Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂದು ಭಗವಾನ್ ಶ್ರೀರಾಮನು ಹನುಮಂತನನ್ನು ಕೊಲ್ಲಲು ಪ್ರಯತ್ನಿಸಿದಾಗ...!
ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿದನು. ಆ ಸಂದರ್ಭದಲ್ಲಿ ಸಂತಸಗೊಂಡ ಜನರೆಲ್ಲರೂ ಹರ್ಷವನ್ನು ವ್ಯಕ್ತಪಡಿಸಿದರು. ಜೊತೆಗೆ ಅಯೋಧ್ಯೆಯ ಹೊಸ ರಾಜ ಎಂದು ಘೋಷಿಸಿದರು.

ಅಲ್ಲದೆ ಅಲ್ಲಿ ನೆರೆದಿದ್ದ ಎಲ್ಲಾ ಗುರು-ಹಿರಿಯರು ಸಂತರು ಹಾಗೂ ಜನರೆಲ್ಲರೂ ರಾಮನ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿ, ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಭಗವಾನ್ ಹನುಮಂತನು ರಾಮನ ಪರಮ ಭಕ್ತನಾಗಿದ್ದನು. ಅಲ್ಲದೆ ಅವನ ಹೃದಯವೂ ಸಂಪೂರ್ಣವಾಗಿ ಮುಗ್ಧತೆಯಿಂದ ಕೂಡಿತ್ತು.

ನಾರದ ಮುನಿಯ ಚೇಷ್ಟೆ
ನಾರದ ಮುನಿಯು ದೈವ ಸ್ವರೂಪದವನು. ಅವನ ಬುದ್ಧಿಯು ಬಹಳ ತೀಕ್ಷ್ಣ ಮತಿಯದ್ದಾಗಿತ್ತು. ಅಲ್ಲದೆ ತನ್ನ ಚಾಣಾಕ್ಷ ಬುದ್ಧಿಯಿಂದ ಏನನ್ನು ಬೇಕಾದರು ಸಾಧಿಸುವ ಸಾಮಥ್ರ್ಯವಿತ್ತು. ತನ್ನ ಬುದ್ಧಿಯಿಂದಲೇ ಬಹುತೇಕ ಕುಚೇಷ್ಟೆ ಮಾಡಿದ ಕಥೆಗಳನ್ನು ಪುರಾಣ ಇತಿಹಾಸದಲ್ಲಿ ಕಾಣಬಹುದು. ರಾಮನು ರಾಜ್ಯಕ್ಕೆ ಹಿಂತಿರುಗಿದ್ದ ಆ ಸುಸಂದರ್ಭದಲ್ಲಿ ಎಲ್ಲಾ ಋಷಿಮುನಿಗಳನ್ನು ಅತಿಥಿಗಳಾಗಿ ಆಮಂತ್ರಿಸಲಾಗಿತ್ತು. ಆಗ ನಾರದ ಮುನಿಯು ಹನುಂತನಿಗೆ ವಿಶ್ವಾಮಿತ್ರ ಋಷಿಯ ಪಾದವನ್ನು ಮುಟ್ಟಿ ನಮಸ್ಕರಿಸಬಾರದು. ಅವರು ರಾಮನಿಗಿಂತ ಮೊದಲು ರಾಜನಾಗಿ ಇಲ್ಲಿ ಆಡಳಿತ ನಡೆಸಿದ್ದರು ಎಂದು ರಹಸ್ಯವಾಗಿ ಹೇಳಿದರು.
Most Read: ಶ್ರೀರಾಮ ಸೀತೆಗೆ ಏಕೆ ಅಗ್ನಿ ಪರೀಕ್ಷೆ ಮಾಡಲು ಹೇಳಿದ?

ಮುಗ್ಧ ಭಗವಾನ್ ಹನುಮಂತ
ನಾರದ ಮುನಿಯ ಮಾತಿಗೆ ಬೆಲೆ ನೀಡಿದ ಭಗವಾನ್ ಹನುಮಂತನು ವಿಶ್ವಾಮಿತ್ರ ಮುನಿಯ ಪಾದವನ್ನು ಬಿಟ್ಟು, ಉಳಿದ ಎಲ್ಲಾ ಋಷಿಮುನಿಗಳ ಪಾದ ಮುಟ್ಟಿ ನಮಸ್ಕರಿಸಿದನು. ವಿಶ್ವಾಮಿತ್ರ ಋಷಿಗಳು ರಾಮನ ಗುರುವಾಗಿದ್ದರು. ಹಾಗಾಗಿಯೇ ಹನುಂತನ ತಪ್ಪನ್ನು ಲಘುವಾಗಿಯೇ ಪರಿಗಣಿಸಿದರು. ನಾರದ ಮುನಿಯು ನಿರೀಕ್ಷೆಯಂತೆ ಏನೂ ನಡೆಯದೆ ಇದ್ದುದರಿಂದ, ತನ್ನ ಪ್ರಯತ್ನವೆಲ್ಲಾ ನಿರರ್ಥಕವಾಯಿತು ಎಂದು ಸಹಿಸಿಕೊಳ್ಳಲು ಕಷ್ಟವಾಯಿತು. ಆ ಕಾರಣಕ್ಕಾಗಿಯೇ ಮಿಶ್ವಾಮಿತ್ರರ ಬಳಿ ಹೋಗಿ ಹನುಮಂತನು ಉದ್ದೇಶಪೂರ್ವಕವಾಗಿಯೇ ನಿಮಗೆ ಅವಮಾನಿಸಿದ್ದಾನೆ ಎಂದು ಹನುಂತನ ವಿರುದ್ಧ ವಿಶ್ವಾಮಿತ್ರರಿಗೆ ಪ್ರೇರೇಪಣೆ ನೀಡಿದರು.

ಹನುಮಂತನಿಗೆ ಪರೀಕ್ಷೆಯ ಸಮಯವಾಗಿತ್ತು
ನಾರದ ಮುನಿಗಳ ಮಾತನ್ನು ಕೇಳಿದ ವಿಶ್ವಾಮಿತ್ರರಿಗೆ ಕೋಪ ಬಂದಿತು. ಈ ಹಿನ್ನೆಲೆಯಲ್ಲಿಯೇ ರಾಮನಿಗೆ ಹನುಮಂತನನ್ನು ಕೊಲ್ಲಬೇಕು ಎಂದು ಆದೇಶ ನೀಡಿದರು. ಗುರುವಿನ ಮಾತನ್ನು ಅಲ್ಲಗಳೆಯಲು ರಾಮನಿಗೆ ಸಾಧ್ಯವಾಗಲಿಲ್ಲ. ಹನುಮಂತನು ನಿರಂತರ ರಾಮ ನಾಮ ಜಪವನ್ನು ಮಾಡಲು ಪ್ರಾರಂಭಿಸಿದನು. ರಾಮನು ಹನುಮಂತನನ್ನು ಕೊಲ್ಲಲು ಎಷ್ಟೇ ಪ್ರಯತ್ನಿಸಿದರೂ ಹನುಮಂತನಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹನುಂತನ ಮೇಲೆ ನಡೆದ ನಿರಂತರ ದಾಳಿಯಿಂದ ಏನೂ ಪ್ರಭಾವ ಬೀರಲಿಲ್ಲ. ನಂತರ ರಾಮನು ಬ್ರಹ್ಮಾಸ್ತ್ರ ಬಳಸಲು ನಿರ್ಧರಿಸಿದನು. ಆದಾಗ್ಯೂ ಹನುಮಂತ ತನ್ನ ಭಕ್ತಿಯಿಂದ ರಾಮನ ನಾಮವನ್ನು ಜಪಿಸಿತ್ತಿದ್ದುದರ ಪರಿಣಾಮ ಯಾವ ಅಸ್ತ್ರವೂ ಹನುಮಂತನಿಗೆ ಹಾನಿಯುಂಟುಮಾಡಲು ಸಾಧ್ಯವಾಗಲಿಲ್ಲ.

ನಾರದ ಮುನಿಯ ಹೃದಯ ಕರಗಿತು
ಹನುಂತನಿಗೆ ತನ್ನ ರಾಮನ ಮೇಲೆ ಇದ್ದ ಭಕ್ತಿಯನ್ನು ಕಂಡ ನಾರದ ಮುನಿಗೆ ಆಶ್ಚರ್ಯವಾಯಿತು. ಜೊತೆಗೆ ತನ್ನ ದುಷ್ಕೃತ್ಯಕ್ಕೆ ಕ್ಷಮೆಯಾಚಿಸಬೇಕು ಎಂದು ಬಯಸಿದನು. ನಂತರ ವಿಶ್ವಾಮಿತ್ರರಲ್ಲಿ ತನ್ನ ತಪ್ಪುಗಳನ್ನು ಹೇಳಿಕೊಂಡು, ಕ್ಷಮೆಯನ್ನು ಯಾಚಿಸಿದನು. ಜೊತೆಗೆ ರಾಮನಿಂದ ಹುನುಮಂತನಿಗೆ ಯಾವುದೇ ತೊಂದರೆ ಆಗದಂತೆ, ಹನುಮಂತನನ್ನು ರಕ್ಷಿಸಬೇಕೆಂದು ಕೇಳಿಕೊಂಡನು. ಅಂತೆಯೇ ವಿಶ್ವಾಮಿತ್ರರು ತಮ್ಮ ಆದೇಶವನ್ನು ಹಿಂದೆ ತೆಗೆದುಕೊಂಡು ಹನುಮಂತನಿಗೆ ಯಾವುದೇ ಹಾನಿ ಮಾಡಬಾರದು ಎಂದು ರಾಮನಿಗೆ ಹೇಳಿದರು. ತನ್ನ ಮುಗ್ಧತೆ ಮತ್ತು ರಾಮನ ಮೇಲಿರುವ ಭಕ್ತಯಿಯನ್ನು ತೋರುವುದರ ಮೂಲಕ ರಾಮನ ಪ್ರೀತಿಗೆ ಹನುಮಂತ ಪಾತ್ರನಾದನು ಎಂದು ಹೇಳಲಾಗುವುದು.



Click it and Unblock the Notifications
