For Quick Alerts
ALLOW NOTIFICATIONS  
For Daily Alerts

  13 ನೇ ತಾರೀಖು ಶುಕ್ರವಾರ: ನಮಗೆ ಶುಭ, ಅವರಿಗೆ ಅಶುಭ!

  By Manu
  |

  ಯಾವುದೇ ತಿಂಗಳ ಹದಿಮೂರನೇ ತಾರೀಖು ಶುಕ್ರವಾರ ಬಂದರೆ ಈ ದಿನವನ್ನು ವಿಶ್ವದ ಬಹುತೇಕ ಕಡೆಗಳಲ್ಲಿ ಇದನ್ನು ಅತ್ಯಂತ ಅಶುಭದಿನ ಎಂದು ಪರಿಗಣಿಸಲ್ಪಡುತ್ತದೆ. ವಿಶ್ವದಾದ್ಯಂತ ಹಿಂದೆ ಬಂದ ಹದಿಮೂರನೆಯ ತಾರೀಖಿನ ಶುಕ್ರವಾರ ನಡೆದ ಅಶುಭ ಘಟನೆಗಳು ಈ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

  ಪಾಶ್ಚಿಮಾತ್ಯ ದೇಶಗಳ ವಿವಿಧ ಸಂಸ್ಕೃತಿಗಳಲ್ಲಿ ಹದಿಮೂರನೆಯ ಸಂಖ್ಯೆಯನ್ನು ಅಶುಭ ಎಂದು ಭಾವಿಸಲಾಗುತ್ತದೆ. ನಮ್ಮ ಕರ್ನಾಟಕದಲ್ಲಿಯೂ ಎಷ್ಟೋ ಕಡೆ ಈಗಲೂ ನಾಲ್ಕು ಎಂದು ಹೇಳುವುದಿಲ್ಲ, ಬದಲಿಗೆ ಮೂರೂ ಮತ್ತೊಂದು ಎಂದೇ ಹೇಳುತ್ತಾರೆ. ಆದರೆ ನಮಗೆ, ಅಂದರೆ ಭಾರತೀಯರಿಗೆ ಮತ್ತು ಥಾಯ್ಲೆಂಡ್ ಸಹಿತ ಕೆಲವು ಪೂರ್ವ ದೇಶಗಳಲ್ಲಿ ಹದಿಮೂರು ಎಂದರೆ ಶುಭಸಂಖ್ಯೆಯಾಗಿದೆ.    ಭಾರತೀಯ ಸಂಸ್ಕೃತಿ, ಪರಂಪರೆ, ಇಡೀ ವಿಶ್ವಕ್ಕೆ ಮಾದರಿ

  ಪಾಶ್ಚಾತ್ಯರಿಗೆ ಹದಿಮೂರನೇ ತಾರೀಖು ಶುಕ್ರವಾರ ಬಂದರೆ ಇದು ಅತ್ಯಂತ ದುರಾದೃಷ್ಟ ತರುವ ದಿನವಾಗಿದೆ. ಬರುವ ವರ್ಷದ (2017) ಪ್ರಥಮ ತಿಂಗಳಲ್ಲಿಯೇ ಈ ದಿನ ಬರಲಿದೆ. ಈ ದಿನ ಹೆಚ್ಚಿನವರು ತಮ್ಮ ಕೆಲಗಳನ್ನೆಲ್ಲಾ ಸಾಧ್ಯವಾದಷ್ಟು ಹಿಂದೆ ಅಥವಾ ಮುಂದೆ ದೂಡಿಕೊಳ್ಳುತ್ತಾರೆ. ಈ ದಿನ ಅಕಸ್ಮಿಕ, ಅಪಘಾತಗಳು ನಡೆಯುವುದು ನಿಶ್ಚಿತ ಎಂದು ನಂಬುತ್ತಾರೆ. ಆದರೆ ಏಕೆ? ಮುಂದೆ ಓದಿ...   

  ಗ್ರೀಕ್ ದೇಶದ ನಂಬಿಕೆಗಳು

  ಗ್ರೀಕ್ ದೇಶದ ನಂಬಿಕೆಗಳು

  ಗ್ರೀಸ್ ದೇಶದ ಪುರಾಣಗಳ ಪ್ರಕಾರ ಜೀಯಸ್ ಎಂದ ದೇವತೆ ಹದಿಮೂರನೆಯ ದೇವನಾಗಿದ್ದು ಅತ್ಯಂತ ಪ್ರಬಲ ದೇವನಾಗಿದ್ದ. ಆದ್ದರಿಂದ ಹದಿಮೂರು ಎಂಬುದು ಪ್ರಬಲ ಶಕ್ತಿ, ಪರಿಶುದ್ಧ ಹಾಗೂ ಭ್ರಷ್ಟರಹಿತ ಪರಿಸರದ ಸಂಕೇತವಾಗಿದೆ.

  ಹದಿಮೂರು ಎಂಬುದು ಆಧ್ಯಾತ್ಮಿಕ ಮುಗಿತಾಯವಾಗಿದೆ

  ಹದಿಮೂರು ಎಂಬುದು ಆಧ್ಯಾತ್ಮಿಕ ಮುಗಿತಾಯವಾಗಿದೆ

  ಹದಿಮೂರು ಒಂದು ಅವಿಭಾಜ್ಯ ಸಂಖ್ಯೆಯಾಗಿದೆ. ಅಂದರೆ ಇದು ಹದಿಮೂರು ಮತ್ತು ಒಂದರಿಂದ ಮಾತ್ರ ಭಾಗಿಸಲ್ಪಡುತ್ತದೆ. ಇದೇ ಕಾರಣಕ್ಕೆ ಹದಿಮೂರು ಪರಿಪೂರ್ಣ ಸಂಖ್ಯೆ, ಹೊಂದಿಕೊಳ್ಳುವ ಹಾಗೂ ಸಮಗ್ರತೆಯ ಸಂಕೇತವೂ ಆಗಿದೆ.

  ಥಾಯ್ಲೆಂಡಿನ ನಂಬಿಕೆಗಳು

  ಥಾಯ್ಲೆಂಡಿನ ನಂಬಿಕೆಗಳು

  ಥಾಯ್ಲೆಂಡ್ ದೇಶದಲ್ಲಿ ಏಪ್ರಿಲ್ ಹದಿಮೂರನೇ ತಾರೀಖಿನ ದಿನವನ್ನು ಹೊಸವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ಜನರ ಮೇಲೆ ನೀರನ್ನು ಎರಚುವ ಮೂಲಕ ಹಳೆಯ ಕೆಟ್ಟ ಶಕುನ ಮತ್ತು ಹಿಂದಿನ ತೊಡಕುಗಳು ತೊಡೆದು ಹೊಸಜೀವನ ನಡೆಸಲು ಸುಲಭವಾಗುತ್ತದೆ ಎಂದು ನಂಬಲಾಗುತ್ತದೆ.

  ಹಿಂದೂ ನಂಬಿಕೆಗಳು

  ಹಿಂದೂ ನಂಬಿಕೆಗಳು

  ಪ್ರತಿ ತಿಂಗಳ ಹದಿಮೂರನೇ ತಾರೀಖಿನ ದಿನವನ್ನು ಹಿಂದೂ ಧರ್ಮದಲ್ಲಿ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಹದಿಮೂರನೆಯ ದಿನ ಎಂದರೆ ತ್ರಯೋದಶಿ.

  ಹಿಂದೂ ನಂಬಿಕೆಗಳು

  ಹಿಂದೂ ನಂಬಿಕೆಗಳು

  ಈ ದಿನ ಶಿವನಿಗಾಗಿ ಮುಡಿಪಾಗಿದೆ. ಶಿವನನ್ನು ಒಲಿಸಿಕೊಳ್ಳಲು ನಡೆಸಲಾಗುವ ಪ್ರದೋಶ ವ್ರತವನ್ನು ಇದೇ ದಿನ ಆಚರಿಸಲಾಗುತ್ತದೆ.

  ಹಿಂದೂ ನಂಬಿಕೆಗಳು

  ಹಿಂದೂ ನಂಬಿಕೆಗಳು

  ಈ ದಿನ ಶಿವನನ್ನು ಒಲಿಸಿಕೊಂಡ ವ್ಯಕ್ತಿಗೆ ಸಂಪತ್ತು, ಸಂತಾನ, ಶಾಂತಿ, ಸಂತೋಷ ಮತ್ತು ಸಮೃದ್ಧಿಗಳು ದೊರಕುತ್ತವೆ. ಆದ್ದರಿಂದ ದೇವರನ್ನು ಆರಾಧಿಸಲು ಹದಿಮೂರನೆಯ ತಾರೀಖು ಹಿಂದೂ ಧರ್ಮಿಯರಿಗೆ ಅತ್ಯಂತ ಸೂಕ್ತ ದಿನಾಂಕವಾಗಿದೆ.

  ಮಹಾಶಿವರಾತ್ರಿಯ ಹಬ್ಬವನ್ನೂ....

  ಮಹಾಶಿವರಾತ್ರಿಯ ಹಬ್ಬವನ್ನೂ....

  ಅಲ್ಲದೇ ಮಹಾಶಿವರಾತ್ರಿಯ ಹಬ್ಬವನ್ನೂ ಮಾಘ ಮಾಸದ ಹದಿಮೂರನೆಯ ದಿನದಂದೇ ಆಚರಿಸಲಾಗುತ್ತದೆ. ಈ ದಿನ ಎಲ್ಲರಿಗೂ ಅತ್ಯಂತ ಶುಭದಿನವಾಗಿದೆ ಎಂದು ನಂಬಲಾಗಿದೆ.

  ಭಾರತೀಯರ ಪಾಲಿಗೆ ಮಾತ್ರ ಶುಭದಿನವಾಗಿದೆ

  ಭಾರತೀಯರ ಪಾಲಿಗೆ ಮಾತ್ರ ಶುಭದಿನವಾಗಿದೆ

  ಆದ್ದರಿಂದ ಈ ದಿನ ಪಾಶ್ಚಾತ್ಯರ ಪಾಲಿಗೆ ಅಶುಭಕರವಾಗಿದ್ದರೂ ಭಾರತೀಯರ ಪಾಲಿಗೆ ಶುಭದಿನವಾಗಿದೆ. ಪಾಶ್ಚಾತ್ಯರಿಗೆ ಹದಿಮೂರು ಒಂದು ದಿನವೇ ಆಗಬೇಕಾಗಿಲ್ಲ, ಬೇರೆ ವಿಷಯಗಳಿಗೂ ಅನ್ವಯಿಸುವುದನ್ನು ಅಶುಭ ಎಂದು ಪರಿಗಣಿಸುತ್ತಾರೆ. ಉದಾಹರಣೆಗೆ ಹೋಟೆಲಿನ ಕೋಣೆಗಳ ಸಂಖ್ಯೆಗಳ ಸರಣಿಯಲ್ಲಿ ಹದಿಮೂರು ಇರುವುದೇ ಇಲ್ಲ.

  13 ನೇ ತಾರೀಖು ಸತ್ಯ-ಮಿಥ್ಯ

  13 ನೇ ತಾರೀಖು ಸತ್ಯ-ಮಿಥ್ಯ

  ಅದರಲ್ಲೂ ಕೆಲವು ಕಡೆಗಳಲ್ಲಂತೂ ಹದಿಮೂರನೆಯ ಮಹಡಿಯೇ ಇರುವುದಿಲ್ಲ, ಹನ್ನೆರಡರ ಮೇಲೆ ನೇರವಾಗಿ ಹದಿನಾಲ್ಕನೆಯ ಮಹಡಿ ಇರುತ್ತದೆ.

  13 ನೇ ತಾರೀಖು ಸತ್ಯ-ಮಿಥ್ಯ

  13 ನೇ ತಾರೀಖು ಸತ್ಯ-ಮಿಥ್ಯ

  ಆದರೆ ಭಾರತದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಹದಿಮೂರು ಶುಭಸಂಖ್ಯೆಯಾಗಿದೆ. ಅದರಲ್ಲೂ ಈ ದಿನ ಶುಕ್ರವಾರ ಬಂತೆಂದರೆ ಇನ್ನೂ ಹೆಚ್ಚಿನ ಶುಭದಿನ ಎಂದು ಪರಿಗಣಿಸಲಾಗುತ್ತದೆ.

   

  English summary

  Friday the 13th: Myths and Superstitions of the Unlucky Day

  It is a popular belief that Friday, the 13th is the most unluckiest day of the year. People refrain from doing anything important on this day. It is considered to be bad omen and a day in which accidents and mishaps are bound to happen. But what if we tell you that 13 is one of the most sacred and purest day of the year? Don't believe? Then read on...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more