವೆಲ್ಲರಿಗೆ ಧ್ಯಾನದ ಬಗ್ಗೆ ಒಂದೇ ರೀತಿಯ ಅಭಿಪ್ರಾಯವಿದೆ. ಎಲ್ಲಾ ಶ್ರೇಷ್ಠ ವ್ಯಕ್ತಿಗಳು ಒಂದೇ ರೀತಿಯಾಗಿ ಆಲೋಚಿಸುತ್ತಾರೆ ಎನ್ನುವುದು ಇಲ್ಲಿ ನಿಜವಾಗಿದೆ.

ಧ್ಯಾನ ಮಾಡಲು ವಿವಿಧ ಹಂತಗಳು, ವಿಧಗಳು ಮತ್ತು ಉಪವಿಧಗಳು ಇವೆ

ಧ್ಯಾನ ಮಾಡಲು ವಿವಿಧ ಹಂತಗಳು, ವಿಧಗಳು ಮತ್ತು ಉಪವಿಧಗಳು ಇವೆ

ಹೌದು ಧ್ಯಾನ ಮಾಡಲು ವಿವಿಧ ಹಂತಗಳು, ವಿಧಗಳು ಮತ್ತು ಉಪವಿಧಗಳು ಇವೆ. ಕೆಲವೊಂದು ಸಲ ಧ್ಯಾನದ ವೇಳೆ ನೀವು ಆ ದಿನದಲ್ಲಿ ಮಾಡಿರುವಂತಹ ಎಲ್ಲಾ ಕೆಲಸಗಳ ಬಗ್ಗೆ ಮತ್ತೆ ಆಲೋಚಿಸಲು ಹೇಳಬಹುದು. ಇನ್ನು ಕೆಲವೊಂದು ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಮುಚ್ಚಿಕೊಂಡು ಶೂನ್ಯ ಭಾವನೆ ಇರುವಂತೆ ಮಾಡಬಹುದು. ಇನ್ನು ಕೆಲವು ಸಲ ಭಾವನೆಗಳು ಹಾಗೆಯೇ ಮುಕ್ತವಾಗಿ ಹರಿದುಹೋಗುವಂತೆ ಮಾಡಬಹುದು. ಇಂದಿನ ದಿನಗಳಲ್ಲಿ ಧ್ಯಾನವನ್ನು ಶಾಲೆ ಹಾಗೂ ಉದ್ಯೋಗದ ಸ್ಥಳಗಳಲ್ಲಿಯೂ ಹೇಳಿಕೊಡಲಾಗುತ್ತಿದೆ. ಇದು ನಿಜವಾಗಿಯೂ ಅಷ್ಟು ಮುಖ್ಯವೇ ಎನ್ನುವ ಪ್ರಶ್ನೆ ಬರುವುದು. ಭಗವಾನ್ ಬುದ್ಧ ಅವರು ಹೇಳಿರುವಂತಹ ಮಾತು ಮತ್ತು ಧ್ಯಾನವು ಯಾವ ರೀತಿಯಲ್ಲಿ ನಮಗೆ ನೆರವಾಗಲಿದೆ ಎಂದು ಈ ಲೇಖನ ಮೂಲಕ ನಾವು ತಿಳಿದುಕೊಳ್ಳುವ.

Most Read:ಧ್ಯಾನದಲ್ಲಿ ಅಡಗಿದೆ 10 ಪವಾಡ ಪ್ರಯೋಜನಗಳು!

ಧ್ಯಾನ ಮಾಡಲು ವಿವಿಧ ಹಂತಗಳು, ವಿಧಗಳು ಮತ್ತು ಉಪವಿಧಗಳು

ಧ್ಯಾನ ಮಾಡಲು ವಿವಿಧ ಹಂತಗಳು, ವಿಧಗಳು ಮತ್ತು ಉಪವಿಧಗಳು

ಮುಂದುವರಿಯಲು ನಿಮಗೆ ಏನು ಬೇಕು ಮತ್ತು ನಿಮ್ಮನ್ನು ಯಾವುದು ಹಿಂದಕ್ಕೆ ಹಿಡಿದಿಟ್ಟುಕೊಳ್ಳುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ ಈ ದಿನವನ್ನು ಮುಗಿಸಿದ್ದೀರಾ? ಹಾಗಾದರೆ ನೇರವಾಗಿ ಕುಳಿತುಕೊಂಡು, ಉಸಿರನ್ನು ಉಸಿರನ್ನು ಒಳಗೆ ಎಳೆದುಕೊಳ್ಳಿ ಮತ್ತು ಹೊರಗೆ ಬಿಡಿ. ಕಣ್ಣುಗಳನ್ನು ಮುಚ್ಚಿ ಕೊಮಡು ಹಾಗೆ ಧ್ಯಾನ ಮಾಡಿ. ಶಾಂತಿಯು ಹರಿದು ಬರಲಿ. ನೀವು ಆ ದಿನ ಮಾಡಿರುವಂತಹ ಕೆಲಸ ಕಾರ್ಯಗಳನ್ನು ಮರು ಆಲೋಚಿಸಿ. ನಿಮ್ಮ ಕಾರ್ಯಗಳು ಏನಾಗಿದ್ದವು ಮತ್ತು ಅದರಿಂದ ಬಂದ ಫಲಿತಾಂಶ ಏನಾಗಿತ್ತು ಅಥವಾ ಯಾವ ಕಾರ್ಯಗಳು ನಡೆದವು ಎನ್ನುವುದನ್ನು ಜ್ಞಾಪಿಸಿಕೊಳ್ಳಿ. ಹಿಂದಿನ ಎಲ್ಲಾ ಕಾರ್ಯಗಳಿಂದ ನೀವು ಇಂದು ಎಲ್ಲಿದ್ದೀರಿ ಎಂದು ತಿಳಿಯಿರಿ. ಇಂದಿನ ಕ್ರಮವು ನಿಮ್ಮನ್ನು ನಾಳೆ ಎಲ್ಲಿಗೆ ಕೊಂಡೊಯ್ಯಲಿದೆ ಎಂದು ಲೆಕ್ಕಾಚಾರ ಮಾಡಿ. ನಿಮ್ಮ ಹಿಂದಿನ ಕ್ರಮದಿಂದಾಗಿ ನೀವು ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಬಂದಿದ್ದೀರಿ ಅಥವಾ ಅದು ಹಾಗೆ ಇಲ್ಲದೆ ಇರಬಹುದು? ನಿಮ್ಮ ಕ್ರಮಗಳ ಬಗ್ಗೆ ಬಂದ ಪ್ರತಿಕ್ರಿಯೆ ಮತ್ತು ಅದನ್ನು ವಿಶ್ಲೇಷಣೆ ಮಾಡಿ. ನಿಮ್ಮ ಶಕ್ತಿಗಳ ಬಗ್ಗೆ ಸರಿಯಾಗಿ ಆಲೋಚನೆ ಮಾಡಿ ಮತ್ತು ನಿಮಗೆ ಯಾವುದು ಸರಿಯಾಗಿ ಹೊಂದಿಕೊಳ್ಳಲಿದೆ ಎಂದು ತಿಳಿಯಿರಿ. ಇದರಿಂದ ನೀವು ಯಾವ ಕೆಲಸದಲ್ಲಿ ಹೆಚ್ಚು ಪಳಗಬಹುದು ಮತ್ತು ಅದರಿಂದ ನಿಜವಾಗಿಯೂ ಬೆರೆತುಕೊಂಡು ಸುಧಾರಣೆ ಮಾಡಬಹುದು ಎಂದು ಮನವರಿಕೆ ಆಗುವುದು. ಈ ಮೂಲಕವಾಗಿ ಧ್ಯಾನವು ನಿಮಗೆ ನಿಮ್ಮನ್ನು ತಿಳಿಯಲು ನೆರವಾಗುವುದು. ಜೀವನದಲ್ಲಿ ನಿಮ್ಮನ್ನು ಯಾವುದು ಮುಂದೆ ಸಾಗಿಸಲಿದೆ ಮತ್ತು ಹಿಂದಕ್ಕೆ ಹಿಡಿದಿಟ್ಟುಕೊಳ್ಳಲಿದೆ ಎಂದು ಇದು ನಿಮಗೆ ಅರಿವು ಉಂಟು ಮಾಡುವುದು.

Most Read: ಶಾಂತ ಮೂರ್ತಿ ಬುದ್ಧನ ಕುರಿತ ಇಂಟರೆಸ್ಟಿಂಗ್ ಕಹಾನಿ

ಧ್ಯಾನದಿಂದ ಜ್ಞಾನ ಸಿಗುವುದು

ಧ್ಯಾನದಿಂದ ಜ್ಞಾನ ಸಿಗುವುದು

ಧ್ಯಾನದಿಂದಾಗಿ ಮನಸ್ಸಿಗೆ ತುಂಬಾ ಆರಾಮ ಸಿಗುವುದು. ಮನಸ್ಸು ತನ್ನ ಹಿಂದಿನ ಕ್ರಮಗಳನ್ನು ವಿಶ್ಲೇಷಿಸುವುದು ಮತ್ತು ಅದರಿಂದ ಆಗಿರುವ ಪರಿಣಾಮಗಳನ್ನು ತಿಳಿಯುವುದು. ಭವಿಷ್ಯಕ್ಕೆ ಇಂತಹ ಕ್ರಮಗಳು ಸೂಕ್ತವಾಗಿದೆಯೇ ಎಂದು ಅದು ತಿಳಿಯುವುದು ಮತ್ತು ಬುದ್ಧಿ ಹೆಚ್ಚಿಸುವುದು. ಆರಾಮವಾಗಿರುವಂತಹ ಮನಸ್ಸು ತನ್ನ ಕ್ರಮಗಳನ್ನು ಮಾತ್ರ ಆಲೋಚಿಸುವುದಲ್ಲದೆ, ಇತರ ಎಲ್ಲಾ ಕ್ರಮಗಳನ್ನು ಅದರು ಸರಿಯಾಗಿ ವಿಶ್ಲೇಷಣೆ ಮಾಡುವುದು. ಜ್ಞಾನವನ್ನು ಪಡೆಯಬೇಕಾಗಿದ್ದರೆ ಅಗ ಮನಸ್ಸಿಗೆ ಸರಿಯಾದ ಪೋಷಣೆ ಅಗತ್ಯವಾಗಿರುವುದು. ಸರಿಯಾದ ಆಲೋಚೆಗಳು ಅದಕ್ಕೆ ಆಹಾರವಾಗಿದೆ. ನಿಮ್ಮ ಮೆದುಳು ತುಂಬಾ ಮುಕ್ತವಾಗಿ ಆಲೋಚನೆ ಮಾಡಲು ಆರಂಭಿಸಿದ ವೇಳೆ ಅದು ಸರಿಯಾಗಿರುವ ಆಲೋಚನೆ ಮಾಡುವುದು. ಧ್ಯಾನವು ಆಲೋಚನೆಗಳು ಮುಕ್ತವಾಗಿ ಹರಿಯುವಂತೆ ಮಾಡುವುದು. ಇದರಿಂದಾಗಿ ಧ್ಯಾನವು ಜ್ಞಾನವನ್ನು ನೀಡುವುದು.

Most Read: ಮನಸ್ಸಿನ ಶಾಂತ ಚಿತ್ತಕ್ಕೆ 'ಧ್ಯಾನ' ವರದಾನ...

ಧ್ಯಾನದ ಕೊರತೆಯಿಂದಾಗಿ ಅಜ್ಞಾನ ಉಂಟಾಗುವುದು

ಧ್ಯಾನದ ಕೊರತೆಯಿಂದಾಗಿ ಅಜ್ಞಾನ ಉಂಟಾಗುವುದು

ಧ್ಯಾನ ಎನ್ನುವುದು ನಾವು ಮಾಡಿದ ಕಾರ್ಯಗಳ ಪ್ರತಿಫಲನವಾಗಿದ್ದು, ಪ್ರತಿಫಲನದ ಕೊರತೆಯಿಂದಾಗಿ ವ್ಯಕ್ತಿಯಲ್ಲಿ ಅಜ್ಞಾನವು ಬರಬಹುದು. ಒಂದು ಕೋಣೆಗೆ ಕಾಲಕಾಲಕ್ಕೆ ಸರಿಯಾದ ಸ್ವಚ್ಛತೆಯು ಬೇಕಿರುವಂತೆ, ಮೆದುಳನ್ನು ಕೂಡ ಸರಿಯಾದ ರೀತಿಯಲ್ಲಿ ಶುದ್ಧೀಕರಿಸಬೇಕು. ಇಂದಿನ ದಿನಗಳಲ್ಲಿ ಜನರು ತುಂಬಾ ವ್ಯಸ್ತರಾಗಿರುವರು, ದಿನದಲ್ಲಿ ಹಲವಾರು ಕಾರ್ಯಗಳನ್ನು ಮಾಡಿ, ಕೆಲವು ನಿರ್ಧಾರಗಳನ್ನು ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳುವರು. ಸ್ವಲ್ಪವೂ ವಿಶ್ರಾಂತಿ ಪಡೆಯದೆ, ಮುಂದಿನ ಹಾದಿಯ ಬಗ್ಗೆ ಆಲೋಚನೆ ಮಾಡುವಷ್ಟು ಅವರಲ್ಲಿ ಸಮಯವಿರುವುದಿಲ್ಲ. ಇದರಿಂದಾಗಿ ಅವರು ಅಜ್ಞಾನಿಗಳಾಗುವರು.

ಭೂಮಿ ಮೇಲಿರುವಂತಹ ಇತರ ಜೀವಿಗಳಿಗಿಂತ ಮನುಷ್ಯನು ಮೇಲಾಗಲು ಮುಖ್ಯ ಕಾರಣವೆಂದರೆ, ಆತನಲ್ಲಿ ಇರುವಂತಹ ಆಲೋಚನಾ ಶಕ್ತಿ. ಇದರಿಂದ ಮನುಷ್ಯನಾಗಿ ಇರಬೇಕಾದರೆ ಆಗ ನೀವು ಬೇರೆ ಪ್ರಾಣಿಗಳ ರೀತಿ ವರ್ತಿಸಬಾರದು. ಮನುಷ್ಯರು ಆತ್ಮಾವಲೋಕನ ಮಾಡಿಕೊಳ್ಳುವುದು ಅತೀ ಅಗತ್ಯ ಆಗಿರುವುದು. ಸರಿಯಾದ ರೀತಿಯಲ್ಲಿ ಆತ್ಮಾವಲೋಕನ ಮಾಡಲು ವಿಧಾನವೆಂದರೆ ಅದು ಧ್ಯಾನ ಮಾತ್ರ.

ಒಂದು ಹಾದಿ ನಿರ್ಧರಿಸಿ ಜ್ಞಾನ ಪಡೆದುಕೊಳ್ಳಿ

ಒಂದು ಹಾದಿ ನಿರ್ಧರಿಸಿ ಜ್ಞಾನ ಪಡೆದುಕೊಳ್ಳಿ

ನೀವು ಒಂದು ಪಥವನ್ನು ಆಯ್ಕೆ ಮಾಡಿಕೊಂಡು ಜ್ಞಾನವನ್ನು ಪಡೆಯಬೇಕು. ನಿಮ್ಮ ದೃಷ್ಟಿಕೋನವು ಸ್ಪಷ್ಟವಾಗಿ ಇರಬೇಕು. ಸರಿಯಾದ ಹೆಜ್ಜೆಗಳನ್ನು ಇಡಿ. ನಿಮ್ಮ ಮಾರ್ಗದರ್ಶಕ ನೀವೇ ಆಗಿ. ಧ್ಯಾನದಿಂದ ನೀವು ಇಂತಹ ಕ್ರಮ ತೆಗೆದುಕೊಳ್ಳಬಹುದು. ಇದರಿಂದಾಗಿ ನೀವು ಧ್ಯಾನ ಮಾಡಿ.

English summary

Meditation Brings Wisdom

Lord Buddha, one of the greatest thinkers the world has ever had, was a great believer in the power of meditation. In one of his messages to the world, he had said, "Meditation brings wisdom, lack of meditation brings ignorance. Know what leads you forward and what holds you back, choose the path that leads you to wisdom."
X
Desktop Bottom Promotion